Subscribe to Gizbot

ಡ್ಯುಯಲ್ ಕ್ಯಾಮೆರಾ ಇರುವ ಶಿಯೋಮಿ Mi A1 ಮತ್ತು ಹಾನರ್ 7X: ಕೊಡುವ ಬೆಲೆಗೆ ಯಾವುದು ಬೆಸ್ಟ್..?

Written By:

ಮದ್ಯಮ ಸರಣಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಸದ್ದು ಮಾಡುತ್ತಿದ್ದು, ಅದರಲ್ಲಿ 18 ಸಾವಿರಕ್ಕೆ ಉತ್ತಮ ವಿಶೇಷತೆಗಳನ್ನು ಒಳಗೊಂಡಿರುವ ಸ್ಮಾರ್ಟ್‌ಫೋನ್‌ಗಳು ಟಾಪ್ ಎಂಡ್ ಫೋನ್‌ಗಳನ್ನು ಮಿರಿಸುವ ರೀತಿಯಲ್ಲಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಜನರು ಸಹ ಬಜೆಟ್ ಹಾಗೂ ಟಾಪ್‌ಎಂಡ್ ಫೋನ್‌ಗಳಿಗಿಂತ ಹೆಚ್ಚಾಗಿ ಮಧ್ಯಮ ಸರಣಿಯ ಸ್ಮಾರ್ಟ್‌ಫೋನ್‌ ಕಡೆಗೆ ಹೆಚ್ಚಿನ ಒಲವು ಹೊಂದುತ್ತಿರುವುದು ಇತ್ತೀಚಿನ ದಿನಗಳಲ್ಲಿ ಗೋಚರವಾಗುತ್ತಿದೆ.

ಡ್ಯುಯಲ್ ಕ್ಯಾಮೆರಾ ಇರುವ ಶಿಯೋಮಿ Mi A1 ಮತ್ತು ಹಾನರ್ 7X: ಯಾವುದು ಬೆಸ್ಟ್..?

ಓದಿರಿ: ಮಾರುಕಟ್ಟೆಗೆ ಬಂದಿದೆ ಆಂಡ್ರಾಯ್ಡ್ ಐಫೋನ್ X: ನೋಡಲು ಮಾತ್ರವಲ್ಲ, ವಿಶೇಷತೆಗಳು ಕಾಪಿ..!

ಮಧ್ಯಮ ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪನಿಗಳ ಪಾಲು ಹೆಚ್ಚಾಗಿದ್ದು, ಅದರಲ್ಲಿಯೂ ಹುವಾವೆ ಕಂಪನಿಯೂ ಹಾನರ್ ಹೆಸರಿನಲ್ಲಿ ಬಿಡುಗಡೆ ಮಾಡುತ್ತಿರುವ ಸ್ಮಾರ್ಟ್‌ಫೋನ್‌ಗಳ ಪಾಲು ಅಧಿಕವಾಗಿದೆ, ಮೊದಲಿಗೆ ಮಾರುಕಟ್ಟೆಯಲ್ಲಿ ಡ್ಯುಯಲ್ ಲೈನ್ಸ್ ಕ್ಯಾಮೆರಾ ಹೊಂದಿರುವ ಮಧ್ಯಮ ಬೆಲೆಯ ಫೋನ್ ಹಾನರ್ 6X ಮಾರುಕಟ್ಟೆಗೆ ಬಂದಿತ್ತು. ಹೆಚ್ಚಿನ ಜನರನ್ನು ಸಳೆಯುವಲ್ಲಿ ಯಶಸ್ವಿಯಾಗಿತ್ತು. ಈಗ ಇದೇ ಮಾದರಿಯಲ್ಲಿ ಹಾನರ್ 7X ಸ್ಮಾರ್ಟ್‌ಫೋನ್ ಮತ್ತು ಶಿಯೋಮಿ Mi A1 ಸ್ಮಾರ್ಟ್‌ಫೋನ್ ಹೆಚ್ಚು ಸಡ್ಡು ಮಾಡುತ್ತಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶಿಯೋಮಿ Mi A1ಗೆ ಸೆಡ್ಡು ಹೊಡೆಯಲಿದೆ: ಹಾನರ್ 7X

ಶಿಯೋಮಿ Mi A1ಗೆ ಸೆಡ್ಡು ಹೊಡೆಯಲಿದೆ: ಹಾನರ್ 7X

ಇದೇ ಮಾದರಿಯಲ್ಲಿ ಸದ್ಯ ಮಾರುಕಟ್ಟೆಗೆ ಹಾನರ್ 7X ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದ್ದು, ಡ್ಯುಯಲ್ ಲೈನ್ಸ್ ಕ್ಯಾಮೆರಾ, 18:9 ಅನುಪಾತದ ಡಿಸ್‌ಪ್ಲೇ ಸೇರಿದಂತೆ ಹಲವು ವಿಷೇಶತೆಗಳನ್ನು ಮೈಗೂಡಿಸಿಕೊಂಡಿದ್ದು, ಬೆಲೆ ಹಾಗೂ ವಿಶೇಷತೆಗಳಲ್ಲಿ ಶಿಯೋಮಿ Mi A1 ಸ್ಮಾರ್ಟ್‌ಫೋನ್‌ಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿದೆ. ಈ ಹಿನ್ನಲೆಯಲ್ಲಿ ಈ ಎರಡು ಫೋನ್‌ಗಳಲ್ಲಿ ಯಾವುದು ಬೆಸ್..?

ವಿನ್ಯಾಸ ಮತ್ತು ಡಿಸ್‌ಪ್ಲೇ:

ವಿನ್ಯಾಸ ಮತ್ತು ಡಿಸ್‌ಪ್ಲೇ:

ಹಾನರ್ 7X ಸ್ಮಾರ್ಟ್‌ಫೋನ್ ಉತ್ತಮವಾದ ವಿನ್ಯಾಸವನ್ನು ಹೊಂದಿದೆ. 5.99 ಇಂಚಿನ FHD ಪ್ಲಸ್ ಗುಣಮಟ್ಟದ 18:9 ಅನುಪಾತದ ಡಿಸ್‌ಪ್ಲೇಯನ್ನು ಇದರಲ್ಲಿ ಕಾಣಬಹುದಾಗಿದೆ. ಅಲ್ಲದೇ ಶಿಯೋಮಿ Mi A1 ಗೆ ಹೋಲಿಕೆ ಮಾಡಿದರೆ ನೋಡಲು ಉತ್ತಮ ವಿನ್ಯಾಸವನ್ನು ಹೊಂದಿದೆ. ಅಲ್ಲದೇ ಶಿಯೋಮಿ Mi A1 ಇನ್ನು ಹಳೇಯ 16:9 ಅನುಪಾತದ ಡಿಸ್‌ಪ್ಲೇಯನ್ನು ಹೊಂದಿದೆ.

ಬ್ಯಾಟರಿ ಮತ್ತು ಮೆಮೊರಿ:

ಬ್ಯಾಟರಿ ಮತ್ತು ಮೆಮೊರಿ:

ಹಾನರ್ 7X ಸ್ಮಾರ್ಟ್‌ಫೋನ್ ನಲ್ಲಿ ಉತ್ತಮ ಬ್ಯಾಟರಿ ಮತ್ತು ಮೆಮೊರಿಯನ್ನು ಕಾಣಬಹುದಾಗಿದೆ. ಹಾನರ್ 7X ಸ್ಮಾರ್ಟ್‌ಫೋನ್ ನಲ್ಲಿ 3340mAh ಬ್ಯಾಟರಿ ಇದ್ದರೇ ಶಿಯೋಮಿ Mi A1ನಲ್ಲಿ 3,080mAh ಬ್ಯಾಟರಿಯನ್ನು ಕಾಣಬಹುದಾಗಿದೆ. ಅಲ್ಲದೇ ಹಾನರ್ 7X ಸ್ಮಾರ್ಟ್‌ಫೋನ್ ನಲ್ಲಿ 64GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದ್ದು, ಅಲ್ಲದೇ 256GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದು. ಇದು ಶಿಯೋಮಿ Mi A1 ಗಿಂತಲೂ ಎರಡು ಪಟ್ಟು ಅಧಿಕ.

ಡ್ಯುಯಲ್ ಕ್ಯಾಮೆರಾ ಸೆಟಪ್:

ಡ್ಯುಯಲ್ ಕ್ಯಾಮೆರಾ ಸೆಟಪ್:

ಶಿಯೋಮಿ Mi A1 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 12MP + 12MP ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಆದರೆ ಹಾನರ್ 7X ನಲ್ಲಿ 16MP + 2MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಎರಡು ಸ್ಮಾರ್ಟ್‌ಫೋನ್‌ ಡ್ಯುಯಲ್ ಲೈನ್ಸ್ ಕ್ಯಾಮೆರಾ ಸೆಟಪ್ ವಿಭಿನ್ನವಾಗಿದೆ. ಶಿಯೋಮಿ Mi A1ನಲ್ಲಿ ಟೆಲಿಲೈನ್ಸ್ ಕಾಣಬಹುದಾಗಿದ್ದು, ಹಾನರ್ 7X ನಲ್ಲಿ ಈ ಆಯ್ಕೆ ಇಲ್ಲವಾದರೂ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಶಕ್ತವಾಗಿದೆ.

ಸಾಫ್ಟ್‌ವೇರ್ ಮತ್ತು ಪ್ರೋಸೆಸರ್:

ಸಾಫ್ಟ್‌ವೇರ್ ಮತ್ತು ಪ್ರೋಸೆಸರ್:

ಶಿಯೋಮಿ Mi A1 ಸ್ಮಾರ್ಟ್‌ಫೋನ್ ನಲ್ಲಿ ಸ್ನಾಪ್‌ಡ್ರಾಗನ್ 625 CPU ವನ್ನು ಕಾಣಬಹುದಾಗಿದ್ದು, ಇದೇ ಹಾನರ್ 7X ನಲ್ಲಿ ಹುವಾವೆ ಕಿರನ್ 659 ಚಿಪ್‌ಸೆಟ್ ಅಳವಡಿಸಲಾಗಿದೆ. ಎರಡು ಚಿಪ್‌ ಸೆಟ್‌ಗಳು ಆಕ್ಟಾಕೋರ್ ಪ್ರೋಸೆಸರ್ ಅನ್ನು ಒಳಗೊಂಡಿದ್ದು, ಎರಡು ಸಹ ಒಂದೇ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಶಿಯೋಮಿ Mi A1 ಸ್ಟಾಕ್ ಆಂಡ್ರಾಯ್ಡ್ ನ್ಯಾಗಾದಲ್ಲಿ ರನ್ ಆಗಲಿದ್ದು, ಹಾನರ್ 7X ಆಂಡ್ರಾಯ್ಡ್ ನ್ಯಾಗಾದೊಂದಿಗೆ EMUI 5.1 ಅನ್ನು ಒಳಗೊಂಡಿದೆ ಎನ್ನಲಾಗಿದೆ.

ಕೊನೆಯ ಮಾತು:

ಕೊನೆಯ ಮಾತು:

ಹಾನರ್ 7X ಸ್ಮಾರ್ಟ್‌ಫೋನ್ ಕೊಡುವ ಬೆಲೆಗೆ ಉತ್ತಮ ಫೋನ್ ಆಗಿದ್ದು, ರೂ.12,999ಕ್ಕೆ ದೊರೆಯಲಿದ್ದು, ಶಿಯೋಮಿ Mi A1 ಸ್ಮಾರ್ಟ್‌ಫೋನ್ ಬೆಲೆಗಿಂತ ರೂ.1000 ಕಡಿಮೆಗೆ ಲಭ್ಯವಿರಲಿದೆ. ಒಟ್ಟಿನಲ್ಲಿ ಎರಡು ಫೋನ್ ಗಳು ಉತ್ತಮವಾಗಿದ್ದು, ಬಳಕೆದಾರರು ತಮ್ಮ ಅಭಿರುಚಿಗೆ ತಕ್ಕಂತೆ ಖರೀದಿ ಮಾಡಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Honor 7X and Xiaomi MiA1 sports Dual lens cameras. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot