ಈ ವರ್ಷ ಬಿಡುಗಡೆಯಾಗಿವೆ ಹಲವು ವೈಶಿಷ್ಟ್ಯತೆ ಹೊಂದಿದ ಸ್ಮಾರ್ಟ್‌ಫೋನ್‌ಗಳು!!

By GizBot Bureau
|

ಈ ವರ್ಷ ಅಂದರೆ 2018 ರಲ್ಲಿ ಹಲವಾರು ದೊಡ್ಡ ದೊಡ್ಡ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ., ಪ್ರತಿಯೊಂದು ಕೂಡ ಒಂದಕ್ಕಿಂತ ಒಂದು ಭಿನ್ನ ಮತ್ತು ಬಳಕೆದಾರ ಸ್ನೇಹಿಯಾಗಲು ಪ್ರಯತ್ನಿಸಿವೆ ಅಷ್ಟೇ ಅಲ್ಲ, ವಿಶೇಷ ವೈಶಿಷ್ಟ್ಯೆತೆಗಳಿಂದ ಗಮನ ಸೆಳೆದಿವೆ.

ಈ ವರ್ಷ ಬಿಡುಗಡೆಯಾಗಿವೆ ಹಲವು ವೈಶಿಷ್ಟ್ಯತೆ ಹೊಂದಿದ ಸ್ಮಾರ್ಟ್‌ಫೋನ್‌ಗಳು!!

ಅದರಲ್ಲೂ ಕೆಲವು ವೈಶಿಷ್ಟ್ಯತೆಗಳು ವಿಶ್ವದಲ್ಲೇ ಮೊದಲ ಬಾರಿಗೆ ಬಳಕೆಗೆ ಬಂದಿವೆ. ಉದಾಹರಣೆಗೆ ವಿವೋ ನೆಕ್ಸ್ ಪಾಪ್ ಅಪ್ ಕ್ಯಾಮರಾ ಹೊಂದಿದ ವಿಶ್ವದ ಮೊದಲ ಸ್ಮಾರ್ಟ್ ಫೋನ್ ಆಗಿದೆ. ಇಲ್ಲಿ ನಾವು 9 ವಿಶೇಷ ಸ್ಮಾರ್ಟ್ ಫೋನ್ ಗಳನ್ನು ಪಟ್ಟಿ ಮಾಡಿದ್ದೇವೆ ಮತ್ತು ಇವು ವಿಶ್ವದಲ್ಲೇ ವಿಶೇಷವಾದ ವೈಶಿಷ್ಟ್ಯತೆಯನ್ನು ಮೊದಲ ಬಾರಿಗೆ ಹೊಂದಿ ಬಿಡುಗಡೆಗೊಂಡಿವೆ.

1. ವಿವೋ ಎಕ್ಸ್20 ಪ್ಲಸ್ ಯುಡಿ: ಇನ್ ಸ್ಕ್ರೀನ್ ಬೆರಳಚ್ಚು ತಂತ್ರಜ್ಞಾನವಿದ್ದ ಮೊದಲ ಸ್ಮಾರ್ಟ್ ಫೋನ್

1. ವಿವೋ ಎಕ್ಸ್20 ಪ್ಲಸ್ ಯುಡಿ: ಇನ್ ಸ್ಕ್ರೀನ್ ಬೆರಳಚ್ಚು ತಂತ್ರಜ್ಞಾನವಿದ್ದ ಮೊದಲ ಸ್ಮಾರ್ಟ್ ಫೋನ್

ವಿವೋ ಎಕ್ಸ್20 ಪ್ಲಸ್ ಯುಡಿ ವಿಸ್ವದ ಮೊದಲ ಇನ್ ಸ್ಕ್ರೀನ್ ಬೆರಳಚ್ಚು ತಂತ್ರಜ್ಞಾನ ಅಳವಡಿಸಿಕೊಂಡು ಬಂದ ಮೊದಲ ಸ್ಮಾರ್ಟ್ ಫೋನ್ ಆಗಿದೆ. ಇದರ ನಂತರ ಹಲವಾರು ಸ್ಮಾರ್ಟ್ ಫೋನ್ ಗಳು ಈ ತಂತ್ರಜ್ಞಾನ ಅಳವಡಿಸಿಕೊಂಡು ಬಿಡುಗಡೆಗೊಂಡಿವೆ. ಈ ಸ್ಮಾರ್ಟ್ ಫೋನಿನ ಕೆಲವು ವೈಶಿಷ್ಟ್ಯತೆಗಳೆಂದರೆ 6.43-ಇಂಚಿನ AMOLED FullHD+ ಡಿಸ್ಪ್ಲೇ, ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 660 ಸಾಕೆಟ್, 4ಜಿಬಿ RAM, 12ಎಂಪಿ+5ಎಂಪಿ ಹಿಂಭಾಗದ ಕ್ಯಾಮರಾ, 12ಎಂಪಿ ಮುಂಭಾಗದ ಕ್ಯಾಮರಾ 128ಜಿಬಿ ಬಿಲ್ಟ್ ಇನ್ ಸ್ಟೋರೇಜ್ ಮತ್ತು3900mAh ಬ್ಯಾಟರಿ ಸೌಲಭ್ಯವಿದೆ.

2. ಹುವಾಯಿ ಪಿ20 ಪ್ರೋ: ಮೂರು ಹಿಂಭಾಗದ ಕ್ಯಾಮರಾ ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್ ಫೋನ್

2. ಹುವಾಯಿ ಪಿ20 ಪ್ರೋ: ಮೂರು ಹಿಂಭಾಗದ ಕ್ಯಾಮರಾ ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್ ಫೋನ್

ಮೂರು ಹಿಂಭಾಗದ ಕ್ಯಾಮರಾ ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್ ಫೋನ್ ಇದಾಗಿದ್ದು 20ಎಂಪಿ ಮೋನೋಕ್ರೋಮ್ ಸೆನ್ಸರ್, 40ಎಂಪಿ Rಜಿಬಿ ಸೆನ್ಸರ್ ಮತ್ತು 8ಎಂಪಿ ಟೆಲಿಫೋಟೋ ಸೆನ್ಸರಾ ನ್ನು ಇದು ಒಳಗೊಂಡಿದೆ.. ಇನ್ನಷ್ಟು ವೈಶಿಷ್ಟ್ಯತೆಗಳೆಂದರೆ 6.1-ಇಂಚಿನ FullhD+ OLED ಡಿಸ್ಪ್ಲೇ, 24ಎಂಪಿ ಮುಂಭಾಗದ ಕ್ಯಾಮರಾ, ಅಕ್ಟಾ-ಕೋರ್ Kirin 970 ಪ್ರೊಸೆಸರ್, 6ಜಿಬಿ RAM, 128ಜಿಬಿ ಇನ್ ಬಿಲ್ಟ್ ಸ್ಟೋರೇಜ್ ಮತ್ತು 4000mAh ಬ್ಯಾಟರಿಯನ್ನು ಹೊಂದಿದೆ.

3. ವಿವೋ ನೆಕ್ಸ್: ಪಾಪ್ ಅಪ್ ಕ್ಯಾಮರಾ ಹೊಂದಿರುವ ಮೊದಲ ಆಲ್ ಸ್ಕ್ರೀನ್ ಸ್ಮಾರ್ಟ್ ಫೋನ್

3. ವಿವೋ ನೆಕ್ಸ್: ಪಾಪ್ ಅಪ್ ಕ್ಯಾಮರಾ ಹೊಂದಿರುವ ಮೊದಲ ಆಲ್ ಸ್ಕ್ರೀನ್ ಸ್ಮಾರ್ಟ್ ಫೋನ್

ವಿವೋ ನೆಕ್ಸ್ ಪಾಪ್ ಅಪ್ ಕ್ಯಾಮರಾ ಹೊಂದಿರುವ ಮೊದಲ ಆಲ್ ಸ್ಕ್ರೀನ್ ಸ್ಮಾರ್ಟ್ ಫೋನ್ ಮತ್ತು ಇನ್ ಸ್ಕ್ರೀನ್ ಬೆರಳಚ್ಚು ತಂತ್ರಜ್ಞಾನವನ್ನು ಇದು ಹೊಂದಿದೆ . ಇನ್ನಷ್ಟು ವೈಶಿಷ್ಟ್ಯತೆಗಳೆಂದರೆ 6.59-ಇಂಚಿನ FHD+ ಸೂಪರ್ Amoled ಸ್ಕ್ರೀನ್, 12ಎಂಪಿ ಹಿಂಭಾಗದ ಕ್ಯಾಮರಾ, 5ಎಂಪಿ ಮುಂಭಾಗದ ಕ್ಯಾಮರಾ , ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್845 ಪ್ರೊಸೆಸರ್, 8ಜಿಬಿ RAM ಮತ್ತು 4000mAh ಬ್ಯಾಟರಿಯನ್ನು ಹೊಂದಿದೆ

4. ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9+: ವೇರಿಯೇಬಲ್ ದ್ಯುತಿರಂಧ್ರ ಮತ್ತು ಡುಯಲ್ OIS ಇರುವ ವಿಶ್ವದ ಮೊದಲ ಸ್ಮಾರ್ಟ್ ಫೋನ್

4. ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9+: ವೇರಿಯೇಬಲ್ ದ್ಯುತಿರಂಧ್ರ ಮತ್ತು ಡುಯಲ್ OIS ಇರುವ ವಿಶ್ವದ ಮೊದಲ ಸ್ಮಾರ್ಟ್ ಫೋನ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9+ ವೇರಿಯೇಬಲ್ ದ್ಯುತಿರಂಧ್ರ ಮತ್ತು ಡುಯಲ್ OIS ಇರುವ ಹಿಂಭಾಗದ ಕ್ಯಾಮರಾ ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್ ಫೋನ್ ಆಗಿದೆ. ಇದರಲ್ಲಿ ಎರಡು 12ಎಂಪಿ ಸೆನ್ಸಾರ್ ಗಳು ಹಿಂಭಾಗದಲ್ಲಿದೆ ಮತ್ತು 8ಎಂಪಿ ಮುಂಭಾಗದ ಕ್ಯಾಮರಾ ಇದೆ.. ಇದರ ಇನ್ನಷ್ಟು ವೈಶಿಷ್ಟ್ಯತೆಗಳೆಂದರೆ Exynos 9810 ಪ್ರೊಸೆಸರ್, 6ಜಿಬಿ RAM, 64ಜಿಬಿ ಇನ್ ಬಿಲ್ಟ್ ಸ್ಟೋರೇಜ್ ಮತ್ತು 3500mAh ಬ್ಯಾಟರಿ.

5. ನೋಕಿಯಾ 8 ಸಿರಿಕೋ: ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 835 ಪ್ರೊಸೆಸರ್ ನಲ್ಲಿ ರನ್ ಆಗುವ ಮೊದಲ ಸ್ಮಾರ್ಟ್ ಫೋನ್

5. ನೋಕಿಯಾ 8 ಸಿರಿಕೋ: ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 835 ಪ್ರೊಸೆಸರ್ ನಲ್ಲಿ ರನ್ ಆಗುವ ಮೊದಲ ಸ್ಮಾರ್ಟ್ ಫೋನ್

ನೋಕಿಯಾ 8 ಸಿರಿಕೋ ವಿಶ್ವದ ತುಂಬಾ ಬಲಿಷ್ಟ ಸ್ಮಾರ್ಟ್ ಫೋನ್ ಗಳಲ್ಲಿ ಒಂದೆನಿಸಿದೆ. ಇದು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್835 ಪ್ರೊಸೆಸರ್, 5.5-ಇಂಚಿನ pOLED QHD ಡಿಸ್ಪ್ಲೇಯನ್ನು ಹೊಂದಿದೆ, 12ಎಂಪಿ+13ಎಂಪಿ ಹಿಂಭಾಗದ ಕ್ಯಾಮರಾ ಜೊತೆದೆ ZEISS ಆಪ್ಟಿಕ್ಸ್ ಇದೆ, 6ಜಿಬಿ RAM, 5ಎಂಪಿ ಮುಂಭಾಗದ ಕ್ಯಾಮರಾ, 128ಜಿಬಿ ಇನ್ ಬಿಲ್ಟ್ ಸ್ಟೋರೇಜ್ 3260mAh ಬ್ಯಾಟರಿಯನ್ನು ಇದು ಒಳಗೊಂಡಿದೆ.

6. Asus ROG ಫೋನ್: Amoled ಸ್ಕ್ರೀನ್ ಜೊತೆಗೆ 90Hz ರಿಫ್ರೆಶ್ ರೇಟ್ ಇದ್ದ ವಿಶ್ವದ ಮೊದಲ ಸ್ಮಾರ್ಟ್ ಫೋನ್

6. Asus ROG ಫೋನ್: Amoled ಸ್ಕ್ರೀನ್ ಜೊತೆಗೆ 90Hz ರಿಫ್ರೆಶ್ ರೇಟ್ ಇದ್ದ ವಿಶ್ವದ ಮೊದಲ ಸ್ಮಾರ್ಟ್ ಫೋನ್

ಇತ್ತೀಚೆಗಷ್ಟೇ ಬಿಡುಗಡೆಗೊಂಡಿರುವ Asus ROG ಫೋನ್ ಕೇವಲ ಕಂಪೆನಿಯ ಗೇಮಿಂಗ್ ಸ್ಮಾರ್ಟ್ ಫೋನ್ ಮಾತ್ರವಲ್ಲ ಬದಲಾಗಿ ವಿಶ್ವದ ಮೊದಲ 90Hz ರಿಫ್ರೆಶ್ ರೇಟ್ ನಲ್ಲಿ AMOLED ಡಿಸ್ಪ್ಲೇ ಹೊಂದಿರುವ ವಿಶ್ವದ ಮೊದಲ ಫೋನ್ ಇದಾಗಿದೆ.ಇದರಲ್ಲಿ ಡುಯಲ್ ಚಾರ್ಜಿಂಗ್ ಪೋರ್ಟ್ ಇದೆ. ಇದರ ಇನ್ನಷ್ಟು ವೈಶಿಷ್ಟ್ಯತೆಗಳೆಂದರೆ 6-ಇಂಚಿನ fullHD+ ಡಿಸ್ಪ್ಲೇ , 2ಎಂಪಿ (with OIS) + 8ಎಂಪಿ ಹಿಂಭಾಹಗ ಕ್ಯಾಮರಾ, ಅಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್845, 8ಜಿಬಿ RAM ಮತ್ತು 4000mAh ಬ್ಯಾಟರಿಯನ್ನು ಒಳಗೊಂಡಿದೆ.

7. Energizer ಪವರ್ ಮ್ಯಾಕ್ಸ್ P16K ಪ್ರೋ: 16,000mAh ಬ್ಯಾಟರಿ ಸೌಲಭ್ಯವಿದ್ದ ವಿಶ್ವದ ಮೊದಲ ಸ್ಮಾರ್ಟ್ ಫೋನ್

7. Energizer ಪವರ್ ಮ್ಯಾಕ್ಸ್ P16K ಪ್ರೋ: 16,000mAh ಬ್ಯಾಟರಿ ಸೌಲಭ್ಯವಿದ್ದ ವಿಶ್ವದ ಮೊದಲ ಸ್ಮಾರ್ಟ್ ಫೋನ್

MWC 2018 Energizer ಪವರ್ ಮ್ಯಾಕ್ಸ್ P16K ಪ್ರೋ ಫೋನ್ ಬಿಡುಗಡೆಗೊಂಡಿದ್ದು, ವಿಶ್ವದ ಮೊದಲ ಬಹುದೊಡ್ಡ ಅಂದರೆ 16,000mAh ಬ್ಯಾಟರಿ ಸೌಲಭ್ಯ ಹೊಂದಿರುವ ಮೊದಲ ಫೋನ್ ಇದಾಗಿದೆ ಮತ್ತು ಈ ಬ್ಯಾಟರಿ ರಿಮೂವೇಬಲ್ ಕೂಡ ಆಗಿದೆ.ಇದರ ಇನ್ನಷ್ಟು ವಿಶೇಷತೆಗಳೆಂದರೆ 5.99-ಇಂಚಿನ full-HD+ IPS LCD ಡಿಸ್ಪ್ಲೇ , ಆಕ್ಟಾ- ಕೋರ್- ಮೀಡಿಯಾ ಟೆಕ್ Helio P25, 6ಜಿಬಿ RAM, 128ಜಿಬಿ ಇನ್ ಬಿಲ್ಟ್ ಸ್ಟೋರೇಜ್, 16ಎಂಪಿ+13ಎಂಪಿ ಹಿಂಭಾಗದ ಕ್ಯಾಮರಾ ಮತ್ತು 13ಎಂಪಿ+5ಎಂಪಿ ಮುಂಭಾಗದ ಕ್ಯಾಮರಾವನ್ನು ಹೊಂದಿದೆ.

8. HTC Exodus: ವಿಶ್ವದ ಮೊದಲ blockchain ಫೋನ್

8. HTC Exodus: ವಿಶ್ವದ ಮೊದಲ blockchain ಫೋನ್

HTC ಈ ವರ್ಷದ ಆರಂಭದಲ್ಲಿ ಎಲ್ಲರಲ್ಲೂ ಕೂತೂಹಲಕ್ಕೆ ಕಾರಣವಾಗಿತ್ತು. ವಿಶ್ವದ ಮೊದಲ blockchain ಫೋನ್ ನ್ನು ಏನೆಂದು ಹೆಸರಿಸಲಾಗುತ್ತೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಅದಕ್ಕೆ ಉತ್ತರವಾಗಿ HTC Exodus ಬಿಡುಗಡೆಗೊಂಡಿದೆ. ಇದು ಪ್ರಮುಖ ಡಿಜಿಟಲ್ ಕರೆನ್ಸಿಗಳನ್ನು ಬೆಂಬಲಿಸುತ್ತದೆ ಉದಾಹರಣೆಗೆ Bitcoin, Ethereum ಮತ್ತು ಇತ್ಯಾದಿ

9. SikurPhone: ಬಿಲ್ಟ್ ಇನ್ ಕ್ರಿಪ್ಟೋಕರೆನ್ಸಿ ವ್ಯಾಲೆಟ್ ಹೊಂದಿರುವ ವಿಶ್ವದ ಮೊದಲ ಫೋನ್

9. SikurPhone: ಬಿಲ್ಟ್ ಇನ್ ಕ್ರಿಪ್ಟೋಕರೆನ್ಸಿ ವ್ಯಾಲೆಟ್ ಹೊಂದಿರುವ ವಿಶ್ವದ ಮೊದಲ ಫೋನ್

ಬಿಲ್ಟ್ ಇನ್ ಕ್ರಿಪ್ಟೋಕರೆನ್ಸಿ ವ್ಯಾಲೆಟ್ ಹೊಂದಿರುವ ವಿಶ್ವದ ಮೊದಲ ಫೋನನ್ನು ಬ್ರೆಝಿಲಿಯನ್ ಸಂಸ್ಥೆ SikurPhone ಬಿಡುಗಡೆಗೊಳಿಸಿದೆ. ಕಂಪೆನಿಯ GranitePhone ನ ಯಶಸ್ಸಿಗಾಗಿ ಈ ಫೋನ್ ಬಿಡುಗಡೆಗೊಂಡಿತ್ತು.

Best Mobiles in India

English summary
9 smartphones with ‘world’s first’ features launched in 2018. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X