Subscribe to Gizbot

ನೀವು ಇದುವರೆಗೂ ನೋಡದ ಅದ್ಭುತ ಕ್ಯಾಮೆರಾ ಡಿವೈಸ್ ಹುವಾವೆ ಪಿ9

Written By:

ತನ್ನ ಅತ್ಯದ್ಭುತ ಕ್ಯಾಮೆರಾ ಫೋನ್ ಪಿ9 ಗಾಗಿ ಹುವಾವೆ ದೆಹಲಿಯಲ್ಲಿ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ ನಂತರ ಹೆಚ್ಚಿನ ಮಹತ್ವಾಕಾಂಕ್ಷೆಯನ್ನು ಇರಿಸಿಕೊಂಡಿದೆ. ರೂ 39,999 ಕ್ಕೆ ಈ ಡಿವೈಸ್ ಲಭ್ಯವಿದ್ದು ಹುವಾವೆ ಪಿ9 ನಲ್ಲಿ ಹೆಚ್ಚು ಅದ್ಭುತವಾಗಿರುವ ಅಂಶವೆಂದರೆ ಇದರ ಡ್ಯುಯಲ್ ಕ್ಯಾಮೆರಾ ಸೆಟಪ್ ಆಗಿದೆ ಅಂತೆಯೇ ಮಾರುಕಟ್ಟೆಯಲ್ಲಿ ತನ್ನ ಸ್ಪರ್ಧಿಗಳಿಗೆ ಇದು ಹೆಚ್ಚು ಪೈಪೋಟಿಯನ್ನು ನೀಡುವುದು ಖಂಡಿತ.

ಓದಿರಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್7 ಗಿಂತ ಹುವಾವೆ ಪಿ9 ಹೇಗೆ ಅತ್ಯುತ್ತಮ?

ಫೋನ್‌ನ ಕ್ಯಾಮೆರಾ ಗುಣಮಟ್ಟವನ್ನು ಕುರಿತು ಮಾತನಾಡಲು ಪದಗಳೇ ಸಾಲದು ಎಂಬುದಕ್ಕೆ ನಾವಿಲ್ಲಿ ಪ್ರಾಶಸ್ತ್ಯವನ್ನು ನೀಡುತ್ತಿದ್ದೇವೆ. ಫೋನ್‌ನ ಸೆನ್ಸಾರ್ ಉತ್ತಮ ಮೋನೋಕ್ರೋಮ್ ಶೂಟ್‌ಗಳನ್ನು ಒದಗಿಸುವಲ್ಲಿ ನೆರವಾಗಲಿದೆ ಅಂತೆಯೇ ವೃತ್ತಿಪರ ಡಿಎಸ್‌ಎಲ್ಆರ್ ಕ್ಯಾಮೆರಾದಂತೆಯೇ ಇದು ಅತ್ಯುತ್ತಮವಾಗಿದೆ. ಬನ್ನಿ ಹಾಗಿದ್ದರೆ ಫೋನ್‌ನ ಕ್ಯಾಮೆರಾ ಕುರಿತು ಮತ್ತಷ್ಟು ವಿವರಗಳನ್ನು ಇಂದಿಲ್ಲಿ ತಿಳಿದುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಡಿಮೆ ಬೆಳಕು

ಕಡಿಮೆ ಬೆಳಕು

ಕಡಿಮೆ ಬೆಳಕಿನಲ್ಲೂ ಫೋಟೋಗ್ರಫಿ ಅದ್ಭುತವಾಗಿ ಇದರಲ್ಲಿ ಮೂಡಿ ಬರಲಿದೆ. ಫೋಟೋದ ಗುಣಮಟ್ಟ ಕಡಿಮೆಯಾಗುವುದೇ ಇಲ್ಲ.

ಲಾಂಗ್ ಶಾಟ್

ಲಾಂಗ್ ಶಾಟ್

ಅಗಲವಾದ ಫ್ರೇಮ್ ಅನ್ನು ಆವರಿಸುತ್ತಾ ಫೋನ್ ದೀರ್ಘ ಶಾಟ್‌ಗಳನ್ನು ಕ್ಯಾಪ್ಚರ್ ಮಾಡಲಿದೆ. ಫೋಟೋ ಅತಿ ಸುಂದರ ಎಂದೆನಿಸಿದ್ದು ಉತ್ತಮ ಬಣ್ಣಗಳನ್ನು ಪಡೆದುಕೊಳ್ಳಲಿದೆ.

ಕ್ಲೋಸ್‌ಅಪ್ ಶಾಟ್ಸ್

ಕ್ಲೋಸ್‌ಅಪ್ ಶಾಟ್ಸ್

ಕ್ಲೋಸಪ್ ಶಾಟ್‌ಗಳನ್ನು ಫೋನ್ ಅತ್ಯದ್ಭುತವಾಗಿ ಸೆರೆಹಿಡಿಯಲಿದೆ, ಡಿಎಸ್‌ಎಲ್‌ಆರ್‌ನಂತಹ ಬಣ್ಣವನ್ನು ಇದು ನೀಡಲಿದ್ದು ಸುಂದರ ಚಿತ್ರ ಗುಣಮಟ್ಟವನ್ನು ನೀವು ಪಡೆದುಕೊಳ್ಳಲಿರುವಿರಿ.

ಮ್ಯಾಕ್ರೋ ಶಾಟ್

ಮ್ಯಾಕ್ರೋ ಶಾಟ್

ಈ ಚಿತ್ರದಲ್ಲಿ, ಚಿತ್ರದ ಅಣುವನ್ನು ಅಣುವನ್ನು ನಿಮಗೆ ವಿಷದವಾಗಿ ಕಂಡುಕೊಳ್ಳಬಹುದಾಗಿದೆ. ಉತ್ತಮ ಬಣ್ಣ ಮಾತ್ರವಲ್ಲದೆ, ಶಾರ್ಪ್‌ನೆಸ್ ಅನ್ನು ನಿರ್ವಹಿಸುವಲ್ಲಿ ಅತ್ಯುತ್ತಮ ಎಂದೆನಿಸಿದೆ.

ಬ್ಲ್ಯಾಕ್ ಏಂಡ್ ವೈಟ್ ಶಾಟ್

ಬ್ಲ್ಯಾಕ್ ಏಂಡ್ ವೈಟ್ ಶಾಟ್

ಹುವಾವೆ ಪಿ9 ನ ವಿಶೇಷ ಸಾಮರ್ಥ್ಯಗಳಿಗೆ ವಂದನೆಗಳನ್ನು ತಿಳಿಸಲೇಬೇಕು. ಫೋನ್ ಅನ್ನು ಬಳಸಿಕೊಂಡು ನೀವು ಉತ್ತಮವಾದ ಬ್ಲ್ಯಾಕ್ ಏಂಡ್ ವೈಟ್ ಫೋಟೋಗಳನ್ನು ಫೋನ್ ಬಳಸಿ ಸೆರೆಹಿಡಿಯಬಹುದಾಗಿದೆ.

ಕಡಿಮೆ ಬೆಳಕಿನಲ್ಲಿ ಮೋನೋಕ್ರೋಮ್ ಶಾಟ್

ಕಡಿಮೆ ಬೆಳಕಿನಲ್ಲಿ ಮೋನೋಕ್ರೋಮ್ ಶಾಟ್

ಕಡಿಮೆ ಬೆಳಕಿನಲ್ಲೂ ಕ್ಯಾಮೆರಾ ಕಪ್ಪು ಮತ್ತು ಬಿಳುಪು ಶಾಟ್ ಅನ್ನು ತೆಗೆದಿರುವುದನ್ನು ನಿಮಗೆ ಕಾಣಬಹುದಾಗಿದೆ.

ಡೆಪ್ತ್ ಆಫ್ ಫೀಲ್ಡ್

ಡೆಪ್ತ್ ಆಫ್ ಫೀಲ್ಡ್

ಫೋನ್‌ನಲ್ಲಿರುವ ಡ್ಯುಯಲ್ ಕ್ಯಾಮೆರಾ ಸೆಟಪ್ ಎರಡು ಸೆನ್ಸಾರ್‌ಗಳೊಂದಿಗೆ ಬಂದಿದೆ, ಇದು ಡೆಪ್ತ್ ಆಫ್ ಫೀಲ್ಡ್ ಅನ್ನು ಅಳತೆ ಮಾಡುತ್ತದೆ. ಯಾವುದೇ ಫೋಕಸ್ ಪಾಯಿಂಟ್‌ನಲ್ಲಿ ಬಳಕೆದಾರರಿಗೆ ರಿಫೋಕಸ್ ಮಾಡಲು ಇದು ಅನುಮತಿಸುತ್ತದೆ ಇದರಿಂದ ಚಿತ್ರ ಗುಣಮಟ್ಟ ನಷ್ಟವಾಗುವುದಿಲ್ಲ.

ಬೋಕ್ ಇಫೆಕ್ಟ್

ಬೋಕ್ ಇಫೆಕ್ಟ್

ಹುವಾವೆ ಪಿ9 ಕ್ಯಾಮೆರಾದಲ್ಲಿ ಉತ್ತಮ ಅಂಶವೆಂದರೆ ಫೋಖಸ್ ಪಾಯಿಂಟ್‌ನೊಂದಿಗೆ ನೀವು ಏನು ಬೇಕಾದರೂ ಮಾಡಬಹುದಾಗಿದೆ. ಬೋಕ್ ಇಫೆಕ್ಟ್ ಬಳಸಿಕೊಂಡು ಉತ್ತಮ ಫೋಟೋಗಳನ್ನು ನಿಮಗೆ ನೀಡಬಹುದಾಗಿದೆ. ಇದು ಮೂಲತಃ ಹೈ ಪ್ರೊಫೈಲ್ ಡಿಎಸ್‌ಎಲ್‌ಆರ್‌ನಿಂದ ಕ್ಲಿಕ್ ಮಾಡುವಂತಹದ್ದಾಗಿದೆ.

ಉತ್ತಮ ಕಲರ್ ರಿಪ್ರೊಡಕ್ಶನ್

ಉತ್ತಮ ಕಲರ್ ರಿಪ್ರೊಡಕ್ಶನ್

ಪಿ9 ಕ್ಯಾಮೆರಾವು ಬಣ್ಣ ಮತ್ತು ಕ್ಯಾಪ್ಚರ್‌ಗೆ ಅತ್ಯುತ್ತಮ ಎಂದೆನಿಸಿದೆ. ಇದು ಕೆಂಪು, ಹಸಿರು, ಕಂದು, ಗ್ರೇ ಮತ್ತು ಇತರ ಬಣ್ಣಗಳಲ್ಲಿ ಉತ್ತಮ ಫೋಟೋವನ್ನು ಒದಗಿಸುತ್ತಿದೆ ಇದರಿಂದ ಚಿತ್ರ ನೈಜ ಎಂದೆನಿಸುತ್ತದೆ.

ಪರ್ಫೆಕ್ಟ್ ಸೆಲ್ಫಿ

ಪರ್ಫೆಕ್ಟ್ ಸೆಲ್ಫಿ

ಸೆಲ್ಫಿಯಲ್ಲಿ ಡಿವೈಸ್ ಅದ್ಭುತವಾಗಿ ಕಾರ್ಯನಿರ್ವಹಿಸಲಿದೆ. ಹೆಚ್ಚಿನ ಸೆಲ್ಫಿ ಶಾಟ್‌ಗಳಲ್ಲಿ ಇದನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ ಇದು ವೈಡ್ ಫ್ರೇಮ್ ಅನ್ನು ಕವರ್ ಮಾಡುತ್ತದೆ. 8 ಎಮ್‌ಪಿ ಸೆಲ್ಫಿ ಶೂಟರ್ ಉತ್ತಮ ಫೋಟೋಗಳನ್ನು ಕ್ಲಿಕ್ಕಿಸುತ್ತದೆ ಮತ್ತು ಬಣ್ಣಗಳನ್ನು ಇದು ಕಳೆದುಕೊಳ್ಳುವುದಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
The talk point of the Huawei P9 is its dual-camera set up that also gives it an edge over its competitors in the market.
Opinion Poll

Social Counting

Gadget Finder

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot