ಐಡಿಯಾ ದರ ಪರಿಷ್ಕರಣೆ: 3G, 2G ಡಾಟಾ ಪ್ಲಾನ್‌ಗಳು ಹಿಂದಿಗಿಂತ ಕಡಿಮೆ ದರದಲ್ಲಿ!

Written By:

ಎಲ್ಲಾ ಟೆಲಿಕಾಂ ಆಪರೇಟರ್‌ಗಳು ಸಹ ತಮ್ಮ ಗ್ರಾಹಕರಿಗೆ ಆಕರ್ಷಕ ಪ್ಲಾನ್‌ಗಳನ್ನು, ಅನ್‌ಲಿಮಿಟೆಡ್‌ ಆಫರ್‌ಗಳನ್ನು ರಿಲಾಯನ್ಸ್ ಜಿಯೋಗೆ ಸ್ಪರ್ಧೆ ನೀಡಲು ಪ್ರಕಟಗೊಳಿಸುತ್ತಿದ್ದಾರೆ. ಭಾರತದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪನಿ ಆದ ಐಡಿಯಾ ಸೆಲ್ಯೂಲಾರ್ ಸಹ ಆಫರ್‌ಗಳ ಪ್ರಕಟಣೆ ಇಂದ ದೂರ ಉಳಿದಿಲ್ಲ.

ಹೌದು, ಭಾರತಿ ಏರ್‌ಟೆಲ್‌ ಮತ್ತು ವೊಡಾಫೋನ್‌ ಇಂಡಿಯಾ ನಂತರ, ಐಡಿಯಾ ಈಗ ತನ್ನ 3G, 2G ಡಾಟಾ ಪ್ಲಾನ್‌ಗಳ ದರವನ್ನು ಪರಿಷ್ಕರಿಸಿ ಬದಲಿಸಿದೆ. ಐಡಿಯಾದ ಈ ನಡೆಗೆ ಕಾರಣ ರಿಲಾಯನ್ಸ್ ಜಿಯೋಗೆ ಸ್ಪರ್ಧೆ ನೀಡುವುದು ಆಗಿದೆ. ಐಡಿಯಾ, ತನ್ನ ಗ್ರಾಹಕರು ರಿಲಾಯನ್ಸ್ ಜಿಯೋಗೆ ಮೊಬೈಲ್‌ ನಂಬರ್ ಪೋರ್ಟೆಬಲಿಟಿ ಅಥವಾ ಹೊಸ ಸಿಮ್‌ ಖರೀದಿಯ ಮೂಲಕ ಪಾಲಾಯನ ಮಾಡದಿರಲಿ ಎಂಬ ಕಾರಣದಿಂದ ಈ ತೀರ್ಮಾನ ಕೈಗೊಂಡಿದೆ. ಅಂದಹಾಗೆ ಐಡಿಯಾ, ಜಿಯೋಗೆ ಸ್ಪರ್ಧಿ ನೀಡಲು ಪರಿಷ್ಕರಿಸಿರುವ ಆಫರ್‌ಗಳನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ಐಡಿಯಾ ಸಿಮ್‌ನಲ್ಲಿ ಉಚಿತ 3G ಇಂಟರ್ನೆಟ್‌ ಬಳಕೆ ಹೇಗೆ?

ಐಡಿಯಾ'ದಿಂದ ಅನ್‌ಲಿಮಿಟೆಡ್‌ ವಾಯ್ಸ್ ಕರೆ ಪ್ಯಾಕ್‌ಗಳು: ಜಿಯೋಗೆ ಪ್ರತಿಕ್ರಿಯೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ರೂ.46 ಮತ್ತು ರೂ.36 ಪ್ಲಾನ್‌ ಆಫರ್‌ನಲ್ಲಿ 150MB ಮತ್ತು 180MB ಡಾಟಾ

ರೂ.46 ಮತ್ತು ರೂ.36 ಪ್ಲಾನ್‌ ಆಫರ್‌ನಲ್ಲಿ 150MB ಮತ್ತು 180MB ಡಾಟಾ

ಐಡಿಯಾ ಬಳಕೆದಾರರು ಈ ಹಿಂದೆ ರೂ.46 ರೀಚಾರ್ಜ್‌ನಿಂದ 120MB ಡಾಟಾ ಮಾತ್ರ ಪಡೆಯುತ್ತಿದ್ದರು. ಆದರೆ ಡಾಟಾ ದರ ಪರಿಷ್ಕರಣೆ ನಂತರ ಅದೇ ರೀಚಾರ್ಜ್‌ಗೆ 150MB ಡಾಟಾ ಪಡೆಯಬಹುದಾಗಿದೆ. ಈ ಡಾಟಾ ವ್ಯಾಲಿಡಿಟಿ 28 ದಿನಗಳು. ಅಲ್ಲದೇ ಟೆಲಿಕಾಂ ರೂ.36 2G ಡಾಟಾ ಪ್ಯಾಕ್‌ನಲ್ಲೂ ಮಹತ್ತರ ಬದಲಾವಣೆ ತಂದಿದ್ದು, ಇದು 28 ದಿನಗಳ ವ್ಯಾಲಿಡಿಟಿಯೊಂದಿಗೆ 180MB ಡಾಟಾ ನೀಡುತ್ತಿದೆ. ಆದರ ಈ ಹಿಂದೆ ಇದೆ ರೀಚಾರ್ಜ್‌ಗೆ ಕೇವಲ 120MB ಡಾಟಾ ನೀಡುತ್ತಿತ್ತು.

ರೂ.69 3G ಪ್ಯಾಕ್‌ ಆಫರ್‌ನಿಂದ 1GB ಡಾಟಾ

ರೂ.69 3G ಪ್ಯಾಕ್‌ ಆಫರ್‌ನಿಂದ 1GB ಡಾಟಾ

ಐಡಿಯಾ ಡಾಟಾ ಪ್ಲಾನ್‌ ಪರಿಷ್ಕರಣೆ ನಂತರ ರೂ.69 3G ಪ್ಯಾಕ್‌ನಲ್ಲಿ ಗ್ರಾಹಕರು 1GB ಡಾಟಾ ಪಡೆಯಬಹುದು. ಆದರೆ ಈ ಹಿಂದೆ ರೂ. 69 ರೀಚಾರ್ಜ್‌ನಿಂದ ಕೇವಲ 280MB ಡಾಟಾ 7 ದಿನಗಳ ವ್ಯಾಲಿಡಿಟಿ ಮಾತ್ರ ಇತ್ತು. ಈಗಿನ ಡಾಟಾ ವ್ಯಾಲಿಡಿಟಿ 15 ದಿನಗಳು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೂ.249 ಮತ್ತು ರೂ.649 ಪ್ಯಾಕ್'ನಿಂದ 1.5GB ಮತ್ತು 5.5GB ಡಾಟಾ

ರೂ.249 ಮತ್ತು ರೂ.649 ಪ್ಯಾಕ್'ನಿಂದ 1.5GB ಮತ್ತು 5.5GB ಡಾಟಾ

ಐಡಿಯಾ ಬಳಕೆದಾರರು ರೂ.249 3G ಪ್ಯಾಕ್‌ನಿಂದ ಈ ಹಿಂದೆ 1GB ಡಾಟಾ ಎಂಜಾಯ್‌ ಮಾಡಬಹುದಿತ್ತು. ಆದರೆ ಈಗ 1.5GB ಡಾಟಾವನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ ಪಡೆಯಬಹುದಾಗಿದೆ. ಅದೇ ರೀತಿಯಲ್ಲಿ ರೂ.649 ಪ್ಯಾಕ್'ನಿಂದ 5GB ಬದಲು 5.5GB ಡಾಟಾವನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ ಪಡೆಯಬಹುದಾಗಿದೆ.

ರೂ.449 ಮತ್ತು ರೂ.849 ಪ್ಯಾಕ್‌ಗಳು 3.5GB ಮತ್ತು 7.5GB ಡಾಟಾ ಆಫರ್ ಮಾಡಲಿವೆ

ರೂ.449 ಮತ್ತು ರೂ.849 ಪ್ಯಾಕ್‌ಗಳು 3.5GB ಮತ್ತು 7.5GB ಡಾಟಾ ಆಫರ್ ಮಾಡಲಿವೆ

ರೂ.449 ರೀಚಾರ್ಜ್‌ನೊಂದಿಗೆ ಐಡಿಯಾ ಬಳಕೆದಾರರು 3.5GB ಡಾಟಾವನ್ನು 3GB ಬದಲು 28 ದಿನಗಳ ವ್ಯಾಲಿಡಿಟಿಯೊಂದಿಗೆ ಪಡೆಯಬಹುದು. ಅದೇ ರೀತಿಯಲ್ಲಿ ರೂ.849 ರೀಚಾರ್ಜ್‌ನಿಂದ 7GB ಬದಲು 7.5GB ಡಾಟಾವನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ ಪಡೆಯಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Idea Revised it's 3G and 2G Data Plans to Take on Reliance Jio. To know more about this offers visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot