ನಿಖರ ಸುದ್ದಿಗೆ 'ಗ್ಲ್ಯಾನ್ಸ್‌ ಲಾಕ್‌ಸ್ಕ್ರೀನ್' ಆಪ್ ಉತ್ತಮ ತಂಗುದಾಣ!

|

ಸದ್ಯ ಸ್ಮಾರ್ಟ್‌ಫೋನ್‌ಗಳು ಬಳಕೆದಾದರನ್ನು ವಿಶ್ವದೊಂದಿಗೆ ಕನೆಕ್ಟ್ ಮಾಡುವ ಪ್ರಮುಖ ಸಾಧನವಾಗಿ ಗುರುತಿಸಿಕೊಂಡಿದೆ. ಎಲ್ಲ ಮಾಹಿತಿಯು ಇದೀಗ ಸ್ಮಾರ್ಟ್‌ಫೋನಿನಲ್ಲಿಯೇ ಲಭ್ಯವಾಗುತ್ತದೆ. ಸುದ್ದಿ, ಕ್ರೀಡೆ, ವಿಜ್ಞಾನ, ಮನರಂಜನೆ, ಪ್ರವಾಸ, ವಾಲ್‌ಪೇಪರ್, ಫೋಟೊ, ವಿಡಿಯೊ ಕಂಟೆಂಟ್, ಹೀಗೆ ಪ್ರತಿಯೊಂದು ವಿಷಯಕ್ಕೂ ಅನೇಕ ಅಪ್ಲಿಕೇಶನ್‌ಗಳು ಸಿಗುತ್ತವೆ. ಆದರೆ ಅಗತ್ಯ ಮಾಹಿತಿಗಳು ಒಂದೇ ಆಪ್‌ನಲ್ಲಿ ಸಿಕ್ಕರೇ ಹೇಗೆ?..ಖಂಡಿತಾ ಅಂತಹ ಅವಕಾಶ ಗ್ಲಾನ್ಸ್‌ ಆಪ್‌ ಒದಗಿಸಿದೆ.

AI ಆಧಾರಿತ

ಹೌದು, ಇದೀಗ ಮಾರುಕಟ್ಟೆಯಲ್ಲಿ ಹೊಸದಾಗಿ ಪ್ರವೇಶ ಪಡೆದಿರುವ ''ಗ್ಲಾನ್ಸ್‌ ಲಾಕ್‌ಸ್ಕ್ರೀನ್'' ಆಪ್‌ AI ಆಧಾರಿತಗಿದ್ದು, ಅಗತ್ಯ ಮಾಹಿತಿಗಳನ್ನು ಒಂದೇ ವೇದಿಕೆಯಲ್ಲಿ ನೀಡಲಿದೆ. ಇನ್ನು ಗ್ಲ್ಯಾನ್ಸ್‌ ಆಪ್‌ನ ಪ್ರಮುಖ ಆಕರ್ಷಣೆಯೆಂದರೇ ಸ್ಮಾರ್ಟ್‌ಫೋನ್ ಲಾಕ್‌ಸ್ಕ್ರೀನ್‌ನಲ್ಲಿಯೇ ಬಳಕೆದಾರರಿಗೆ ಫೋಟೊ ಕಂಟೆಂಟ್‌, ನ್ಯೂಸ್‌ ಕಂಟೆಂಟ್ ಸೇರಿದಂತೆ ಅಗತ್ಯ ಮನರಂಜನೆಯ ಅಂಶಗಳನ್ನು ಒದಗಿಸುವ ಸೌಲಭ್ಯ ಹೊಂದಿದೆ.

ಲಾಕ್‌ಸ್ಕ್ರೀನ್ ಆಪ್‌

ಗ್ಲ್ಯಾನ್ಸ್‌ ಲಾಕ್‌ಸ್ಕ್ರೀನ್ ಆಪ್‌ ಸ್ಮಾರ್ಟ್‌ಫೋನ್ ಬಳಕೆದಾರಿಗೆ ಪ್ರಸಕ್ತ ದಿನನಿತ್ಯದ ವಿದ್ಯಮಾನಗಳ ಬಗ್ಗೆ, ಸಮಾಚಾರಗಳ ಬಗ್ಗೆ ಅಪ್‌ಡೇಟ್ ಮಾಹಿತಿ ನೀಡುತ್ತದೆ. ಬಳಕೆದಾರರಿಗೆ ಲಭ್ಯವಾಗುವ ಎಲ್ಲ ಅಂಶಗಳು ಬಳಕೆದಾರರ ಆಸಕ್ತಿಗೆ ಅನುಗುಣವಾಗಿ ಇರುತ್ತವೆ. ಏಕೆಂದರೇ ಈ ಆಪ್‌ನಲ್ಲಿ ಇಷ್ಟದ ವಿಷಯಗಳನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ. ಹೀಗಾಗಿ ಬಳಕೆದಾರರು ಅವರ ಇಚ್ಚೆಯಂತೆ ವಿಷಯಗಳನ್ನು ಸೆಟ್‌ ಮಾಡಿಕೊಳ್ಳಬಹುದಾಗಿದೆ.

ಉತ್ತಮ ಸುದ್ದಿ ತಾಣ

ಉತ್ತಮ ಸುದ್ದಿ ತಾಣ

ಸಾಮಾನ್ಯವಾಗಿ ಬಳಕೆದಾರರು ನ್ಯೂಸ್‌ ಓದಲು ಫೋನ್ ಲಾಕ್ ತೆರೆದು, ನ್ಯೂಸ್ ಆಪ್ ಓಪೆನ್ ಮಾಡಿ ಆಸಕ್ತಿಯ ಸುದ್ದಿಯನ್ನು ಓದುತ್ತಾರೆ. ಆದರೆ ಫೋನಿನಲ್ಲಿ ಗ್ಲ್ಯಾನ್ಸ್‌ ಆಪ್‌ ಇದ್ದರೇ, ಫೋನ್ ಲಾಕ್‌ಸ್ಕ್ರೀನ್‌ನಲ್ಲಿಯೇ ಬಳಕೆದಾರರಿಗೆ ಲಭ್ಯವಾಗಲಿದ್ದು, ಅವರ ಆಸಕ್ತಿಯ ನ್ಯೂಸ್‌ ಕಂಟೆಂಟ್‌ ಸಹ ಸಿಗಲಿದೆ. ಹೀಗಾಗಿ ಗ್ಲ್ಯಾನ್ಸ್‌ ಆಪ್ ಅತ್ಯುತ್ತಮ ಸುದ್ದಿ, ಸಮಾಚಾರದ ಅನುಕೂಲ ಒದಗಿಸಲಿದೆ. ತಾಜಾ ಸುದ್ದಿಗಳ ಜೊತೆಗೆ ಬಳಕೆದಾರರ ಸಮಯದ ಉಳಿಕೆಯನ್ನು ಮಾಡಲಿದೆ.

ಅಗತ್ಯ ಕಂಟೆಂಟ್ ಒದಗಿಸುವಿಕೆ

ಅಗತ್ಯ ಕಂಟೆಂಟ್ ಒದಗಿಸುವಿಕೆ

ಗ್ಲ್ಯಾನ್ಸ್‌ ಲಾಕ್‌ಸ್ಕ್ರೀನ್ ಆಪ್‌ ಸ್ಮಾರ್ಟ್‌ಫೋನ್‌ ಬಳಕೆದಾರರ ಆಸಕ್ತಿ ಮತ್ತು ಅಭಿರುಚಿಗೆ ಅನುಗುಣವಾಗಿ ಕಂಟೆಂಟ್‌ ಮತ್ತು ವಿಡಿಯೊ ಡಿಸ್‌ಪ್ಲೇ ಮಾಡುತ್ತದೆ. ಹಾಗೆಯೇ ಗ್ಲ್ಯಾನ್ಸ್‌ ಲಾಕ್ಸ್ಕ್ರೀನ್‌ನಲ್ಲಿ ಕಾಣಿಸುವ ಚಿತ್ರಗಳು ಮತ್ತು ವಿಡಿಯೊಗಳು ಉನ್ನತ ಪಿಕ್ಸಲ್ ರೆಸಲ್ಯೂಶನ್‌ ಅನ್ನು ಹೊಂದಿರುತ್ತವೆ. ಕಂಟೆಂಟ್‌ನ ಚಿತ್ರಗಳು ಸಹ ರಿಚ್‌ ಲುಕ್‌ನಲ್ಲಿರುತ್ತವೆ. ಅನಗತ್ಯ ನ್ಯೂಸ್ ಕಂಟೆಂಟ್ ವೀಕ್ಷಿಸಲು ಫೋನ್ ಲಾಕ್ ತೆರೆಯುವ ಅಗತ್ಯ ಇರುವುದಿಲ್ಲ. ಲಾಕ್‌ಸ್ಕ್ರೀನ್‌ನಲ್ಲಿಯೇ ಸುದ್ದಿಸಾರ ತಿಳಿಯಬಹುದಾಗಿದೆ.

ನಿಖರ ಸುದ್ದಿಗೆ ಆದ್ಯತೆ

ನಿಖರ ಸುದ್ದಿಗೆ ಆದ್ಯತೆ

ಇಂದಿನ ಬಹುತೇಕ ಡಿಜಿಟಲ್ ನ್ಯೂಸ್‌ ಪ್ಲಾಟ್‌ಫಾರ್ಮ್‌ಗಳು ಕ್ಲಿಕ್ಕ್ ಬೈಟ್ಸ್‌ಗಾಗಿ ಆಕರ್ಷಕ ತಲೆಬರಹಗಳನ್ನು ನೀಡಿ ಜನರ ಗಮನ ಸೆಳೆಯುತ್ತವೆ. ಆದರೆ ಸುದ್ದಿಯಲ್ಲಿ ನಿಖರತೆ ಕಡಿಮೆ ಇರುತ್ತದೆ. ಗ್ಲ್ಯಾನ್ಸ್‌ ಆಪ್‌ ಇಂತಹ ಸಂಗತಿಗಳಿಂದ ದೂರವಿದ್ದು, ಬಳಕೆದಾರರಿಗೆ ನಿಖರ ಸುದ್ದಿ ಮತ್ತು ಅಗತ್ಯ ಮಾಹಿತಿ ಒದಗಿಸುವತ್ತ ಹೆಚ್ಚಿನ ಆದ್ಯತೆ ನೀಡುತ್ತದೆ. ಈ ಆಪ್‌ನಲ್ಲಿ ಸುದ್ದಿ ಪ್ರಕಟವಾಗುವ ಮುನ್ನ ಹಲವು ಹಂತಗಳಲ್ಲಿ ಸುದ್ದಿಯು ಚೆಕ್‌ ಮಾಡಲಾಗುತ್ತದೆ. ಆನಂತರವೇ ಆಪ್‌ನಲ್ಲಿ ಡಿಸ್‌ಪ್ಲೇ ಮಾಡಲಾಗುತ್ತದೆ.

ಹೆಚ್ಚು ಡಾಟಾ ಕಬಳಿಸುವುದಿಲ್ಲ

ಹೆಚ್ಚು ಡಾಟಾ ಕಬಳಿಸುವುದಿಲ್ಲ

ಗ್ಲ್ಯಾನ್ಸ್‌ ಲಾಕ್‌ ಸ್ಕ್ರೀನ್ ಆಪ್‌ ಭಿನ್ನ ಭಾಷೆಗಳ ಆಯ್ಕೆಯನ್ನು ಹೊಂದಿದ್ದು, ಬಳಕೆದಾರರು ಅವರ ಅಗತ್ಯ ಭಾಷೆಯನ್ನು ಸೆಟ್‌ ಮಾಡಿಕೊಳ್ಳಬಹುದಾಗಿದೆ. ಇಂಗ್ಲಿಷ್, ಹಿಂದಿ, ತಮಿಳ ಮತ್ತು ತೆಲಗು ಭಾಷೆಗಳ ಆಯ್ಕೆ ಇದ್ದು, 2020ರ ಮೊದಲ ತ್ರೈಮಾಸಿಕ ಅವಧಿಯೊಳಗೆ ಇನ್ನಷ್ಟು ಭಾಷೆಗಳ ಆಯ್ಕೆಯನ್ನು ಒದಗಿಸಲಿದೆ ಎಂದು ಗ್ಲ್ಯಾನ್ಸ್‌ ಹೇಳಿದೆ. ಅತ್ಯುತ್ತಮ ಸ್ಟೋರಿಗಳನ್ನು ನೀಡಲಿದ್ದು, ಅದಕ್ಕಾಗಿ ಗ್ಲ್ಯಾನ್ಸ್ ಅಧಿಕ ಡಾಟಾ ಕಬಳಿಸುವುದಿಲ್ಲ. ಇನ್ನು ಈ ಆಪ್‌ ಹಲವು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಸಪೋರ್ಟ್‌ ಪಡೆದಿದ್ದು, ಸ್ಯಾಮ್‌ಸಂಗ್ ಗ್ಯಾಲಕ್ಸಿ A ಮತ್ತು ಗ್ಯಾಲಕ್ಸಿ M ಸರಣಿ, ಶಿಯೋಮಿ ರೆಡ್ಮಿ ನೋಟ್ ಫೋನ್ ಸರಣಿ ಮತ್ತು ವಿವೋ ಸ್ಮಾರ್ಟ್‌ಫೋನ್‌ಗಳು ಗ್ಲ್ಯಾನ್ಸ್‌ ಆಪ್‌ ಅನ್ನು ಪ್ರಿ-ಇನ್‌ಸ್ಟಾಲ್‌ ಪಡೆದಿವೆ.

Best Mobiles in India

English summary
lockscreen service serves as a one-stop solution for most of your multimedia and news-centric requirements. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X