ಸದ್ಯದಲ್ಲಿ 'ಪ್ರೀಮಿಯಮ್ ಸ್ಮಾರ್ಟ್‌ಫೋನ್‌' ಖರೀದಿಸಬೇಡಿ!! ಯಾಕೆ ಗೊತ್ತಾ?

|

ಪ್ರೀಮಿಯಮ್ ಸ್ಮಾರ್ಟ್‌ಫೋನ್‌ ಖರೀದಿಸುವ ಆಲೋಚನೆಯಲ್ಲಿದ್ದಿರಾ? ಹಾಗಿದ್ದರೇ ಸ್ವಲ್ಪ ಕಾಯಿರಿ! ಏಕೆಂದರೇ, ಈಗಾಗಲೇ ಪ್ರಮುಖ ಸ್ಮಾರ್ಟ್‌ಫೋನ್‌ ಕಂಪನಿಗಳು ತಮ್ಮ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವುದಾಗಿ ಘೋಷಿಸಿದ್ದು, ಆ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ಅತೀ ವಿನೂತನ ಫೀಚರ್ಸ್‌ಗಳನ್ನು ಒಳಗೊಂಡಿರಲಿವೆ ಎಂಬ ಸೂಚನೆಗಳನ್ನು ಕಂಪನಿಗಳು ನೀಡಿವೆ.

ಸದ್ಯದಲ್ಲಿ 'ಪ್ರೀಮಿಯಮ್ ಸ್ಮಾರ್ಟ್‌ಫೋನ್‌' ಖರೀದಿಸಬೇಡಿ!! ಯಾಕೆ ಗೊತ್ತಾ?

ಹೌದು, 2019 ರ ಈ ವರ್ಷದಲ್ಲಿ ಹೈ ಎಂಡ್‌ ಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ, ಅತ್ಯುತ್ತಮ ಪ್ರೊಸೆಸರ್, 5G ನೆಟವರ್ಕ್ ಸೌಲಭ್ಯ, ಕೃತಕ ಬುದ್ಧಿಮತ್ತೆ ಸಾಮರ್ಥ್ಯ ಮತ್ತು ಪೋಲ್ಡೆಬಲ್ ಸ್ಮಾರ್ಟ್‌ಫೋನ್‌ ಸೇರಿದಂತೆ ಸಂಪೂರ್ಣ ಹೊಸತನದ ಫೀಚರ್ಸ್‌ಗಳನ್ನು ಪ್ರಮುಖ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಲಿದ್ದಿರಿ. ಹೀಗಾಗಿ ನೀವು ಖರೀದಿಸುವ ಹೊಸ ಸ್ಮಾರ್ಟ್‌ಫೋನ್ ನೂತನ ಫೀಚರ್ಸ್‌ಗಳನ್ನು ಒಳಗೊಂಡಿರಲಿ.

ಸದ್ಯದಲ್ಲಿ 'ಪ್ರೀಮಿಯಮ್ ಸ್ಮಾರ್ಟ್‌ಫೋನ್‌' ಖರೀದಿಸಬೇಡಿ!! ಯಾಕೆ ಗೊತ್ತಾ?

ಚೀನಾ ಮೂಲಕದ ಶಿಯೋಮಿ, ವೀವೊ, ಒಪ್ಪೊ ಸ್ಮಾರ್ಟ್‌ಫೋನ್‌ ಕಂಪನಿಗಳು 48 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಪರಿಚಯಿಸುವುದಾಗಿ ತಿಳಿಸಿವೆ. ಈ ವರ್ಷ ಮಾರುಕಟ್ಟೆಗೆ ಪೊಲ್ಡೆಬಲ್ ಸ್ಮಾರ್ಟ್‌ಫೋನ್‌ಗಳು ಸಹ ಲಾಂಚ್‌ ಆಗಲಿವೆ. ಹಾಗಾದರೇ ಶೀಘ್ರದಲ್ಲಿಯೇ ಮಾರುಕಟ್ಟೆಗೆ ಎಂಟ್ರಿ ಕೊಡಲಿರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳು ಒಳಗೊಂಡಿರುವ ಪ್ರಮುಖ ಐದು ಹೊಸತನದ ಅಂಶಗಳು ಏನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್

ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್

ಪ್ರಸ್ತುತ ಇರುವ ಸ್ನ್ಯಾಪ್‌ಡ್ರಾಗನ್ 845 ಸಾಮರ್ಥ್ಯದ ಪ್ರೊಸೆಸರೇ ಇಲ್ಲಿಯವರೆಗಿನ ಉನ್ನತ ಪ್ರೊಸೆಸರ್ ಆಗಿದ್ದು, ಇದೀಗ ಬರಲಿರುವ ಗ್ಯಾಲ್ಯಾಕ್ಸಿ S9 ನಿಂದ ಒನ್‌ಪ್ಲಸ್‌ 6T ವರೆಗಿನ ಎಲ್ಲ ಪ್ರಮುಖ ಸ್ಮಾರ್ಟ್‌ಫೋನ್‌ಗಳಲ್ಲಿ ಹೊಸ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಇರಲಿದೆ. ಹೊಸ ಪ್ರೊಸೆಸರ್ ಅತ್ಯುತ್ತಮ ವೇಗದಲ್ಲಿ ಕಾರ್ಯನಿರ್ವಹಿಸಲಿದ್ದು, ಕೃತಕ್ ಬುದ್ಧಿಮತ್ತೆ ಸಾಮರ್ಥ್ಯವನ್ನು ಸಹ ಹೊಂದಿರಲಿವೆ. ಯಾವುದೇ ಅಡೆ ತಡೆ ಇಲ್ಲದೇ ಗೇಮಿಂಗ್ ಆಡುವ ಅನುಭೂತಿ ಪಡೆಯಬಹುದು.

 48 ಮೆಗಾಪಿಕ್ಸಲ್ ಕ್ಯಾಮೆರಾ

48 ಮೆಗಾಪಿಕ್ಸಲ್ ಕ್ಯಾಮೆರಾ

ಈ ವರ್ಷ ಅತ್ಯುನ್ನತ ಕ್ಯಾಮೆರಾ ಸಾಮರ್ಥ್ಯವಿರುವ ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳು ಬರಲಿದ್ದು, ಈಗಾಗಲೇ ಹಾನರ್ ವ್ಯೂ20, ರೆಡ್ಮಿ ನೋಟ್ 7, ವೀವೊ ವಿ15, ಸೇರಿದಂತೆ ಪ್ರಮುಖ ಕಂಪನಿಗಳು 48 ಮೆಗಾಪಿಕ್ಸಲ್ ಸಾಮರ್ಥ್ಯ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವುದಾಗಿ ತಿಳಿಸಿವೆ. ಬರಲಿರುವ ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳಲ್ಲಿ ಹೈ ಎಂಡ್‌ ಕ್ಯಾಮೆರಾ ಜೊತೆಗೆ ಸೋನಿಯ IMX586 ಸೆನ್ಸಾರ ಇರಲಿರುವುದು ವಿಶೇಷ. ಇದರೊಂದಿಗೆ ಸ್ಯಾಮ್‌ಸಂಗ್ ಪೆಂಟಾ ಕ್ಯಾಮೆರಾ ಸಹ ಪರಿಚಯಿಸುವುದು ಎನ್ನಲಾಗುತ್ತಿದೆ.

5G ನೆಟವರ್ಕ್

5G ನೆಟವರ್ಕ್

ಭಾರತದಲ್ಲಿ ಪ್ರಸ್ತುತ 4G ನೆಟವರ್ಕ್ ಬಳಸುತ್ತಿರುವ ಗ್ರಾಹಕರು, ಸ್ಮಾರ್ಟ್‌ಫೋನ್‌ಗಳಲ್ಲಿ 5G ನೆಟವರ್ಕ್ ಬರಲಿದೆ ಎಂಬ ಭರವಸೆಯ ನಿರೀಕ್ಷೆಯನ್ನು ಹೊಂದಿದ್ದಾರೆ. ಈ ವರ್ಷ ಬಿಡುಗಡೆಗೊಳ್ಳುಲಿರುವ ಪ್ರಮುಖ ಕಂಪನಿಯ ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳಲ್ಲಿ 5G ನೆಟವರ್ಕ್ ಇರಲಿವೆ. ಶಿಯೋಮಿ, ಸ್ಯಾಮ್‌ಸಂಗ್, ಒನ್‌ಪ್ಲಸ್‌ ಸೇರಿದಂತೆ ಪ್ರಮುಖ ಸ್ಮಾರ್ಟ್‌ಫೋನ್‌ ಕಂಪನಿಗಳು ಈಗಾಗಲೇ ಪ್ರಮುಖ 5G ನೆಟವರ್ಕ್ ಸೌಲಭ್ಯವನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವುದಾಗಿ ತಿಳಿಸಿವೆ.

 ಪೊಲ್ಡೆಬಲ್ ಸ್ಮಾರ್ಟ್‌ಫೋನ್‌

ಪೊಲ್ಡೆಬಲ್ ಸ್ಮಾರ್ಟ್‌ಫೋನ್‌

ಮೊಬೈಲ್ ತಂತ್ರಜ್ಞಾನದಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿಲೇ ಇದ್ದು, ಈ ವರ್ಷ ಪೊಲ್ಡೆಬಲ್ ಮಾದರಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ. ಈಗಾಗಲೇ ಸ್ಯಾಮ್‌ಸಂಗ್, ಶಿಯೋಮಿ, ಮೊಟೊರೊಲಾ, ಮತ್ತು ಎಲ್‌ಜಿ ಕಂಪನಿಗಳು ಈ ವರ್ಷವೇ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುವುದಾಗಿ ತಿಳಿಸಿವೆ. ಹೀಗಾಗಿ ಗ್ರಾಹಕ ವಲಯದಲ್ಲಿ ನಿರೀಕ್ಷೆಗಳು ಸಹ ಹೆಚ್ಚಾಗುತ್ತಿದ್ದು, ಹೊಸ ಬದಲಾವಣೆಗೆ ನಾಂದಿ ಆಗಲಿದೆ.

ಕೃತಕ ಬುದ್ಧಿಮತ್ತೆ (AI)

ಕೃತಕ ಬುದ್ಧಿಮತ್ತೆ (AI)

ಮುಂಬರಲಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಕೃತಕ ಬುದ್ಧಿಮತ್ತೆ ಸಾಮರ್ಥ್ಯ ಇರಲಿದ್ದು, ಸ್ಮಾರ್ಟ್‌ಫೋನ್‌ಗಳ ಕಾರ್ಯದಲ್ಲಿ ಇದು ಮುಂದುವರಿದ ತಂತ್ರಜ್ಞಾನವಾಗಿದ್ದು, ಇದರ ಸಹಾಯದಿಂದ ಸ್ಮಾರ್ಟ್‌ಫೋನ್‌ ಸ್ವಯಂಪ್ರೇರಿತವಾಗಿ ಗ್ರಹಿಸುವ ಶಕ್ತಿಯನ್ನು ಹೊಂದುತ್ತದೆ. ಉದಾಹರಣೆಗೆ: ಫೋಟೋ ಸೆರೆಹಿಡಿಯುವಾಗ ಕೃತಕ ಬುದ್ಧಿಮತ್ತೆ ಸಹಾಯದಿಂದ ಸ್ಮಾರ್ಟ್‌ಫೋನ್ ತನ್ನಿಂದ ತಾನೇ ಸಿನ್ಸ್ ಗಳನ್ನು ಗುರುತಿಸಿಕೊಳ್ಳುತ್ತದೆ. ಮತ್ತು ಫೋಟೋ ಅತ್ಯುತ್ತಮವಾಗಿ ಮೂಡಿಬರಲು ಸಹಕರಿಸುತ್ತದೆ.

Best Mobiles in India

English summary
Planning to buy a new premium phone? Here’s why you should reconsider. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X