ಉಚಿತ ವೈಫೈ ಬಳಸುವಾಗ, ಅಗತ್ಯ ಈ ಮುನ್ನೆಚ್ಚರ

ಉಚಿತ ವೈಫೈಯನ್ನು ಬಳಸುವ ಮುನ್ನ ನೀವು ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವುದು ಒಳಿತು. ಅದು ಏನು ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.

By Shwetha
|

ಇಂದಿನ ದಿನಗಳಲ್ಲಿ ಉಚಿತ ಎಂಬ ಪದಕ್ಕೆ ಹೆಚ್ಚಿನ ಜನರು ಮಹತ್ವವನ್ನು ನೀಡುತ್ತಾರೆ. ಅದು ಯಾವುದೇ ಸಾಮಾಗ್ರಿ ಆಗಿರಲಿ ಉಚಿತವಾಗಿ ದೊರೆಯುತ್ತಿದೆ ಎಂದಾದಲ್ಲಿ ಅದನ್ನು ಪಡೆದುಕೊಳ್ಳಲು ಜನರು ಹಾತೊರೆಯುವುದು ಹೆಚ್ಚು. ಇಂದು ಇಂಟರ್ನೆಟ್ ಅನ್ನು ಬಳಕೆದಾರರು ಹೆಚ್ಚು ಪ್ರಮಾಣದಲ್ಲಿ ಬಳಸುತ್ತಿದ್ದು ಅದೂ ಕೂಡ ಉಚಿತವಾಗಿ ದೊರೆಯುತ್ತಿದೆ ಎಂದಾದಲ್ಲಿ ಅದಕ್ಕೆ ಮುಗಿಬೀಳುವವರ ಸಂಖ್ಯೆಯೂ ಅಷ್ಟೇ ಆಗಿರುತ್ತದೆ.

ಓದಿರಿ: ರಿಲಾಯನ್ಸ್ ಜಿಯೋಗೆ ಕಾದಿದೆ ದೊಡ್ಡ ಗಂಡಾಂತರ

ಆದರೆ ಈ ಉಚಿತ ವೈಫೈ ಅಥವಾ ಸಾರ್ವಜನಿಕ ವೈಫೈ ಮಾಡುವ ತೊಂದರೆಗಳು ಅಷ್ಟಿಷ್ಟಲ್ಲ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸಲಿರುವೆವು. ಉಚಿತ ವೈಫೈಯನ್ನು ಬಳಸುವ ಮುನ್ನ ನೀವು ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವುದು ಒಳಿತು. ಅದು ಏನು ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.

ಓದಿರಿ: ಜಿಯೋಗಿಂತಲೂ ಏರ್‌ಟೆಲ್ ಆಫರ್ ಭರ್ಜರಿಯಂತೆ ಏಕೆ?

HTTPS ಎನ್‌ಕ್ರಿಪ್ಟ್ ಆಗಿರುವ ಸೈಟ್‌ಗಳಿಗೆ ಆದ್ಯತೆ ನೀಡಿ

HTTPS ಎನ್‌ಕ್ರಿಪ್ಟ್ ಆಗಿರುವ ಸೈಟ್‌ಗಳಿಗೆ ಆದ್ಯತೆ ನೀಡಿ

ಮೊದಲ ಸಲಹೆ ಎಂಬಂತೆ, ನೀವು ಸಾರ್ವಜನಿಕ ವೈಫೈನಲ್ಲಿ ಸರ್ಫ್ ಮಾಡುತ್ತಿದ್ದೀರಿ ಎಂದಾದಲ್ಲಿ, HTTPS ಎನ್‌ಕ್ರಿಪ್ಟೆಡ್ ಸೈಟ್‌ಗಳಿಗೆ ಆದ್ಯತೆ ನೀಡಿ. ಇದರಿಂದ ನೀವು ಮೋಸದ ಜಾಲಕ್ಕೆ ಬೀಳುವುದನ್ನು ತಪ್ಪಿಸಬಹುದಾಗಿದೆ.

ವೈಫೈ ಹಾಟ್‌ಸ್ಪಾಟ್‌ಗಳಿಗೆ ಸಂಪರ್ಕ ಪಡೆದುಕೊಳ್ಳುವಾಗ ಎಚ್ಚರ

ವೈಫೈ ಹಾಟ್‌ಸ್ಪಾಟ್‌ಗಳಿಗೆ ಸಂಪರ್ಕ ಪಡೆದುಕೊಳ್ಳುವಾಗ ಎಚ್ಚರ

ಅಜ್ಞಾತ ವೈಫೈ ಹಾಟ್‌ಸ್ಪಾಟ್‌ಗಳಿಗೆ ಸಂಪರ್ಕವನ್ನು ಪಡೆದುಕೊಳ್ಳುವಾಗ ಆದಷ್ಟು ನೀವು ಹೆಚ್ಚು ಜಾಗರೂಕರಾಗಿರಬೇಕು.

ವಿಪಿಎನ್ ಆಯ್ಕೆಮಾಡಿ

ವಿಪಿಎನ್ ಆಯ್ಕೆಮಾಡಿ

ವಿಪಿಎನ್ ಅಥವಾ ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ ಸುಭದ್ರ ಭದ್ರತೆಯನ್ನು ನಿಮಗೆ ಒದಗಿಸುತ್ತದೆ ಇದರಿಂದ ಸಾರ್ವಜನಿಕ ವೈಫೈ ಕನೆಕ್ಶನ್ ಅನ್ನು ಹ್ಯಾಕರ್‌ಗಳಿಂದ ಸಂರಕ್ಷಿಸಿಕೊಳ್ಳಬಹುದಾಗಿದೆ.

ಬಳಕೆಯಲ್ಲಿಲ್ಲದಾಗ ವೈಫೈ ಆಫ್ ಮಾಡಿ

ಬಳಕೆಯಲ್ಲಿಲ್ಲದಾಗ ವೈಫೈ ಆಫ್ ಮಾಡಿ

ನಿಮ್ಮ ಫೋನ್‌ನಲ್ಲಿ ವೈಫೈ ಆಕ್ಟಿವೇಟ್ ಆಗಿರುವುದು ಒಮ್ಮೊಮ್ಮೆ ತೊಂದರೆಗೆ ನಿಮ್ಮನ್ನು ಒಳಪಡಿಸಬಹುದು. ನಿಮ್ಮ ಫೋನ್ ಅನ್ನು ಹ್ಯಾಕರ್ ಸುಲಭವಾಗಿ ಪ್ರವೇಶಿಸಬಹುದಾಗಿದೆ.

ನಿಮ್ಮೆಲ್ಲಾ ಖಾತೆಗಳಿಗೆ ಬೇರೆ ಬೇರೆ ಪಾಸ್‌ವರ್ಡ್ ಇರಿಸಿಕೊಳ್ಳಿ

ನಿಮ್ಮೆಲ್ಲಾ ಖಾತೆಗಳಿಗೆ ಬೇರೆ ಬೇರೆ ಪಾಸ್‌ವರ್ಡ್ ಇರಿಸಿಕೊಳ್ಳಿ

ಪ್ರತೀ ಖಾತೆಗೂ ಒಂದೇ ಪಾಸ್‌ವರ್ಡ್ ಅನ್ನು ಇರಿಸಿಕೊಳ್ಳುವುದು ಹೆಚ್ಚು ಅಪಾಯಕಾರಿಯಾಗಿರುತ್ತದೆ. ಆದ್ದರಿಂದ ಹೆಚ್ಚು ಕ್ಲಿಷ್ಟ ಮತ್ತು ಬಲವಾಗಿರುವ ಬೇರೆ ಬೇರೆ ಪಾಸ್‌ವರ್ಡ್‌ಗಳನ್ನು ನಿಮ್ಮ ಖಾತೆಗೆ ಇರಿಸಿಕೊಳ್ಳಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
In this article we are giving 5 tips to be safe from hackers while using public wifi..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X