ವಿಶ್ವದಲ್ಲೇ ಮನ್ನಣೆ ಪಡೆದುಕೊಂಡ ಟಾಪ್ ಸ್ಮಾರ್ಟ್‌ಫೋನ್ ತಯಾರಕರು

Written By:

ಸ್ಮಾರ್ಟ್‌ಫೋನ್ ಮಾರುಕಟ್ಟೆ ಎಂಬುದು ಹೆಚ್ಚು ಕ್ರಿಯಾತ್ಮಕವಾದ ಸ್ಥಳವಾಗಿದೆ. ಹೊಸ ಹೊಸ ಸವಾಲುಗಳನ್ನು ಇಲ್ಲಿನ ಪ್ರತಿಯೊಬ್ಬ ಸ್ಮಾರ್ಟ್‌ಫೋನ್ ತಯಾರಕನೂ ಎದುರಿಸಬೇಕಾಗಿದ್ದು ಸೋಲು ಗೆಲುವು ಕಟ್ಟಿಟ್ಟ ಬುತ್ತಿಯಾಗಿದೆ. ಬಳಕೆದಾರರ ತೀರ್ಪೇ ಅಂತಿಮವಾಗಿದ್ದು ಅದರ ನಿರ್ಧಾರದ ಮೇಲೆಯೇ ಸ್ಮಾರ್ಟ್‌ಫೋನ್ ಭವಿಷ್ಯ ನಿಂತಿದೆ.

ಕಳೆದ ಕೆಲವು ವರ್ಷಗಳಿಂದ ಸ್ಯಾಮ್‌ಸಂಗ್ ಮತ್ತು ಆಪಲ್ ಕಠಿಣ ಹಣಾಹಣಿಯನ್ನು ಎದುರಿಸುತ್ತಿದ್ದು ಇಬ್ಬರೂ ಸಮಬಲಶಾಲಿಗಳಾಗಿದ್ದು ಸೋಲು ಗೆಲುವಿನಲ್ಲಿ ಇಬ್ಬರ ಪಾಲೂ ಇರುತ್ತದೆ. ಇಂದಿನ ಲೇಖನದಲ್ಲಿ ವಿಶ್ವವನ್ನಾಳುತ್ತಿರುವ ಅತಿ ದೊಡ್ಡ ಸ್ಮಾರ್ಟ್‌ಫೋನ್‌ ಕಂಪೆನಿಗಳ ಪರಿಚಯವನ್ನು ನಾವು ಮಾಡಿಕೊಡುತ್ತಿದ್ದು, 2016 ರ ಪ್ರಥಮ ತ್ರೈಮಾಸಿಕದಲ್ಲಿ ಸ್ಮಾರ್ಟ್‌ಫೋನ್‌ಗಳ ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಾನವನ್ನು ಪಡೆದುಕೊಂಡಿವೆ.

ಓದಿರಿ:ಫೋನ್ ಬ್ಯಾಟರಿ ಉಳಿಸುವ ಟಾಪ್ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್‌ಸಂಗ್

ಸ್ಯಾಮ್‌ಸಂಗ್

#1

ದಕ್ಷಿಣ ಕೊರಿಯಾದ ಸ್ಮಾರ್ಟ್‌ಫೋನ್ ದೈತ್ಯ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ತನ್ನ 81,186,900 ಯೂನಿಟ್‌ಗಳನ್ನು ಪ್ರಥಮ ತ್ರೈಮಾಸಿಕದಲ್ಲಿ ಮಾರಾಟ ಮಾಡಿದೆ. ಕಂಪೆನಿಯು 23.2% ಮಾರುಕಟ್ಟೆ ಷೇರನ್ನು ಹೊಂದಿದ್ದು, ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ 24.1% ಇಳಿಮುಖವನ್ನು ಕಂಡಿದೆ.ಪ್ರಥಮ ತ್ರೈಮಾಸಿಕದಲ್ಲಿ ಆಪಲ್ ಅನ್ನು ಹಿಂದಿಕ್ಕಿದ ಹೆಗ್ಗಳಿಕೆಯನ್ನು ಸ್ಯಾಮ್‌ಸಂಗ್ ಪಡೆದುಕೊಂಡಿದ್ದು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್7 ಸಿರೀಸ್ ಫೋನ್‌ಗಳು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರಬಲ ಸ್ಪರ್ಧಿಗಳು ಎಂದೆನಿಸಿದ್ದಾರೆ.

ಆಪಲ್

ಆಪಲ್

#2

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿರುವ ಆಪಲ್ ವರ್ಷದಿಂದ ವರ್ಷಕ್ಕೆ ಡಬಲ್ ಡಿಜಿಟ್ ಘೋಷಣೆಯನ್ನು ಮಾಡುತ್ತಿದೆ. ಐಫೋನ್ ಮಾರಾಟವು 14% ಕೆಳಕ್ಕೆ ಇಳಿದಿದೆ. ಆಪಲ್‌ನ ಯುಎಸ್‌ನಲ್ಲಿ ನಡೆಸಿದ ಅಪ್‌ಗ್ರೇಡ್ ಪ್ರೊಗ್ರಾಮ್ ತನ್ನ ಫ್ಲ್ಯಾಗ್‌ಶಿಪ್ ಫೋನ್‌ಗಳಾದ ಐಫೋನ್ 6ಎಸ್ ಮತ್ತು 6ಎಸ್ ಪ್ಲಸ್‌ ಮಾಡೆಲ್‌ಗಳ ಬೆಲೆಗಳಲ್ಲೂ ಕಂಪೆನಿಯ ಅತಿದೊಡ್ಡ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟವನ್ನು ಕಂಡುಕೊಂಡಿದೆ.

ಹುವಾವೆ

ಹುವಾವೆ

#3

ಮೂರನೇ ಸ್ಥಾನದಲ್ಲಿರುವ ಹುವಾವೆ ಚೀನಾದಲ್ಲಿ ಪ್ರಬಲ ಬೆಳವಣಿಗೆಯನ್ನು ಕಂಡುಕೊಂಡಿದೆ. ಯುರೋಪ್‌ನಲ್ಲೂ ಈ ಫೋನ್‌ಗೆ ಹೆಚ್ಚಿನ ಬೇಡಿಕೆ ಇದ್ದು, ಅಮೇರಿಕಾ ಮತ್ತು ಆಫ್ರಿಕಾದಲ್ಲಿ ಹುವಾವೆ ಅಭಿಮಾನಿಗಳಿದ್ದಾರೆ. ಕಂಪೆನಿಯು 2016 ರ ಪ್ರಥಮ ತ್ರೈಮಾಸಿಕದಲ್ಲಿ 28,861,000 ಯೂನಿಟ್‌ಗಳನ್ನು ಮಾರಾಟ ಮಾಡಿದೆ ಎಂಬುದಾಗಿ ಗಾರ್ಟನರ್ ಅಭಿಪ್ರಾಯ ನೀಡಿದೆ.
ಮಾಹಿತಿಗಾಗಿ ಫೋಟೋ ಕ್ಲಿಕ್ ಮಾಡಿ

ಒಪ್ಪೊ

ಒಪ್ಪೊ

#4

2016 ರ ಪ್ರಥಮ ತ್ರೈಮಾಸಿಕದಲ್ಲಿ ಒಪ್ಪೊ ಉತ್ತಮ ಆರಂಭವನ್ನು ಕಂಡುಕೊಂಡಿತು. ಯೂನಿಟ್ ಮಾರಾಟವು 145% ಬೆಳವಣಿಗೆಯನ್ನು ಕಂಡುಕೊಂಡಿದೆ. ಹುವಾವೆ ಮತ್ತು ಶ್ಯೋಮಿಯಂತೆಯೇ, ಚೀನಾದಲ್ಲಿ ಒಪ್ಪೊ ಉತ್ತಮ ಪ್ರಗತಿಯನ್ನು ಕಂಡುಕೊಂಡಿದೆ. ಲೆನೊವೊ, ಸ್ಯಾಮ್‌ಸಂಗ್ ಮತ್ತು ಯುಲೊಂಗ್ ಜೊತೆಗೆ ಕಠಿಣ ಸ್ಪರ್ಧೆಯನ್ನು ಕಂಡುಕೊಂಡಿದೆ.

ಶ್ಯೋಮಿ

ಶ್ಯೋಮಿ

#5

ಐದನೇ ಸ್ಥಾನದಲ್ಲಿರುವ ಶ್ಯೋಮಿ ಹುವಾವೆ ಮತ್ತು ಒಪ್ಪೊದಂತೆಯೇ ಚೀನಾದಲ್ಲೇ ಪ್ರಗತಿಯನ್ನು ಕಂಡುಕೊಂಡಿದೆ. ಏಷ್ಯಾ - ಪೆಸಿಫಿಕ್ ವಲಯಗಳಲ್ಲೂ ಶ್ಯೋಮಿಗೆ ಒಳ್ಳೆಯ ಬೇಡಿಕೆ ಇದೆ. ತ್ರೈಮಾಸಿಕದಲ್ಲಿ ಸ್ಮಾರ್ಟ್‌ಫೋನ್ ಯೂನಿಟ್ ಮಾರಾಟ 15,048,000 ಆಗಿದೆ. ಜಾಗತಿಕ ಮಾರುಕಟ್ಟೆ ಹಂಚಿಕೆ 4.3% ವಾಗಿದೆ.

ಭೇಟಿ ನೀಡಿ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಲೇಖನಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here are the 5 biggest smartphone brands of the world, as per a research by Gartner. Note: The ranking is based on the global sales of smartphones in the first quarter of 2016.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot