Home
ಫೀಚರ್ ಸ್ಟೋರೀಸ್

ನಿದ್ರೆ ಬರುವುದಿಲ್ಲ ಎನ್ನುವವರಿಗೆ ಪರಿಹಾರ: ಬಂದಿದೆ ಸ್ಮಾರ್ಟ್ ಹಾಸಿಗೆ

By Precilla Dias

ಅಮೆರಿಕಾ ಮೂಲದ ಹಾಸಿಗೆ ತಯಾರಿಕ ಕಂಪನಿಯೊಂದು ಹೊಸ ಆವಿಷ್ಕಾರವನ್ನು ಮಾಡಿದೆ. ನಿದ್ರೆ ಬರುವುದಿಲ್ಲ ಎನ್ನುವವರಿಗಾಗಿ ಸ್ಮಾರ್ಟ್ ಬೆಡ್ ವೊಂದನ್ನು ನಿರ್ಮಾಣ ಮಾಡಿದೆ ಎನ್ನಲಾಗಿದೆ. ಅದರಲ್ಲೂ ಮಲುಗುವ ಸಂದರ್ಭದಲ್ಲಿ ಗೊರಕೆ ಹೊಡೆಯುವವರಿಗೆ ಇದು ಹೇಳಿ ಮಾಡಿಸಿದ ಹಾಸಿಗೆಯಾಗಿದ್ದು, ನಿದ್ರೆಯಲ್ಲಿ ಗೊರಕೆ ಹೊಡೆಯದಂತೆ ಮಾಡಲು ಸಹಾಯಕಾರಿಯಾಗಲಿದೆ ಈ ಸ್ಮಾರ್ಟ್ ಹಾಸಿಗೆ.

ನಿದ್ರೆ ಬರುವುದಿಲ್ಲ ಎನ್ನುವವರಿಗೆ ಪರಿಹಾರ: ಬಂದಿದೆ ಸ್ಮಾರ್ಟ್ ಹಾಸಿಗೆ

ರಾತ್ರಿ ವೇಳೆಯಲ್ಲಿ ಉತ್ತಮ ರೀತಿಯಲ್ಲಿ ನಿದ್ರಿಸಲು ಈ ಹಾಸಿಗೆ ನಿಮಗೆ ಸಹಾಯವನ್ನು ಮಾಡಲಿದ್ದು, ಇದರಲ್ಲಿ ಸೆಲ್ಪ್ ಆಡ್ಜಸ್ಟ್ ಮೆಂಡ್ ಕಂಫರ್ಟ್ ಟೆಕ್ನಾಲಜಿಯನ್ನು ಕಾಣಬಹುದಾಗಿದ್ದು, ಇದು ಹಾಸಿಗೆಯಲ್ಲಿ ಮಲಗಿಕೊಂಡವರಿಗೆ ಉತ್ತಮವಾದ ನಿದ್ರೆಯನ್ನು ನೀಡಲಿದೆ. ಅಲ್ಲದೇ ಈ ಹಾಸಿಗೆಯಲ್ಲಿ ಮಲಗಿಕೊಂಡರೆ ಮೈ-ಕೈ ನೋವು ಬರುವುದಿಲ್ಲ ಎನ್ನಲಾಗಿದೆ.

ಸ್ವಯಂ ಕಾರ್ಯಚರಣೆ:

ಸ್ವಯಂ ಕಾರ್ಯಚರಣೆ:

ಈ ಹಾಸಿಗೆಯ ಮೇಲೆ ಮಲಗಿಕೊಂಡವರು ಗೊರಕೆಯನ್ನು ಹೊಡೆಯುತ್ತಿದ್ದಾರೆ ಎನ್ನುವುದಾರೆ ಅದನ್ನು ಅರ್ಥ ಮಾಡಿಕೊಂಡು ಅವರು ಗೊರಕೆಯನ್ನು ಹೊಡೆಯದೆ ಮಲುಗಲು ಸಹಾಯ ಮಾಡಲಿದೆ, ಮಗ್ಗಲು ಬದಲಾಯಿಸಿದರೆ ಗೊರಕೆ ನಿಲುವುದು ಎಂದು ತಿಳಿದಿರುವ ಹಾಸಿಗೆಯ ಮಗ್ಗಲ ಬದಲಾಯಿಸಲು ಸಹಾಯ ಮಾಡುತ್ತದೆ.

ಬೆಳಿಗ್ಗೆ ಏಳಿಸಲಿದೆ

ಬೆಳಿಗ್ಗೆ ಏಳಿಸಲಿದೆ

ನೀವು ಆಲಾರಂ ಇಟ್ಟು ಕೊಂಡರೆ ನಿಮ್ಮನ್ನು ಗಾಡ ನಿದ್ರೆಯಿಂದ ಏಳಿಸುವ ಕಾರ್ಯವನ್ನು ಸಹ ಈ ಸ್ಮಾರ್ಟ್ ಹಾಸಿಗೆ ಮಾಡಲಿದೆ. ಸರಿಯಾದ ಸಮಯಕ್ಕೆ ನಿಮ್ಮನ್ನು ನಿಧಾನವಾಗಿ ಎಬ್ಬಿಸುವವಂತಹ ಕಾರ್ಯವನ್ನು ಸಹ ಮಾಡಲಿದೆ.

ನಿದ್ರೆಯ ಅವಧಿಯನ್ನು ರೆಕಾರ್ಡ್ ಮಾಡಲಿದೆ:

ನಿದ್ರೆಯ ಅವಧಿಯನ್ನು ರೆಕಾರ್ಡ್ ಮಾಡಲಿದೆ:

ಇದಲ್ಲೇ ಈ ಹಾಸಿಗೆಯೂ ನೀವು ಎಷ್ಟು ಹೊತ್ತು ನಿದ್ರೆಯನ್ನು ಮಾಡಿದಿರಿ ಎಂಬುದನ್ನು ಲೆಕ್ಕ ಹಾಕುವುದಲ್ಲದೇ, ಗಾಢ ನಿದ್ರೆಯ ಅವಧಿ ಎಷ್ಟು, ಗೊರಕೆ ಹೊಡದ ಅವಧಿ ಎಷ್ಟು ಎಂಬ ಎಲ್ಲಾ ಮಾಹಿತಿಗಳನ್ನು ಟ್ರಾಕ್ ಮಾಡಲಿದೆ. ಇದು ನಿಮ್ಮ ಆರೋಗ್ಯದ ದೃಷ್ಟಿಯಿಂದಲೂ ಸಹಾಯಕಾರಿಯಾಗಿದೆ.

ಮಾರಕಟ್ಟೆಗೆ

ಮಾರಕಟ್ಟೆಗೆ

ಈ ಸ್ಮಾರ್ಟ್ ಹಾಸಿಗೆಯೂ ಶೀಘ್ರವೇ ಮಾರುಕಟ್ಟೆಯನ್ನು ಪ್ರವೇಶ ಮಾಡಲಿದೆ ಎನ್ನಲಾಗಿದೆ. ಈಗಾಗಲೇ ಈ ಸ್ಮಾರ್ಟ್ ಹಾಸಿಗೆಗೆ ಬೇಡಿಕೆಯೂ ಹೆಚ್ಚಾಗಿದೆ. ಬುಕ್ಕಿಂಗ್ ಶುರುವಾಗಿದೆ ಎನ್ನುವ ಮಾಹಿತಿ ದೊರೆತಿದೆ.

Best Mobiles in India

English summary
A US-based company has developed a smart bed that can automatically adjust itself in order to stop one from snoring and provide maximum comfort for a sound sleep. The smart bed, unveiled by Sleep Number at the CES trade show in Las Vegas, automatically adjusts to help both partners sleep comfortably all night. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+