ಮೋಟೋ ಜಿ ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ಮಾರಾಟ!

Posted By:

ಮೋಟೋ ಜಿ ಭಾರತದಲ್ಲಿ ಫೆಬ್ರವರಿ 5ಕ್ಕೆ ಬಿಡುಗಡೆಯಾದರೂ ಆನ್‌ಲೈನ್‌ನಲ್ಲಿ ಈ ಸ್ಮಾರ್ಟ್‌‌ಫೋನ್‌ ಖರೀದಿಸುವ ಗ್ರಾಹಕರು ಫ್ಲಿಪ್‌ಕಾರ್ಟ್‌‌ನಲ್ಲೇ ಮಾತ್ರ ಖರೀದಿಸಬೇಕು.!

ಹೌದು. ಮೋಟೋ ಜಿ ಆನ್‌ಲೈನ್‌ ಮಾರಾಟದ ಹಕ್ಕನ್ನು ದೇಶದ ಬ್ರ್ಯಾಂಡ್‌ ಆನ್‌ಲೈನ್‌ ಶಾಪಿಂಗ್‌ ತಾಣ ಫ್ಲಿಪ್‌ಕಾರ್ಟ್‌ ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ.ಬೇರೆ ಬ್ರ್ಯಾಂಡ್‌ ಕಂಪೆನಿಯ ಸ್ಮಾರ್ಟ್‌ಫೋನ್‌ಗಳ ಬಿಡುಗಡೆಯಾಗುವ ಸಂದರ್ಭದಲ್ಲಿ ಅದಕ್ಕೆಂದೇ ಪ್ರತ್ಯೇಕ ಪುಟವನ್ನು ತೆರೆಯದ ಫ್ಲಿಪ್‌ಕಾರ್ಟ್‌‌‌ ಈಗ ಮೋಟೋ ಜಿಗಾಗಿ ಪ್ರತ್ಯೇಕ ಪುಟವನ್ನು ಓಪನ್‌ ಮಾಡಿದ್ದೇ ಈ ಸಂದೇಹಕ್ಕೆ ಕಾರಣವಾಗಿದೆ.

ಆದರೂ ಈ ಸ್ಮಾರ್ಟ್‌ಫೋನ್‌‌ ದೇಶದ ಮಾರುಕಟ್ಟೆಗೆ ಬಿಡುಗಡೆಯಾದ ಬಳಿಕವಷ್ಟೇ ಮಾರಾಟ ವ್ಯವಸ್ಥೆ ಬಗ್ಗೆ ತಿಳಿಯಬೇಕಷ್ಟೆ.ನವೆಂಬರ್‌ನಲ್ಲಿ ಈ ಸ್ಮಾರ್ಟ್‌‌ಫೋನ್‌ ಬ್ರಝಿಲ್‌ನಲ್ಲಿ ಬಿಡುಗಡೆಯಾಗಿದ್ದು, ಬ್ರಝಿಲ್‌,ಅಮೆರಿಕದಲ್ಲಿ ಲಭ್ಯವಿದ್ದು 2014 ಆರಂಭದಲ್ಲಿ 30 ದೇಶಗಳಲ್ಲಿ ಈ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಮೋಟರೋಲಾ ನಿರ್ಧರಿಸಿದೆ.ಅಮೆರಿಕದಲ್ಲಿ ಕಾಂಟ್ಯ್ರಾಕ್ಟ್‌‌ ಹೊರತಾದ 8GB ಆಂತರಿಕ ಮೆಮೊರಿಯ ಸ್ಮಾರ್ಟ್‌ಫೋನ್‌ಗೆ 179 ಡಾಲರ್‌(11,300 ರೂಪಾಯಿ)16GB ಆಂತರಿಕ ಮೆಮೊರಿಯ ಸ್ಮಾರ್ಟ್‌ಫೋನ್‌ಗೆ 199 ಡಾಲರ್‌(ಅಂದಾಜು12,600 )ನಿಗದಿ ಮಾಡಿದೆ.

ಮೋಟರೋಲಾ ಮೊಬಿಲಿಟಿ ಟ್ವೀಟರ್‌ನಲ್ಲಿ ಈಗಾಗಲೇ ದಿನಾಂಕ ಪ್ರಕಟಿಸಿದ್ದು ಎಷ್ಟು ರೂಪಾಯಿ ಬೆಲೆಯಲ್ಲಿ ಬಿಡುಗಡೆ ಮಾಡುತ್ತದೆ ಎನ್ನುವುದನ್ನು ಪ್ರಕಟಿಸಿಲ್ಲ. ಸ್ಮಾರ್ಟ್‌ಫೋನನ್ನು ಮೋಟರೋಲಾ 15 ಸಾವಿರದೊಳಗೆ ಬಿಡುಗಡೆ ಮಾಡಬಹುದು
ಎಂದು ಅಂದಾಜಿಸಲಾಗಿದೆ.

ಮೋಟೋ ಜಿ ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ಮಾರಾಟ!

ಮೋಟೋ ಜಿ
ವಿಶೇಷತೆ:
ಸಿಂಗಲ್‌ ಸಿಮ್‌/ಡ್ಯುಯಲ್ ಸಿಮ್‌
4.5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1280 x 720 ಪಿಕ್ಸೆಲ್‌, 329ಪಿಪಿಐ)
ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ಓಎಸ್‌
1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
Adreno 305 ಗ್ರಾಫಿಕ್ ಪ್ರೊಸೆಸರ್‌
1GB RAM
8/16 GB ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಗ್ಲೋನಾಸ್‌,ಮೈಕ್ರೋ ಯುಎಸ್‌ಬಿ
2070 mAh ಬ್ಯಾಟರಿ

ಇದನ್ನೂ ಓದಿ: ಮೋಟರೋಲಾ ಮಾರಾಟ:ಯಾವ ಕಂಪೆನಿಗೆ ಏನು ಲಾಭ?

Please Wait while comments are loading...
Opinion Poll

Social Counting