Subscribe to Gizbot

ಒನ್ ಪ್ಲಸ್ 3ಟಿ ಖರೀದಿಸಬೇಡಿ: ಒನ್ ಪ್ಲಸ್ 4 ಕ್ಕೆ ಕಾಯಿರಿ.

Written By:

ಇತ್ತೀಚೆಗೆ ಒನ್ ಪ್ಲಸ್ ತನ್ನ ಫ್ಲಾಗ್ ಶಿಪ್ ಫೋನಾದ ಒನ್ ಪ್ಲಸ್ 3ಟಯ ಅಪ್ ಡೇಟೆಡ್ ಆವೃತ್ತಿ ಒನ್ ಪ್ಲಸ್3ಟಿಯನ್ಉ ತಯಾರಿಸುವುದು ಸುದ್ದಿಯಲ್ಲಿದೆ. ಈ ಸ್ಮಾರ್ಟ್ ಫೋನ್ ಡಿಸೆಂಬರಿನಲ್ಲಿ ಬಿಡುಗಡೆಯಾಗಲಿದೆ, ಅಂದಾಜು 479 ಡಾಲರ್ ಬೆಲೆಯಿರಲಿದೆ (ಸರಿಸುಮಾರು 32,000 ರುಪಾಯಿಗಳು) ಇದು ಸದ್ಯವಿರುವ ಫೋನಿಗಿಂತ 80 ಡಾಲರ್ರುಗಳಷ್ಟು ದುಬಾರಿ.

ಒನ್ ಪ್ಲಸ್ 3ಟಿ ಖರೀದಿಸಬೇಡಿ: ಒನ್ ಪ್ಲಸ್ 4 ಕ್ಕೆ ಕಾಯಿರಿ.

ಆದರೆ ನಿಮ್ಮಲ್ಲಿರುವ ಒನ್ ಪ್ಲಸ್ 3 ಅನ್ನು ಹೊಸ ಒನ್ ಪ್ಲಸ್ 3ಟಿ ಜೊತೆಗೆ ಬದಲಿಸಬೇಕೆ ಅಥವಾ ಕಂಪನಿಯು ಒನ್ ಪ್ಲಸ್ 4 ಅನ್ನು ಬಿಡುಗಡೆಗೊಳಿಸುವವರೆಗೆ ಕಾಯಬೇಕೆ?

ಓದಿರಿ: ಏರ್‌ಟೆಲ್‌ ಬಳಕೆದಾರರು ಪ್ರತಿ ತಿಂಗಳು 5GB ಉಚಿತ ಡಾಟಾ ಪಡೆಯುವುದು ಹೇಗೆ?

ನಿಮಗೆ ಇದರ ಬಗ್ಗೆ ಗೊಂದಲವಿದ್ದರೆ, ಈ ಲೇಖನವನ್ನು ಓದಿ. ಒನ್ ಪ್ಲಸ್ 3ಟಿ ಖರೀದಿಸಬೇಡಿ, ಒನ್ ಪ್ಲಸ್ 4 ಬರುವವರೆಗೆ ಕಾಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ನಾಪ್ ಡ್ರಾಗನ್ 821 ಬದಲಿಗೆ ಸ್ನಾಪ್ ಡ್ರಾಗನ್ 830.

ಸ್ನಾಪ್ ಡ್ರಾಗನ್ 821 ಬದಲಿಗೆ ಸ್ನಾಪ್ ಡ್ರಾಗನ್ 830.

ಒನ್ ಪ್ಲಸ್ 3ಟಿಯಲ್ಲಿ ಸ್ನಾಪ್ ಡ್ರಾಗನ್ 821 ಇರುವ ಬಗ್ಗೆ ಸುದ್ದಿಗಳಿವೆ, ಆದರೆ ಒನ್ ಪ್ಲಸ್ 4 ಫೋನಿನಲ್ಲಿ ಸ್ನಾಪ್ ಡ್ರಾಗನ್ 830 ಇರಲಿದೆ. (2017ರ ಎಲ್ಲಾ ಫೋನುಗಳಲ್ಲೂ ಹೆಚ್ಚಿನಂಶ ಇದೇ ಇರಲಿದೆ). ಸ್ನಾಪ್ ಡ್ರಾಗನ್ 821 ಮತ್ತು 830ಗಳೆರಡೂ ಫ್ಲಾಗ್ ಶಿಪ್ ಫೋನುಗಳಿಗಾಗಿಯೇ ತಯಾರಿಸಿದ್ದು ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ಮುಂದಿನ ವರುಷ ಬಿಡುಗಡೆಯಾಗಲಿರುವ ಸ್ನಾಪ್ ಡ್ರಾಗನ್ 830 ಸದ್ಯವಿರುವ 821ಕ್ಕಿಂತ ಉತ್ತಮವಾಗಿರಲಿದೆ ಎಂಬುದು ವಾಸ್ತವ ಸಂಗತಿ.

ಆ್ಯಂಡ್ರಾಯ್ಡ್ 7.0 ನೌಗಾಟ್.

ಆ್ಯಂಡ್ರಾಯ್ಡ್ 7.0 ನೌಗಾಟ್.

ವ್ಯೀಬೋ ಬಳಕೆದಾರರ ಪ್ರಕಾರ ಒನ್ ಪ್ಲಸ್ 4 ಮುಂದಿನ ವರುಷದ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಬಿಡುಗಡೆಯಾಗುತ್ತದೆ. ಇದರರ್ಥ ಒನ್ ಪ್ಲಸ್ ಫ್ಲಾಗ್ ಶಿಪ್ ಫೋನಿನಲ್ಲಿ ಖಂಡಿತವಾಗಿಯೂ ಆ್ಯಂಡ್ರಾಯ್ಡ್ 7.0 ನೌಗಾಟ್ ಇರಲಿದೆ.

ಒನ್ ಪ್ಲಸ್ 3ಟಿಯಲ್ಲೂ ಆ್ಯಂಡ್ರಾಯ್ಡ್ 7.0 ನೌಗಾಟ್ ಇರುತ್ತದೆ ಎನ್ನುವ ಗಾಳಿ ಸುದ್ದಿಗಳಿವೆ. ಇದು ಗಾಳಿ ಸುದ್ದಿ ಮಾತ್ರ, ಬಿಡುಗಡೆಯಾಗುವಾಗ ಏನಿರುತ್ತದೋ ಬಲ್ಲವರಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೊಡ್ಡ ಬ್ಯಾಟರಿ, ಉತ್ತಮ ದಕ್ಷತೆ.

ದೊಡ್ಡ ಬ್ಯಾಟರಿ, ಉತ್ತಮ ದಕ್ಷತೆ.

ಹೊಸ ಸುದ್ದಿಗಳ ಪ್ರಕಾರ, ಒನ್ ಪ್ಲಸ್ 4ನಲ್ಲಿ 4,000 ಎಂ.ಎ.ಹೆಚ್ ಬ್ಯಾಟರಿ ಇರಲಿದೆ. ಸ್ನಾಪ್ ಡ್ರಾಗನ್ 830 ಇರುವುದರಿಂದ ದಕ್ಷತೆಯೂ ಉತ್ತಮವಾಗಿರಲಿದೆ.

ಒನ್ ಪ್ಲಸ್ 4ನಲ್ಲಿ ಉತ್ತಮ ಕ್ಯಾಮೆರ.

ಒನ್ ಪ್ಲಸ್ 4ನಲ್ಲಿ ಉತ್ತಮ ಕ್ಯಾಮೆರ.

ಸದ್ಯಕ್ಕೆ ಉತ್ತಮ ಸ್ಮಾರ್ಟ್ ಫೋನುಗಳಿಗೂ ಸಾಮಾನ್ಯ ಫೋನುಗಳಿಗೂ ಇರುವ ಪ್ರಮುಖ ವ್ಯತ್ಯಾಸ ಕ್ಯಾಮೆರ. ದುಬಾರಿ ಸ್ಮಾರ್ಟ್ ಫೋನುಗಳಲ್ಲಿ ಉತ್ತಮ ಕ್ಯಾಮೆರಾ ಇರುವುದು ಅವಶ್ಯಕ. ಒನ್ ಪ್ಲಸ್3ಟಿಗೆ ಹೋಲಿಸಿದರೆ ಒನ್ ಪ್ಲಸ್4ನಲ್ಲಿ ಉತ್ತಮ ಕ್ಯಾಮೆರಾ ಇರಲಿದೆ.

ಜೊತೆಗೆ, ಆ್ಯಪಲ್ ನಂತಹ ಪ್ರಮುಖ ಸ್ಮಾರ್ಟ್ ಫೋನ್ ತಯಾರಿಕೆದಾರರು ಹಿಂಬದಿಯಲ್ಲಿ ಎರಡು ಕ್ಯಾಮೆರಾಗಳನ್ನು ಕೊಡುತ್ತಿವೆ. ಒನ್ ಪ್ಲಸ್4ನಲ್ಲೂ ಇದನ್ನು ನಿರೀಕ್ಷಿಸಬಹುದು.

ಈ ಗುಣ ವಿಶೇಷತೆಗಳೆಲ್ಲವೂ ಇದ್ದರೂ ಇರಬಹುದು ಇರದೆಯೂ ಹೋಗಬಹುದು ಎನ್ನುವುದನ್ನು ಓದುಗರು ನೆನಪಿನಲ್ಲಿಡಬೇಕು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here are 4 reasons why you should skip the OnePlus 3T, an upgraded version of the OnePlus 3 and wait for OnePlus 4 instead.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot