ಗೂಗಲ್ ಅಸಿಸ್ಟೆಂಟ್ ನ ಐದು ಆಕರ್ಷಕ ತಂತ್ರಗಳು.

|

ಆ್ಯಂಡ್ರಾಯ್ಡ್ 7.1 ನೌಗಾಟ್ ಹೊಂದಿರುವ ಮೊಟ್ಟ ಮೊದಲ ಫೋನುಗಳೆಂದರೆ ಗೂಗಲ್ ಪಿಕ್ಸೆಲ್ ಮತ್ತು ಪಿಕ್ಸೆಲ್ ಎಕ್ಸ್.ಎಲ್. ಇದರಲ್ಲಿ ಗೂಗಲ್ಲಿನ ಹೊಸ ಗೂಗಲ್ ಅಸಿಸ್ಟೆಂಟ್ ಕೂಡ ಇದೆ, ಇದು ಖಾಸಗಿ ಸಹಾಯಕರ ರೀತಿ ಕಾರ್ಯನಿರ್ವಹಿಸುತ್ತದೆ.

ಗೂಗಲ್ ಅಸಿಸ್ಟೆಂಟ್ ನ ಐದು ಆಕರ್ಷಕ ತಂತ್ರಗಳು.

ನೀವು ಗೂಗಲ್ಲಿನ ಅಲ್ಲೊ ಚಾಟ್ ತಂತ್ರಾಂಶವನ್ನು ಉಪಯೋಗಿಸಿದ್ದರೆ, ನಿಮಗೆ ಗೂಗಲ್ ಅಸಿಸ್ಟೆಂಟ್ ಬಗ್ಗೆಯೂ ಮಾಹಿತಿ ಇರುತ್ತದೆ. ಈಗ, ಗೂಗಲ್ ಇದನ್ನು ಒ.ಎಸ್ ನೊಳಗೇ ಅಡಕವಾಗಿಸಿಬಿಟ್ಟಿದೆ ಮತ್ತು ಯಾವುದೇ ಪರದೆಯಲ್ಲಿದ್ದಾಗ ನೀವು 'ಒಕೆ ಗೂಗಲ್' ಎಂದರೆ ಸಾಕು ಗೂಗಲ್ ಅಸಿಸ್ಟೆಂಟ್ ತನ್ನ ಕೆಲಸವನ್ನಾರಂಭಿಸಿಬಿಡುತ್ತದೆ.

ಓದಿರಿ: ಐಡಿಯಾ ದರ ಪರಿಷ್ಕರಣೆ: 3G, 2G ಡಾಟಾ ಪ್ಲಾನ್‌ಗಳು ಹಿಂದಿಗಿಂತ ಕಡಿಮೆ ದರದಲ್ಲಿ!

ಗೂಗಲ್ಲಿನ ಈ ಕೃತಕ ಬುದ್ಧಿಮತ್ತೆಯ ತಂತ್ರಾಂಶವು ಗೂಗಲ್ ನೌ ನ ಹೊಸ ಅಪ್ ಡೇಟೆಡ್ ಆವೃತ್ತಿ. ಇದರಲ್ಲಿ ಹಲವಾರು ತಂತ್ರಗಳು ಅಡಕವಾಗಿವೆ. ಹೊಸ ಗೂಗಲ್ ಅಸಿಸ್ಟೆಂಟ್ ನ ಐದು ತಂತ್ರಗಳನ್ನು ಇಲ್ಲಿ ಪಟ್ಟಿ ಮಾಡಿದ್ದೀವಿ. ಒಮ್ಮೆ ಗಮನಿಸಿ.

ಒಂದು ಜೋಕ್ ಹೇಳು.

ಒಂದು ಜೋಕ್ ಹೇಳು.

ಗೂಗಲ್ ನೌಗೆ ಹೋಲಿಸಿದರೆ ಗೂಗಲ್ ಅಸಿಸ್ಟೆಂಟ್ ಹೆಚ್ಚು ಬುದ್ಧಿಯುಳ್ಳದ್ದಾಗಿದೆ ಮತ್ತು ನಿಮ್ಮ ಎಲ್ಲಾ ಆದೇಶಗಳಿಗೂ ಸ್ಪಂದಿಸುತ್ತದೆ. ನಿಮ್ಮ ಗೂಗಲ್ ಅಸಿಸ್ಟೆಂಟ್ ಗೆ ಒಂದು ಜೋಕ್ ಹೇಳು ಎಂದು ನೀವು ಆದೇಶಿಸಬಹುದು, ಅದು ನಿಮ್ಮಾದೇಶವನ್ನು ಶಿರಸಾವಹಿಸಿ ಪಾಲಿಸುತ್ತದೆ ಮತ್ತು ಜೋಕೊಂದನ್ನು ನಿಮ್ಮ ಮುಂದಿಡುತ್ತದೆ.

ಸಂಗೀತ ಅಥವಾ ವೀಡಿಯೋ ಅನ್ನು ಪ್ಲೇ ಮಾಡಿ.

ಸಂಗೀತ ಅಥವಾ ವೀಡಿಯೋ ಅನ್ನು ಪ್ಲೇ ಮಾಡಿ.

ಜೊತೆಗೆ, ನೀವು ನಿಮ್ಮ ಗೂಗಲ್ ಅಸಿಸ್ಟೆಂಟ್ ಗೆ ಸಂಗೀತ ಅಥವಾ ವೀಡಿಯೋ ಅನ್ನು ಪ್ಲೇ ಮಾಡಲು ಹೇಳಬಹುದು. ಅದು ನಿಮ್ಮ ಮೊಬೈಲಿನ ಡಿಫಾಲ್ಟ್ ವೀಡಿಯೋ/ಸಂಗೀತ ಪ್ಲೇಯರನ್ನು ತೆರೆದು ಸಂಗೀತ/ ವೀಡಿಯೋ ಹಾಕುತ್ತದೆ.

ಹತ್ತಿರದ ಹೋಟೆಲ್ಲುಗಳನ್ನು ಹುಡುಕಿ.

ಹತ್ತಿರದ ಹೋಟೆಲ್ಲುಗಳನ್ನು ಹುಡುಕಿ.

ಗೂಗಲ್ ಅಸಿಸ್ಟೆಂಟ್ ನ ಸಹಾಯದೊಂದಿಗೆ, ನಿಮ್ಮ ಹತ್ತಿರದ ಹೋಟೆಲ್ಲುಗಳನ್ನು ಹುಡುಕಬಹುದು. ಇದಕ್ಕಾಗಿ ನೀವು ನಿಮ್ಮ ಮೊಬೈಲಿನಲ್ಲಿ ಜಿಪಿಎಸ್ ಅನ್ನು ಆನ್ ಮಾಡಿರಬೇಕು.

ಸಂಗೀತ ಕೇಳಿಸಿಕೊಳ್ಳುತ್ತದೆ!

ಸಂಗೀತ ಕೇಳಿಸಿಕೊಳ್ಳುತ್ತದೆ!

ಆ್ಯಪಲ್ ನ ಸಿರಿಯಂತೆಯೇ ಗೂಗಲ್ ಅಸಿಸ್ಟೆಂಟ್ ಕೂಡ ನೀವು ಕೇಳುತ್ತಿರುವ ಹಾಡನ್ನು ಕೇಳಿಸಿಕೊಳ್ಳುತ್ತದೆ ಮತ್ತು ಅದೇ ಹಾಡನ್ನು ಮತ್ತೆ ಹೇಳಬಲ್ಲದು.

ನಿರ್ದಿಷ್ಟ ಸಂಖೈಯನ್ನು ನೆನಪಿನಲ್ಲಿಟ್ಟುಕೊಳ್ಳಬಲ್ಲದು.

ನಿರ್ದಿಷ್ಟ ಸಂಖೈಯನ್ನು ನೆನಪಿನಲ್ಲಿಟ್ಟುಕೊಳ್ಳಬಲ್ಲದು.

ಗೂಗಲ್ ಅಸಿಸ್ಟೆಂಟ್ ಈಗ ನೀವು ಹೇಳಿದ ನಿರ್ದಿಷ್ಟ ಸಂಖೈಯನ್ನು ನೆನಪಿನಲ್ಲಿಟ್ಟುಕೊಳ್ಳಬಲ್ಲದು. ಆ ಸಂಖೈಯನ್ನು ನೀವು ನಂತರದಲ್ಲಿ ಬೇಕಾದಾಗ ತೆಗೆದುಕೊಳ್ಳಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
The Google Pixel and Pixel XL are the first smartphones to feature Android 7.1 Nougat along with the Google's new personal assistant, dubbed as the Google Assistant.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X