ಆಧಾರ್ ಸುರಕ್ಷತೆಗೆ ಮತ್ತೊಂದು ಹೊಸ ಪ್ರಯತ್ನ

By Lekhaka
|

ಇದೇ ಕೆಲವು ದಿನಗಳ ಹಿಂದೆ ಆಧಾರ್ ಕಾರ್ಡ್ ಮಾಹಿತಿಯೂ ವಾಟ್ಸ್ ಆಪ್ ಮೂಲಕ ರೂ.500ಕ್ಕೆ ಮಾರಾಟವಾಗುತ್ತಿದೆ ಎನ್ನುವ ಸುದ್ದಿಯೂ ವೈರಲ್ ಆಗಿತ್ತು. ಇದೇ ಸಂದರ್ಭದಲ್ಲಿ ಆಧಾರ್ ಮಾಹಿತಿಯ ಭದ್ರತೆಯ ಬಗ್ಗೆಯ ಪ್ರಶ್ನೆಗಳು ಎದ್ದಿದವು. ಈ ಹಿನ್ನಲೆಯಲ್ಲಿ ಸರಕಾರವೂ ಆಧಾರ್ ಮಾಹಿತಿಯನ್ನು ಭದ್ರಗೊಳಿಸುವ ಸಲುವಾಗಿ ವರ್ಚುವಲ್ ಐಡಿಯನ್ನು ಬಳಕೆದಾರರಿಗೆ ನೀಡಲು ಮುಂದಾಗಿದೆ.

ಆಧಾರ್ ಸುರಕ್ಷತೆಗೆ ಮತ್ತೊಂದು ಹೊಸ ಪ್ರಯತ್ನ


ಭಾರತೀಯ ವಿಶಿಷ್ಠ ಗುರುತಿನ ಪ್ರಾಧಿಕಾರವೂ ಹೊಸದಾಗಿ ಆಧಾರ್ ಭದ್ರತೆಗಾಗಿ ವರ್ಚುವಲ್ ಐಡಿಯೊಂದನ್ನು ನೀಡಲು ಮುಂದಾಗಿದೆ ಎನ್ನಲಾಗಿದೆ. ಇದು 16 ಅಂಕಿಗಳ ಐಡಿಯಾಗಲಿದ್ದು, ಇದು ನಿಮ್ಮ ಆಧಾರ್ ಕಾರ್ಡ್ ಮಾಹಿತಿಯನ್ನು ಭದ್ರವಾಗಿ ಇಡಲಿದೆ. ಇದು 12 ಅಂಕಿಗಳ ಆಧಾರ್ ಮಾಹಿತಿಗೆ ಸುರಕ್ಷತೆಯನ್ನು ನೀಡಲಿದೆ ಎಂದು ತಿಳಿದೆ.

ಆಧಾರ್ ವರ್ಚುವಲ್ ಐಡಿಯನ್ನು ಬ್ರೇಕ್ ಮಾಡಲು ಸಾಧ್ಯವೇ ಇಲ್ಲ ಎನ್ನಲಾಗಿದ್ದು, ಇದೊಂದು ವಿಭಿನ್ನ ಮಾದರಿಯ ಅಂಕಿಯಾಗಿದ್ದು, ಸುಲಭವಾಗಿ ಹ್ಯಾಕ್ ಮಾಡಲು ಸಾಧ್ಯತೆ ತೀರಾ ಕಡಿಮೆ. ನಿಮ್ಮ ಆಧಾರ್ ಕಾರ್ಡ್ ಸುಭದ್ರವಾಗಿರ ಬೇಕು ಎಂದರೆ ವರ್ಚುವಲ್ ಐಡಿ ಬೇಕೆ ಬೇಕು ಎನ್ನಲಾಗಿದೆ.

ಇದೊಂದು ಟೆಪರ್ವರಿ ಐಡಿಯಾಗಿರಲಿದ್ದು, ಇದನ್ನು ಸುಲಭವಾಗಿ ಟ್ರಾಕ್ ಮಾಡಲು ಸಾಧ್ಯವೇ ಇಲ್ಲ ಅನ್ನಲಾಗಿದೆ. ಇದು ನಿಮ್ಮ ಕೈವಸಿ ಮಾಹಿತಿಯನ್ನು ಸುರಕ್ಷಿತವಾಗಿ ಇಡುವಂತಹ ಕಾರ್ಯವನ್ನು ಮಾಡಲಿದೆ. ಇದನ್ನು ಆಧಾರ್ ಕಾರ್ಡ್ ದಾರರು ಮಾತ್ರವೇ ಜನರೇಟ್ ಮಾಡಬಹುದಾಗಿದೆ.

ಆಂಡ್ರಾಯ್ಡ್ ಫೋನ್‌ ಅನ್ನು ಐಫೋನ್‌ನಂತೆ ಉಪಯೋಗಿಸುವುದು ಹೇಗೆ ಗೊತ್ತಾ?ಆಂಡ್ರಾಯ್ಡ್ ಫೋನ್‌ ಅನ್ನು ಐಫೋನ್‌ನಂತೆ ಉಪಯೋಗಿಸುವುದು ಹೇಗೆ ಗೊತ್ತಾ?

2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!

ಈಗಾಗಲೇ ಅನೇಕ ಭಾರಿ ಆಧಾರ್ ಮಾಹಿತಿಯೂ ಲೀಕ್ ಆಗಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿದೆ. ಇದನ್ನು ಮಟ್ಟ ಹಾಕಲು ಮತ್ತು ಆಧಾರ್ ಮಾಹಿತಿಯನ್ನು ಸೇಫ್ ಮಾಡುವ ಸಲುವಾಗಿ ಈ ಹೊಸ ವರ್ಚುವಲ್ ಐಡಿಯನ್ನು ನೀಡಲಾಗುತ್ತಿದೆ. ಇದರಿಂದ ಆಧಾರ್ ಮಾಹಿತಿ ಸುಭದ್ರವಾಗಲಿದೆ ಎಂದು ಭಾರತೀಯ ವಿಶಿಷ್ಠ ಗುರುತಿನ ಪ್ರಾಧಿಕಾರ ತಿಳಿಸಿದೆ.

Best Mobiles in India

Read more about:
English summary
UIDAI (Unique Identification Authority of India) has announced a new feature to safeguard the Aadhaar card details of the citizens. UIDAI has introduced Virtual ID (VID) that is a 16-digit randomly generated number. The VID can be used for authentication instead of the actual 12-digit Aadhaar number.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X