ಪಿಎನ್ ಜಿ ಇಮೇಜ್ ಫೈಲ್ ವೊಂದು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನ್ನೇ ಹ್ಯಾಕ್ ಮಾಡುತ್ತದೆ!

By Gizbot Bureau
|

ನಮಗೆಲ್ಲ ತಿಳಿದಿರುವಂತೆ ಮೌಂಟೇನ್ ವ್ಯೂ ಕಂಪೆನಿ ಪ್ರತಿ ತಿಂಗಳು ಸೆಕ್ಯುರಿಟಿ ಅಪ್ ಡೇಟ್ ನ್ನು ತನ್ನ ಪ್ರಸಿದ್ಧ ಮತ್ತು ಅತೀ ಹೆಚ್ಚು ಮಂದಿ ಬಳಕೆ ಮಾಡುವ ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ ಗಾಗಿ ಕಳುಹಿಸುತ್ತಲೇ ಇರುತ್ತದೆ. ಆದರೂ ಕೂಡ ಸೆಕ್ಯುರಿಟಿ ವಿಚಾರ ಬಂದಾಗಿ ಆಂಡ್ರಾಯ್ಡ್ ನಲ್ಲಿ ಸಾಕಷ್ಟು ದೋಷಗಳು ಕಾಣಿಸುತ್ತದೆ. ಇದೀಗ ಬಂದ ವರದಿಯೊಂದು ಹೇಳುವ ಪ್ರಕಾರ ಪಿಎನ್ ಜಿ ಇಮೇಜ್ ವೊಂದು ನಿಮ್ಮ ಆಂಡ್ರಾಯ್ಡ್ ಡಿವೈಸ್ ನ್ನು ಹ್ಯಾಕ್ ಮಾಡುವ ಸಾಮರ್ಥ್ಯ ವನ್ನು ಹೊಂದಿದೆ.

ಇಮೇಜ್ ಫೈಲ್ ನಿಂದ ಮೊಬೈಲ್ ಹ್ಯಾಕ್!

ಇಮೇಜ್ ಫೈಲ್ ನಿಂದ ಮೊಬೈಲ್ ಹ್ಯಾಕ್!

.exe ಫೈಲ್ ಗಳು ಮ್ಮ ಕಂಪ್ಯೂಟರ್ ನಲ್ಲಿ ರಿಸ್ಕ್ ನ್ನು ತಂದೊಡ್ಡುವ ಒಂದು ಫೈಲ್ ಆಗಿದ್ದರೆ ಮೊಬೈಲ್ ನಲ್ಲಿ .apk ಫೈಲ್ ಗಳು ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ಇರುತ್ತದೆ ಮತ್ತು ಈ ಫೈಲ್ ಗಳು ಯಾವುದೇ ಒಂದು ಅಪ್ಲಿಕೇಷನ್ ನ್ನು ಇನ್ಸ್ಟಾಲರ್ ಆಗಿರುತ್ತದೆ. ಸರಿಯಾದ ಜಾಗದಿಂದ ಈ ಫೈಲ್ ಗಳು ನಿಮ್ಮ ಮೊಬೈಲ್ ಅಥವಾ ಸಿಸ್ಟಮ್ ಗೆ ಬರದೇ ಇದ್ದಲ್ಲಿ ಸಮಸ್ಯೆಯನ್ನು ತಂದೊಡ್ಡುವ ಸಾಧ್ಯತೆಗಳು ನಿಚ್ಛಳವಾಗಿರುತ್ತದೆ.

ಆಂಡ್ರಾಯ್ಡ್ ಡಿವೈಸ್ ಹ್ಯಾಕ್:

ಆಂಡ್ರಾಯ್ಡ್ ಡಿವೈಸ್ ಹ್ಯಾಕ್:

.png ಅಂದರೆ ಅದೊಂದು ಇಮೇಜ್ ಫೈಲ್ ಫಾರ್ಮೇಟ್ ಆಗಿರುತ್ತದೆ. ಹಾಗಾಗಿ ಹೆಚ್ಚಿನವರು ಇದು ನಿಮ್ಮ ಸ್ಮಾರ್ಟ್ ಫೋನಿಗೆ ಯಾವುದೇ ಸಮಸ್ಯೆಯನ್ನು ತಂದೊಡ್ಡುವುದಿಲ್ಲ ಎಂದು ಭಾವಿಸುತ್ತಾರೆ. ಆದರೆ ಇದೀಗ ಬಂದಿರುವ ನೂತನ ವರದಿಯೊಂದರ ಪ್ರಕಾರ ಇಮೇಜ್ ಫೈಲ್ ಗಳೇ ಒಂದು ಆಂಡ್ರಾಯ್ಡ್ ಮೊಬೈಲ್ ಡಿವೈಸ್ ನ್ನು ಹ್ಯಾಕ್ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ತಿಳಿದುಬಂದಿದೆ.

ಸೆಕ್ಯುರಿಟಿ ಸಮಸ್ಯೆ:

ಸೆಕ್ಯುರಿಟಿ ಸಮಸ್ಯೆ:

ಫೆಬ್ರವರಿ ತಿಂಗಳಲ್ಲಿ ಟೆಕ್ ದೈತ್ಯ ಗೂಗಲ್ ಹೆಚ್ಚಿನ ಆಂಡ್ರಾಯ್ಡ್ ಮೊಬೈಲ್ ಗಳಿಗೆ ಸೆಕ್ಯುರಿಟಿ ಸಮಸ್ಯೆ ಎದುರಾಗುವ ಸಾಧ್ಯತೆಯನ್ನು ಸ್ಪಷ್ಟಪಡಿಸಿತ್ತು. ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ನಲ್ಲಿ ಸೆಕ್ಯುರಿಟಿ ವೈಫಲ್ಯತೆಯ ಬಗ್ಗೆ ಆಗಾಗ ಎಚ್ಚರಿಕೆಯನ್ನು ನೀಡಲಾಗುತ್ತಲೇ ಇರುತ್ತದೆ.

ಯಾವೆಲ್ಲ ಆಪರೇಟಿಂಗ್ ಸಿಸ್ಟಮ್ ಗೆ ಸಮಸ್ಯೆ:

ಯಾವೆಲ್ಲ ಆಪರೇಟಿಂಗ್ ಸಿಸ್ಟಮ್ ಗೆ ಸಮಸ್ಯೆ:

ಅಟ್ಯಾಕ್ ಮಾಡಲು ಇಚ್ಛಿಸುವ ಕಳ್ಳರು ಸರಳವಾಗಿ.PNG ಫಾರ್ಮೇಟ್ ನ ಫೈಲ್ ಗಳನ್ನು ತಯಾರಿಸಿ ಟ್ಯಾಬ್ಲೆಟ್ ಅಥವಾ ಸ್ಮಾರ್ಟ್ ಫೋನ್ ನ್ನು ಹ್ಯಾಕ್ ಮಾಡುವ ಕೆಲಸಕ್ಕೆ ಕೈಹಾಕುತ್ತಾರೆ. ಆಂಡ್ರಾಯ್ಡ್ 7.0, ಆಂಡ್ರಾಯ್ಡ್ 9.0 ಮತ್ತು ಈ ಎರಡರ ನಡುವೆ ಬರುವ ಎಲ್ಲಾ ಆಪರೇಟಿಂಗ್ ಸಿಸ್ಟಮ್ ನ ವರ್ಷನ್ ಗಳಿಗೂ ಕೂಡ ಅಟ್ಯಾಕ್ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಫೈಲ್ ಗಳು ಇದಾಗಿವೆ ಎಂದು ತಿಳಿದುಬಂದಿದೆ.

ಸುಲಭದಲ್ಲಿ ಹ್ಯಾಕಿಂಗ್:

ಸುಲಭದಲ್ಲಿ ಹ್ಯಾಕಿಂಗ್:

ಆಂಡ್ರಾಯ್ಡ್ ಡಿವೈಸ್ ನ ಸೆಕ್ಯುರಿಟಿಯನ್ನು ಹಾಳು ಮಾಡುವುದಕ್ಕೆ ಹೆಚ್ಚು ಕಷ್ಟವೇನಿಲ್ಲ ಕೇವಲ ಒಂದು.PNG (image) ಫೈಲ್ ಈ ಕೆಲಸವನ್ನು ಸರಳಗೊಳಿಸಿ ಮಾಡುತ್ತದೆ ಮತ್ತು ಸ್ಮಾರ್ಟ್ ಫೋನ್ ಆಗಿರಲಿ ಅಥವಾ ಟ್ಯಾಬ್ಲೆಟ್ ಆಗಿರಲಿ, ಯಾವುದೇ ಆದರೂ ಸರಿ ಸುಲಭದಲ್ಲಿ ಹ್ಯಾಕಿಂಗ್ ಕೆಲಸವನ್ನು ಮಾಡುವ ಸಾಮರ್ಥ್ಯ ಇದಕ್ಕಿದೆ ಎಂದು ಹೇಳಲಾಗುತ್ತಿದೆ.

ಯಾವ ಡಿವೈಸ್ ಗಳು ಇದರಿಂದ ಹ್ಯಾಕ್ ಆಗಿ ಪರಿಣಾಮಕ್ಕೆ ಒಳಗಾಗಿರುತ್ತದೆಯೋ ಆ ಡಿವೈಸ್ ಗಳು ಮತ್ತೆ ಮೌಂಟೇನ್ ವ್ಯೂ ಕಳುಹಿಸುವ ಅಪ್ ಡೇಟ್ ನ್ನು ರಿಸೀವ್ ಮಾಡುವುದೇ ಇಲ್ಲ. ಅಂದರೆ ಸೆಕ್ಯುರಿಟಿ ಅಪ್ ಡೇಟ್ ಗಳು ಆ ಮೊಬೈಲ್ ಗೆ ಬರುವುದೇ ಇಲ್ಲ. ಇದೇ ಕಾರಣಕ್ಕೆ ದಾಳಿಕೋರರ ಮತ್ತು ವೈಫಲ್ಯದ ಪ್ರಯೋಜನವನ್ನು ಪಡೆದುಕೊಳ್ಳುವ ಮತ್ತು ಬಳಕೆದಾರರ ವಿರುದ್ಧ ಆಕ್ರಮಣ ಮಾಡುವುದನ್ನು ತಡೆಯುವ ಉದ್ದೇಶದಿಂದ ಭದ್ರತಾ ಸಮಸ್ಯೆಯ ವಿವರಗಳನ್ನು ನಿರ್ಲಕ್ಷಿಸಲು ಗೂಗಲ್ ನಿರ್ಧರಿಸಿದೆ.

ಸಮಸ್ಯೆಯ ನಿವಾರಣೆ ಹೇಗೆ?

ಸಮಸ್ಯೆಯ ನಿವಾರಣೆ ಹೇಗೆ?

ಹಾಗಂತ ಇದು ಯಾವುದೇ ಸಮಸ್ಯೆಯನ್ನು ತಡೆಗಟ್ಟುವುದಿಲ್ಲ. ಹಾಗಾಗಿ ಸೆಕ್ಯುರಿಟಿ ಅಪ್ ಡೇಟ್ ನ್ನು ಅಪ್ಲೈ ಮಾಡಿಕೊಳ್ಳುವುದು ಬಹಳ ಮುಖ್ಯ ವಿಚಾರವಾಗಿರುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಮೊಬೈಲ್ ಬಳಕೆದಾರರು ಎಚ್ಚರಿಕೆಯಿಂದ ಇರಬೇಕೇ ಹೊರತು ಸಮಸ್ಯೆಯ ನಿವಾರಣೆ ಬೇರೆ ಮಾರ್ಗದಿಂದ ಮಾಡುವುದು ಅಸಾಧ್ಯವಾದ ಕೆಲಸವಾಗಿದೆ. ನಿಮ್ಮ ಮೊಬೈಲ್ ನಲ್ಲಿ ಯಾವುದೇ ಅಪ್ಲಿಕೇಷನ್ ಇನ್ಸ್ಟಾಲ್ ಮಾಡುವ ಮುನ್ನ ಸರಿಯಾಗಿ ಆಲೋಚಿಸಿ ಮತ್ತು ಸುರಕ್ಷತೆಯಿಂದ ಇನ್ಸ್ಟಾಲ್ ಮಾಡಿಕೊಳ್ಳುವುದನ್ನು ಮರೆಯಬೇಡಿ. ಹೆಚ್ಚು ಕಡಿಮೆಯಾದರೆ ನಿಮ್ಮ ಮೊಬೈಲ್ ನಲ್ಲಿರುವ ಡಾಟಾವೆಲ್ಲವೂ ಕಳ್ಳರ ಪಾಲಾಗುವುದು ನಿಶ್ಚಿತ.

Best Mobiles in India

Read more about:
English summary
BEWARE! This PNG Image Can Hack Your Android Smartphone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X