ರೂ. 1,649ಕ್ಕೆ 4G ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ ಏರ್‌ಟೆಲ್: ಜಿಯೋ ಫೋನ್ ಕೇಳುವವರಿಲ್ಲ...!

|

ಭಾರ್ತಿ ಏರ್‌ಟೆಲ್ ಜಿಯೋ ವಿರುದ್ಧ ಜಿದ್ದಿಗೆ ಬಿದ್ದು, ಜಿಯೋ ಫೋನ್ ವಿರುದ್ಧವಾಗಿ ಈಗಾಗಲೇ ಎರಡು ಮೂರು ಸ್ಮಾರ್ಟ್‌ಫೋನ್‌ ಗಳನ್ನು ಅತೀ ಕಡಿಮೆ ಬೆಲೆಗೆ ನೀಡಿದ್ದ ಮಾದರಿಯಲ್ಲಿ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಇನ್‌ಟೆಕ್ಸ್‌ ನೊಂದಿಗೆ ಕೈ ಜೋಡಿಸಿ ಮಾರುಕಟ್ಟೆಯಲ್ಲೇ ಅತೀ ಕಡಿಮೆ ಬೆಲೆಗೆ 4G ಸಪೋರ್ಟ್ ಮಾಡುವ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ.

ರೂ. 1,649ಕ್ಕೆ 4G ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ ಏರ್‌ಟೆಲ್

ಓದಿರಿ: ಬಜೆಟ್‌ನಲ್ಲಿ ಬೊಂಬಾಟ್ ಆಪರ್ ಕೊಟ್ಟ BSNL: ಜಿಯೋಗೂ ಸೆಡ್ಡು

ಈಗಾಗಲೇ ಏರ್‌ಟೆಲ್ ಮತ್ತು ಇಂಟೆಕ್ಸ್ ಒಪ್ಪಂದಕ್ಕೆ ಮುಂದಾಗಿದ್ದು, ಈ ಮೂಲಕ ಏರ್‌ಟೆಲ್‌ ಮಾರುಕಟ್ಟೆಗೆ ಮತ್ತೊಂದು ಅತೀ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದ್ದು, ಈ ಮೂಲಕ ಮತ್ತಷ್ಟು ಮಾರುಕಟ್ಟೆ ವೃದ್ಧಿಗೆ ಪ್ಲಾನ್‌ ಮಾಡಿದೆ. ಜಿಯೋ ಫೋನ್ ಕೊಳ್ಳುವವರನ್ನು ಸೆಳೆಯಲು ಈ ಮಾದರಿಯ ಪ್ರಯತ್ನಕ್ಕೆ ಕೈ ಹಾಕಿದೆ.

ರೂ.1649ಕ್ಕೆ ಸ್ಮಾರ್ಟ್‌ಫೋನ್:

ರೂ.1649ಕ್ಕೆ ಸ್ಮಾರ್ಟ್‌ಫೋನ್:

ಏರ್‌ಟೆಲ್-ಇಂಟೆಕ್ಸ್‌ನೊಂದಿಗೆ ಒಪ್ಪಂದವನ್ನು ಮಾಡಿಕೊಂಡು ರೂ. 1649ಕ್ಕೆ ಇಂಟೆಕ್ಸ್‌ ಆಕ್ವಾ ಲಯನ್ಸ್ N1 ಸ್ಮಾರ್ಟ್‌ಫೋನ್‌ ಅನ್ನು ಮಾರಾಟ ಮಾಡುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಇಂಟೆಕ್ಸ್‌ ಆಕ್ವಾ ಲಯನ್ಸ್ N1 ರೂ3799ಕ್ಕೆ ಮಾರಾಟವಾಗುತ್ತಿತ್ತು,

ಏರ್‌ಟೆಲ್ ಮಂತ್ಲಿ ಪ್ಯಾಕ್:

ಏರ್‌ಟೆಲ್ ಮಂತ್ಲಿ ಪ್ಯಾಕ್:

ಇಂಟೆಕ್ಸ್‌ ಆಕ್ವಾ ಲಯನ್ಸ್ N1 ಸ್ಮಾರ್ಟ್‌ಫೋನ್‌ ನೊಂದಿಗೆ ಏರ್‌ಟೆಲ್ ಕ್ಯಾಷ್ ಬ್ಯಾಕ್ ಆಫರ್ ನೀಡಲಿದ್ದು, ಇದಕ್ಕಾಗಿ ರೂ. 169 ಮಾಸಿಕ ರಿಚಾರ್ಜ್ ಮಾಡಿಸಿಕೊಳ್ಳಬೇಕಾಗಿದೆ. ಇದರಲ್ಲಿ ಗ್ರಾಹಕರಿಗೆ ಡೇಟಾ ಮತ್ತು ಕರೆಯ ಲಾಭಗಳು ದೊರೆಯಲಿದೆ.

ಕ್ಯಾಷ್ ಬ್ಯಾಕ್:

ಕ್ಯಾಷ್ ಬ್ಯಾಕ್:

ಹೀಗೆ ಮಾಡಿಸಿದಲ್ಲಿ 18 ತಿಂಗಳ ರಿಚಾರ್ಜ್ ನಂತರ 500 ಕ್ಯಾಷ್ ಬ್ಯಾಕ್ ದೊರೆಯಲಿದೆ. ಇದಾದ ನಂತರದಲ್ಲಿ 36 ತಿಂಗಳು ಕಂಪ್ಲಿಟ್ ಆದ ನಂತರ ಮತ್ತೆ ರೂ.1000 ಕ್ಯಾಷ್ ಬ್ಯಾಕ್ ದೊರೆಯಲಿದೆ. ಒಟ್ಟು ರೂ.1500 ಕ್ಯಾಷ್ ಬ್ಯಾಕ್ ಲಭ್ಯವಿರಲಿದೆ.

ಜಿಯೋಗೆ ಸೆಡ್ಡು:

ಜಿಯೋಗೆ ಸೆಡ್ಡು:

ಜಿಯೋ ಇದೇ ಮಾದರಿಯಲ್ಲಿ ಗ್ರಾಹಕರಿಗೆ ಉಚಿತ ಫೋನ್‌ ನೀಡುತ್ತಿದೆ. ಆದರೆ ಏರ್‌ಟೆಲ್ ಜಿಯೋ ಫೋನ್‌ಗಿಂತಲೂ ಹೆಚ್ಚಿನ ಆಯ್ಕೆಗಳನ್ನು ಒಳಗೊಂಡಿರುವ ಸ್ಮಾರ್ಟ್‌ಫೋನ್‌ ಅನ್ನೇ ನೀಡುವ ಮೂಲಕ ಹೊಸದೊಂದು ಸಾಹಸ ಮಾಡಲು ಮುಂದಾಗಿದೆ.

Best Mobiles in India

English summary
Airtel joins hands with Intex to launch affordable 4G smartphones. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X