ಸ್ಮಾರ್ಟ್‌ಫೋನ್‌ ಅನ್ನು ಆಂಡ್ರಾಯ್ಡ್ 7.0 ನ್ಯೂಗಾ ಓಎಸ್‌ಗೆ ಅಪ್‌ಡೇಟ್‌ ಹೇಗೆ?

By Suneel
|

ಗೂಗಲ್‌ ತನ್ನ ಲೇಟೆಸ್ಟ್‌ ಓಎಸ್‌ ಆಂಡ್ರಾಯ್ಡ್ 7.0 ನ್ಯೂಗಾ ಅಪ್‌ಡೇಟ್‌ ಅನ್ನು ಆರಂಭಿಸಿದ್ದು, ನ್ಯೂಗಾ ಓಎಸ್‌ ನೆಕ್ಸಸ್‌ ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್ಲೆಟ್‌ಗಳಿಗೆ ದೊರೆಯಲಿದೆ. ಆಂಡ್ರಾಯ್ಡ್‌ ಮಾರ್ಷ್‌ಮಲ್ಲೊ ನಂತರ ಅಭಿವೃದ್ದಿಪಡಿಸಿರುವ ಹೊಸ ಓಎಸ್‌ ನ್ಯೂಗಾ ಹಲವು ವಿಶೇಷತೆಗಳನ್ನು ಹೊಂದಿದೆ. ನ್ಯೂಗಾ ಓಏಸ್‌ ಅಪ್‌ಡೇಟ್‌ ಆದ ಸ್ಮಾರ್ಟ್‌ಫೋನ್‌ಗಳಲ್ಲಿ ಮಲ್ಟಿ ವಿಂಡೋಸ್‌ಗಳನ್ನು ಓಪನ್‌ ಮಾಡಿ ಒಂದೇ ಸಮಯದಲ್ಲಿ ಎರಡು ಆಪ್‌ಗಳನ್ನು ಎರಡು ಸೈಡ್‌ಗಳಲ್ಲೂ ಸಹ ಉಪಯೋಗಿಸಬಹುದಾಗಿದೆ.

ಸುಧಾರಿತ ನೋಟಿಫಿಕೇಶನ್ ಆನ್‌ಲೈನ್‌ ರೀಪ್ಲೇ, ಬ್ಯಾಗ್ರೌಂಡ್ ಡಾಟಾ ನಿರ್ಬಂಧನೆ, ಬ್ಯಾಟರಿ ಲೈಫ್‌ ಹೆಚ್ಚಿಸುವ ಡೋಜ್ ಮೋಡ್‌ಗಳನ್ನು ನ್ಯೂಗಾ ಓಎಸ್‌ನಿಂದ ನಿರ್ವಹಿಸಬಹುದಾಗಿದೆ. ಗೂಗಲ್‌ ಎಮೋಜಿ ಯುನಿಕೋಡ್‌ 9, ವುಲ್ಕಾನ್‌ ಗ್ರಾಫಿಕ್ಸ್‌ ಎಪಿಐ ಮತ್ತು ಮೀಸಲಿಟ್ಟ ವಿಆರ್‌ ಮೋಡ್‌ ಅನ್ನು ಸಪೋರ್ಟ್‌ ಮಾಡುವಂತೆ ಅಭಿವೃದ್ದಿಪಡಿಸಿದೆ.

ಅಂದಹಾಗೆ ಈ ಅಪ್‌ಡೇಟ್‌ ಓಟಿಎ (Over-the=air) ಮೂಲಕ ಆಗಲಿದ್ದು, ನೆಕ್ಸಸ್‌ ಸ್ಮಾರ್ಟ್‌ಫೋನ್‌ಗಳನ್ನು ಅಪ್‌ಡೇಟ್‌ ಮಾಡಬಹುದಾಗಿದೆ. ಯಾವ ಯಾವ ಸ್ಮಾರ್ಟ್‌ಫೋನ್‌ಗಳಿಗೆ ನ್ಯೂಗಾ ಓಎಸ್‌ ಅಪ್‌ಡೇಟ್‌ ಮಾಡಬಹುದು, ಹಾಗೂ ಅಪ್‌ಡೇಟ್‌ ಮಾಡುವುದು ಹೇಗೆ ಎಂದು ಲೇಖನದ ಸ್ಲೈಡರ್‌ ಓದಿ ತಿಳಿಯಿರಿ.

ಆಂಡ್ರಾಯ್ಡ್ 7.0 'ನ್ಯೂಗಾ' ಓಎಸ್‌ ನೆಕ್ಸಸ್ ಸ್ಮಾರ್ಟ್‌ಫೋನ್‌ಗೆ ಇಂದಿನಿಂದ ಅಪ್‌ಡೇಟ್‌

ಯಾವ ಯಾವ ಸ್ಮಾರ್ಟ್‌ಫೋನ್‌ಗಳಿಗೆ ಅಪ್‌ಡೇಟ್‌ ಲಭ್ಯ

ಯಾವ ಯಾವ ಸ್ಮಾರ್ಟ್‌ಫೋನ್‌ಗಳಿಗೆ ಅಪ್‌ಡೇಟ್‌ ಲಭ್ಯ

ಗೂಗಲ್‌ನ ಆಂಡ್ರಾಯ್ಡ್ 7.0 ನ್ಯೂಗಾ ಓಎಸ್‌ ಸಪೋರ್ಟ್ ಮಾಡುವ ಡಿವೈಸ್‌ಗಳೆಂದರೆ " ನೆಕ್ಸಸ್‌ ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್ಲೆಟ್‌. ನೆಕ್ಸಸ್ 5X ಮತ್ತು ನೆಕ್ಸಸ್ 6P, ನೆಕ್ಸಸ್ 6, ನೆಕ್ಸಸ್ 9, ನೆಕ್ಸಸ್ ಪ್ಲೇಯರ್ ಮತ್ತು ಪಿಕ್ಸೆಲ್‌ ಸಿ ಟ್ಯಾಬ್ಲೆಟ್‌. ಆದರೆ ನೆಕ್ಸಸ್‌ 5 ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ ಮಾರ್ಷ್‌ಮಲ್ಲೊ 6.01 ಓಎಸ್‌ ಸಪೋರ್ಟ್ ಮಾಡುವಲ್ಲಿ ಕೊನೆಗೊಂಡಿವೆ. ಇತರೆ ಸ್ಮಾರ್ಟ್‌ಫೋನ್‌ಗಳಾದ ಸ್ಯಾಮ್‌ಸಂಗ್‌, ಎಲ್‌ಜಿ, ಎಚ್‌ಟಿಸಿ ಮತ್ತು ಶ್ಯೋಮಿ ಕಂಪನಿ ಡಿವೈಸ್‌ಗಳಿಗೆ ತಡವಾಗಿ ಅಪ್‌ಡೇಟ್‌ ಮಾಡಲು ನಿರ್ಧರಿಸಿದೆ.

ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಅಪ್‌ಡೇಟ್‌ ಇಲ್ಲ

ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಅಪ್‌ಡೇಟ್‌ ಇಲ್ಲ

ಎಲ್‌ಜಿ ಜಿ5, ಎಚ್‌ಟಿಸಿ 10, ಒನ್ ಎಂ9, ಒನ್ ಎ9, ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಎಸ್‌7 ಫ್ಯಾಮಿಲಿ, ಗ್ಯಾಲಾಕ್ಸಿ ನೋಟ್ 7, ಮೊಟೊ ಜಿ4, ಮೊಟೊ ಜಿ4 ಪ್ಲಸ್‌, ಮೊಟೊ ಜಡ್‌ ಮತ್ತು ಮೊಟೊ ಜಡ್ ಪೋರ್ಸ್‌ ಸ್ಮಾರ್ಟ್‌ಫೋನ್‌ಗಳು ಮುಂಬರುವ ತಿಂಗಳಲ್ಲಿ ಅಪ್‌ಡೇಟ್‌ ಆಗಲಿವೆ.

ನಿಮ್ಮ ಡಿವೈಸ್‌ಗೆ ಆಂಡ್ರಾಯ್ಡ್‌ 7.0 ಅಪ್‌ಡೇಟ್‌ ಹೇಗೆ?

ನಿಮ್ಮ ಡಿವೈಸ್‌ಗೆ ಆಂಡ್ರಾಯ್ಡ್‌ 7.0 ಅಪ್‌ಡೇಟ್‌ ಹೇಗೆ?

ಮೊದಲನೇ ಹಂತದಲ್ಲಿ ಆಂಡ್ರಾಯ್ಡ್ 7.0 ಓಎಸ್‌ ಅಪ್‌ಡೇಟ್‌ಗಾಗಿ ಮೊದಲು ನಿಮ್ಮ ನೆಕ್ಸಸ್‌ ಸ್ಮಾರ್ಟ್‌ಫೋನ್‌ ಅಥವಾ ಪಿಕ್ಸೆಲ್‌ ಸಿ ಟ್ಯಾಬ್ಲೆಟ್‌ನಲ್ಲಿ "ಆಂಡ್ರಾಯ್ಡ್‌ ಬೆಟಾ ಪ್ರೋಗ್ರಾಮ್‌ ಪೇಜ್ ( Android Beta program page) ಅನ್ನು ಅನ್ನು ಓಫನ್ ಮಾಡಿ.

ನಿಮ್ಮ ಡಿವೈಸ್‌ಗೆ ಆಂಡ್ರಾಯ್ಡ್‌ 7.0 ಅಪ್‌ಡೇಟ್‌ ಹೇಗೆ?

ನಿಮ್ಮ ಡಿವೈಸ್‌ಗೆ ಆಂಡ್ರಾಯ್ಡ್‌ 7.0 ಅಪ್‌ಡೇಟ್‌ ಹೇಗೆ?

ಈ ಹಂತದಲ್ಲಿ ನಿಮ್ಮ ಗೂಗಲ್‌ ಖಾತೆಯಿಂದ ಲಾಗಿನ್‌ ಆಗಿ, ಸ್ಕ್ರಾಲ್‌ ಡೌನ್‌ ಮಾಡಿ ನಿಮ್ಮ ಎಲಿಜೆಬಲ್ ಡಿವೈಸ್‌ ಆಯ್ಕೆ ಮಾಡಿರಿ.

ನಿಮ್ಮ ಡಿವೈಸ್‌ಗೆ ಆಂಡ್ರಾಯ್ಡ್‌ 7.0 ಅಪ್‌ಡೇಟ್‌ ಹೇಗೆ?

ನಿಮ್ಮ ಡಿವೈಸ್‌ಗೆ ಆಂಡ್ರಾಯ್ಡ್‌ 7.0 ಅಪ್‌ಡೇಟ್‌ ಹೇಗೆ?

ಮೂರನೇ ಹಂತದಲ್ಲಿ "Enroll Device" ಮೇಲೆ ಟ್ಯಾಪ್ ಮಾಡಿ ನಿಮ್ಮ ಡಿವೈಸ್‌ ಅನ್ನು ರೀಸ್ಟಾರ್ಟ್ ಮಾಡಿ.

 ನಿಮ್ಮ ಡಿವೈಸ್‌ಗೆ ಆಂಡ್ರಾಯ್ಡ್‌ 7.0 ಅಪ್‌ಡೇಟ್‌ ಹೇಗೆ?

ನಿಮ್ಮ ಡಿವೈಸ್‌ಗೆ ಆಂಡ್ರಾಯ್ಡ್‌ 7.0 ಅಪ್‌ಡೇಟ್‌ ಹೇಗೆ?

ನಾಲ್ಕನೇ ಹಂತದಲ್ಲಿ ನೀವು ಅಪ್‌ಡೇಟ್ ನೋಟಿಫಿಕೇಶನ್‌ ಅನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪಡೆಯುತ್ತೀರಿ. ನೋಟಿಫಿಕೇಶನ್‌ ಪಡೆಯದಿದ್ದಲ್ಲಿ, ಮ್ಯಾನುವಲಿ ಅಪ್‌ಡೇಟ್‌ಗಾಗಿ Settings>>About Phone>> System Update>> Check Now ಗೇ ಹೋಗಿ.

ನಿಮ್ಮ ಡಿವೈಸ್‌ಗೆ ಆಂಡ್ರಾಯ್ಡ್‌ 7.0 ಅಪ್‌ಡೇಟ್‌ ಹೇಗೆ?

ನಿಮ್ಮ ಡಿವೈಸ್‌ಗೆ ಆಂಡ್ರಾಯ್ಡ್‌ 7.0 ಅಪ್‌ಡೇಟ್‌ ಹೇಗೆ?

ನ್ಯೂಗಾ ಓಎಸ್‌ ಅಪ್‌ಡೇಟ್‌ 1.1GB ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ. ಅಲ್ಲದೆ ಒಂದು ನೆಕ್ಸಸ್ ಡಿವೈಸ್‌ನಿಂದ ಇನ್ನೊಂದು ನೆಕ್ಸಸ್‌ ಡಿವೈಸ್‌ಗೆ ಸ್ಟೋರೇಜ್‌ ಸಾಮರ್ಥ್ಯ ಭಿನ್ನವಾಗಿದೆ. ಅಥವಾ ಈಗಾಗಲೇ ಆಂಡ್ರಾಯ್ಡ್ ಎನ್‌ ಡೆವಲಪರ್‌ ಪ್ರಿವೀವ್‌ ತಿಳಿದಿದ್ದಲ್ಲಿ 60MB ಸ್ಟೋರೇಜ್‌ ಸಾಮರ್ಥ್ಯದ OTA ಅಪ್‌ಡೇಟ್ ಅನ್ನು ಪಡೆಯಬಹುದು.

ಗಿಜ್‌ಬಾಟ್‌

ಗಿಜ್‌ಬಾಟ್‌

ವಿಶ್ವ ಮಾನ್ಯತೆ ಗಳಿಸಿಕೊಂಡ ಭಾರತೀಯ ಟೆಕ್ ಸಾಧಕರುವಿಶ್ವ ಮಾನ್ಯತೆ ಗಳಿಸಿಕೊಂಡ ಭಾರತೀಯ ಟೆಕ್ ಸಾಧಕರು

ಭಾರತದಲ್ಲಿ ಲಭ್ಯವಿರುವ ಟಾಪ್ 10 ಪ್ರೀಮಿಯಂ ಡುಯಲ್ ಸಿಮ್ ಸ್ಮಾರ್ಟ್ ಫೋನುಗಳುಭಾರತದಲ್ಲಿ ಲಭ್ಯವಿರುವ ಟಾಪ್ 10 ಪ್ರೀಮಿಯಂ ಡುಯಲ್ ಸಿಮ್ ಸ್ಮಾರ್ಟ್ ಫೋನುಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

Read more about:
English summary
How to update your Nexus device to Android 7.0 Nougat via OTA. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X