ಬ್ಲಾಕ್‌ಬೆರಿ ಹೊಸ ಸ್ಮಾರ್ಟ್‌ಪೋನಿನಲ್ಲಿ ಕ್ವರ್ಟಿ ಕೀಪ್ಯಾಡ್...!
ಈ ಬಾರಿ ಹೊಸ ಮಾದರಿಯ ಸ್ಮಾರ್ಟ್‌ಪೋನುಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ, ಈ ಹಿಂದೆ ತನ್ನ ಬಿಸನೆಸ್ ಪೋನಿಗಳಿಗೆ ಕ್ವರ್ಟಿ ಕೀಪ್ಯಾಡ್ ಅಳವಡಿಸಿ ಬ್ಲಾಕ್‌ಬೆರಿ ಯಶಸ್ಸು ಕಂಡಿತ್ತು.
ಸ್ಮಾರ್ಟ್‌ಪೋನ್ ಹಾವಳಿಯಲ್ಲಿ ಕಳೆದುಹೋಗಿದ್ದ ಕ್ವರ್ಟಿ ಕೀಪ್ಯಾಡ್ ಪೋನುಗಳಿಗೆ ಮತ್ತೆ ಜೀವ ನೀಡಲು ಸ್ಮಾರ್ಟ್‌ಪೋನ್ ತಯಾರಿಕೆಯಲ್ಲಿ ಖ್ಯಾತಿಗಳಿಸಿರುವ ಬ್ಲಾಕ್‌ಬೆರಿ ಕಂಪನಿ ಮುಂದಾಗಿದೆ. ಈ ಬಾರಿ ಹೊಸ ಮಾದರಿಯ ಸ್ಮಾರ್ಟ್‌ಪೋನುಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ಹಿಂದೆ ತನ್ನ ಬಿಸೆನೆಸ್ ಪೋನಿಗಳಿಗೆ ಕ್ವರ್ಟಿ ಕೀಪ್ಯಾಡ್ ಅಳವಡಿಸಿ ಯಶಸ್ಸು ಕಂಡಿದ್ದ ಬ್ಲಾಕ್‌ಬೆರಿ ಈ ಬಾರಿ ನೂತನ ಟೆಚ್ ಸ್ಮಾರ್ಟ್‌ಪೊನಿಗೆ ಕ್ವರ್ಟಿ ಕೀ ಪ್ಯಾಡ್ ಅಳವಡಿಸಿದೆ ಎನ್ನುವ ಸುದ್ದಿ ದೊರೆತಿದೆ.

ಫ್ಲಿಪ್‌ಕಾರ್ಟ್‌ನ ಏಕ್ಸ್‌ಚೇಂಜ್ ಆಫರ್‌ನಲ್ಲಿ ರೂ. 9,999ಕ್ಕೆ ಆಪಲ್ ಐಫೋನ್ 6
ಈ ಬಾರಿ ಬ್ಯಾಕ್‌ಬೆರಿ ಬ್ರಾಂಡಿನ ಸ್ಮಾರ್ಟ್‌ಪೋನುಗಳನ್ನು ಟಿಸಿಎಲ್ ಕಂಪನಿ ತಯಾರಿಸಿಕೊಟ್ಟಿದ್ದು, ಟಿಸಿಎಲ್ ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕೆಯಲ್ಲಿ ಸಾಕಷ್ಟು ಖ್ಯಾತಿಗಳಿಸಿದೆ. ಈ ಬಾರಿ ಬ್ಲಾಕ್‌ಬೆರಿಯ ಮರ್ಕ್ಯೂರಿ ಪೋನುಗಳನ್ನು ಟಿಸಿಎಲ್ ನಿರ್ಮಿಸಿದೆ, ಈ ಸ್ಮಾರ್ಟ್‌ಪೋನುಗಳು ಕ್ವರ್ಟಿ ಕೀಪ್ಯಾಡ್ ಹೊಂದಿವೆ. ಮೇಸೆಜ್ ಮಾಡುವವರಿಗೆ ಸಹಾಯವಾಗಲಿ ಎಂಬ ಕಾರಣಕ್ಕೆ ಈ ಹೊಸ ಪ್ರಯತ್ನ ಎನ್ನಲಾಗಿದೆ.

ಜಿಯೋ ನ್ಯೂ ಇಯರ್ ಆಫರ್: 1GB ಬಳಸಿದ ಮೇಲೆ ಇಂಟರ್‌ನೆಟ್ ವೇಗ ಹೆಚ್ಚಿಸಿಕೊಳ್ಳುವುದು ಹೇಗೆ..?
ಬೇರೆ ಸ್ಮಾರ್ಟ್‌ಪೋನುಗಳಲ್ಲಿ ಕೀಪ್ಯಾಡ್ ಸಹ ಟೆಚ್ ಆಗಿರುವುದರಿಂದ ವೇಗವಾಗಿ ಟೈಪ್ ಮಾಡಲು ಸಾಧ್ಯವಿಲ್ಲ ಈ ಹಿನ್ನಲೆಯಲ್ಲಿ ವೇಗದ ಟೈಪ್‌ಗಾಗಿ ಈ ಕ್ವರ್ಟಿ ಕೀಪ್ಯಾಡನ್ನು ತನ್ನ ಪೋನಿನಲ್ಲಿ ಇರಿಸಿದೆ. ಟೈಪ್ ಮಾಡಲು ಕೀಪ್ಯಾಡ್ ಬಳಸಲು ಬಯಸುವವರು ಪೋನಿನ ಸ್ಕ್ರಿನ್ ಅನ್ನು ಮೇಲಕ್ಕೆ ಸೈಟ್ ಮಾಡಿದರೆ ಕೀಪ್ಯಾಡ್ ಸಿಗಲಿದೆ.
ಫೇಸ್‌ಬುಕ್ ನಲ್ಲಿ 360 ಡಿಗ್ರಿ ಪೋಟೋ ಪೋಸ್ಟ್ ಮಾಡುವುದು ಹೇಗೆ..?
ಈ ಬ್ಲಾಕ್‌ಬೆರಿ ಮರ್ಕ್ಯೂರಿ ಸ್ಮಾರ್ಟ್‌ಪೋನಿನಲ್ಲಿ ಸ್ನಾಪ್‌ಡ್ರಾಗನ್ 821 ಚಿಪ್‌ಸೆಟ್ ಇರಲಿದ್ದು, 4.4 ಇಂಚಿನ Full HD ಟೆಚ್ ಸ್ಕ್ರಿನ್ ಇದೆ. ಅಲ್ಲದೇ ಉತ್ತಮ ಬ್ಯಾಟರಿ ಈ ಪೋನಿನಲ್ಲಿದೆ ಎನ್ನಲಾಗಿದೆ. ಸದ್ಯ ಈ ಪೋನ್ ಪ್ರದರ್ಶನಕ್ಕೆ ಮಾತ್ರ ಸಿಮೀತವಾಗಿದ್ದು, ಇನ್ನೊಂದು ಎರಡು ತಿಂಗಳಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆಗಳಿದೆ. ನೋಡಲು ಈ ಪೋನ್ ಸುಂದರವಾಗಿದ್ದು, ಕಪ್ಪು ಬಣ್ಣದಲ್ಲಿ ಲಭ್ಯವಿದೆ.


Click it and Unblock the Notifications








