ಐಫೋನಿಗೆ ಹುಟ್ಟಿಕೊಂಡಿದೆ ಪ್ರತಿಸ್ಪರ್ಧಿ: ಈ ಹೊಸ ಫೋನಿಗೆ ಸರಿಸಾಟಿಯೇ ಇಲ್ಲ ಅಂದ್ರೆ ನಂಬಲೇ ಬೇಕು...!!!

Written By:

ಇಂದಿನ ಇಡೀ ವಿಶ್ವ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಮತ್ತು ಐಎಸ್ಓ ಓಎಸ್ ಗಳು ತಮ್ಮ ಹಿಡಿತವನ್ನು ಸಾಧಿಸಿವೆ. ಇದಕ್ಕೆ ಬ್ರೇಕ್ ಹಾಕುವ ಸಲುವಾಗಿಯೇ ಆಂಡ್ರಾಯ್ಡ್ ಜನಕ ಆಂಡಿ ರುಬಿನ್ ಹೊಸದೊಂದು ಮಾದರಿಯ ಸ್ಮಾರ್ಟ್‌ಫೋನ್ ತಯಾರಿಕೆಗೆ ಮಂದಾಗಿದ್ದು, ಎಸೆನ್ಷಿಯಲ್ ಫೋನ್ ಎಂದು ಇದಕ್ಕೆ ನಾಮಕರಣ ಮಾಡಿದ್ದಾರೆ.

ಈ ಹೊಸ ಫೋನಿಗೆ ಸರಿಸಾಟಿಯೇ ಇಲ್ಲ ಅಂದ್ರೆ ನಂಬಲೇ ಬೇಕು...!!!

ಓದರಿ: ಮತ್ತೆ ಬಂದಿದ್ದಾನೆ ಆಂಡ್ರಾಯ್ಡ್ ಜನಕ: ತಯಾರಿಸಿದ್ದಾನೆ ಆಂಟಿ ಐಫೋನ್

ಹೊಸದಾಗಿ ಮಾರುಕಟ್ಟೆಗೆ ಕಾಲಿಡಲು ಮುಂದಾಗಿರುವ ಎಸೆನ್ಷಿಯಲ್ ಫೋನ್, ಆಂಡ್ರಾಯ್ಡ್ ಮತ್ತು ಐಫೋನ್‌ಗಳಿಗೆ ಭಾರೀ ಸ್ಪರ್ಧೆಯನ್ನು ನೀಡಲಿದೆ ಎನ್ನುವುದು ಮಾರುಕಟ್ಟೆ ತಜ್ಞರ ಅಭಿಪ್ರಾಯವಾಗಿದೆ. ಸುಮಾರು $699ಕ್ಕೆ (ಅಂದಾಜು 45,000) ಈ ಫೋನ್ ಮಾರಾಟವಾಗಲಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಎಲ್ಲಾ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳು ಈ ಎಸೆನ್ಷಿಯಲ್ ಫೋನಿನ ಮುಂದೆ ಏನೇನು ಇಲ್ಲ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫುಲ್ ಸ್ಕ್ರಿನ್ ಡಿಸ್ ಪ್ಲೇ:

ಫುಲ್ ಸ್ಕ್ರಿನ್ ಡಿಸ್ ಪ್ಲೇ:

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾಮ್‌ಸಂಗ್ ಗ್ಯಾಲೆಕ್ಸಿ ಎಸ್‌8 ಮಾದರಿಯಲ್ಲಿ ಎಡ್ಜ್ ಟು ಎಡ್ಜ್ ಡಿಸ್‌ಪ್ಲೇಯನ್ನು ಎಸೆನ್ಷಿಯಲ್ ಫೋನಿನಲ್ಲಿ ಕಾಣಬಹುದಾಗಿದೆ. ಇದೇ ಮಾದರಿಯ ಡಿಸ್‌ಪ್ಲೇಯನ್ನು ತನ್ನ ಮುಂದಿನ ಐಫೋನ್‌ನಲ್ಲಿ ಅಳವಡಿಸಲು ಆಪಲ್ ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

4GB RAM ಇದೇ:

4GB RAM ಇದೇ:

ಎಸೆನ್ಷಿಯಲ್ ಫೋನಿನಲ್ಲಿ ಕ್ವಾಲ್ಕಮ್ ಟಾಪ್ ಪ್ರೋಸೆಸರ್ 835 ಅನ್ನು ಅಳವಡಿಸಲಾಗಿದೆ. ಇದರೊಂದಿಗೆ 4GB RAM ಕಾಣಬಹುದಾಗಿದೆ. ಇದಲ್ಲದೇ 128GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ.

ಲೋಗೊ ಇಲ್ಲ, ಬಿದ್ದರು ಒಡೆಯುವುದಿಲ್ಲ:

ಲೋಗೊ ಇಲ್ಲ, ಬಿದ್ದರು ಒಡೆಯುವುದಿಲ್ಲ:

ಎಸೆನ್ಷಿಯಲ್ ಫೋನ್ ನ ಮೇಲೆ ಕಂಪನಿಯ ಯಾವುದೇ ಲೋಗವನ್ನು ಹಾಕದೆ ಬಿಡುಗಡೆ ಮಾಡಿದೆ. ಅಲ್ಲದೇ ಅಲ್ಯೂಮಿನಿಯಮ್ ಬಾಡಿಯನ್ನು ಹೊಂದಿರುವ ಈ ಫೋನು ಬಿದ್ದರು ಓಡೆದು ಹೋಗುವುದಿಲ್ಲ ಎನ್ನಬಹುದು.

ಹಿಂದೆ ಇದೆ ಡ್ಯುಯಲ್ ಕ್ಯಾಮೆರಾ:

ಹಿಂದೆ ಇದೆ ಡ್ಯುಯಲ್ ಕ್ಯಾಮೆರಾ:

ಈ ಪೋನಿನ ಹಿಂಭಾಗದಲ್ಲಿ 13MP ಡ್ಯುಯಲ್ ಕ್ಯಾಮೆರಾವನ್ನು ನೀಡಲಾಗಿದೆ. ಇದರೊಂದಿಗೆ 360 ಡಿಗ್ರಿ ಕ್ಯಾಮೆರಾವನ್ನು ಅಳವಡಿಸಲು ಈ ಫೋನಿನಲ್ಲಿ ಅವಕಾಶವನ್ನು ಮಾಡಿಕೊಡಲಾಗಿದೆ. ಜೊತೆಗೆ ಮುಂಭಾಗದಲ್ಲಿದೆ 8MP ಕ್ಯಾಮೆರಾ. ಇದು 4K ವಿಡಿಯೋ ರೆಕಾರ್ಡಿಂಗ್ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಅಲ್ಲದೇ ಸಿ-ಟೈಪ್ USB ಚಾರ್ಜಿಂಗ್ ಮಾಡಿಕೊಳ್ಳುವ ಅವಕಾಶವು ಇದರಲ್ಲಿದೆ.

ಇದರಲ್ಲಿ ಮ್ಯಾಗ್ನೆಟಿಕ್ ಪೋರ್ಟ್:

ಇದರಲ್ಲಿ ಮ್ಯಾಗ್ನೆಟಿಕ್ ಪೋರ್ಟ್:

ಇದೇ ಮೊದಲ ಬಾರಿಗೆ ಎಸೆನ್ಷಿಯಲ್ ಫೋನ್ ನಲ್ಲಿ ಮ್ಯಾಗ್ಲೆಟಿಕ್ ಪೋರ್ಟ್ ಅಳವಡಿಸಲಾಗಿದೆ. ಇದು ಏಕ್ಸ್ಟ್ರಾ ಕ್ಯಾಮೆರಾವನ್ನು ಸೇರಿಸಿಕೊಳ್ಳಲು ಮತ್ತು ಆಡಿಯೋ ಜಾಕ್ ವೈರ್ ಅನ್ನು ಸಂಪರ್ಕಿಸಲು ಸಹಾಯ ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
The Essential Phone, brought to us by the person who created Android, is finally ready for the spotlight. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot