ಅಕ್ಟೋಬರ್ 5ಕ್ಕೆ ಬಿಡುಗಡೆಯಾಗಲಿರುವ ಹಾನರ್ 8ರ ಬಗ್ಗೆ ನಿಮಗೆ ಗೊತ್ತಿರಬೇಕಾದ 5 ಸಂಗತಿಗಳು.

|

ಹುವಾಯಿ ಕಂಪನಿಯ ಹಾನರ್ ತನ್ನ ಹೊಸ ಸ್ಮಾರ್ಟ್ ಫೋನ್ ಹಾನರ್ 8 ಅನ್ನು ಭಾರತದಲ್ಲಿ ಅಕ್ಟೋಬರಿನಲ್ಲಿ ಬಿಡುಗಡೆಗೊಳಿಸಲಿದೆ. ಹಾನರ್ 8, ಹುವಾಯಿ ಭಾರತದಲ್ಲಿ 2016ರಲ್ಲಿ ಬಿಡುಗಡೆಗೊಳಿಸುತ್ತಿರುವ ಫ್ಲಾಗ್ ಶಿಪ್ ಫೋನ್. ಇದರ ಬೆಲೆ ಅಂದಾಜು 27,000 ರುಪಾಯಿ ಇರಲಿದೆ.

ಅಕ್ಟೋಬರ್ 5ಕ್ಕೆ ಬಿಡುಗಡೆಯಾಗಲಿರುವ ಹಾನರ್ 8

ಹೊಸ ಫೋನಿನ ಗುಣವೈಶಿಷ್ಟ್ಯಗಳ ಬಗ್ಗೆ ಕಂಪನಿಯು ಅಧಿಕೃತವಾಗಿ ಏನನ್ನೂ ಹೇಳಿಲ್ಲವಾದರೂ ಈ ಸ್ಮಾರ್ಟ್ ಫೋನಿನಲ್ಲಿರುವ ಹಾರ್ಡ್ ವೇರ್ ಬಗೆಗಿನ ಮಾಹಿತಿಗಳು ಈಗಾಗಲೇ ತಿಳಿದಿದೆ.

ಓದಿರಿ: ಅಮೆಜಾನ್ ಗ್ರೇಟ್ ಸೇಲ್‌ನಲ್ಲಿ ಟ್ಯಾಬ್ಲೆಟ್‌ಗಳಿಗೆ 50% ರಿಯಾಯಿತಿ

ಹಾನರ್ 8ರ ಬಗ್ಗೆ ನಿಮಗೆ ತಿಳಿದಿರಬೇಕಾದ 5 ಸಂಗತಿಗಳು ಇಲ್ಲಿವೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಛಾಯಾಗ್ರಹಣದ ಬಗ್ಗೆ ಆಸಕ್ತಿ ಇರುವವರಿಗೆ...

ಛಾಯಾಗ್ರಹಣದ ಬಗ್ಗೆ ಆಸಕ್ತಿ ಇರುವವರಿಗೆ...

ಹುವಾಯಿ ಇತ್ತೀಚೆಗೆ ಬಿಡುಗಡೆಗೊಳಿಸಿದ ಕಂಪನಿಯ ಫ್ಲಾಗ್ ಶಿಪ್ ಪಿ9ನಲ್ಲಿ ಇದ್ದ ಲೈಕಾ ಡುಯಲ್ ಕ್ಯಾಮೆರ ನಮ್ಮನ್ನು ಆಕರ್ಷಿಸಿತ್ತು. ಹಾನರ್ 8ರಲ್ಲಿ ಅದೇ ತಂತ್ರಜ್ಞಾನವಿರಲಿದೆ - ಡುಯಲ್ ಕ್ಯಾಮೆರ ಇರಲಿದೆ (12+12 ಮೆಗಾಪಿಕ್ಸೆಲ್). ಆದರೆ ಪಿ9 ಮತ್ತು ಹಾನರ್ 8ರ ನಡುವಿನ ವ್ಯತ್ಯಾಸವೆಂದರೆ ಇದರಲ್ಲಿ ಸೋನಿ ಸಂವೇದಕಗಳಿರಲಿದೆ. ಒಂದು ಸಂವೇದಕ ಕಪ್ಪು ಬಿಳುಪು ಬಣ್ಣಗಳನ್ನು ಸೆರೆಹಿಡಿದರೆ, ಮತ್ತೊಂದು ಬಣ್ಣಗಳ ಮಾಹಿತಿಯನ್ನು ಸೆರೆಹಿಡಿಯುತ್ತದೆ. ನಂತರ ಎರಡೂ ಕ್ಯಾಮೆರಾದ ಚಿತ್ರಗಳನ್ನು ಸೇರಿಸಿ ಹೊಸ ಚಿತ್ರ ಮೂಡುತ್ತದೆ.

ಸೆಲ್ಫಿಗಳಿಗಾಗಿ ಹಾನರ್ 8ರಲ್ಲಿ 8 ಮೆಗಾಪಿಕ್ಸೆಲ್ಲಿನ ಕ್ಯಾಮೆರ ಇದೆ.

ಸಂಪೂರ್ಣವಾಗಿ ಲೋಹ ಮತ್ತು ಗಾಜು.

ಸಂಪೂರ್ಣವಾಗಿ ಲೋಹ ಮತ್ತು ಗಾಜು.

ಹಾನರ್ 8ರಲ್ಲಿ ಪೂರ್ಣವಾಗಿ ಲೋಹ ಮತ್ತು ಗಾಜಿನ ದೇಹವಿದೆ, ಉತ್ಕೃಷ್ಟ ಫೋನಿನಂತೆ ಕಾಣುತ್ತದೆ. ಹಿಂದೆ ಮತ್ತು ಮುಂದೆ 2.5 ಡಿ ಕರ್ವ್ಡ್ ಗಾಜು ಇದೆ, ಬದಿಯಲ್ಲಿ ಲೋಹದ ಪಟ್ಟಿಯಿದೆ.

ಲೋಹ ಮತ್ತು ಗಾಜಿನಿಂದ ನಿರ್ಮಾಣವಾಗಿದ್ದರೂ ಹಾನರ್ 8 ಕೈಯಿಂದ ಸುಲಭವಾಗಿ ಜಾರುವುದಿಲ್ಲ. ಜೊತೆಗೆ ಸ್ಮಾರ್ಟ್ ಫೋನ್ ಅನ್ನು ಸುಲಭವಾಗಿ ಒಂದು ಕೈಯಲ್ಲಿಡಿದು ಉಪಯೋಗಿಸಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ, ಹುವಾಯಿ ಎಮೊಟಿಕಾನ್ ಯುಐ 4.0 ಜೊತೆಗೆ

ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ, ಹುವಾಯಿ ಎಮೊಟಿಕಾನ್ ಯುಐ 4.0 ಜೊತೆಗೆ

ಹುವಾಯಿ 8 ರಲ್ಲಿ ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ ಇರಲಿದೆ. ಜೊತೆಗೆ ಎಮೊಟಿಕಾನ್ ಯುಐ 4.0 ಇರಲಿದೆ.

ವೈಶಿಷ್ಟ್ಯತೆಗಳು ತುಂಬಿಕೊಂಡಿವೆ!

ವೈಶಿಷ್ಟ್ಯತೆಗಳು ತುಂಬಿಕೊಂಡಿವೆ!

ನಿರ್ದಿಷ್ಟ ವೈಶಿಷ್ಯತೆಗಳು ಇನ್ನೂ ದೃಡಪಟ್ಟಿಲ್ಲ ಎಂದು ಈಗಾಗಲೇ ತಿಳಿಸಿದ್ದೇವೆ. ಆದರೆ ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳ್ಳಲಿರುವ ಫೋನಿನಲ್ಲಿ ಹುವಾಯಿಯ ಕಿರಿನ್ 950 ಚಿಪ್ ಸೆಟ್ ಇರಲಿದೆ ಎನ್ನುವುದು ನಮ್ಮ ನಂಬುಗೆ. 4ಜಿಬಿ ರ್ಯಾಮ್ ಮತ್ತು 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯವಿರಲಿದೆ. ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 128 ಜಿಬಿವರೆಗೆ ವಿಸ್ತರಿಸಿಕೊಳ್ಳುವ ಸೌಲಭ್ಯವಿರಲಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೇಗದ ಬೆರಳಚ್ಚು ಸಂವೇದಕ ಮತ್ತು ಶೀಘ್ರ ಚಾರ್ಜಿಂಗ್.

ವೇಗದ ಬೆರಳಚ್ಚು ಸಂವೇದಕ ಮತ್ತು ಶೀಘ್ರ ಚಾರ್ಜಿಂಗ್.

ಹಾನರ್ 8ರ ಹಿಂಬದಿಯಲ್ಲಿ ಬೆರಳಚ್ಚು ಸಂವೇದಕವಿದೆ, ಅದನ್ನು ಉಪಯೋಗಿಸಿ ಫೋನ್ ಅನ್ ಲಾಕ್, ಕರೆ ಸ್ವೀಕಾರ/ನಿರಾಕರಣೆ, ಚಿತ್ರಗಳನ್ನು ಕ್ಲಿಕ್ಕಿಸುವುದು ಮತ್ತು ನೋಟಿಫಿಕೇಷನ್ಸ್ ಅನ್ನು ನೋಡಬಹುದು.

3,000 ಎಂ.ಎ.ಹೆಚ್ ಸಾಮರ್ಥ್ಯದ ಬ್ಯಾಟರಿ ಇರಲಿದೆ, ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದೆ.

ಹಾನರ್ 8ರ ಕುರಿತು ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಕಂಪನಿಯು ತನ್ನ ಮೊದಲ 'ಮೇಕ್ ಇನ್ ಇಂಡಿಯಾ' ಫೋನನ್ನು ಅಕ್ಟೋಬರಿನಲ್ಲಿ ಬಿಡುಗಡೆಗೊಳಿಸುವ ಬಗ್ಗೆ ತಿಳಿಸಿತ್ತು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Huawei is all set to launch company's sub branded flagship smartphone Honor 8 in india. Here is what we expect from the upcoming smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X