ಭೂಮಿಯ 1,500 ಜ್ವಾಲಾಮುಖಿಗಳ ಹಠಾತ್ ಸ್ಫೋಟ: ಪರಿಣಾಮಗಳೇನು?

  By Shwetha
  |

  ಜ್ವಾಲಾಮುಖಿ ಸ್ಫೋಟಗಳ ಕುರಿತಾದ ಭಯಂಕರ ವರದಿಗಳನ್ನು ನೀವು ಕೇಳಿರುತ್ತೀರಿ ಅಲ್ಲವೇ? ಭೂಮಯಲ್ಲೇ ತಮ್ಮ ನೆಲೆಯನ್ನು ಕಂಡುಕೊಂಡು ಒಮ್ಮಿಂದೊಮ್ಮೆಲೇ ಕುದಿಯುವ ಲಾವಾರಸವಾಗಿ ಹರಿಯುವ ಜ್ವಾಲಾಮುಖಿ ಒತ್ತಡವನ್ನು ಹೊರಹಾಕುವ ಕ್ರಿಯೆಯಾಗಿದೆ. ಒಂದು ಭಾಗದಲ್ಲಿ ಸ್ಫೋಟಗೊಳ್ಳುವ ಜ್ವಾಲಾಮುಖಿಯಿಂದ ಆಗುವ ನಷ್ಟವನ್ನು ಅಂದಾಜಿಸಲು ಸಾಧ್ಯವಿಲ್ಲದಾದಾಗ ವಿಶ್ವದಲ್ಲಿರುವ 1,500 ಜ್ವಾಲಾಮುಖಿಗಳು ತಮ್ಮ ಕೋಪವನ್ನು ಪ್ರಕಟಪಡಿಸಿದರೆ ಜೀವಸಂಕುಲದ ಗತಿಯೇನು?

  ಓದಿರಿ: ವಿಶ್ವದಲ್ಲೇ ಪ್ರಥಮ ಬಾರಿಗೆ ಸಂಪೂರ್ಣ ದೇಹ ಶಸ್ತ್ರಚಿಕಿತ್ಸೆ

  ಪ್ರಸ್ತುತ ಭೂಮಿಯು 1500 ಸಕ್ರಿಯ ಜ್ವಾಲಾಮುಖಿಯನ್ನು ಹೊಂದಿದ್ದು ಕಳೆದ 10,000 ವರ್ಷಗಳಲ್ಲಿ ಕನಿಷ್ಟ ಪಕ್ಷ ಒಂದು ವಿಸ್ಫೋಟವನ್ನು ಹೊಂದಿದೆ ಎಂದಾಗಿದೆ. ಆದರೆ ಈ ಒಂದೇ ಸ್ಫೋಟವು ಹೆಚ್ಚಿನ ಹಾನಿಗಳನ್ನು ಉಂಟುಮಾಡಲಿರುವುದಂತೂ ಖಂಡಿತ. ಈ ಸ್ಫೋಟಗಳು ಬೇರೆ ಬೇರೆ ಭಿನ್ನತೆಗಳನ್ನು ಪಡೆದುಕೊಂಡಿದ್ದು ಒಂದಕ್ಕಿಂತ ಇನ್ನೊಂದು ಪ್ರತ್ಯೇಕವಾಗಿದೆ ಎಂಬುದು ಜ್ವಾಲಾಮುಖಿ ವಿಶೇಷತಜ್ಞ ಮ್ಯಾಥ್ಯೂ ವಾಟ್ಸನ್ ಅಭಿಪ್ರಾಯವಾಗಿದೆ. ಒಂದು ಸ್ಫೋಟವು ಹೆಚ್ಚಿನ ಗ್ಯಾಸ್ ಅನ್ನು ಉಗುಳಿದರೆ ಇನ್ನೊಂದು ಸ್ಫೋಟದಲ್ಲಿ ಬೂದಿ ಮತ್ತು ಅನಿಲವನ್ನು ನಮಗೆ ಕಾಣಬಹುದಾಗಿದೆ. ಅಂತಹುದೇ ವಿಶ್ವದ ನಾನಾ ಭಾಗಗಳಲ್ಲಿ ಜ್ವಾಲಾಮುಖಿ ಸ್ಫೋಟವುಂಟಾದಾಗ ಅದರ ಪರಿಣಾಮ ಕೂಡ ಭೀಕರವಾಗಿರುವುದು ಖಂಡಿತ. ಇಂದಿನ ಲೇಖನದಲ್ಲಿ ಜ್ವಾಲಾಮುಖಿಯಿಂದ ಉಂಟಾಗುವ ನಷ್ಟಗಳು ಮತ್ತು ಅದರಿಂದ ತಪ್ಪಿಸಿಕೊಳ್ಳುವ ವಿಧಾನಗಳನ್ನು ಅರಿತುಕೊಳ್ಳೋಣ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  #1

  ಮೊದಲಿಗೆ ಹಾನಿಗೆ ಒಳಗಾಗುವವರು ಸ್ಫೋಟದ ಸಮೀಪವುಳ್ಳವರಾಗಿದ್ದು, ಜ್ವಾಲಾಮುಖಿಯಿಂದ ಮ್ಯಾಗ್ಮಾದ ಹರಿವು ಮಾತ್ರವಲ್ಲದೆ, ಬೂದಿಯಿಂದ ಮರೆಯಾಗುವ ವಾತಾವರಣ ಉಂಟಾಗಲಿದೆ.

  #2

  ವೇಗವಾಗಿ ಓಡುತ್ತಿರುವ ಮೋಡ, ಬೂದಿ ಮತ್ತು ಅನಿಲ ಹೆಚ್ಚು ಬಿಸಿಯಾಗಿದ್ದು ಇದರ ತಾಪಮಾನ 1000 ಡಿಗ್ರಿ ಸೆಲ್ಶಿಯಸ್ ಆಗಿದೆ. ಇದು ಗಂಟೆಗೆ 450 ಮೈಲುಗಳಷ್ಟು ವೇಗದಲ್ಲಿ ಸಂಚರಿಸಲಿದೆ.

  #3

  ಸ್ಫೋಟವು ಜ್ವಾಲಾಮುಖಿ ಬೂದಿಯು ಸಾವಿರಾರು ಮೈಲುಗಳಷ್ಟು ಪ್ರಯಾಣಿಸಲಿದೆ. ಇದು ಗಾಜು, ಕ್ರಿಸ್ಟಲ್ಸ್ ಮತ್ತು ಕಲ್ಲನ್ನು ಹೊಂದಿರುತ್ತದೆ.

  #4

  ಈ ಬೂದಿಯ ಸೇವನೆಯು ನಮ್ಮ ಶ್ವಾಸಕೋಶಗಳಿಗೆ ತೀವ್ರತೆರನಾದ ಪರಿಣಾಮವನ್ನು ಉಂಟುಮಾಡಲಿದ್ದು ನಮ್ಮ ರೋಗನಿರೋಧಕ ಶಕ್ತಿಯನ್ನು ಇದು ಕುಗ್ಗಿಸಲಿದೆ.

  #5

  ಕಟ್ಟಡಗಳನ್ನು ಧ್ವಂಸ ಮಾಡುವ ಸಾಮರ್ಥ್ಯವನ್ನು ಈ ಬೂದಿಯು ಪಡೆದುಕೊಂಡಿದ್ದು ಆಧಾರಸ್ತಂಭವನ್ನೇ ಅಲ್ಲಾಡಿಸುವಂತಿದೆ.

  #6

  ಯಾವುದೇ ಕಟ್ಟಗಳಿಲ್ಲದೆ, ವಾಹನಗಳ ಚಾಲನೆ ಇಲ್ಲದೆ ಅಂತೆಯೇ ಗ್ಯಾಸ್ ಮಾಸ್ಕ್ ಇಲ್ಲದೆ ನೀವು ಎಲ್ಲಿಯೂ ಪಯಣಿಸಲಾರಿರಿ.

  #7

  ಭೂಮಿಯ ವಾತಾವರಣದ ಮೇಲೂ ಇದು ಪ್ರಭಾವವನ್ನು ಬೀರಲಿದ್ದು ಬಿಸಿಯಾಗಿರುವ ಅನಿಲ ಮತ್ತು ಬೂದಿ ತಾಪಮಾಣವನ್ನು ಇಳಿಮುಖಗೊಳಿಸಲಿದೆ.

  #8

  ಎಂಜಿನ್‌ಗಳ ಮೇಲೆ ಪರಿಣಾಮವನ್ನು ಬೀರುತ್ತಾ, ಕಟ್ಟಡಗಳನ್ನು ಮುಳುಗಿಸುತ್ತಾ ಉಸಿರಾಟದ ತೊಂದರೆಯನ್ನು ಉಂಟುಮಾಡಲಿದೆ.

  #9

  ಸಂವಹನ ಚಾನಲ್‌ಗಳು ಇಳಿಮುಖಗೊಳ್ಳಲಿದ್ದು ಜ್ವಾಲಾಮುಖಿಯ ಬೂದಿಯು ಸ್ಯಾಟಲೈಟ್ ಡಿಶ್‌ಗಳ ಮೇಲೆ ಪ್ರಭಾವ ಬೀರಲಿದ್ದು ರೇಡಿಯೊ ಅಲೆಗಳನ್ನು ನಿರ್ಬಂಧಿಸಲಿದೆ.

  #10

  ಭೀಕರ ಮಳೆಯನ್ನು ಉಂಟುಮಾಡಲಿದ್ದು ಬೆಳೆಗಳ ಮೇಲೆ ಹಾನಿಮಾಡಲಿದೆ.

  #11

  ಎರಡು ವರ್ಷಗಳವರೆಗೆ ಆಹಾರವನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾಗಿದೆ

  #12

  ಎರಡು ವರ್ಷಗಳವರೆಗೆ ನೀರಿನ ಸಂಗ್ರಹವನ್ನು ಮಾಡಿಡಬೇಕು.

  #13

  ಸೂರ್ಯನ ಶಕ್ತಿಯ ಕೊರತೆಯನ್ನು ನೀಗಿಸಲು ವಿಟಮಿನ್ ಡಿ ಮತ್ತು ಕ್ಯಾಲ್ಶಿಯಮ್ ಪೂರೈಕೆಗಳನ್ನು ಪಡೆದುಕೊಳ್ಳುವುದಾಗಿದೆ

  #14

  ನಿಮ್ಮನ್ನು ಖಿನ್ನತೆ ಮತ್ತು ಒತ್ತಡದಿಂದ ದೂರಾಗಿಸುವ 5 ಎಚ್‌ಟಿಪಿ ಆಹಾರ ಪೂರೈಕೆಯನ್ನು ನೀವು ಹೊಂದಿರಬೇಕು

  #15

  ಜಾಗತಿಕ ತಾಪಮಾನ ಇಳಿಮುಖವಾದಾಗ ಬೆಚ್ಚಗಿನ ಉಡುಪುಗಳನ್ನು ನೀವು ಧರಿಸಿಕೊಳ್ಳಬೇಕಾಗುತ್ತದೆ

  #16

  ನಿಮ್ಮಲ್ಲಿ ಶ್ವಾಸಕೋಶದ ತೊಂದರೆಗಳನ್ನು ಉಂಟುಮಾಡುವ ಬೂದಿಯನ್ನು ತಡೆಗಟ್ಟಲು ಮಾಸ್ಕ್ ಅನ್ನು ನೀವು ಧರಿಸಬೇಕು

  #17

  1,500 ಜ್ವಾಲಾಮುಖಿಯಿಂದ ರಕ್ಷಣೆಯನ್ನು ಪಡೆದುಕೊಳ್ಳಲು ಇರುವ ಉತ್ತಮ ಜಾಗವೆಂದರೆ ಸಾಗರದ ಮಧ್ಯಭಾಗವಾಗಿದೆ.

  #18

  ಆಹಾರಗಳು, ವೈದ್ಯಕೀಯ ಸವಲತ್ತುಗಳು, ಶುದ್ಧವಾದ ನೀರನ್ನು ಒಳಗೊಂಡಿರುವ ಮತ್ತು ಜ್ವಾಲಾಮುಖಿ ಪರ್ವತಗಳಿಂದ ದೂರವಿರುವ ಸಾಗರ ಮಧ್ಯಭಾಗದಲ್ಲಿ ಹಡಗಿನಲ್ಲಿದ್ದುಕೊಂಡು ರಕ್ಷಣೆಯನ್ನು ಪಡೆದುಕೊಳ್ಳಬಹುದಾಗಿದೆ.

  #19

  ದೀರ್ಘ ಸಮಯದಲ್ಲಿ ತಾಪಮಾನದಲ್ಲಿ ನಾವು ಬದಲಾವಣೆಯನ್ನು ಕಂಡುಕೊಳ್ಳಬಹುದಾಗಿದ್ದು ಈಗ ಇರುವ ತಾಪಮಾನವನ್ನು ನಾವು ಹೆಚ್ಚು ಸಮಯ ಕಂಡುಕೊಳ್ಳುವಂತಿರುವುದಿಲ್ಲ.

  #20

  ಒಂದು ಸ್ಫೋಟವು ಹೆಚ್ಚಿನ ಗ್ಯಾಸ್ ಅನ್ನು ಉಗುಳಿದರೆ ಇನ್ನೊಂದು ಸ್ಫೋಟದಲ್ಲಿ ಬೂದಿ ಮತ್ತು ಅನಿಲವನ್ನು ನಮಗೆ ಕಾಣಬಹುದಾಗಿದೆ.

  ಗಿಜ್‌ಬಾಟ್ ಲೇಖನಗಳು

  ಮೈ ನಡುಗಿಸುವ ಪುರಾತನ ಶಸ್ತ್ರಕ್ರಿಯೆ ವಿಧಾನಗಳು
  18 ತಿಂಗಳು ಹೃದಯವಿಲ್ಲದೇ ಬದುಕಿದ ಯುವಕ!!
  ಮಿಸ್ ಮಾಡದೇ ನೋಡಿ ಭೂಮಿಯ ಏಲಿಯನ್ ತಾವಳಗಳು

  ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

  ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡುತ್ತಿರಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  In this article we are seen What would happen if Earth's 1,500 volcanoes erupted at once? Experts outline terrifying doomsday scenario effects and how can we take protection.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more