Subscribe to Gizbot

ಫೇರ್‌ಫ್ಯಾಕ್ಸ್‌ ಪಾಲಾಗಲಿದೆ ಬ್ಲ್ಯಾಕ್‌ಬೆರಿ ಕಂಪೆನಿ

Posted By:

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳ ನಡುವೆ ಅರ್ಥಿ‌ಕ ಸಂಕಷ್ಟಕ್ಕೆ ತುತ್ತಾಗಿರುವ ಕೆನಡಾ ಮೂಲದ ಬ್ಲ್ಯಾಕ್‌ಬೆರಿ ಮೊಬೈಲ್‌ ಕಂಪೆನಿ 4.7 ಶತಕೋಟಿ ಡಾಲರ್‌(ಅಂದಾಜು 29 ಸಾವಿರ ಕೋಟಿ ರೂ)ಮೊತ್ತಕ್ಕೆ ಫೇರ್‌ಫ್ಯಾಕ್ಸ್‌ ಹೋಲ್ಡಿಂಗ್ಸ್‌ ಲಿ. ಸಂಸ್ಥೆಗೆ ಮಾರಾಟವಾಗಲಿದೆ.

ಮೈಕ್ರೋಸಾಫ್ಟ್‌ ನೋಕಿಯಾ ಕಂಪೆನಿ ನಡುವೆ ಮಾರಾಟದ ಒಪ್ಪಂದವಾದ ಬಳಿಕ ಬ್ಲ್ಯಾಕ್‌ಬೆರಿ ಕಂಪೆನಿ ಸಹ ಸದ್ಯದಲ್ಲೇ ಮಾರಾಟವಾಗಲಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತಿತ್ತು.ಈಗ ಈ ಎಲ್ಲಾ ಸುದ್ದಿಗೆ ತೆರೆ ಬಿದ್ದಿದೆ.

ಕೆನಡಾ ಮೂಲದ ಕಂಪನಿ ಫೇರ್‌ಫ್ಯಾಕ್ಸ್‌(Fairfax) ಈಗಾಗಲೇ ಬ್ಲ್ಯಾಕ್‌ಬೆರಿಯಲ್ಲಿ ಮುಖ್ಯ ಷೇರುದಾರ ಕಂಪನಿಯಾಗಿದ್ದು ಶೇ.10 ರಷ್ಟು ಷೇರುಗಳನ್ನು ಫೇರ್‌ಫ್ಯಾಕ್ಸ್‌ ಹೊಂದಿದೆ. ಈ ಒಪ್ಪಂದ ಪ್ರಕ್ರಿಯೆಗಳು ನವೆಂಬರ್‌ 4ರೊಳಗೆ ಪೂರ್ಣ‌ಗೊಳ್ಳುವುದು ಎಂದು ಬ್ಲ್ಯಾಕ್‌ಬೆರಿ ಹೇಳಿದೆ.

 ಫೇರ್‌ಫ್ಯಾಕ್ಸ್‌ ಪಾಲಾಗಲಿದೆ ಬ್ಲ್ಯಾಕ್‌ಬೆರಿ ಕಂಪೆನಿ

ಕಳೆದ ಶುಕ್ರವಾರ ತನ್ನ ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡಿಕೊಳ್ಳಲು ಮುಂದಾಗುತ್ತಿರುವುದಾಗಿ ಬ್ಲ್ಯಾಕ್ ಬೆರಿ ಹೇಳಿತ್ತು.ಸಂಸ್ಥೆ ಕಾರ್ಯನಿರ್ವಹಣೆ ವೆಚ್ಚ ಸರಿದೂಗಿಸಲು 2015ರ ಹೊತ್ತಿಗೆ ಜಾಗತಿಕವಾಗಿ ಸುಮಾರು 7000 ಉದ್ಯೋಗಿಗಳನ್ನು ಮನೆಗೆ ಕಳಿಸಲು ನಿರ್ಧರಿಸಲಾಗಿದೆ. ಇದರ ಮೊದಲ ಹಂತವಾಗಿ 4500 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲು ಮುಂದಾಗುತ್ತಿರುವುದಾಗಿ ಹೇಳಿತ್ತು.

ಕೆನಡಾ ಮೂಲದ ಕಂಪನಿ ಈ ತ್ರೈಮಾಸಿಕದಲ್ಲಿ ಸುಮಾರು 950 ಮಿಲಿಯನ್ ಡಾಲರ್ ನಿಂದ 995 ಮಿಲಿಯನ್ ಡಾಲರ್ ಕಳೆದುಕೊಳ್ಳುವ ಭೀತಿಯಲ್ಲಿದೆ. ಪ್ರತಿಸ್ಪರ್ಧಿಗಳ ಜತೆ ಪೈಪೋಟಿ ನಡೆಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಬ್ಲ್ಯಾಕ್ ಬೆರಿ, ಫೇರ್‌ಫ್ಯಾಕ್ಸ್‌ ಹೋಲ್ಡಿಂಗ್ಸ್‌ ಲಿ. ಸಂಸ್ಥೆಗೆ ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot