ಜಿಯೋಗಿಂತಲೂ ಅಗ್ಗ, ಬಿಎಸ್‌ಎನ್‌ಎಲ್‌ನಿಂದ ಅನಿಯಮಿತ ವಾಯ್ಸ್ ಕರೆಗಳು

Written By:

  ಟೆಲಿಕಾಮ್ ವಲಯದಲ್ಲಿ ತನ್ನ ಅಂತಿಮ ದಾಳವನ್ನು ಉದುರಿಸಿರುವ ಬಿಎಸ್‌ಎನ್‌ಎಲ್ ಜನವರಿಯಿಂದ ಟಾರಿಫ್ ಯೋಜನೆಗಳನ್ನು ಆಫರ್ ಮಾಡುತ್ತಿದೆ. ಜಿಯೋ ತನ್ನ ತನ್ನ ಬಳಕೆದಾರರಿಗೆ ವಾಯ್ಸ್ ಕರೆಗಳನ್ನು ಒದಗಿಸುತ್ತಿದ್ದು ನಿಜಕ್ಕೂ ಬಳಕೆದಾರರು ಇದನ್ನು ಆನಂದಿಸುತ್ತಿದ್ದಾರೆ. ಈ ಸಲುವಾಗಿ ಬಿಎಸ್‌ಎನ್‌ಎಲ್ ತನ್ನ ಯೋಜನೆಗಳನ್ನು ಪ್ರಸ್ತುತ ಪಡಿಸಿದೆ.

  ಓದಿರಿ: ಬಿಎಸ್‌ಎನ್‌ಎಲ್ ರೂ 20 ರ ಸಿಮ್ ಕಾರ್ಡ್ ವಿಶೇಷತೆ ಗೊತ್ತೇ?

  ಈ ತಿಂಗಳ ಆರಂಭದಲ್ಲಿ, ಅನುಪಮಾ ಶ್ರೀವಾಸ್ತವ ಬಿಎಸ್‌ಎನ್‌ಎಲ್ ಮ್ಯಾನೇಜಿಂಗ್ ಡೈರೆಕ್ಟರ್ ಹೇಳಿರುವಂತೆ ವಾಯ್ಸ್ ಫ್ರಿ ಟಾರಿಫ್ ಯೋಜನೆಗಳನ್ನು ಆರಂಭಿಸುವ ಇರಾದೆಯಲ್ಲಿದೆ. ಹಾಗಿದ್ದರೆ ಜಿಯೋಗಿಂತಲೂ ಬಿಎಸ್‌ಎನ್‌ಎಲ್ ಯಾವ ಬಗೆಯಲ್ಲಿ ತನ್ನ ಬಳಕೆದಾರರಿಗೆ ಆಫರ್‌ಗಳನ್ನು ಒದಗಿಸುತ್ತಿದೆ ಎಂಬದನ್ನು ಇಂದಿಲ್ಲಿ ಅರಿತುಕೊಳ್ಳೋಣ.

  ಓದಿರಿ: ಜಿಯೋ ಸಿಮ್ ಬೆಂಗಳೂರಿನಲ್ಲಿ ಆಕ್ಟಿವೇಶನ್‌ಗೊಳ್ಳಲು ತಗುಲುವ ಸಮಯವೆಷ್ಟು?

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಉಚಿತ ವಾಯ್ಸ್ ಕರೆಗಳು

  ಬಿಎಸ್‌ಎನ್‌ಎಲ್ ಪ್ರಸ್ತುತಪಡಿಸುತ್ತಿರುವ ಉತ್ತಮ ಯೋಜನೆ ಇದಾಗಿದೆ. ಜಿಯೋ ಮತ್ತು ಬಿಎಸ್‌ಎನ್‌ಎಲ್ ಕೊಂಚ ಭಿನ್ನವಾಗಿದ್ದು ಬಿಎಸ್‌ಎನ್‌ಎಲ್ ಭಾರತದ ಕೆಲವೊಂದು ನಗರಗಳಲ್ಲಿ 4ಜಿ ಯೋಜನೆಯನ್ನು ಸ್ಥಾಪಿಸಬೇಕಾಗಿದೆ. ಜಿಯೋ ವಾಯ್ಸ್ ಕರೆಗಳಿಗೆ ವೋಲ್ಟ್ ಅನ್ನು ಬಳಸುತ್ತಿದೆ, ಆದರೆ ಇದುವರೆಗೆ ಬಿಎಸ್‌ಎನ್‌ಎಲ್‌ನಿಂದ ಯಾವುದೇ ಮಾಹಿತಿ ಬಂದಿಲ್ಲ.

  ವೋಲ್ಟ್‌ನೊಂದಿಗೆ ಯಾವುದೇ ಸಂಘರ್ಷಣೆ ಇಲ್ಲ

  ಈ ಹಿಂದೆ ತಿಳಿಸಿದಂತೆ, ವೋಲ್ಟ್‌ನೊಂದಿಗೆ ಜಿಯೋ ವಾಯ್ಸ್ ಕರೆಗಳನ್ನು ಆಫರ್ ಮಾಡುತ್ತಿದೆ. ಆದರೆ ಬಿಎಸ್‌ಎನ್‌ಎಲ್‌ಗೆ ಹೀಗೆ ಮಾಡಲು ಸಾಧ್ಯವೇ ಎಂಬುದಾಗಿ ಹೇಳಲಾಗುವುದಿಲ್ಲ. ಇದಕ್ಕೆ ಬದಲಾಗಿ ಕಂಪೆನಿ ನಿಯಮಿತ ವಾಯ್ಸ್ ಕರೆಗಳನ್ನು ಒದಗಿಸಲಿದೆ.

  2ಜಿ ಮತ್ತು 3ಜಿ ಬಳಕೆದಾರರಿಗೆ ಉಚಿತ ಕರೆಗಳು

  ಇದು ಉತ್ತಮ ವಿಷಯವಾಗಿದೆ. ಡೇಟಾ ಪ್ಲಾನ್‌ಗಳೊಂದಿಗೆ ಬಿಎಸ್‌ಎನ್‌ಎಲ್ ಉಚಿತ ವಾಯ್ಸ್ ಕರೆಯನ್ನು ಒದಗಿಸುತ್ತಿದೆ ಎಂದಾದಲ್ಲಿ ಇದು 2ಜಿ ಮತ್ತು 3ಜಿ ಬಳಕೆದಾರರಿಗೂ ಲಭ್ಯವಾಗಲಿದೆ. ತಮ್ಮ ಸೌಲಭ್ಯಗಳನ್ನು ವೋಲ್ಟ್‌ಗೆ ಬೆಂಬಲಿಸುವಂತೆ ಕಂಪೆನಿ ಅಪ್‌ಗ್ರೇಡ್ ಮಾಡಿಲ್ಲ.

  ಬ್ರಾಡ್‌ಬ್ಯಾಂಡ್ ಬಳಕೆದಾರರಿಗೂ ಇದೇ ಅವಕಾಶ

  ಬಿಎಸ್‌ಎನ್‌ಎಲ್ ಡೈರೆಕ್ಟರ್ ಶ್ರೀವಾಸ್ತವ ಹೇಳಿರುವಂತೆ ಹೆಚ್ಚಿನ ಬಳಕೆದಾರರು ತಮ್ಮ ಮನೆಯಲ್ಲೇ ಸಮಯ ಕಳೆಯುತ್ತಿದ್ದಾರೆ ಆದ್ದರಿಂದ ಈ ಆಫರ್ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೂ ಸಹಾಯಕವಾಗಲಿದೆ.

  ರೂ 2-4 ರಿಂದ ಆರಂಭ

  ಜಿಯೋಗಿಂತಲೂ ಹೆಚ್ಚು ಸ್ಪರ್ಧಾತ್ಮಕವಾಗಿರಲು ಬಿಎಸ್‌ಎನ್‌ಎಲ್ ಬಯಸಿದ್ದು ತನ್ನ ಜೀರೊ ವಾಯ್ಸ್ ಟಾರಿಫ್ ಯೋಜನೆಗಳನ್ನು ರೂ 2-4 ರವರೆಗೆ ಆರಂಭಿಸುವ ಇರಾದೆಯಲ್ಲಿದೆ. ಜನವರಿ ಆರಂಭದಲ್ಲೇ ಬಿಎಸ್‌ಎನ್‌ಎಲ್ ತಮ್ಮ ಸೇವೆಗಳನ್ನು ಆರಂಭಿಸಲಿದೆ. ಈ ಸಮಯದಲ್ಲಿ ಜಿಯೋದ ವೆಲ್‌ಕಮ್ ಆಫರ್ ಮುಕ್ತಾಯಗೊಳ್ಳುತ್ತದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  English summary
  Jio is already offering the plans are a very cheap rate, but their tariff plans haven't gone live yet due to the attractive welcome offer. Let's check out the five things on what BSNL offers when the service goes live.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more