'ಆಪಲ್‌ XS' ಐಫೋನ್‌ಗಿಂತ 'ಗ್ಯಾಲ್ಯಾಕ್ಸಿ ಎಸ್‌10+' ಸ್ಮಾರ್ಟ್‌ಫೋನ್‌ ಬೆಸ್ಟ್.!!

|

ಸ್ಮಾರ್ಟ್‌ಫೋನ್‌ ಮತ್ತು ಐಫೋನ್‌ ಗಳನ್ನು ಹೋಲಿಕೆ ಮಾಡಿದರೆ 'ಐಫೋನ್‌' ಅತ್ಯುತ್ತಮ ಎನ್ನುವುದು ಸಹಜ, ಆದರೆ ಇತ್ತೀಚಿಗೆ ಬಿಡುಗಡೆ ಆಗಿರುವ 'ಸ್ಮಾರ್ಟ್‌ಫೋನ್‌ ಗ್ಯಾಲ್ಯಾಕ್ಸಿ ಎಸ್‌10+' ಸ್ಮಾರ್ಟ್‌ಫೋನ್‌, ಜನಪ್ರಿಯ 'ಆಪಲ್ ಎಕ್ಸ್‌ಎಸ್‌' ಐಫೋನ್‌ಗಿಂತ ಉತ್ತಮ ಎನ್ನಲಾಗಿದೆ. ಹೌದು, ಸ್ಯಾಮ್‌ಸಂಗ್ ಸಂಸ್ಥೆಯು 'ಗ್ಯಾಲ್ಯಾಕ್ಸಿ ಎಸ್‌10+ ಸ್ಮಾರ್ಟ್‌ಫೋನ್ ಕುರಿತು ನಡೆಸಿದ ಒಂದು ಪೋಲ್‌ನಲ್ಲಿ ಬಳಕೆದಾರರಿಂದ ಈ ಉತ್ತರ ಬಂದಿದೆ.

'ಆಪಲ್‌ XS' ಐಫೋನ್‌ಗಿಂತ 'ಗ್ಯಾಲ್ಯಾಕ್ಸಿ ಎಸ್‌10+' ಸ್ಮಾರ್ಟ್‌ಫೋನ್‌ ಬೆಸ್ಟ್.!!

ಸ್ಯಾಮ್‌ಸಂಗ್ ತನ್ನ 'ಗ್ಯಾಲ್ಯಾಕ್ಸಿ ಎಸ್‌10+' ಮತ್ತು 'ಆಪಲ್‌ನ ಎಕ್ಸ್‌ಎಸ್‌' ಐಫೋನ್‌ ಇವುಗಳಲ್ಲಿ ಯಾವುದು ಬೆಸ್ಟ್‌ ಎಂಬ ಅಭಿಪ್ರಾಯಗಳನ್ನು ಸಂಗ್ರಹಿಸಲು ಪೋಲ್‌ ಇಂದನ್ನು ನಡೆಸಿದ್ದು, ಬಹುತೇಕ ಬಳಕೆದಾರರು 'ಗ್ಯಾಲ್ಯಾಕ್ಸಿ ಎಸ್‌10+' ಸ್ಮಾರ್ಟ್‌ಫೋನ್‌ ಬೆಸ್ಟ್‌ ಎಂದು ಹೇಳಿದ್ದಾರೆ. ಐಫೋನ್‌ ಎಕ್ಸ್‌ಆರ್‌ ಗಿಂತ ಅತ್ಯುತ್ತಮ ಬಾಳಿಕೆಯನ್ನು 'ಗ್ಯಾಲ್ಯಾಕ್ಸಿ ಎಸ್‌10+' ಹೊಂದಿದೆ ಮತ್ತು ಅದರ ಬ್ಯಾಟರಿ, ಕ್ಯಾಮೆರಾ ಆಯ್ಕೆಗಳು ಸಹ ಉತ್ತಮವಾಗಿವೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ.

'ಆಪಲ್‌ XS' ಐಫೋನ್‌ಗಿಂತ 'ಗ್ಯಾಲ್ಯಾಕ್ಸಿ ಎಸ್‌10+' ಸ್ಮಾರ್ಟ್‌ಫೋನ್‌ ಬೆಸ್ಟ್.!!

ಗ್ಯಾಲ್ಯಾಕ್ಸಿ ಎಸ್‌10+ ಸ್ಮಾರ್ಟ್‌ಫೋನ್‌ ವಾಟರ್‌ ಎಮಿಷನ್‌ ಟೆಸ್ಟ್‌ ಮತ್ತು ಸ್ಕ್ರಾಚ್‌ ಟೆಸ್ಟ್‌ಗಳಿಗೆ ಒಳಪಡಿಸಿದ್ದು, ಆದರೆ ಯಾವುದೇ ಹಾನಿ ಕಂಡುಬಂದಿಲ್ಲ ಎನ್ನಲಾಗಿದೆ. ಹೀಗಾಗಿ ಗ್ಯಾಲ್ಯಾಕ್ಸಿ ಎಸ್‌10+ ತನ್ನ ಪ್ರತಿಸ್ಪರ್ಧಿ ಫೋನ್‌ಗಳಿಗಿಂತ ಹೆಚ್ಚು ಗಟ್ಟಿಮುಟ್ಟಾದ ಬಾಳಿಕೆಯನ್ನು ಹೊಂದಿದೆ ಎಂದು ತಿಳಿದುಬಂದಿದೆ. ಹಾಗಾದರೇ ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಸ್‌10+ ಸ್ಮಾರ್ಟ್‌ಫೋನ್‌ ಹೊಂದಿರುವ ಫೀಚರ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಗ್ಯಾಲ್ಯಾಕ್ಸಿ ಎಸ್‌10+ ಡಿಸ್‌ಪ್ಲೇ

ಗ್ಯಾಲ್ಯಾಕ್ಸಿ ಎಸ್‌10+ ಡಿಸ್‌ಪ್ಲೇ

ಸೂಪರ್ AMOLEDನೊಂದಿಗೆ, 1440 x 2960 ಪಿಕ್ಸಲ್ ಸಾಮರ್ಥ್ಯದ ರೆಸಲ್ಯೂಶನ್‌ ಒಳಗೊಂಡ 6.4 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಈ ಗ್ಯಾಲ್ಯಾಕ್ಸಿ ಎಸ್‌10+ ಸ್ಮಾರ್ಟ್‌ಫೋನ್ ಹೊಂದಿದೆ. ಡಿಸ್‌ಪ್ಲೇ ನಿಂದ ಫೋನಿನ್ ಬಾಹ್ಯ ಬಾಡಿಯ ನಡುವಿನ ಅಂತರವು ಶೇ 89.06ರಷ್ಟು ಇದೆ. ಡಿಸ್‌ಪ್ಲೇಯ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಅನ್ನು ಒದಗಿಸಲಾಗಿದೆ. ಈ ಸ್ಮಾರ್ಟ್‌ಪೋನಿನಲ್ಲಿ ಅಂಚುರಹಿತ ಡಿಸ್‌ಪ್ಲೇಯನ್ನು ನೀವು ಕಾಣಬಹುದು.

ಗ್ಯಾಲ್ಯಾಕ್ಸಿ ಎಸ್‌10+ ಪ್ರೊಸೆಸರ್

ಗ್ಯಾಲ್ಯಾಕ್ಸಿ ಎಸ್‌10+ ಪ್ರೊಸೆಸರ್

ಗ್ಯಾಲ್ಯಾಕ್ಸಿ ಎಸ್‌10+ ಸ್ಮಾರ್ಟ್‌ಫೋನ್ ಅತೀ ಮುಂದುವರಿದ ಪ್ರೊಸೆಸರ್ ಆದ ಆಕ್ಟಾ Exynos 9820 ಜೊತೆಗೆ 'ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 855' ಸಾಮರ್ಥ್ಯದ ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದರೊಂದಿಗೆ ಅಂಡ್ರಿನೊ 640 ಸಿಪಿಯು ಸಾಮರ್ಥ್ಯವನ್ನು ಸಹ ಒಳಗೊಂಡಿದ್ದು, ಮಲ್ಟಿಟಾಸ್ಕ ಕೆಲಸಗಳನ್ನು ಒತ್ತಡ ರಹಿತವಾಗಿ ನಿರ್ವಹಿಸುವ ಶಕ್ತಿ ಸಾಮರ್ಥ್ಯವನ್ನು ಹೊಂದಿದೆ.

ಗ್ಯಾಲ್ಯಾಕ್ಸಿ ಎಸ್‌10+ ಮೆಮೊರಿ

ಗ್ಯಾಲ್ಯಾಕ್ಸಿ ಎಸ್‌10+ ಮೆಮೊರಿ

ಗ್ಯಾಲ್ಯಾಕ್ಸಿ ಎಸ್‌10+ ಸ್ಮಾರ್ಟ್‌ಫೋನ್ ಎರಡು ವೇರಿಯಂಟ ಮಾದರಿಗಳಲ್ಲಿ ಲಭ್ಯವಿದ್ದು, 12GB ಮತ್ತು 8GB ಸಾಮರ್ಥ್ಯದ RAM ಆಯ್ಕೆಗಳನ್ನು ಹೊಂದಿದೆ. ಇದರೊಂದಿಗೆ 128GB, 512GB ಮತ್ತು 1TB ಆಂತರಿಕ ಸಂಗ್ರಹ ಸಾಮರ್ಥ್ಯಗಳ ಆಯ್ಕೆಗಳನ್ನು ಹೊಂದಿದೆ.

ಗ್ಯಾಲ್ಯಾಕ್ಸಿ ಎಸ್‌10+ ಕ್ಯಾಮೆರಾ

ಗ್ಯಾಲ್ಯಾಕ್ಸಿ ಎಸ್‌10+ ಕ್ಯಾಮೆರಾ

ಸ್ಯಾಮ್‌ಸಂಗ್‌ನ ಹೈ ಎಂಡ್‌ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಒಟ್ಟು ಮೂರು ಕ್ಯಾಮೆರಾಗಳಿದ್ದು, ಮೆನ್ ಕ್ಯಾಮೆರಾ 12 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದ್ದು, ಅಪರ್ಚರ್ ಗಾತ್ರವು F1.5/F2.4 ಆಗಿರಲಿದೆ. ಸೆಕೆಂಡರಿ ಕ್ಯಾಮರದಲ್ಲಿಯೂ ಸಹ 12 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ನೀಡಿದ್ದು, ಇದರಲ್ಲಿ ಟೆಲಿಫೋಟೋ ಲೆನ್ಸ್ ಇರಲಿದೆ ಇದರ ಅಪರ್ಚರ್ ಗಾತ್ರವು F2.4 ಆಗಿರಲಿದೆ. ಇನ್ನೂ ಮುಂಭಾಗದಲ್ಲಿ ಸೆಲ್ಫೀಗಾಗಿ 10ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಒದಗಿಸಲಾಗಿದೆ.

ಗ್ಯಾಲ್ಯಾಕ್ಸಿ ಎಸ್‌10+ ಬ್ಯಾಟರಿ ಪವರ್

ಗ್ಯಾಲ್ಯಾಕ್ಸಿ ಎಸ್‌10+ ಬ್ಯಾಟರಿ ಪವರ್

ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ ಎಸ್‌10+ ಸ್ಮಾರ್ಟ್‌ಫೋನ್‌ 4100mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿಯನ್ನು ಹೊಂದಿದ್ದು, ಸುಮಾರು ಎರಡು ದಿನಗಳ ಕಾಲ ಬ್ಯಾಟರಿ ಬಾಳಿಕೆ ಬರಲಿದೆ. ಇದರೊಂದಿಗೆ ಫಾಸ್ಟ್‌ ಚಾರ್ಜರ್ ಅನ್ನು ಒದಗಿಸಲಾಗಿದ್ದು, ಸ್ಮಾರ್ಟ್‌ಫೋನ್ ಅತೀ ವೇಗವಾಗಿ ಚಾರ್ಜಿಂಗ್ ಆಗುತ್ತದೆ. ವೈಯರ್‌ಲೆಸ್ ಚಾರ್ಜಿಂಗ್ ವ್ಯೆವಸ್ಥೆಯನ್ನು ಸಹ ಒಳಗೊಂಡಿದೆ.

Best Mobiles in India

English summary
Galaxy S10+ is a better buy than the iPhone XS, says Consumer Reports.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X