Subscribe to Gizbot

ಫೋನ್ ಸ್ಕ್ರೀನ್ ಹ್ಯಾಂಗ್‌ ಆಗುತ್ತಿದೆಯೇ ಇದಕ್ಕೆ ಪರಿಹಾರಗಳೇನು?

Written By:

ದಿನದಿಂದ ದಿನಕ್ಕೆ ಹೆಚ್ಚು ಸ್ಮಾರ್ಟ್ ಆಗುತ್ತಿರುವ ಸ್ಮಾರ್ಟ್‌ಫೋನ್‌ಗಳು ನಮ್ಮ ದೈನಂದಿನ ಜೀವನದಲ್ಲಿ ಅತಿಮುಖ್ಯ ಎಂದೆನಿಸಿಬಿಟ್ಟಿವೆ. ಕರೆಗಳ ಸ್ವೀಕಾರ, ಇಮೇಲ್ ಪರಿಶೀಲನೆ, ಸಾಮಾಜಿಕ ತಾಣಗಳ ಬಳಕೆಗೆ ಹೀಗೆ ಹತ್ತು ಹಲವು ಕಾರ್ಯಗಳನ್ನು ನಮ್ಮ ಫೋನ್ ಮಾಡುತ್ತದೆ. ಅದಾಗ್ಯೂ ನಿರಂತರವಾಗಿ ದುಡಿಯುವ ಸ್ಮಾರ್ಟ್‌ಫೋನ್ ಕೂಡ ಕಾಯಿಲೆಗಳಿಂದ ಬಳಲುತ್ತದೆ. ಅದರಲ್ಲಿ ಸ್ಮಾರ್ಟ್‌ಫೋನ್ ಸ್ಕ್ರೀನ್ ಹ್ಯಾಂಗಿಂಗ್ ಸಮಸ್ಯೆ ಕೂಡ ಒಂದು.

ಓದಿರಿ: ಉಚಿತ ವೈಫೈ ಬಳಸುವಾಗ, ಅಗತ್ಯ ಈ ಮುನ್ನೆಚ್ಚರ

ಇಂತಹ ಫೋನ್ ಸ್ಕ್ರೀನ್ ಹ್ಯಾಂಗಿಂಗ್‌ಗೆ ಪರಿಹಾರವನ್ನು ಕಂಡುಕೊಳ್ಳುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳಲಿದ್ದೇವೆ. ಸರಳ ಹಂತಗಳನ್ನು ಪಾಲಿಸುವುದರ ಮೂಲಕ ಸ್ಕ್ರೀನ್ ಹ್ಯಾಂಗಿಂಗ್ ಸಮಸ್ಯೆಗೆ ಅಂತ್ಯವನ್ನು ಹಾಡಬಹುದಾಗಿದೆ.

ಓದಿರಿ: ಜಿಯೋಗಿಂತಲೂ ಏರ್‌ಟೆಲ್ ಆಫರ್ ಭರ್ಜರಿಯಂತೆ ಏಕೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಮ್ಮ ಫೋನ್ ಅನ್ನು ಚಾರ್ಜರ್‌ಗೆ ಕನೆಕ್ಟ್ ಮಾಡಿ

ನಿಮ್ಮ ಫೋನ್ ಅನ್ನು ಚಾರ್ಜರ್‌ಗೆ ಕನೆಕ್ಟ್ ಮಾಡಿ

ಇಂತಹ ಸಮಸ್ಯೆ ಎದುರಾದಾಗಲೆಲ್ಲಾ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಚಾರ್ಜರ್‌ಗೆ ಕನೆಕ್ಟ್ ಮಾಡಿ. ನಿಮ್ಮ ಫೋನ್‌ನಲ್ಲಿ ಬ್ಯಾಟರಿ ಕಡಿಮೆಯಾಗಿ ಈ ಸಮಸ್ಯೆ ಉಂಟಾಗುತ್ತಿದ್ದಲ್ಲಿ ಅದು ನಿವಾರಣೆಯಾಗುತ್ತದೆ.

ಫೋನ್ ಸ್ವಿಚ್ ಆಫ್ ಮಾಡಿ

ಫೋನ್ ಸ್ವಿಚ್ ಆಫ್ ಮಾಡಿ

ನಿಮ್ಮ ಫೋನ್ ಅನ್ನು ಚಾರ್ಜ್ ಮಾಡಲು ನೀವು ಬಿಟ್ಟ ಸ್ವಲ್ಪ ಹೊತ್ತಿನಲ್ಲೇ ಅದನ್ನು ಸ್ವಿಚ್ ಆಫ್ ಮಾಡಲು ಪ್ರಯತ್ನಿಸಿ. ಪವರ್ ಆಫ್ ಬಟನ್ ತೋರುವವರೆಗೂ ಪವರ್ ಬಟನ್ ಅನ್ನು ದೀರ್ಘವಾಗಿ ಒತ್ತಿಹಿಡಿದು ಇದನ್ನು ನಿರ್ವಹಿಸಬಹುದಾಗಿದೆ. ಹೀಗೆ ಆಗುತ್ತಿಲ್ಲ ಎಂದಾದಲ್ಲಿ ಮುಂದಿನ ಹಂತಕ್ಕೆ ಹೋಗಿ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫೋರ್ಸ್ ರಿಸ್ಟಾರ್ಟ್ ಮಾಡಿ

ಫೋರ್ಸ್ ರಿಸ್ಟಾರ್ಟ್ ಮಾಡಿ

ಮೇಲಿನ ಹಂತಗಳು ವಿಫಲವಾಯಿತು ಎಂದಾದಲ್ಲಿ, ಪವರ್ ಮತ್ತು ವಾಲ್ಯೂಮ್ ಅಪ್ ಬಟನ್‌ಗಳನ್ನು 10 ಸೆಕೆಂಡ್‌ಗಳ ಕಾಲ ದೀರ್ಘವಾಗಿ ಒತ್ತಿಹಿಡಿದು ಫೋರ್ಸ್ ರಿಸ್ಟಾರ್ಟ್ ಮಾಡಿ.

(ಸಾಧ್ಯವಾದಲ್ಲಿ) ಬ್ಯಾಟರಿ ರಿಮೂವ್ ಮಾಡಿ

(ಸಾಧ್ಯವಾದಲ್ಲಿ) ಬ್ಯಾಟರಿ ರಿಮೂವ್ ಮಾಡಿ

ನಿಮ್ಮ ಫೋನ್ ಅನ್ನು ಫೋರ್ಸ್ ರಿಸ್ಟಾರ್ಟ್ ಮಾಡಲು ಆಗುತ್ತಿಲ್ಲ ಎಂದಾದಲ್ಲಿ ಫೋನ್‌ನಿಂದ ಬ್ಯಾಟರಿ ಹೊರತೆಗೆಯಿರಿ ಮತ್ತು ಹಿಂದಕ್ಕೆ ತಿರುಗಿಸಿ.

ತೊಂದರೆಯನ್ನುಂಟು ಮಾಡುತ್ತಿರುವ ಅಪ್ಲಿಕೇಶನ್ ನಿವಾರಿಸಿ

ತೊಂದರೆಯನ್ನುಂಟು ಮಾಡುತ್ತಿರುವ ಅಪ್ಲಿಕೇಶನ್ ನಿವಾರಿಸಿ

ನಿರ್ದಿಷ್ಟ ಅಪ್ಲಿಕೇಶನ್ ಬಳಸುತ್ತಿರುವಾಗ ಫೋನ್ ಫ್ರೀಜ್ ಆಗುತ್ತಿದೆಯೇ ಎಂಬುದನ್ನು ಕಂಡುಕೊಳ್ಳಿ. ಹೀಗೆ ಆಗುತ್ತಿದೆ ಎಂದಾದಲ್ಲಿ ಅಪ್ಲಿಕೇಶನ್ ಅನ್‌ಇನ್‌ಸ್ಟಾಲ್ ಮಾಡಿ ಮತ್ತು ಸಮಸ್ಯೆಗೆ ಕಾರಣವಾಗಿರುವ ಅಪ್ಲಿಕೇಶನ್ ತೆಗೆದುಹಾಕಿದರೆ ಈ ಸಮಸ್ಯೆ ಬರುವುದಿಲ್ಲ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
In this article we are giving you some tips on 5 possible fixes smartphone screen freezing issue.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot