ಹಾನರ್‌ನಿಂದ ಮತ್ತೊಂದು ಸ್ಮಾರ್ಟ್‌ಪೋನ್: ಹಾನರ್ 8 ಲೈಟ್

Written By:

ಪ್ರಸ್ತುತ ಹಣಕಾಸಿನ ವರ್ಷದಲ್ಲಿ ಈ ಬಾರಿ ಆಪಲ್ ಜಾಗತಿಕವಾಗಿ ಸ್ಮಾರ್ಟ್‌ಪೋನ್ ಮಾರಾಟದಲ್ಲಿ ನಂ.1 ಸ್ಥಾನವನ್ನು ಅಲಂಕರಿಸಿದ್ದು, ಸ್ಯಾಮಸಂಗ್ ಎರಡನೇ ಸ್ಥಾನದಲ್ಲಿದೆ. ಇದರ ನಂತರದಲ್ಲಿರುವದೇ ಹುವಾವೇ ಕಂಪನಿ. ಹುವಾವೇ ಮಾಲೀಕತ್ವದ ಹಾನರ್ ಸ್ಮಾರ್ಟ್‌ಪೋನುಗಳು ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚಿನ ಸದ್ದು ಮಾಡುತ್ತಿವೆ.

ಹಾನರ್‌ನಿಂದ ಮತ್ತೊಂದು ಸ್ಮಾರ್ಟ್‌ಪೋನ್: ಹಾನರ್ 8 ಲೈಟ್

ಓದಿರಿ: ವಾಟ್ಸಪ್‌ನಲ್ಲಿ ಕಳುಹಿಸಿದ್ದ ಮೇಸೆಜ್ ಡಿಲೀಟ್-ಎಡಿಟ್ ಮಾಡುವುದು ಹೇಗೆ..?

ಮೊನ್ನೆ ತಾನೇ ಹಾನರ್ 6 ಎಂಬ ಸ್ಮಾರ್ಟ್‌ಪೋನು ಬಿಡುಗಡೆಯಾಗಿತ್ತು, ಅದರ ಬೆನ್ನಲೇ ಫೆಬ್ರವರಿಯಲ್ಲಿ ಹಾನರ್ 8 ಲೈಟ್ ಎಂಬ ಸ್ಮಾರ್ಟ್‌ಪೋನನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದು, ಈ ಹಿನ್ನಲೆಯಲ್ಲಿ ಹಾನರ್ 8 ಲೈಟ್ನ ಹೇಗಿದೆ ಎಂದನುದನ್ನು ಈ ಮುಂದೆ ತಿಳಿಯುವ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5.2 ಇಂಚಿನ Full HD ಡಿಸ್‌ಪ್ಲೇ:

5.2 ಇಂಚಿನ Full HD ಡಿಸ್‌ಪ್ಲೇ:

ಹಾನರ್ 8 ಲೈಟ್ 5.2 ಇಂಚಿನ Full HD ಡಿಸ್‌ಪ್ಲೇ ಹೊಂದಿದ್ದು, 1080x1920 p 2.5D ಕರ್ವಡ್ ಗ್ಲಾಸ್ ಪ್ರೋಟೆಕಷನ್ ಹೊಂದಿದೆ. ಉತ್ತಮ ಗುಣಮಟ್ಟದ ವಿಡಿಯೋ ನೋಡಲು ಇದು ಸಹಕಾರಿಯಾಗಿದೆ.

3 GB RAM:

3 GB RAM:

ವೇಗದ ಕಾರ್ಯ ನಿರ್ವಹಣೆಗೆ 655 ಆಕ್ಟಾ ಕೋರ್ CPU ಹೊಂದಿದ್ದು, ಇದರ ಜೊತೆಯದಲ್ಲಿ 3 GB RAM ಸಹ ಈ ಪೋನಿನಲ್ಲಿದೆ. ಅಲ್ಲದೇ 16 GB ಇಂಟರ್ನಲ್ ಮೆಮೊರಿ ಇದರಲ್ಲಿದ್ದು, 128 GB ಕಾರ್ಡ್‌ ಹಾಕಿಕೊಳ್ಳುವ ಅವಕಾಶವನ್ನು ಈ ಪೋನ್ ಹೊಂದಿದೆ.

12 MP ಕ್ಯಾಮೆರಾ:

12 MP ಕ್ಯಾಮೆರಾ:

ಈ ಪೋನಿನಲ್ಲಿ ಉತ್ತಮ ಕ್ಯಾಮೆರಾ ಇದ್ದು, ಹಿಂಭಾಗದಲ್ಲಿ 12 MP ಕ್ಯಾಮೆರಾ ಇದ್ದು, ಮುಂಭಾಗದಲ್ಲಿ 8 MP ಕ್ಯಾಮೆರಾ ಇದೆ. ಸೆಲ್ಫೆ ತೆಗೆಯಲೂ ಹೇಳಿ ಮಾಡಿಸಿದಂತಿದೆ. ವೈಡ್ ಆಂಗಲ್ ಲೈಸ್ ಮುಂಭಾಗದಲ್ಲಿದೆ.

ಆಂಡ್ರಾಯ್ಡ್ ನ್ಯೂಗಾ:

ಆಂಡ್ರಾಯ್ಡ್ ನ್ಯೂಗಾ:

ಈ ಫೋನ್ ನೂತನವಾಗಿ ಬಿಡುಗಡೆಯಾಗಲಿರುವ ಆಂಡ್ರಾಯ್ಡ್‌ ನ್ಯೂಗಾ 7.0ದಲ್ಲಿ ಕಾರ್ಯ ನಿರ್ವಹಿಸಲಿದ್ದು, 3000mAh ಬ್ಯಾಟರಿಯನ್ನು ಹೊಂದಿದೆ. ಅಲ್ಲದೇ ಈ ಪೋನು 4 ಕಲರ್‌ಗಳಲ್ಲಿ ಲಭ್ಯವಿದ್ದು, ಬ್ಯಾಕ್ಲ್, ಬ್ಲೂ, ಗೋಲ್ಡ್ ಮತ್ತು ವೈಟ್ ಕಲರ್ ನಲ್ಲ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
the Honor 8 Lite features a 5.2-inch full-HD (1080x1920 pixels) display with 2.5D curved glass protection. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot