ಫ್ಲಿಪ್‌ಕಾರ್ಟ್‌ನ ಏಕ್ಸ್‌ಚೇಂಜ್ ಆಫರ್‌ನಲ್ಲಿ ರೂ. 9,999ಕ್ಕೆ ಆಪಲ್ ಐಫೋನ್ 6
ಈ ಬಾರಿ ಆಪಲ್ ಐಪೋನ್ 6 ಮೇಲೆ ರಿಯಾಯಿತಿ ಘೋಷಣೆ ಮಾಡಿದೆ. ಸದ್ಯ 31 ಸಾವಿರ ರೂ ಮುಖಬೆಲೆಯ ಐಫೋನ್ 6 ಪೋನನ್ನು ಹಳೆ ಪೋನೊಂದನ್ನು ನೀಡಿ ಕೇವಲ ರೂ. 9,999ಕ್ಕೆ ಖರೀದಿಸಬಹುದಾಗಿದೆ,
ಎಂಟ್ರಿ ಲೆವಲ್ ಸ್ಮಾರ್ಟ್ ಪೋನ್ ಗಳ ಡೀಲ್ ಗಳಿಗೆ ಹೆಸರುವಾಸಿಯಾದ ದೇಶಿಯ ಆನ್‌ಲೈನ್ ಮಾರುಕಟ್ಟೆ ಫ್ಲಿಪ್‌ಕಾರ್ಟಿನಲ್ಲಿ ಈ ಬಾರಿ ಐಪೋನ್ ಸೇಲ್ ಆರಂಭವಾಗಿದೆ. ಐಪೋನ್ 7 ಬಂದ ಮೇಲೆ ಹಳೆಯ ವರ್ಷನ್ ಎಂಬ ಹಣೆ ಪಟ್ಟಿ ಪಡೆದ ಆಪಲ್ ಐಪೋನ್ 6 ಅನ್ನು ಫ್ಲಿಪ್‌ಕಾರ್ಟಿನಲ್ಲಿ ಅತೀ ಕಡಿಮೆ ಬೆಲೆಗೆ ಸೇಲಿಗೆ ಇಡಲಾಗಿದೆ. ಏಕ್ಸಚೇಂಜ್ ಆಧಾರದ ಮೇಲೆ ಕೇವಲ 9,999ಕ್ಕೆ ಐಪೋನ್ 6 ಮಾರಾಟ ಮಾಡಲಾಗುತ್ತಿದೆ.

4G ಸಪೋರ್ಟ್ ಮಾಡುವ ಕಡಿಮೆ ಬೆಲೆಯ ಬೆಸ್ಟ್ ಸ್ಮಾರ್ಟ್‌ಪೋನ್‌ಗಳು...
ಈ ಮೊದಲು ಹೊಸ ಮಾಡಲ್ ಗಳನ್ನು ಮಾತ್ರ ಸೇಲಿಗೆ ಇಡುತ್ತಿದ್ದ ಫ್ಲಿಪ್‌ಕಾರ್ಟ್ ಈ ಬಾರಿ ಆಪಲ್ ಐಪೋನ್ 6 ಮೇಲೆ ರಿಯಾಯಿತಿ ಘೋಷಣೆ ಮಾಡಿದೆ. ಸದ್ಯ 31 ಸಾವಿರ ರೂ ಮುಖಬೆಲೆಯ ಐಫೋನ್ 6 ಪೋನನ್ನು ಹಳೆ ಪೋನೊಂದನ್ನು ನೀಡಿ ಕೇವಲ ರೂ. 9,999ಕ್ಕೆ ಖರೀದಿಸಬಹುದಾಗಿದೆ, ನೀವು ನೀಡುವ ಹಳೇ ಪೋನಿಗೆ ಫ್ಲಿಪ್ ಕಾರ್ಟ್ ಸುಮಾರು 22 ಸಾವಿರದವರೆಗೂ ಕೊಂಡುಕೊಳ್ಳಲಿದ್ದು, ಅಷ್ಟೆ ಪ್ರಮಾಣದ ಕಡಿತವನ್ನು ನೀಡಲಿದೆ.

13,999ಕ್ಕೆ 3GB RAM ಮತ್ತು 64 GB ಸ್ಟೋರೆಜ್‌ನ ಲಿಇಕೋ ಲಿ2...!
31 ಸಾವಿರದಲ್ಲಿ 22 ಸಾವಿರ ರೂ ಏಕ್ಸ್‌ಚೇಂಜ್ ಕಳೆದರೆ ಐಫೋನ್ 6ನ ಬೆಲೆ ಕೇವಲ 9,999 ಮಾತ್ರ, ಸದ್ಯ 16 GB ಮೆಮೊರಿ ಸಾಮಾರ್ಥ್ಯದ ಐಪೋನ್ 6 ಅನ್ನು ಏಕ್ಸ್‌ಚೆಂಜ್ ಆಧಾರದ ಮೇಲೆ ಮಾರಾಟ ಮಾಡಲಾಗುತ್ತಿದ್ದು, ಇಎಂಐ ಸಹಾಯದಲ್ಲೂ ಕೊಳ್ಳಬಹುದಾಗಿದೆ. ಇನ್ನು ಕೆಲವು ಬ್ಯಾಂಕುಗಳು 5% ಕ್ಯಾಷ್ ಬ್ಯಾಕ್ ಆಫರ್ ಸಹ ನೀಡುತ್ತಿವೆ.
ಹೊಸ ಇತಿಹಾಸ ನಿರ್ಮಿಸಿದ ಭೀಮ್ ಆಪ್: ಮೂರೇ ದಿನದಲ್ಲಿ 3 ಮಿಲಿಯನ್ ಡೌನ್‌ಲೋಡ್

ಕಳೆದ ವರ್ಷ ಆಪಲ್ ಐಪೋನ್ 7, ಐಪೋನ್ 7 ಪ್ಲಸ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಮೇಲೆ ಐಪೋನ್ 6 ವ್ಯಾಲ್ಯೂ ಕಡಿಮೆಯಾಗಿದೆ. ಈ ಹಿನ್ನಲೆಯಲ್ಲಿ ಕಡಿಮೆ ಮೊತ್ತಕ್ಕೆ ಮಾರಾಟಕ್ಕೆ ಇಡಲಾಗಿದೆ ಎನ್ನಲಾಗಿದೆ. ಒಮ್ಮೆಯಾದರು ಐಪೋನ್ ಬಳಸಬೇಕು ಎಂದವರು ಈ ಆಫರ್ ಲಾಭ ಪಡೆಯಬಹುದಾಗಿದೆ.


Click it and Unblock the Notifications








