'ಒನ್‌ಪ್ಲಸ್‌ 7 ಪ್ರೊ' ಖರೀದಿಸ ಬೇಕೇ ಅಥವಾ ಬೇಡವೇ ನೀವೇ ನಿರ್ಧರಿಸಿ!

|

ಬೆಂಗಳೂರಿನಲ್ಲಿ ಇತ್ತೀಚಿಗೆ ಬಿಡುಗಡೆ ಆಗಿರುವ 'ಒನ್‌ಪ್ಲಸ್‌ 7' ಮತ್ತು 'ಒನ್‌ಪ್ಲಸ್‌ 7 ಪ್ರೊ' ಸ್ಮಾರ್ಟ್‌ಫೋನ್‌ಗಳು ಸದ್ಯ ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿವೆ. ಅವುಗಳಲ್ಲಿ ಒನ್‌ಪ್ಲಸ್‌ 7 ಪ್ರೊ ಫ್ಲ್ಯಾಗ್‌ಶಿಪ್ ಮಾದರಿಯ ಸ್ಮಾರ್ಟ್‌ಫೋನ್‌ ಆಗಿದ್ದು, ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರೆ ಕಂಪನಿಗಳ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಪೋನ್‌ಗಳಿಗೆ ನೇರ ಪೈಪೋಟಿ ನೀಡುವ ಎಲ್ಲ ಅತ್ಯುತ್ತಮ ಫೀಚರ್ಸ್‌ಗಳನ್ನು ಒಳಗೊಂಡಿದೆ.

'ಒನ್‌ಪ್ಲಸ್‌ 7 ಪ್ರೊ' ಖರೀದಿಸ ಬೇಕೇ ಅಥವಾ ಬೇಡವೇ ನೀವೇ ನಿರ್ಧರಿಸಿ!

ಹೌದು, ಒನ್‌ಪ್ಲಸ್‌ 7 ಪ್ರೊ ಮೊಬೈಲ್‌ ಮಾರುಕಟ್ಟೆಯಲ್ಲಿ ಪ್ರಸ್ತುತ ಟ್ರೆಂಡಿಂಗ್‌ನಲ್ಲಿರುವ ನೂತನ ಫೀಚರ್ಸ್‌ಗಳನ್ನು ಹೊಂದಿದ್ದು, ಬೆಲೆಯಲ್ಲಿಯೂ ಸಹ ಇತರೆ ಪ್ರೀಮಿಯಂ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳಿಗಿಂತ ಕಡಿಮೆಯಾಗಿದೆ. ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ, 48ಎಂಪಿ ಹಿಂಬದಿ ಕ್ಯಾಮೆರಾ, ಅಂಚುರಹಿತ ಡಿಸ್‌ಪ್ಲೇ, ಬಲವಾದ ಬ್ಯಾಟರಿ ಮತ್ತು ಡಿಸ್‌ಪ್ಲೇ ಸೆನ್ಸಾರ್‌ ಫೀಚರ್ಸ್‌ಗಳು ಒನ್‌ಪ್ಲಸ್‌ 7 ಪ್ರೊ ಫೋನಿನ ಹೈಲೈಟ್ಸ್‌ಗಳಾಗಿವೆ.

'ಒನ್‌ಪ್ಲಸ್‌ 7 ಪ್ರೊ' ಖರೀದಿಸ ಬೇಕೇ ಅಥವಾ ಬೇಡವೇ ನೀವೇ ನಿರ್ಧರಿಸಿ!

ಬಿಡುಗಡೆ ಆಗಿ ಕೇಲವೆ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಪ್ರಿಯರಿಂದ ಉತ್ತಮ ಪ್ರತಿಕ್ರಿಯೇ ಕಂಡುಕೊಂಡಿರುವ ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನ್‌ ಅನ್ನು ಖರೀದಿಸಬೇಕೋ ಅಥವಾ ಬೇಡವೋ ಎಂಬುದನ್ನು ನೀವೆ ನಿರ್ಧರಿಸಿ. ಹಾಗಾದರೇ ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನ್‌ ಒಳಗೊಂಡಿರುವ ಆಕರ್ಷಕ ಫೀಚರ್ಸ್‌ಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ಒನ್‌ಪ್ಲಸ್ 'ಬುಲೆಟ್ ವಾಯರ್‌ಲೆಸ್‌ ಇಯರ್‌ಫೋನ್ 2' ಲಾಂಚ್!.ಸೌಂಡ್ ಹೇಗಿದೆ?ಓದಿರಿ : ಒನ್‌ಪ್ಲಸ್ 'ಬುಲೆಟ್ ವಾಯರ್‌ಲೆಸ್‌ ಇಯರ್‌ಫೋನ್ 2' ಲಾಂಚ್!.ಸೌಂಡ್ ಹೇಗಿದೆ?

ಪ್ಲಸ್‌ ಪಾಯಿಂಟ್-ಉತ್ತಮ ಡಿಸ್‌ಪ್ಲೇ

ಪ್ಲಸ್‌ ಪಾಯಿಂಟ್-ಉತ್ತಮ ಡಿಸ್‌ಪ್ಲೇ

ಅತ್ಯುತ್ತಮ ಡಿಸ್‌ಪ್ಲೇಯನ್ನು ಹೊಂದಿರುವ ಒನ್‌ಪ್ಲಸ್‌ 7 ಪ್ರೊ 90Hz ರೀಫ್ರೇಶ್‌ ರೇಟ್‌ ಅನ್ನು ಹೊಂದಿದ್ದು, ಎಚ್‌ಡಿಆರ್‌10 ಸಾಮರ್ಥ್ಯವನ್ನು ಹೊಂದಿದೆ. 6.67 ಇಂಚಿನ ಪೂರ್ಣ ಎಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯವು 1440 x 3120 ಆಗಿದೆ. ಗೊರಿಲ್ಲಾ ಗ್ಲಾಸ್‌ v5 ರಕ್ಷಣೆ ನೀಡಲಾಗಿದೆ. ಹಾಗೆಯೇ ಡಿಸ್‌ಪ್ಲೇ ಅನುಪಾತವು 19.5:9 ಆಗಿದೆ.

ಪ್ಲಸ್‌ ಪಾಯಿಂಟ್-ವೇಗದ ಪ್ರೊಸೆಸರ್

ಪ್ಲಸ್‌ ಪಾಯಿಂಟ್-ವೇಗದ ಪ್ರೊಸೆಸರ್

ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನಿನಲ್ಲಿ ಆಕ್ಟಾಕೋರ್‌ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ ಅನ್ನು ಒದಗಿಸಲಾಗಿದ್ದು, ಇದು ಸ್ಮಾರ್ಟ್‌ಫೋನ್‌ ವೇಗವಾಗಿ ಕೆಲಸ ನಿರ್ವಹಿಸಲು ಬೆಂಬಲ ನೀಡುತ್ತದೆ. ಇದರೊಂದಿಗೆ ಅಂಡ್ರೆನೊ 640 ಗ್ರಾಫಿಕ್‌ ಸಾಮರ್ಥ್ಯ ಸಹ ನೀಡಲಾಗಿದೆ. ಪ್ರೊಸೆಸರ್‌ ವೇಗವು 2.84GHz ಸಾಮರ್ಥ್ಯದಲ್ಲಿದೆ.

ಪ್ಲಸ್‌ ಪಾಯಿಂಟ್-ಪಾಪ್‌ಅಪ್‌ ಸೆಲ್ಫಿ

ಪ್ಲಸ್‌ ಪಾಯಿಂಟ್-ಪಾಪ್‌ಅಪ್‌ ಸೆಲ್ಫಿ

ಇತ್ತೀಚಿಗೆ ಟ್ರೆಂಡ್‌ನಲ್ಲಿರುವ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾವನ್ನು ಒನ್‌ಪ್ಲಸ್‌ ಮೊದಲ ಬಾರಿಗೆ ಪರಿಚಯಿಸಿದ್ದು, ಪಾಪ್‌ಅಪ್‌ ಕ್ಯಾಮೆರಾ ವೇಗವಾಗಿ ತೆರೆದುಕೊಳ್ಳುತ್ತದೆ. ಸೆಲ್ಫಿಗಾಗಿ 16ಎಂಪಿ ಸೆನ್ಸಾರ್ ಕ್ಯಾಮೆರಾ ನೀಡಲಾಗಿದ್ದು, ಹಲವು ಸೆಟ್ಟಿಂಗ್ ಆಯ್ಕೆಗಳನ್ನು ಈ ಸ್ಮಾರ್ಟ್‌ಪೋನಿನಲ್ಲಿ ಕಾಣಬಹುದಾಗಿದೆ.

ಪ್ಲಸ್‌ ಪಾಯಿಂಟ್-ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ

ಪ್ಲಸ್‌ ಪಾಯಿಂಟ್-ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ

ಪ್ರಸ್ತುತ ಸ್ಮಾರ್ಟ್‌ಫೋನ್‌ಗಳಲ್ಲಿ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಇರುವುದು ಸಾಮಾನ್ಯವಾಗಿದ್ದು, ಈ ಆಯ್ಕೆಯನ್ನು ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೊನ್‌ ಸಹ ಅಳವಡಿಸಿಕೊಂಡಿದೆ. 4000mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದ್ದು, ವೇಗವಾಗಿ ಫೋನ್‌ ಚಾರ್ಜ್‌ ಪಡೆದುಕೊಳ್ಳಲಿದೆ.

ಪ್ಲಸ್‌ ಪಾಯಿಂಟ್-ಕ್ಯಾಮೆರಾ

ಪ್ಲಸ್‌ ಪಾಯಿಂಟ್-ಕ್ಯಾಮೆರಾ

ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾಗಳನ್ನು ನೀಡಲಾಗಿದೆ. ಅವುಗಳು ಕ್ರಮವಾಗಿ 48ಎಂಪಿ+ 16ಎಂಪಿ+ 8ಎಂಪಿ ಸಾಮರ್ಥ್ಯದಲ್ಲಿದ್ದು, ಎಫ್‌ ಫೇಸ್‌ ಡಿಟೆಕ್ಷನ್, ಆಟೋ ಫ್ಲ್ಯಾಶ್‌, ಎಲೆಕ್ಟ್ರಾನಿಕ್ ಇಮೇಜ್‌ ಸ್ಟೆಬಿಲೈಜೇಶನ್, ಎಚ್‌ಆರ್‌ಡಿ, ವೈಟ್‌ ಬ್ಯಾಲೆನ್ಸ್‌ ಆಯ್ಕೆಗಳನ್ನು ಸಹ ಹೊಂದಿದೆ.

ಮೈನಸ್‌ ಪಾಯಿಂಟ್- ಒಂದೇ ಪ್ರೊಸೆಸರ್

ಮೈನಸ್‌ ಪಾಯಿಂಟ್- ಒಂದೇ ಪ್ರೊಸೆಸರ್

ಒನ್‌ಪ್ಲಸ್‌ 7 ಪ್ರೊ ಮತ್ತು ಒನ್‌ಪ್ಲಸ್‌ 7 ಸ್ಮಾರ್ಟ್‌ಫೋನ್‌ಗಳಲ್ಲಿ ಒಂದೇ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ ಅನ್ನು ನೀಡಲಾಗಿದೆ. ಹೀಗಾಗಿ ಪ್ರೊಸೆಸರ್‌ ವಿಚಾರದಲ್ಲಿ ಒನ್‌ಪ್ಲಸ್‌ 7 ಪ್ರೊ ಫ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನಿಗೆ ಒನ್‌ಪ್ಲಸ್‌ 7 ಸ್ಮಾರ್ಟ್‌ಫೋನೇ ಎದುರಾಳಿ ಎನಿಸುತ್ತದೆ.

ಮೈನಸ್‌ ಪಾಯಿಂಟ್- ಆಡಿಯೊ ಜಾಕ್ ಇಲ್ಲ

ಮೈನಸ್‌ ಪಾಯಿಂಟ್- ಆಡಿಯೊ ಜಾಕ್ ಇಲ್ಲ

ಇತ್ತೀಚಿಗೆ ಸ್ಮಾರ್ಟ್‌ಫೋನ್‌ಗಳಲ್ಲಿ ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ ಆಯ್ಕೆ ನೀಡುವುದು ಸಹಜವಾಗಿದೆ ಆದರೆ ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನಿನಲ್ಲಿ ಈ ಆಯ್ಕೆಯನ್ನು ನೀಡಿದ್ದಾರೆ. ಆದರೆ 3.5ಎಂ.ಎಂ ಆಡಿಯೊ ಜಾಕ್‌ ನೀಡದಿರುವುದು ಮೈನಸ್‌ ಪಾಯಿಂಟ್ ಎನ್ನಬಹುದಾಗಿದೆ.

ಮೈನಸ್‌ ಪಾಯಿಂಟ್- ವಾಯರ್‌ಲೆಸ್‌ ಚಾರ್ಜಿಂಗ್ ನೀಡಿಲ್ಲ

ಮೈನಸ್‌ ಪಾಯಿಂಟ್- ವಾಯರ್‌ಲೆಸ್‌ ಚಾರ್ಜಿಂಗ್ ನೀಡಿಲ್ಲ

ಪ್ರಸ್ತುತ ಫ್ಲ್ಯಾಗ್‌ಶಿಪ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳಲ್ಲಿ ವಾಯರ್‌ಲೆಸ್‌ ಚಾರ್ಜರ್‌ ಸೌಲಭ್ಯದ ಆಯ್ಕೆಗಳನ್ನು ನೀಡುತ್ತಾರೆ ಆದರೆ ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನಿನಲ್ಲಿ ವಾಯರ್‌ಲೆಸ್‌ ಚಾರ್ಜಿಂಗ್‌ ಸೌಲಭ್ಯವನ್ನು ನೀಡಿಲ್ಲ. ಆದರೆ ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ ಎಸ್‌10e ಮತ್ತು ಆಪಲ್‌ ಐಫೋನ್‌ ಎಕ್ಸ್‌ಆರ್‌ ಫ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನ್‌ಗಳಲ್ಲಿ ವಾಯರ್‌ಲೆಸ್‌ ಚಾರ್ಜಿಂಗ್ ಆಯ್ಕೆಯನ್ನು ಕಾಣಬಹುದು.

ಮೈನಸ್‌ ಪಾಯಿಂಟ್- ವಾಟರ್‌ಪ್ರೊಫ್‌ ಇಲ್ಲ

ಮೈನಸ್‌ ಪಾಯಿಂಟ್- ವಾಟರ್‌ಪ್ರೊಫ್‌ ಇಲ್ಲ

ಪ್ರಮುಖ ಫ್ಲ್ಯಾಗ್‌ಶಿಪ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳಾದ ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಸ್‌10e ಮತ್ತು ಆಪಲ್‌ ಐಫೋನ್‌ ಎಕ್ಸ್‌ಆರ್‌ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟರ್‌ಪ್ರೊಫ್‌ IP68 ಸೌಲಭ್ಯ ಒದಗಿಸಲಾಗಿದೆ. ಆದರೆ ಅದೇ ವರ್ಗದಲ್ಲಿರುವ ಒನ್‌ಪ್ಲಸ್‌ 7 ಪ್ರೊದಲ್ಲಿ ಈ ಆಯ್ಕೆ ಹೊಂದಿಲ್ಲ.

ಓದಿರಿ : ವಾಟ್ಸಪ್‌ ಅಪ್‌ಡೇಟ್ ಮಾಡಬೇಕೆ?..ಹೀಗೆ ಮಾಡಿ!ಓದಿರಿ : ವಾಟ್ಸಪ್‌ ಅಪ್‌ಡೇಟ್ ಮಾಡಬೇಕೆ?..ಹೀಗೆ ಮಾಡಿ!

Best Mobiles in India

English summary
10 reasons to buy and not buy the new OnePlus 7 Pro.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X