Subscribe to Gizbot

ನೋಕಿಯಾದಿಂದ ಮೂರು ಹೊಸ ಸ್ಮಾರ್ಟ್ ಫೋನುಗಳು.

Written By:

ನೋಕಿಯಾ ತನ್ನ ಹೊಸ ಫೋನಾದ ನೋಕಿಯಾ ಡಿ1ಸಿ ಮೂಲಕ ಸ್ಮಾರ್ಟ್ ಫೋನ್ ಪ್ರಪಂಚಕ್ಕೆ ಮತ್ತೆ ಕಾಲಿರಿಸುತ್ತಿರುವುದರ ಬಗ್ಗೆ ಕೆಲ ದಿನಗಳ ಹಿಂದೆ ನಾವು ವರದಿ ಮಾಡಿದ್ದೆವು. ನೋಕಿಯಾ ಡಿ1ಸಿಯ ಗುಣವಿಶೇಷತೆಗಳ ಬಗ್ಗೆ ಆನ್ ಲೈನಿನಲ್ಲಿ ಗೀಕ್ ಬೆಂಚ್ ವರದಿ ಮಾಡಿತ್ತು.

ನೋಕಿಯಾದಿಂದ ಮೂರು ಹೊಸ ಸ್ಮಾರ್ಟ್ ಫೋನುಗಳು.

ಹೊಸ ಸುದ್ದಿಯ ಪ್ರಕಾರ, ನೋಕಿಯಾ ಕಂಪನಿಯಿಂದ ನಾವು ಒಂದಲ್ಲ ಎರಡು ಫ್ಲಾಗ್ ಶಿಪ್ ಫೋನುಗಳನ್ನು ನಿರೀಕ್ಷಿಸಬಹುದು ಎನ್ನಲಾಗುತ್ತಿದೆ.

ಓದಿರಿ: 'ಲೆನೊವೋ ವೈಬ್ ಕೆ5 ನೋಟ್'ಗೆ VoLTE ಅಪ್‌ಡೇಟ್‌: ಜಿಯೋ ಸಿಮ್‌ ಸಪೋರ್ಟ್

ಒಂದು ಕಾಲದಲ್ಲಿ ಮೊಬೈಲ್ ಫೋನಿನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದ ನೋಕಿಯಾ ಆ್ಯಂಡ್ರಾಯ್ಡ್ ಬದಲಿಗೆ ಮೈಕ್ರೋಸಾಫ್ಟ್ ಜೊತೆಗೆ ಕೈಜೋಡಿಸಿ ತನ್ನ ಖ್ಯಾತಿಯನ್ನು ಕಳೆದುಕೊಂಡುಬಿಟ್ಟಿತು.

ಓದಿರಿ: ವಾಟ್ಸಾಪ್‌ನಲ್ಲಿರುವ ಮೋಸದ ಬಲೆಯಿಂದ ಹೊರಬರುವುದು ಹೇಗೆ?

ಈಗ ಕಂಪನಿಯು ಪಾಠ ಕಲಿತಂತೆ ಕಾಣುತ್ತದೆ. ಕಂಪನಿಯು ದೊಡ್ಡ ಮಟ್ಟದಲ್ಲ ವಾಪಸ್ಸಾಗಿ ತನ್ನ ಸ್ಥಾನವನ್ನು ಮರಳಿ ಪಡೆಯಲು ಪ್ರಯತ್ನ ಪಡುತ್ತಿರುವಂತಿದೆ. ಇದರ ಬಗ್ಗೆ ನಿಮಗೆ ಗೊತ್ತಿರಬೇಕಾದ ಸಂಗತಿಗಳು ಇಲ್ಲಿವೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ ಡಿ1ಸಿ.

ನೋಕಿಯಾ ಡಿ1ಸಿ.

ಈ ವಾರದ ಮೊದಲಲ್ಲಿ, ಬಿಜಿಆರ್ ಇಂಡಿಯಾ ಗೀಕ್ ಬೆಂಚ್ ಪಟ್ಟಿಯಲ್ಲಿ ನೋಕಿಯಾ ಡಿ1ಸಿಯನ್ನು ನೋಡಿತು. ಈಗ ಅಂಟುಟು ಪಟ್ಟಿಯಲ್ಲೂ ಮೊಬೈಲ್ ಕಾಣಿಸಿಕೊಂಡಿದೆ; 64 ಬಿಟ್ ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 430 ಚಿಪ್, 3ಜಿಬಿ ರ್ಯಾಮ್, 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, ಫುಲ್ ಹೆಚ್.ಡಿ ಪರದೆ ಮತ್ತು ಅಡ್ರಿನೋ 505 ಜಿಪಿಯು ಇದರಲ್ಲಿರಲಿದೆ.

ಒಂದಲ್ಲ ಎರಡು ಫ್ಲಾಗ್ ಶಿಪ್ ಫೋನುಗಳನ್ನು ನಿರೀಕ್ಷಿಸಿ.

ಒಂದಲ್ಲ ಎರಡು ಫ್ಲಾಗ್ ಶಿಪ್ ಫೋನುಗಳನ್ನು ನಿರೀಕ್ಷಿಸಿ.

ಮೇಲೆ ತಿಳಿಸಿದ ಮಧ್ಯಮ ಬೆಲೆಯ ಸ್ಮಾರ್ಟ್ ಫೋನಿನ ಜೊತೆಗೆ ನೋಕಿಯಾ ಸ್ನಾಪ್ ಡ್ರಾಗನ್ 820 ಪ್ರೊಸೆಸರ್ ಇರುವ ಎರಡು ಪ್ರೀಮಿಯಂ ಸ್ಮಾರ್ಟ್ ಫೋನುಗಳನ್ನು ಬಿಡುಗಡೆಗೊಳಿಸುವ ಮಾಹಿತಿಯೂ ಇದೆ.

ಗಾಳಿ ಸುದ್ದಿಗಳ ಪ್ರಕಾರ ಈ ಎರಡು ಸ್ಮಾರ್ಟ್ ಫೋನುಗಳಲ್ಲಿ ಕ್ವಾಡ್ ಹೆಚ್.ಡಿ ಪರದೆಯಿರಲಿದೆ, 5.2/5.5 ಇಂಚಿನ ಪರದೆಯಿರಲಿದೆ. ಜೊತೆಗೆ ಫೋಟೋಗ್ರಫಿಯಲ್ಲಿ ಆಸಕ್ತಿ ಹೊಂದಿರುವವರಿಗಾಗಿ 22.6 ಮೆಗಾಪಿಕ್ಸೆಲ್ಲಿನ ಕ್ಯಾಮೆರಾ ಇರಲಿದೆ. 4ಕೆ ವೀಡಿಯೋ ರೆಕಾರ್ಡಿಂಗ್ ಸೌಕರ್ಯವಿರಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆ್ಯಂಡ್ರಾಯ್ಡ್ 7.0 ನೌಗಾಟ್.

ಆ್ಯಂಡ್ರಾಯ್ಡ್ 7.0 ನೌಗಾಟ್.

ಎಲ್ಲಾ ಮೂರು ಸ್ಮಾರ್ಟ್ ಫೋನುಗಳಲ್ಲೂ ಆ್ಯಂಡ್ರಾಯ್ಡ್ 7.0 ನೌಗಾಟ್ ಇರಲಿದೆ.

ಬೆಲೆ ಮತ್ತು ಲಭ್ಯತೆ.

ಬೆಲೆ ಮತ್ತು ಲಭ್ಯತೆ.

ಗಾಳಿ ಸುದ್ದಿಗಳನ್ನು ನಂಬುವುದಾದರೆ, ಪ್ರೀಮಿಯಂ ಸ್ಮಾರ್ಟ್ ಫೋನುಗಳು 30,000 ರುಪಾಯಿಗೆ ಲಭ್ಯವಾದರೆ ಮಧ್ಯಮ ಬೆಲೆಯ ಫೋನಿನ ಬೆಲೆ 20,000ಇರಲಿದೆ.

ಕಂಪನಿಯು ಈ ಸ್ಮಾರ್ಟ್ ಫೋನುಗಳನ್ನು ಈ ವರುಷದ ಕೊನೆಗೆ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ. ಅಲ್ಲಿಯವರೆಗೂ ಈ ಗಾಳಿ ಸುದ್ದಿಯನ್ನು ಸ್ವಲ್ಪ ಮಟ್ಟಿಗಷ್ಟೇ ನಂಬಿ ಎನ್ನುವುದು ನಮ್ಮ ಸಲಹೆ!

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
A few days ago we reported you about Nokia's plans to re-enter the smartphone world with what's being called as the Nokia D1C. It was spotted online on a Geekbench listing providing insights about the specifications of the device.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot