ಗೂಗಲ್ 'ಪಿಕ್ಸಲ್' ಹೊಸ ಫೋನ್‌ಗಳ ಲಾಂಚ್‌ಗೆ ಮೂಹೂರ್ತ ಫಿಕ್ಸ್!.ಅಚ್ಚರಿಯ ಟೀಸರ್‌!

|

ವಿಶ್ವದ ಟೆಕ್‌ ದಿಗ್ಗಜ ಗೂಗಲ್‌ ಕಂಪನಿಯು 'ಪಿಕ್ಸಲ್' ಹೆಸರಿನ ಸರಣಿಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿತ್ತು. ಇದೀಗ ಕಂಪನಿ ತನ್ನ ಪಿಕ್ಸಲ್ ಸ್ಮಾರ್ಟ್‌ಫೋನ್‌ ಸರಣಿಗೆ ಮತ್ತೆರಡು ಹೊಸ ಫೋನ್‌ಗಳನ್ನು ಸೇರಿಸುವ ಸುದ್ದಿ ಇದೀಗ ಫುಲ್ ಸೌಂಡ್‌ ಮಾಡುತ್ತಿದೆ. ಅವುಗಳಲ್ಲೊಂದು ಫೋನ್‌ ಮಿಡ್‌ರೇಂಜ್‌ ಬೆಲೆಯಲ್ಲಿ ರಿಲೀಸ್‌ ಆಗಲಿದೆ ಎನ್ನುವ ಸುದ್ದಿ ಗ್ರಾಹಕರಿಗೆ ಶಾಕ್‌ ಎನಿಸಿದ್ದು, ಬಿಡುಗಡೆಗೆ ಮೂಹೂರ್ತವು ಸಹ ಫಿಕ್ಸ್ ಆಗಿದೆ.

ಗೂಗಲ್ 'ಪಿಕ್ಸಲ್' ಹೊಸ ಫೋನ್‌ಗಳ ಲಾಂಚ್‌ಗೆ ಮೂಹೂರ್ತ ಫಿಕ್ಸ್!.ಅಚ್ಚರಿಯ ಟೀಸರ್‌!

ಹೌದು, ಗೂಗಲ್ ಕಂಪನಿಯ ಬಹುನಿರೀಕ್ಷಿಯ 'ಗೂಗಲ್ ಪಿಕ್ಸಲ್ 3a' ಮತ್ತು 'ಗೂಗಲ್ ಪಿಕ್ಸಲ್ 3a XL' ಸ್ಮಾರ್ಟ್‌ಫೋನ್‌ಗಳು ಇದೇ ಮೇ 7ರಂದು ಲಾಂಚ್‌ ಆಗಲಿದ್ದು, ಅದರ ಕುರಿತಾಗಿ ಗೂಗಲ್ ಟೀಸರ್‌ ಅನ್ನು ಸಹ ಬಿಡುಗಡೆ ಮಾಡಿದೆ. ಪರ್ಪಲ್‌ ಬಣ್ಣದಲ್ಲಿರುವ 'G' ಲೊಗೊ ಜೊತೆಗೆ 'ಹೆಲ್ಪ್‌ಇಸ್ ಆನ್‌ ದಿ ವೇ' ಎಂಬ ಬರಹದ ಟೀಸರ್‌ ಗ್ರಾಹಕರಲ್ಲಿ ಹೊಸ ಪಿಕ್ಸಲ್ ಸ್ಮಾರ್ಟ್‌ಪೋನ್‌ ಬಗ್ಗೆ ನಿರೀಕ್ಷೆಗಳನ್ನು ಇಮ್ಮಡಿಗೊಳಿಸಿದೆ.

ಗೂಗಲ್ 'ಪಿಕ್ಸಲ್' ಹೊಸ ಫೋನ್‌ಗಳ ಲಾಂಚ್‌ಗೆ ಮೂಹೂರ್ತ ಫಿಕ್ಸ್!.ಅಚ್ಚರಿಯ ಟೀಸರ್‌!

ಬ್ಲ್ಯಾಕ್‌, ವೈಟ್‌ ಮತ್ತು ಐರಿಶ್ ಕಲರ್‌ ಸೇರಿದಂತೆ ಮೂರು ಕಲರ್‌ ವೇರಿಯಂಟ್‌ ಆಯ್ಕೆಗಳನ್ನು ಹೊಂದಿರಲಿರುವ ಗೂಗಲ್‌ ಈ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ನೂತನ ಆಂಡ್ರಾಯ್ಡ್‌ Q ಬೀಟಾ ಓಎಸ್‌ ಕಾರ್ಯನಿರ್ವಹಿಸಲಿದೆ ಎನ್ನಲಾಗುತ್ತಿದೆ. ಹಾಗಾದರೇ ಲೀಕ್‌ ಮಾಹಿತಿಯಂತೆ ಗೂಗಲ್ ಪಿಕ್ಸಲ್ 3a ಮತ್ತು ಗೂಗಲ್ ಪಿಕ್ಸಲ್ 3a XL ಸ್ಮಾರ್ಟ್‌ಫೋನ್‌ಗಳು ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿರಲಿವೆ ಎಂಬುದನ್ನು ನೋಡೋಣ ಬನ್ನಿರಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ಗೂಗಲ್ ಪಿಕ್ಸಲ್ 3a ಸ್ಮಾರ್ಟ್‌ಫೋನ್‌ ಎಂಟ್ರಿ ಲೆವೆಲ್ ಫೋನ್‌ ಆಗಲಿದ್ದು, 5.6 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಗೂಗಲ್ ಪಿಕ್ಸಲ್ 3a XL ಸ್ಮಾರ್ಟ್‌ಫೋನ್‌ 6 ಇಂಚಿನ OLED ಸಾಮರ್ಥ್ಯದ ಫುಲ್‌ ಹೆಚ್‌ಡಿ ರೆಸಲ್ಯೂಶನ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

ಪ್ರೊಸೆಸರ್‌

ಪ್ರೊಸೆಸರ್‌

'ಪಿಕ್ಸಲ್ 3a' ಸ್ಮಾರ್ಟ್‌ಫೋನ್‌ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್‌ 670 ಪ್ರೊಸೆಸರ್‌ ಅನ್ನು ಒಳಗೊಂಡಿರಲಿದ್ದು, ಇದರೊಂದಿಗೆ 4GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿರಲಿದೆ. ಹಾಗೇ 'ಪಿಕ್ಸಲ್ 3a XL' ಸ್ಮಾರ್ಟ್‌ಫೋನ್‌ ಸ್ನ್ಯಾಪ್‌ಡ್ರಾಗನ್‌ 710 SoC ಪ್ರೊಸೆಸರ್ ಹೊಂದಿರಲಿದ್ದು, 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿರಲಿದೆ.

ಕ್ಯಾಮೆರಾ

ಕ್ಯಾಮೆರಾ

ಗೂಗಲ್ ಪಿಕ್ಸಲ್ 3a ಮತ್ತು ಗೂಗಲ್ ಪಿಕ್ಸಲ್ 3a XL ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ 12 ಮೆಗಾಪಿಕ್ಸಲ್ ಸಾಮರ್ಥ್ಯದ ರೇರ್ ಕ್ಯಾಮೆರಾ ಮತ್ತು 8 ಮೆಗಾಪಿಕ್ಸಲ್ ಕ್ಯಾಮೆರಾ ನೀಡುವ ಸಾಧ್ಯತೆಗಳಿದ್ದು, ಇದರೊಂದಿಗೆ LED ಫ್ಲ್ಯಾಶ್ ಇರಲಿದೆ. ಹೆಚ್‌ಡಿ ವಿಡಿಯೊ ಕಾಲಿಂಗ್ ಸೌಲಭ್ಯ ಸಹ ಇರಲಿದೆ ಎನ್ನಲಾಗುತ್ತಿದೆ.

ಬ್ಯಾಟರಿ

ಬ್ಯಾಟರಿ

ಗೂಗಲ್ ಪಿಕ್ಸಲ್ 3a ಸ್ಮಾರ್ಟ್‌ಫೋನ್‌ ಸುಮಾರು 3,000mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಒದಗಿಸಲಿದೆ ಎಂದು ಹೇಳಲಾಗುತ್ತಿದ್ದು, ಇನ್ನೂ ಪಿಕ್ಸಲ್ 3a XL ಸ್ಮಾರ್ಟ್‌ಪೋನ್‌ಗೆ ಪಿಕ್ಸಲ್ 3a ಸ್ಮಾರ್ಟ್‌ಫೋನ್‌ಗಿಂತ ಅತ್ಯುತ್ತಮ ಬಾಳಿಕೆಯ ಸಾಮರ್ಥ್ಯ ಬ್ಯಾಟರಿಯನ್ನು ಒದಗಿಸಲಾಗುವುದು ಎಂದು ಲೀಕ್ ಮಾಹಿತಿಯಿಂದ ತಿಳಿದುಬಂದಿದೆ.

Best Mobiles in India

English summary
Google teases May 7 announcement of Pixel 3a and 3a XL.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X