ಹುವಾಯಿ ಮೇಟ್ 9ರಲ್ಲಿ ನಿರೀಕ್ಷಿಸಬಹುದಾದ 6 ವಿಶಿಷ್ಟತೆಗಳು.

Written By:

ಪ್ರಪಂಚದ ದೊಡ್ಡ ಸ್ಮಾರ್ಟ್ ಫೋನ್ ತಯಾರಕರಲ್ಲಿ ಒಬ್ಬರಾದ ಹುವಾಯಿ ಹಲವು ಫೋನುಗಳನ್ನು ಘೋಷಿಸುತ್ತಿದೆ. ಎರಡು ಫ್ಲಾಗ್ ಶಿಪ್ ಫೋನುಗಳಾದ ಹುವಾಯಿ ಪಿ9 ಮತ್ತು ಹಾನರ್ 8 ಅನ್ನು ಈಗಾಗಲೇ ಬಿಡುಗಡೆಗೊಳಿಸಿದೆ. ಗಾಳಿ ಸುದ್ದಿಗಳನ್ನು ನಂಬುವುದಾದರೆ ಹುವಾಯಿ ಮೇಟ್ 9ರ ಬಿಡುಗಡೆಗೆ ಸನ್ನದ್ಧಗೊಳ್ಳುತ್ತಿದೆ.

ಹುವಾಯಿ ಮೇಟ್ 9ರಲ್ಲಿ ನಿರೀಕ್ಷಿಸಬಹುದಾದ 6 ವಿಶಿಷ್ಟತೆಗಳು.

ಚೀನಾದ ವೆಬ್ ತಾಣ ವ್ಯೀಬೋದ ಪ್ರಕಾರ ಮೇಟ್ 9 ನವೆಂಬರ್ ಮೂರರಂದು ಬಿಡುಗಡೆಗೊಳ್ಳಲಿದೆ. ಹುವಾಯಿ ಮೇಟ್ 8ಅನ್ನು ಕಳೆದ ವರುಷ ಬಿಡುಗಡೆಗೊಳಿಸಲಾಗಿತ್ತು ಮತ್ತು ಸುದ್ದಿಗಳ ಪ್ರಕಾರ ಕಂಪನಿಯು ಅದೇ ಕ್ರಮವನ್ನು ಅನುಸರಿಸಲಿದೆ.

ಓದಿರಿ:ವೊಡಾಫೋನ್ ಆಫರ್: 1GB 3G/4G ಡಾಟಾ ಕೇವಲ ರೂ.55

ಹುವಾಯಿ ಮೇಟ್ 9ರ ಬಗ್ಗೆ ನಿಮಗೆ ಗೊತ್ತಿರಬೇಕಾದ ಸಂಗತಿಗಳಿಲ್ಲಿವೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕರ್ವ್ಡ್ ಪರದೆ.

ಕರ್ವ್ಡ್ ಪರದೆ.

ಇವಾನ್ ಬ್ಲಾಸ್ (ಟ್ವಿಟರಿನಲ್ಲಿ @evleaks) ಮೇಟ್ 9 ರ ಚಿತ್ರಗಳನ್ನು ಹಂಚಿಕೊಂಡಿದ್ದರು. ಅದರ ಪ್ರಕಾರ ಮೇಟ್ 9ರಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 7 ಎಡ್ಜ್ ನಲ್ಲಿರುವಂತೆಯೇ ಕರ್ವ್ಡ್ ಪರದೆಯಿರಲಿದೆ. ಎರಡು ವಿಶಿಷ್ಟ ವಿನ್ಯಾಸದಲ್ಲಿ ಮೇಟ್ 9 ಹೊರಬರಲಿದೆ.

ಡುಯಲ್ ಕ್ಯಾಮೆರ.

ಡುಯಲ್ ಕ್ಯಾಮೆರ.

ಹೊಸ ಸ್ಮಾರ್ಟ್ ಫೋನುಗಳಲ್ಲಿ ಡುಯಲ್ ಕ್ಯಾಮೆರಾ ಸಾಮಾನ್ಯವಾಗುತ್ತಿದೆ. ಹುವಾಯಿ ಮೇಟ್ 9ರಲ್ಲೂ ಇದು ಮುಂದುವರಿಯಲಿದೆ. ಸುದ್ದಿಗಳ ಪ್ರಕಾರ ಸ್ಮಾರ್ಟ್ ಫೋನಿನಲ್ಲಿ ಲೀಕಾದ ಎರಡು ಲೆನ್ಸುಗಳಿರಲಿವೆ, 20 ಮೆಗಾಪಿಕ್ಸೆಲ್ಲಿನ ಕ್ಯಾಮೆರಾಗಳಿರಲಿವೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮ್ಯಾನ್ ಹಾಟನ್ ಮತ್ತು ಲಾಂಗ್ ಐಲ್ಯಾಂಡ್ ಎಂಬ ರಹಸ್ಯನಾಮ.

ಮ್ಯಾನ್ ಹಾಟನ್ ಮತ್ತು ಲಾಂಗ್ ಐಲ್ಯಾಂಡ್ ಎಂಬ ರಹಸ್ಯನಾಮ.

ಮೇಲೆ ತಿಳಿಸಿದಂತೆ ಮೇಟ್ 9ರ ಎರಡು ಆವೃತ್ತಿಗಳು ಹೊರಬರಲಿದೆ. ಕರ್ವ್ಡ್ ಆವೃತ್ತಿಯನ್ನು ಲಾಂಗ್ ಐಲ್ಯಾಂಡ್ ಎಂದು ಕರೆಯಲಾದರೆ ಮತ್ತೊಂದಕ್ಕೆ ಇಟ್ಟಿರುವ ರಹಸ್ಯನಾಮ ಮ್ಯಾನ್ ಹಾಟನ್. ಸುದ್ದಿಗಳ ಪ್ರಕಾರ ಲಾಂಗ್ ಐಲ್ಯಾಂಡ್ ಆವೃತ್ತಿಯನ್ನು ಚೀನಾದ ಮಾರುಕಟ್ಟೆಗೆ ಮಾತ್ರ ಬಿಡುಗಡೆಗೊಳಿಸಲಾಗುತ್ತದೆ.

ಕ್ಯೂ.ಹೆಚ್.ಡಿ ಪರದೆ, ಡೇಡ್ರೀಮ್ ವಿಆರ್ ಸೌಕರ್ಯ.

ಕ್ಯೂ.ಹೆಚ್.ಡಿ ಪರದೆ, ಡೇಡ್ರೀಮ್ ವಿಆರ್ ಸೌಕರ್ಯ.

ಲಾಂಗ್ ಐಲ್ಯಾಂಡ್ ಆವೃತ್ತಿಯ ಬಗ್ಗೆ ಹೇಳುವುದಾದರೆ ಇದರಲ್ಲಿ ಪ್ರೀಮಿಯಂ ಗುಣಗಳಿರಲಿದೆ. ಎರಡರ ನಡುವಿನ ವ್ಯತ್ಯಾಸಗಳ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿಯಿಲ್ಲ. ಆದರೆ ಲಾಂಗ್ ಐಲ್ಯಾಂಡಿನಲ್ಲಿ ಕ್ಯೂ.ಹೆಚ್.ಡಿ ಪರದೆ, ಡೇಡ್ರೀಮ್ ವಿಆರ್ ಸೌಕರ್ಯವಿರಲಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

64 ಬಿಟ್ ಕಿರಿನ್ 960 ಚಿಪ್.

64 ಬಿಟ್ ಕಿರಿನ್ 960 ಚಿಪ್.

ಹುವಾಯಿ ಮೇಟ್ 9ರಲ್ಲಿ 64 ಬಿಟ್ ಆಕ್ಟಾ ಕೋರ್ ಹೈಸಿಲಿಕಾನ್ ಕಿರಿನ್ 960 ಚಿಪ್ ಸೆಟ್ ಇರುವ ನಿರೀಕ್ಷೆಯಿದೆ.

ಅನೇಕ ಮೆಮೊರಿ ಆಯ್ಕೆಗಳು.

ಅನೇಕ ಮೆಮೊರಿ ಆಯ್ಕೆಗಳು.

ಮೊದಲ ಸುದ್ದಿಗಳ ಪ್ರಕಾರ ಮೇಟ್ 9 4ಜಿಬಿ ರ್ಯಾಮ್ + 64 ಜಿಬಿ ಸಂಗ್ರಹ ಸಾಮರ್ಥ್ಯ, 6ಜಿಬಿ ರ್ಯಾಮ್ + 128 ಜಿಬಿ ಸಂಗ್ರಹ ಸಾಮರ್ಥ್ಯ ಮತ್ತು 6ಜಿಬಿ ರ್ಯಾಮ್ + 256 ಜಿಬಿ ಸಂಗ್ರಹ ಸಾಮರ್ಥ್ಯದಲ್ಲಿ ಲಭ್ಯವಾಗಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Huawei to launch the successor of the last year's Mate 8, the Huawei Mate 9. Here's everything you should expect from the device.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot