ಗೇಮಿಂಗ್‌ಗೆ ಇರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು..!

By GizBot Bureau
|

ನೀವು ಮೊಬೈಲ್ ಹಿಡಿದು ಯಾವಾಗಲೂ ಆಟವಾಡುತ್ತಲೇ ಇರುತ್ತೀರಾ.ಈಗಿನ ತಂತ್ರಜ್ಞಾನದ ಆಟಗಳನ್ನು ಆಡಲು ನಿಮ್ಮ ಮೊಬೈಲ್ ಸಮರ್ಥವಾಗಿಲ್ಲವಾ? ಅದೇ ಕಾರಣಕ್ಕೆ ಹೊಸ ಫೋನ್ ಖರೀದಿಸಬೇಕು ಎಂದುಕೊಂಡಿದ್ದೀರಾ? ಒಂದು ವೇಳೆ ಅಂತ ಆಲೋಚನೆ ನಿಮ್ಮಲ್ಲಿದ್ದರೆ ಹೊಸ ಫೋನ್ ಖರೀದಿಸುವ ಮುನ್ನ ಈ ಲೇಖನದ ಮೇಲೊಮ್ಮೆ ಒದುವುದನ್ನು ಮರೆಯಬೇಡಿ.

ಗೇಮಿಂಗ್‌ಗೆ ಇರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು..!

ಮೆಮೊರಿ ಮತ್ತು ಪ್ರೊಸೆಸರ್ ಗಳ ವಿಚಾರದಲ್ಲಿ ವರ್ಷದಿಂದ ವರ್ಷಕ್ಕೆ ಸ್ಮಾರ್ಟ್ ಫೋನ್ ಗಳು ಅಭಿವೃದ್ಧಿ ಹೊಂದುತ್ತಲೇ ಇದೆ. ಇತ್ತೀಚೆಗಿನ ಮೊಬೈಲ್ ನಗಳು ಗ್ರಾಫಿಕ್ ನಲ್ಲಿ ಅಧ್ಬುತವಾಗಿರುವ ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಆಟಗಳನ್ನು ಆಡುವುದಕ್ಕೆ ಸಹಕಾರ ನೀಡುತ್ತವೆ. ಹೊಸ ಜನರೇಷನ್ನಿನ ಸ್ಪೆಷಲೈಸ್ಟ್ ಫೋನ್ ಗಳು ಗೇಮ್ ಗಳಿಗೆ ಹೇಳಿ ಮಾಡಿಸಿರುವಂತೆಯೇ ರೂಪಗೊಂಡು ಹೊರಬರುವುದಿದೆ. ಹಾಗಾದ್ರೆ 2018 ರಲ್ಲಿ ಯಾವೆಲ್ಲ ಹೊಸ ಫೋನ್ ಗಳು ಗೇಮಿಂಗ್ ಗೆ ಅತ್ಯದ್ಭುತವಾಗಿವೆ ಎಂಬ ಬಗ್ಗೆ ನಾವೊಂದು ಪಟ್ಟಿ ತಯಾರಿಸಿದ್ದೇವೆ. ಆ ಪಟ್ಟಿ ಇಲ್ಲಿದೆ. ನೀವೂ ಒಮ್ಮೆ ಕಣ್ಣಾಡಿಸಿ.

ರೇಝರ್ ಫೋನ್:ದೊಡ್ಡದು, ಜೋರಾಗಿ ಕೇಳುತ್ತದೆ ಮತ್ತು ಮೃದುತ್ವ

ರೇಝರ್ ಫೋನ್:ದೊಡ್ಡದು, ಜೋರಾಗಿ ಕೇಳುತ್ತದೆ ಮತ್ತು ಮೃದುತ್ವ

ಶ್ರೇಷ್ಠ ಗೇಮಿಂಗ್ ಬಿಡಿಭಾಗಧಳು ಮತ್ತು ಗೇಮಿಂಗ್ ಲ್ಯಾಪ್ ಟಾಪ್ ಗಳನ್ನು ತಯಾರಿಸುವುದಕ್ಕೆ ಹೆಚ್ಚು ಪ್ರಸಿದ್ಧಿ ಪಡೆದ ರೇಝರ್ ಕಂಪೆನಿ ಮೊಬೈಲ್ ಫೋನ್ ಗಳನ್ನು ಬಿಡುಗಡೆಗೊಳಿಸಿದಾಗ ಗ್ರಾಹಕರನ್ನು ನಿರಾಸೆ ಮಾಡಲಿಲ್ಲ. ಗೇಮಿಂಗ್ ಗಾಗಿಯೇ ತಮ್ಮ ಕಂಪೆನಿ ಯಾವಾಗಲೂ ಕೆಲಸ ಮಾಡುತ್ತದೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಹೌದು ಗೇಮರ್ ಗಳಿಗಾಗಿಯೇ ಅತ್ಯದ್ಭುತವಾಗಿರುವ ಮೊಬೈಲ್ ಫೋನ್ ಗಳನ್ನು ಬಿಡುಗಡೆಗೊಳಿಸಿದೆ.

ರೇಝರ್ ಫೋನ್ ಗಳು 8ಜಿಬಿ ಮೆಮೊರಿ ಮತ್ತು 64 ಜಿಬಿ ಸ್ಟೋರೇಜ್ ಅವಕಾಶದೊಂದಿಗೆ ಬರುತ್ತದೆ ಮತ್ತು ಅದರಲ್ಲಿ ಸ್ನ್ಯಾಪ್ ಡ್ರ್ಯಾಗನ್ 835 ಚಿಪ್ ಸೆಟ್ ಇರುತ್ತದೆ.ಅತ್ಯುದ್ಭುತವಾಗಿ ಕೇಳುವಿಕೆಗಾಗಿ ಫೋನಿನ ಬದಿಯಲ್ಲಿ ಸ್ಪೀಕರ್ ಗಳಿದ್ದು ಎರಡೂ ಕೂಡ ಸೂಪರ್ ಸೌಂಡ್ ಎಫೆಕ್ಟ್ ನೀಡುತ್ತದೆ.ಇದರ ಡಿಸ್ಪ್ಲೇ 5.7 ಇಂಚಿನದ್ದಾಗಿದ್ದು 120Hz ರಿಫ್ರೆಶ್ ರೇಟ್ ಹೊಂದಿದೆ. ಹೆಚ್ಚು ಬೇಡಿಕೆ ಇರುವ ಆಟಗಳಲ್ಲಿ ಈ ರಿಫ್ರೆಶ್ ರೇಟನ್ನು ಜಿಪಿಯುಗೆ ಸಿಂಕ್ ಮಾಡಬಹುದು ಮತ್ತು ಆ ಮೂಲಕ ಅತ್ಯಂತ ಮೃದುವಾದ ಮತ್ತು ಆಟವು ವಿಳಂಬವಾಗದಂತೆ ನೋಡಿಕೊಳ್ಳಬಹುದು.

ರೇಝರ್ ಫೋನ್ ನಿಂದ ಅತ್ಯುತ್ತಮ ಗೇಮಿಂಗ್ ಅನುಭವ ಸಿಗುತ್ತಾ?

ರೇಝರ್ ಫೋನ್ ನಿಂದ ಅತ್ಯುತ್ತಮ ಗೇಮಿಂಗ್ ಅನುಭವ ಸಿಗುತ್ತಾ?

ಹೌದು, ರೇಝರ್ ಫೋನ್ ನಲ್ಲಿ ಹಲವಾರು ಗೇಮಿಂಗ್ ಗೆ ಸಂಬಂಧಿಸಿದ ಸೆಟ್ಟಿಂಗ್ ಗಳನ್ನು ಮಾಡಿಕೊಳ್ಳಬಹುದು ಉದಾಹರಣೆಗೆ ರೆಸಲ್ಯೂಷನ್, ಫ್ರೇಮ್ ರೇಟ್, ಪ್ರೊಸೆಸ್ಸಿಂಗ್ ಪವರ್ ಇತ್ಯಾದಿ.ಒಂದು ವೇಳೆ ನೀವು ಹಲವಾರು ಗೇಮ್ ಗಳನ್ನು ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿ ಆಡುವವರಾದರೆ, ಈ ಫೋನ್ ಅವುಗಳನ್ನು ಸಲೀಸಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದೆ.

ಐಫೋನ್ X

ಐಫೋನ್ X

ಐಫೋನ್ ಗಳು ನಿಖರವಾಗಿ ಮಾರ್ಕೆಟಿಂಗ್ ನಲ್ಲಿ ಅಥವಾ ನೋಟದಲ್ಲಿ ಗೇಮರ್ ಗಳನ್ನು ಆಕರ್ಷಣೆ ಮಾಡುವುದಿಲ್ಲ. ಆದರೆ ನಿಜಕ್ಕೂ ಹೇಳಬೇಕೆಂದರೆ ಐಫೋನ್ ಗಳಿಂದ ಗೇಮ್ ಗಳಿಗೆ ಹಲವು ಲಾಭಗಳಿದೆ. ಐಓಎಸ್ ನಲ್ಲಿ ಆಪಲ್ ಗೇಮ್ ಡೆವಲಪ್ ಗಳಿಗೆ ಸುಲಭವಾಗುವಂತಹ ವ್ಯವಸ್ಥೆಯನ್ನು ಮಾಡಿರುತ್ತಾರೆ. ಇದು ಆಡ್ರಾಂಯ್ಡ್ ಗಿಂತ ಹೆಚ್ಚು ಸುರಕ್ಷಿತವಾಗಿರುತ್ತದೆ ಮತ್ತು ಡೆವಲಪ್ ಗಳಿಗೆ ಗೇಮಿಂಗ್ ಡೆವಲಪ್ ಮೆಂಟ್ ಗೆ ಸಹಾಯ ಮಾಡುತ್ತದೆ. ಇದು ವಿವಿಧ ಹಾರ್ಡ್ ವೇರ್ ಗಳ ಸಂರಚನೆ ಮತ್ತು ಇತರೆ ಕೆಲವು ಸಮಸ್ಯೆಗಳನ್ನು ಎದುರಿಸುತ್ತದೆ.

ಇದರ ಫಲಿತಾಂಶ ಏನು ಗೊತ್ತಾ? ಗೇಮ್ ಗಳು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಕಾಣಿಸಿಕೊಳ್ಳುವ ಮುನ್ನವೇ ಆಪ್ ಸ್ಟೋರ್ ನಲ್ಲಿ ಬಂದಿರುತ್ತದೆ ಮತ್ತು ಗೇಮ್ ಗಳ ಬಗ್ಗೆ ಚರ್ಚೆ ಆರಂಭವಾಗುತ್ತದೆ. ಆಂಡ್ರಾಯ್ಡ್ ಗೇಮರ್ ಗಳು ಕಾಯುತ್ತಿರುವಾಗಲೇ ಐಫೋನ್ ಬಳಕೆದಾರರು ಆ ಗೇಮನ್ನು ತಿಂಗಳಾನುಗಟ್ಟಲೆಯಿಂದ ಆಡಲು ಪ್ರಾರಂಭಿಸಿ ಪಾರಂಗತರಾಗಿರುತ್ತಾರೆ.

ಶಿಯೋಮಿ ಬ್ಲಾಕ್ ಶಾರ್ಕ್

ಶಿಯೋಮಿ ಬ್ಲಾಕ್ ಶಾರ್ಕ್

ಶಿಯೋಮಿ ಬ್ಲಾಕ್ ಶಾರ್ಕ್ ಗೇಮಿಂಗ್ ಗೆ ಫೋಕಸ್ ಮಾಡಿರುವ ಫೋನ್ ಆಗಿದ್ದು ಕಪ್ಪು ಬಣ್ಣದ ಹೊಳೆಯುವ ಮೇಲ್ಮೈ ಮತ್ತು ಅಗ್ರೆಸ್ಸಿವ್ ಆಂಗುಲರ್ ಲುಕ್ ಹೊಂದಿದೆ. ಶಾರ್ಕ್ ನ ಒಳಗೆ ತಾಕತ್ತು ಹೊಂದಿರುವ ಅನೇಕ ಹಾರ್ಡ್ ವೇರ್ ಗಳಿದ್ದು, ಅವುಗಳು ಹೊಸ ಹೊಸ ತಂತ್ರಜ್ಞಾನಗಳನ್ನು ಒಳಗೊಂಡ ಗೇಮಿಂಗ್ ಗೆ ಸಹಕಾರ ನೀಡುತ್ತದೆ. ಆಕ್ಟಾಕೋರ್ ಸಿಪಿಯು, 8 ಜಿಬಿ ಮೆಮೊರಿ ಮತ್ತು ಅಡ್ರೆನೋ 630 ಜಿಪಿಯು ಹೊಂದಿದೆ.
ಅಷ್ಟೇ ಅಲ್ಲ, ನೈಸರ್ಗಿಕ ಕೂಲಿಂಗ್ ಸಿಸ್ಟಮ್ ಕೂಡ ಇದರೊಳಗಿದೆ. ಇನ್ನೊಂದು ಗಮನಾರ್ಹ ವೈಶಿಷ್ಟ್ಯವೆಂದರೆ ಶಾರ್ಕ್ ಬಟನ್. ಇದನ್ನು ನೀವು ಒತ್ತಿದ್ದರೆ ಈ ಫೋನ್ ಗರಿಷ್ಟ ಕಾರ್ಯನಿರ್ವಹಣೆಯನ್ನು ಮಾಡುತ್ತದೆ ಮತ್ತು ಲ್ಯಾಂಡ್ ಸ್ಕೇಪ್ ಮೋಡ್ ನಲ್ಲಿ ಗೇಮಿಂಗ್ ವಾತಾವರಣವನ್ನು ಸೃಷ್ಟಿಮಾಡುತ್ತದೆ.ಆ ಮೂಲಕ ನಿಮ್ಮ ಗೇಮ್ ಮೇಲೆ ಹಿಡಿತ ಸಾಧಿಸಲು ನಿಮಗೆ ನೆರವು ನೀಡುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9/ಎಸ್9+: 

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9/ಎಸ್9+: 

ಗ್ಯಾಲಕ್ಸಿ ಎಸ್ 9 ಒಂದು ಶಕ್ತಿಯುತ ಮೊಬೈಲ್ ಆಗಿದ್ದು, ಎಸ್ 9+ ಗೇಮ್ ಇಷ್ಟಪಡುವವರಿಗೆ ಹೇಳಿ ಮಾಡಿಸಿದ ಮೊಬೈಲ್ ಗಳಲ್ಲಿ ಒಂದಾಗಿದೆ. ಸ್ಯಾಮ್ ಸಂಗ್ ನ ಗೇಮಿಂಗ್ ಮೋಡ್, ಗೇಮ್ ಲಾಂಚರ್ ಮತ್ತು ಗೇಮ್ ಪರಿಕರಗಳಿದ್ದು, ಇವು ಸ್ಯಾಮ್ ಸಂಗ್ ಮೊಬೈಲ್ ಗೇಮರ್ ಗಳಿಗಾಗಿ ವಿಶೇಷ ಕಾಳಜಿ ತೆಗೆದುಕೊಳ್ಳುತ್ತದೆ ಎಂಬುದನ್ನು ಸಾಬೀತು ಪಡಿಸುತ್ತದೆ.

ಗೇಮ್ ಲಾಂಚರ್ ಎಲ್ಲಾ ಗೇಮ್ ಗಳಿಗೆ ಹೋಮ್ ಆಗಿರುತ್ತದೆ ಮತ್ತು ಗೇಮ್ ಟೂಲ್ಸ್ ಗಳು ಸ್ಕ್ರೀನ್ ಮೋಡ್ ನ್ನು ಗೇಮ್ ಗೆ ತಕ್ಕಂತೆ ಬದಲಾಯಿಸಿಕೊಳ್ಳಲು ಅವಕಾಶ ನೀಡುತ್ತದೆ. ಆಕರ್ಷಣೀಯವಾದ ಹಾರ್ಡ್ ವೇರ್ ಗಳು ಬಳಕೆದಾರರಿಗೆ ಮೃದುವಾದ ಮತ್ತು ಅತ್ಯುದ್ಭುತವಾದ ಗೇಮಿಂಗ್ ಅನುಭವ ನೀಡಲು ಇದು ಕಾರಣವಾಗುತ್ತದೆ.

ಬಾಗಿದ, 5.8-ಇಂಚಿನ AMOLED ಇನ್ಫಿನಿಟಿ ಡಿಸ್ಪ್ಲೇ ಗ್ಯಾಲಕ್ಸಿ ಎಸ್ 9 ನಲ್ಲಿದೆ (6.2ಇಂಚಿನ ಡಿಸ್ಪ್ಲೇ ಗ್ಯಾಲಕ್ಸಿ S9+ಒಳಗೊಂಡಿದೆ) ಜೊತೆಗೆ 18.5:9 ಅನುಪಾತವಿದ್ದು 1,440 x 2,960 ರೆಸಲ್ಯೂಷನ್ ಇರುವ ಉತ್ತಮ ವಿಷುವಲ್ ಅನುಭವವನ್ನು ನೀಡಲು ಇದು ನೆರವಾಗುತ್ತದೆ. 3,000 mAh ಬ್ಯಾಟರಿಯನ್ನು ಇದು ಒಳಗೊಂಡಿದೆ. ಗ್ಯಾಲಕ್ಸಿ ಎಸ್ 8 ವೈಶಿಷ್ಟ್ಯತೆಗಳಳಲ್ಲಿ ಸ್ಮ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ ಜೊತೆಗೆ Adreno 630 ಜಿಪಿಯು ಮತ್ತು 4ಜಿಬಿ ಮೆಮೊರಿ ಇದೆ. (6GB ಮೆಮೊರಿ S9+ ರಲ್ಲಿ ಇದೆ).

ಸ್ಯಾಮ್ ಸಂಗ್ ಆಯ್ಕೆ ಮಾಡಿಕೊಂಡಾಗ ವಿಆರ್ ಮೊಬೈಲ್ ಗೇಮ್ಸ್ ನಲ್ಲಿನ ಫ್ಯಾನ್ಸ್ ಗಳು ವಿಶೇಷವಾದ ಹೆಚ್ಚಿನ ಲಾಭಗಳನ್ನು ನೀಡುತ್ತದೆ ಎಂಬುದನ್ನು ತಿಳಿಸಲೇಬೇಕು.

ಒನ್ ಪ್ಲಸ್6: ಇದು ಹೆಚ್ಚು ಮೆಮೊರಿಯಿಂದ ಕೂಡಿದೆ 

ಒನ್ ಪ್ಲಸ್6: ಇದು ಹೆಚ್ಚು ಮೆಮೊರಿಯಿಂದ ಕೂಡಿದೆ 

ಒನ್ ಪ್ಲಸ್ 6 ನ್ನು ಪರಿಗಣಿಸಿದಾಗ ಗೇಮಿಂಗ್ ಗಾಗಿಯೇ ಎಂದು ಯಾವುದೇ ವೈಶಿಷ್ಟ್ಯತೆಗಳಿಲ್ಲದೇ ಇದ್ದರೂ ಇದರ ಒಟ್ಟಾರೆ ಫೋನಿನ ಎಲ್ಲಾ ವೈವಿಧ್ಯತೆಗಳು ಗೇಮಿಂಗ್ ಗೆ ಸಹಕಾರ ನೀಡುತ್ತದೆ. ಪ್ರಮುಖವಾಗಿ 6 ರಿಂದ 8 ಜಿಬಿ ಮೆಮೊರಿ. ಇದು ಗೇಮಿಂಗ್ ಮೋಡ್ ನಿಂದ ಉತ್ತಮ ಪ್ರದರ್ಶನಕ್ಕೆ ಸಹಕಾರ ನೀಡುತ್ತದೆ ಮತ್ತು ಇದು ಕೀಲಿಗಳು ಮತ್ತು ನೋಟಿಫಿಕೇಷನ್ ಗಳ ಆಕಷ್ಮಿಕ ಪ್ರೆಸ್ ಗಳನ್ನು ತಡೆಯುತ್ತದೆ.
ಇನ್ ಕಮ್ಮಿಂಗ್ ಕರೆಗಳನ್ನು ಸ್ಪೀಕರ್ ಗೆ ಅಟೋಮ್ಯಾಟಿಕ್ ಆಗಿ ಬರುವಂತೆ ಮಾಡುತ್ತದೆ. ಬ್ಯಾಟರಿಯನ್ನು ಹೆಚ್ಚು ತಿನ್ನುವುದಿಲ್ಲ ಮತ್ತು ಆಟ ಆಡುವಾಗ ಇತರೆ ಯಾವುದೇ ತೊಂದರೆಗಳು ಬರದಂತೆ ತಡೆಯುವ ಹಲವಾರು ವೈಶಿಷ್ಟ್ಯತೆಗಳು ಇದರಲ್ಲಿದೆ. 6.3 ಇಂಚಿನ ಫುಲ್ ಹೆಚ್ ಡಿ ಡಿಸ್ಪ್ಲೇ ಮತ್ತು 3,300 ಮೆಗಾ ಹರ್ಟ್ಸ್ ನ ಬ್ಯಾಟರಿ ಉತ್ತಮ ಗೇಮ್ ಗೆ ನೆರವು ನೀಡುತ್ತದೆ.

ಮೋಟೋ ಗೇಮ್ ಪ್ಯಾಡ್: ಕಡಿಮೆ ಬೆಜೆಟ್ ನಲ್ಲಿ ಮೋಟೋ z2 ಪ್ಲೇ 

ಮೋಟೋ ಗೇಮ್ ಪ್ಯಾಡ್: ಕಡಿಮೆ ಬೆಜೆಟ್ ನಲ್ಲಿ ಮೋಟೋ z2 ಪ್ಲೇ 

ಮೋಟೋ ಗೇಮ್ ಪ್ಯಾಡ್ ಯಾವುದೇ ಮೋಟೋ ಝಡ್ ಫ್ಯಾಮಿಲಿಯ ಸ್ಮಾರ್ಟ್ ಫೋನ್ ಗೆ ಹೊಂದಿಕೊಂಡಿರುತ್ತದೆ ಮತ್ತು ಇದು ಎರಡು ಕಂಟ್ರೋಲ್ ಸ್ಟಿಕ್ ಗಳನ್ನು ಒದಗಿಸುತ್ತದೆ, ಒಂದು ಡಿ-ಪ್ಯಾಡ್ ಮತ್ತೊಂದು ನಾಲ್ಕು ಸ್ಪರ್ಶ ಕ್ರಮ ಬಟನ್ ಗಳನ್ನು ಒದಗಿಸುತ್ತದೆ.ಇದು ನಿಂಟೆಂಡೋ ಸ್ವಿಚ್ ನ್ನು ಹೋಲಿಕೆ ಮಾಡುವಂತಿದೆ. ಮೋಡ್ ನೇರವಾಗಿ ಡಿವೈಸ್ ಗೆ ಅಟ್ಯಾಚ್ ಆಗಿರುವುದರಿಂದಾಗಿ ವಯರ್ ಲೆಸ್ ಕನೆಕ್ಷನ್ ನಲ್ಲಿ ಯಾವುದೇ ಸಮಸ್ಯೆಯಾಗುವ ಸಾಧ್ಯತೆ ಇಲ್ಲ.

ಸುಮಾರು 8 ಘಂಟೆಗಳ ಕಾಲ ಆಟವಾಡಬಹುದು ಎಂದು ಹೇಳುತ್ತದೆ ಮೋಟೋರೋಲಾ.ಯಾಕೆಂದರೆ ಇದರಲ್ಲಿ 1035 mAh ನ ಬ್ಯಾಟರಿ ಸೌಲಭ್ಯವಿರುತ್ತದೆ. ಒಂದು ವೇಳೆ ನೀವು ಉತ್ತಮ ಗೇಮಿಂಗ್ ಅನುಭವ ಪಡೆಯಬೇಕು ಎಂದು ಬಯಸುತ್ತಿದ್ದೀರಾದರೆ, ಮೋಟೋ ಝಡ್ ಡಿವೈಸ್ ಗಳಾದ ಮೋಟೋ ಝಡ್2 ಫೋರ್ಸ್ ಅಥವಾ ಮೋಟೋ ಝಡ್ 2 ಪ್ಲೇಯನ್ನು ಬಜೆಟ್ ನಲ್ಲಿ ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ.

ಸೋನಿ ರಿಮೋಟ್ ಪ್ಲೇ:ಪಿಎಸ್4 ನ್ನು ಎಕ್ಸ್ ಪೀರಿಯಾ ಫೋನ್ ನಿಂದ ಆಡಿ

ಸೋನಿ ರಿಮೋಟ್ ಪ್ಲೇ:ಪಿಎಸ್4 ನ್ನು ಎಕ್ಸ್ ಪೀರಿಯಾ ಫೋನ್ ನಿಂದ ಆಡಿ

ನೀವು ಪ್ಲೇ ಸ್ಟೇಷನ್ 4 ರ ಮಾಲೀಕರಾಗಿದ್ದರೆ, ಖಂಡಿತ ಎಕ್ಸ್ ಪೀರಿಯಾ 4 ಮೂಲಕ ನೀವು ಆಟಬಹುದು ಮತ್ತು ಸೋನಿ ರಿಮೋಟ್ ಪ್ಲೇ ಗೆ ಧನ್ಯವಾದ ಹೇಳಬಹುದು.ಇದು ನಿಮಗೆ ನಿಮ್ಮ ಮನೆಯ ವೈ-ಫೈ ಕನೆಕ್ಷನ್ ನ್ನು ಬಳಸಲು ಫೋನ್ ಅಥವಾ ಟ್ಯಾಬ್ಲೆಟ್ ನಲ್ಲಿ ಅವಕಾಶ ನೀಡುತ್ತದೆ ಮತ್ತು ಡುಯಲ್ಶಾಕ್ 4 ಕಂಟ್ರೋಲರ್ ಮೂಲಕ ಕನೆಕ್ಟ್ ಆಗಿ ಆಡಲು ಅವಕಾಶ ನೀಡುತ್ತದೆ. ಇದರಲ್ಲಿ ಗೇಮ್ ಕಂಟ್ರೋಲ್ ಮೌಂಟ್ ನ್ನು ಫೋನಿನ ಮೇಲ್ಬಾಗದಲ್ಲಿ ಅಟ್ಯಾಚ್ ಮಾಡಲಾಗಿರುತ್ತದೆ. ಹೊಸ ಎಕ್ಸ್ ಪೀರಿಯಾ ಡಿವೈಸ್ ಎಕ್ಸ್ ಪೀರಿಯಾ ಎಕ್ಸ್ ಝಡ್2, 5.7 ಇಂಚಿನ ಡಿಸ್ಪ್ಲೇ ಹೊಂದಿದೆ ಮತ್ತು ಸ್ನ್ಯಾಪ್ ಡ್ರ್ಯಾಗನ್ 845 ಚಿಪ್ ಸೆಟ್ ಮತ್ತು 4ಜಿಬಿ ಮೆಮೊರಿಯನ್ನು ಒಳಗೊಂಡಿದೆ.

ಇದಿಷ್ಟೇ ಅಲ್ಲದೆ, ಇನ್ನೂ ಹಲವಾರು ಗೇಮಿಂಗ್ ಫೋನ್ ಗಳಿವೆ ಮತ್ತು ಸದ್ಯದಲ್ಲೇ ಹೊರಬರುವ ನಿರೀಕ್ಷೆಯೂ ಇದೆ. ಉದಾಹರಣೆಗೆ ಆಸೂಸ್ ಆರ್ ಓಜಿ ಫೋನ್ ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ. ಸದ್ಯ ನೀವು ಗ್ರಾಫಿಕಲಿ ಅಧ್ಬುತವಾಗಿರುವ ಫೋನ್ ಬಳಕೆ ಮಾಡುತ್ತಿಲ್ಲವಾದರೆ, ಮಧ್ಯಮ ರೇಂಜಿನ ಹಲವಾರು ಫೋನ್ ಗಳೂ ಕೂಡ ಫ್ಲೇ ಸ್ಟೋರ್ ನ ಗೇಮ್ ಗಳನ್ನು ಆಡಲು ಸಮರ್ಥವಾಗಿದೆ.

Best Mobiles in India

English summary
Best phones for mobile gaming in 2018: power in your hands. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X