ನಿಮ್ಮ ಬಳಿ ಯಾವುದೇ ಫೋನ್‌ ಇರಲಿ, ಈ ಕೆಲಸ ಎಂದೂ ಮರೆಯದಿರಿ!

|

ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಪ್ರತಿಯೊಬ್ಬರ ಅಗತ್ಯ ಡಿವೈಸ್‌ ಆಗಿದೆ. ಅನೇಕ ಆನ್‌ಲೈನ್ ಕೆಲಸಗಳು ಫೋನಿನ ಮೂಲಕವೇ ನಡೆಯುತ್ತವೆ. ಈ ನಿಟ್ಟಿನಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರ ಆಪ್ತ ಜೊತೆಗಾರ ಎನಸಿಕೊಂಡಿದೆ. ಈ ಕಾರಣಕ್ಕಾಗಿ ಬಳಕೆದಾರರು ಸ್ಮಾರ್ಟ್‌ಫೋನ್ ಬ್ಯಾಟರಿ ಲೈಫ್‌ ಬಗ್ಗೆ ಗಮನ ನೀಡುವುದು ಮುಖ್ಯ ಎನಿಸಿದೆ. ಬಳಕೆದಾರರು ಎಷ್ಟು ಸರತಿ ಸ್ಮಾರ್ಟ್‌ಫೋನ್ ನಿರ್ವಹಣೆಯಲ್ಲಿ ಕಾಳಜಿ ತೋರಿಸದರೂ ಅವರು ನಿರೀಕ್ಷಿಸಿದಷ್ಟು ಫೋನ್ ಬ್ಯಾಟರಿ ಬ್ಯಾಕ್‌ಅಪ್ ಬರುವುದೇ ಇಲ್ಲ. ಬಹುಬೇಗ ಬ್ಯಾಟರಿ ಖಾಲಿಯಾಗುವ ಸಂಭವಗಳೇ ಹೆಚ್ಚು.

ಖಾಲಿ

ಹೌದು, ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಬ್ಯಾಕ್‌ಅಪ್ ಅತೀ ಅಗತ್ಯ. ಬ್ಯಾಟರಿ ಇದ್ದರೇ ಉಳಿದೆಲ್ಲ ಕೆಲಸ. ಆಂಡ್ರಾಯ್ಡ್‌ ಮತ್ತು ಐಫೋನ್ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ನಾನಾ ಕಾರಣಗಳಿಂದಾಗಿ ಖಾಲಿ ಆಗಿರುತ್ತವೆ. ಅವುಗಳಲ್ಲಿ ಕೆಲವೊಮ್ಮೆ ಬಳಕೆದಾರರು ಚಾರ್ಜ್ ಮಾಡುವಾಗ ತಪ್ಪು ಕ್ರಮ ಅನುಸರಿಸಿದಾಗಲೂ ಬಹು ಬೇಗನೆ ಬ್ಯಾಟರಿ ಖಾಲಿ ಆಗುವ ಸಾಧ್ಯತೆಗಳು ಇರುತ್ತವೆ. ಹಾಗಾದರೇ ಫೋನ್‌ಗಳ ಬ್ಯಾಟರಿ ಲೈಫ್‌ ಹೆಚ್ಚು ಹೊತ್ತು ಉಳಿಸುವ ಕೆಲವು ಟಿಪ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಸರಿಯಾಗಿ ಫೋನ್ ಚಾರ್ಜ್ ಮಾಡಿ

ಸರಿಯಾಗಿ ಫೋನ್ ಚಾರ್ಜ್ ಮಾಡಿ

ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ಬಹುತೇಕ ಬಳಕೆದಾರರು ಫೋನ್ ಬ್ಯಾಟರಿ ಪೂರ್ಣ 100% ಪರ್ಸೆಂಟ್ ಆಗುವವರೆಗೂ ಚಾರ್ಜ್ ತೆಗೆಯುವುದೇ ಇಲ್ಲ. ಇದು ಬ್ಯಾಟರಿ ಲೈಫ್ ದೃಷ್ಠಿಯಿಂದ ಉತ್ತಮ ನಿರ್ಧಾರವಲ್ಲ. ಸ್ಮಾರ್ಟ್‌ಫೋನ್ ಸಂಪೂರ್ಣ 100% ಚಾರ್ಜ್ ಮಾಡಲೇಬಾರದು. ಹೆಚ್ಚೆಂದರೇ ಶೇ.90 ಪರ್ಸೆಂಟ್ ದಾಟಿದ್ದರೇ ಚಾರ್ಜ್‌ ನಿಲ್ಲಿಸುವುದು ಬೆಸ್ಟ್‌. ಇದರಿಂದ ಬ್ಯಾಟರಿ ಲೈಫ್‌ಗೂ ಉತ್ತಮ.

ಫೋನ್ ಬ್ಯಾಟರಿ ಫುಲ್ ಡ್ರೈ ಆಗಲು ಬಿಡಬೇಡಿ

ಫೋನ್ ಬ್ಯಾಟರಿ ಫುಲ್ ಡ್ರೈ ಆಗಲು ಬಿಡಬೇಡಿ

ಸ್ಮಾರ್ಟ್‌ಫೋನಿನ ಜೀವ ಒದಗಿಸುವ ಬ್ಯಾಟರಿ ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಸ್ಮಾರ್ಟ್‌ಫೋನ್ ಬ್ಯಾಟರಿ ಕಡಿಮೆ ಇದ್ದಾಗ ಬಳಕೆ ಸಹ ಕಡಿಮೆ ಮಾಡುವುದು ಅತೀ ಉತ್ತಮ. ಸಂಪೂರ್ಣ ಖಾಲಿ ಆಗುವವರೆಗೂ ಫೋನ್ ಬಳಕೆ ಮಾಡುವುದನ್ನು ಮಾಡಲೇಬೇಡಿ. ಇದರಿಂದ ಬ್ಯಾಟರಿ ಲೈಫ್‌ ಹಾಳಾಗುವ ಸಾಧ್ಯತೆ ಅಧಿಕ. ಶೇ.20%ನಷ್ಟು ಇದ್ದಾಗ ಫೋನ್ ಚಾರ್ಜ್ ಮಾಡುವುದು ಲೇಸು.

ಲೈವ್ ವಾಲ್‌ಪೇಪರ್‌ಗಳು ಬಳಸಬೇಡಿ

ಲೈವ್ ವಾಲ್‌ಪೇಪರ್‌ಗಳು ಬಳಸಬೇಡಿ

ಲೈವ್ ವಾಲ್‌ಪೇಪರ್‌ಗಳು ಅಥವಾ ವಿಜೆಟ್‌ಗಳು ಬಳಕೆಯಲ್ಲಿದ್ದಾಗ ಅವುಗಳು ಹೆಚ್ಚಿನ ಆವರ್ತನದಲ್ಲಿ ಡಿಸ್‌ಪ್ಲೇ ಅನ್ನು ಅಪ್‌ಡೇಟ್ ಮಾಡಲು ಕಾರಣವಾಗುತ್ತವೆ, ಹೀಗಾಗಿ ಸುಗಮ ಹರಿವನ್ನು ಇರಿಸಿಕೊಳ್ಳಲು ಸಾಕಷ್ಟು ಬ್ಯಾಟರಿ ಅವಧಿಯನ್ನು ತೆಗೆದುಕೊಳ್ಳುತ್ತದೆ. ಹೆಚ್ಚಿನ ದರದಲ್ಲಿ ಸ್ಕ್ರೀನ್ ಅನ್ನು ರಿಫ್ರೆಶ್ ಮಾಡುವುದರ ಹೊರತಾಗಿ, ವಿಜೆಟ್‌ಗಳು ಮತ್ತು ಲೈವ್ ವಾಲ್‌ಪೇಪರ್‌ಗಳು ಫೋನ್‌ನ ಸಂಪನ್ಮೂಲಗಳನ್ನು ಬಳಸುತ್ತವೆ ಮತ್ತು ಇದು ಅಪ್‌ಡೇಟ್ ಆಗಿರಲು ಸಹಾಯ ಮಾಡುತ್ತದೆ, ಹೀಗಾಗಿ ಬ್ಯಾಟರಿಯಲ್ಲಿ ವೇಗವಾಗಿ ಕಬಳಿಸುತ್ತವೆ.

ಅತೀ ಹೆಚ್ಚು ಬ್ರೈಟ್ನೆಸ್‌ ಇಡಬೇಡಿ

ಅತೀ ಹೆಚ್ಚು ಬ್ರೈಟ್ನೆಸ್‌ ಇಡಬೇಡಿ

ಸ್ಮಾರ್ಟ್‌ಫೋನ್‌ನಲ್ಲಿ ಕೆಲವರು ಅಧಿಕ ಬ್ರೈಟ್ನೆಸ್‌ ನಲ್ಲಿ ಬಳಕೆ ಮಾಡುತ್ತಾರೆ ಇದರಿಂದ ಬ್ಯಾಟರಿ ಬಳಕೆ ಸಹ ಅಧಿಕವಾಗುತ್ತದೆ. ಆಟೋ ಬ್ರೈಟ್ನೆಸ್‌ ಇಡುವುದು ಉತ್ತಮ. ಹಾಗೆಯೇ ವೈಫೈ ಬಳಕೆ ಸಹ ಮಾಡುವುದು ಬ್ಯಾಟರಿ ಕಬಳಿಸಲು ದಾರಿ ಮಾಡಿಕೊಟ್ಟಂತೆ ಆಗುತ್ತದೆ.

ಡಾರ್ಕ್ ಮೋಡ್ ಆಯ್ಕೆ ಬಳಕೆ ಮಾಡಿ

ಡಾರ್ಕ್ ಮೋಡ್ ಆಯ್ಕೆ ಬಳಕೆ ಮಾಡಿ

ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನ ಬ್ಯಾಟರಿಯನ್ನು ಸಂರಕ್ಷಿಸಲು ಸಹಾಯ ಮಾಡಲು ಅನೇಕ ಅಪ್ಲಿಕೇಶನ್‌ಗಳು ಹೊಸದಾಗಿ ಡಾರ್ಕ್ ಮೋಡ್ ಅನ್ನು ಹೊರತಂದಿವೆ. ನಿಮ್ಮ ಡಿವೈಸ್‌ನಲ್ಲಿ ಡಾರ್ಕ್ ಥೀಮ್ ಅನ್ನು ಅನ್ವಯಿಸುವುದರಿಂದ ಬ್ಯಾಟರಿ ಬಳಕೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಇತ್ಯಾದಿಗಳಂತಹ ವೈಶಿಷ್ಟ್ಯಗಳು ಲಭ್ಯವಿರುವ ಅಪ್ಲಿಕೇಶನ್‌ಗಳಲ್ಲಿ ಡಾರ್ಕ್ ಮೋಡ್ ಅನ್ನು ಆನ್ ಮಾಡಿ.

ಬ್ಯಾಕ್‌ಗ್ರೌಂಡ್‌ ಆಪ್ಸ್‌ಗಳನ್ನು ಕ್ಲೋಸ್ ಮಾಡಿ

ಬ್ಯಾಕ್‌ಗ್ರೌಂಡ್‌ ಆಪ್ಸ್‌ಗಳನ್ನು ಕ್ಲೋಸ್ ಮಾಡಿ

ಸ್ಮಾರ್ಟ್‌ಫೋನ್‌ನಲ್ಲಿ ಅನೇಕ ಆಪ್ಸ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡಿರುತ್ತಾರೆ. ಅವುಗಳಲ್ಲಿ ಕೆಲವು ಆಪ್ಸ್‌ಗಳನ್ನು ಬಳಕೆ ಮಾಡಿ ಮಿನಿಮೈಸ್‌ ಮಾಡಿರುತ್ತಾರೆ. ಆದ್ರೆ ಅವುಗಳು ಬ್ಯಾಕ್‌ಗ್ರೌಂಡ್‌ನಲ್ಲಿ ರನ್ನ ಆಗುತ್ತಿರುತ್ತವೆ. ಈ ಬ್ಯಾಕ್‌ಗ್ರೌಂಡ್‌ ರನ್ನ ಆಗುವ ಆಪ್ಸ್‌ಗಳಿಗೆ ಬ್ರೇಕ್‌ ಹಾಕುವುದರಿಂದಲೂ ಸಹ ಸ್ಮಾರ್ಟ್‌ಫೋನ್ ಕಾರ್ಯವೈಖರಿ ವೇಗ ಪಡೆದುಕೊಳ್ಳುತ್ತದೆ.

Best Mobiles in India

English summary
6 Tips To Improve Your Phone Battery Life.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X