ಟೆಲಿಕಾಂ ನಿಯಮಗಳನ್ನು ಬದಲಿಸಲು ಸಜ್ಜಾದ "ಟ್ರಾಯ್"!!...ಜಿಯೋ ಆಫರ್ 2 ಎಫೆಕ್ಟ್?

|

ಬಳಕೆಯಲ್ಲಿಲ್ಲದ ಟೆಲಿಕಾಂ ನಿಯಮಗಳು ಮತ್ತು ನಿಬಂಧನೆಗಳು ತೊಡೆದುಹಾಕಲು ಭಾರತ ಸರ್ಕಾದ ಟೆಲಿಕಾಂ ನಿಯಂತ್ರಣ ಸಂಸ್ಥೆ ಟ್ರಾಯ್ (TRAI) ನಿರ್ಧರಿಸಿದೆ. ಪ್ರಸ್ತುತ ಇರುವ ಶುಲ್ಕದ ನಿಯಮಗಳು, ಮೊಬೈಲ್ ನಂಬರ್ ವಿತರಣೆ ಮತ್ತು ಪರವಾನಗಿ ಚೌಕಟ್ಟನ್ನು ಪುನಃ ಬದಲಾವಣೆ ಮಾಡಲು "ಟ್ರಾಯ್" ಅಧಿಕಾರಿಗಳು ಮತ್ತು ದೂರಸಂಪರ್ಕ ಕಂಪನಿಗಳ ಅಧಿಕಾರಿಗಳು ಒಳಗೊಂಡ ಸಮಿತಿ ರಚನೆಯಾಗಿದೆ.

ಟ್ರಾಯ್ ಅಧ್ಯಕ್ಷ ಆರ್‌ಎಸ್‌ ಶರ್ಮಾ ಅವರು ಈ ಬಗ್ಗೆ ಮಾತನಾಡಿ, ಪ್ರಸ್ತುತ ಇರುವ ಶುಲ್ಕದ ನಿಯಮಗಳು, ಮೊಬೈಲ್ ನಂಬರ್ ವಿತರಣೆ ಮತ್ತು ಪರವಾನಗಿ ಚೌಕಟ್ಟನ್ನು ಪುನಃ ಬದಲಾವಣೆ ಮಾಡಲು "ಟ್ರಾಯ್" ಅಧಿಕಾರಿಗಳನ್ನು ಒಳಗೊಂಡ ಸಮೀತಿ ಒಪ್ಪಿಗೆ ಸೂಚಿಸಿದೆ. ಬದಲಾವಣೆ ಮಾಡಲೇಬೇಕಾದ ಟೆಲಿಕಾಂ ನಿಯಮಗಳನ್ನು ಬದಲಿಸಲು ಸಮಿತಿಯ ಅಲ್ಲರ ಅನುಮತಿ ಸಿಕ್ಕಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಟೆಲಿಕಾಂ ನಿಯಮಗಳನ್ನು ಬದಲಿಸಲು ಸಜ್ಜಾದ

ಡಿಸೆಂಬರ್‌ 31 ರಂದು ವಾಟ್ಸ್‌ಆಪ್‌ನಲ್ಲಿ ದಾಖಲೇ ನಿರ್ಮಿಸಿದ ಭಾರತೀಯರು!! ಏನದು ಗೊತ್ತಾ?

ಹೊಸ ಹೊಸ ತಂತ್ರಜ್ಞಾನಗಳು ಟೆಲಿಕಾಂ ಮಾರುಕಟ್ಟೆಗೆ ಬರುತ್ತಿದ್ದು, ನಾವು ಹಳೆಯ ನಿಯಮಗಳನ್ನು ಹೆಚ್ಚು ದಿನಗಳ ಕಾಲ ಪಾಲಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಪ್ರಸ್ತುತ ವರ್ಷದಲ್ಲಿ ಟೆಲಿಕಾಂನ ಬಹು ನಿಯಮಗಳನ್ನು ಬದಲಾಯಿಸುತ್ತಿದ್ದೇವೆ , ಈ ಬಗ್ಗೆ ಟೆಲಿಕಾಂ ಕಂಪೆನಿಗಳ ಅಧಿಕಾರಿಗಳು ಸಹ ಸಹಮತ ವ್ಯಕ್ತಪಡಿಸದ್ದಾರೆ ಎಂದು ಅವರು ತಿಳಿಸಿದರು.

ಟೆಲಿಕಾಂ ನಿಯಮಗಳನ್ನು ಬದಲಿಸಲು ಸಜ್ಜಾದ

ಇನ್ನು ಟ್ರಾಯ್ ತನ್ನ ನಿಯಮಗಳನ್ನು ಬದಲಿಸುತ್ತಿರುವ ಉದ್ದೇಶ ಹಲವು ಸಂಶಯಗಳನ್ನು ಮೂಡಿಸಿದ್ದು, ಜಿಯೋ ನೀಡಲಿಚ್ಚಿರುವ ವೆಲ್‌ಕಮ್ ಆಫರ್ 2 ಗೆ ಯಾವುದೇ ತೊಂದರೆ ಆಗಬಾರದು ಎನ್ನುವ ಹಾಗಿದೆ. ಟ್ರಾಯ್‌ನ ಟೆಲಿಕಾಂ ನಿಬಂಧನೆಗಳಗಳ ಪ್ರಕಾರ ಯಾವುದೇ ಟೆಲಿಕಾಂ 90 ದಿವಸಗಳಿಗಿಂತ ಹೆಚ್ಚು ಉಚಿತ ಸೇವೆ ನೀಡುವ ಹಾಗಿಲ್ಲ ಎಂಬುದಾಗಿತ್ತು, ಆದರೆ ಜಿಯೋ 90 ದಿನಗಳ ನಂತರವೂ ಉಚಿತ ಸೇವೆ ಮುಂದುವರಿಸುವುದಾಗಿ ತಿಳಿಸಿದೆ.

ಟೆಲಿಕಾಂ ನಿಯಮಗಳನ್ನು ಬದಲಿಸಲು ಸಜ್ಜಾದ

ಇನ್ನು ಜಿಯೋ ತನ್ನ ಉಚಿತ ಸೇವೆಯನ್ನು ಮುಂದುವರೆಸಿದ್ದಕ್ಕೆ, ಏರ್‌ಟೆಲ್ ಕಂಪೆನಿ "ಟ್ರಾಯ್‌" ಮೇಲೆ ಪ್ರಕರಣ ದಾಖಲಿಸಿತ್ತು. ಈ ಎಲ್ಲಾ ಅಂಶಗಳನ್ನು ಕೂಲಂಕುಶವಾಗಿ ಗಮನಿಸಿದರೆ ಜಿಯೋಗೆ ಸಹಾಯ ನೀಡಲು ಟ್ರಾಯ್ ತನ್ನ ನಿಯಮಗಳನ್ನು ಬದಲಿಸುತಿರಬಹುದದೇ ಎನ್ನುವ ಪ್ರಶ್ನೆ ಮೂಡುತ್ತದೆ.

Best Mobiles in India

English summary
A proposal was also made to put in place a framework to avoid the crunch in mobile numbers that is currently being faced by the Centre. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X