Subscribe to Gizbot

HTC ವನ್ V ಸ್ಮಾರ್ಟ್ ಫೋನ್ ಹೇಗಿದೆ ?

Posted By: Varun
HTC ವನ್ V ಸ್ಮಾರ್ಟ್ ಫೋನ್ ಹೇಗಿದೆ ?
ತೈವಾನಿನ ಖ್ಯಾತ ಸ್ಮಾರ್ಟ್ ಫೋನ್ ಉತ್ಪಾದಕ quietly brilliant ಆದ HTC ಇತ್ತೀಚೆಗೆ ವನ್ ಸರಣಿಯ V ಎಂಬ ಆಂಡ್ರಾಯ್ಡ್ 4.0 ಸ್ಮಾರ್ಟ್ ಫೋನ್ ಒಂದನ್ನು ಬಿಡುಗಡೆ ಮಾಡಿದ್ದು, ಈ ಫೋನ್ ಹೇಗಿದೆ, ಯಾವ ರೀತಿ ಕೆಲಸ ಮಾಡುತ್ತದೆ, ಫೀಚರುಗಳು, ಡಿಸೈನ್ ಹೇಗಿದೆ ಎಂಬ ಪೂರ್ಣ ವಿಮರ್ಶೆ ಇಲ್ಲಿದೆ.

ಹೊರಮೈ- ಲೋಹದಿಂದ ಮಾಡಲ್ಪಟ್ಟಿರುವ ಇದರ ಹೊರಮೈ ಗಟ್ಟಿಯಾಗಿದ್ದು, ಥಳುಕು ಪಳುಕುವ ಫೋನ್ ಆಗಿರದೆ ನೋಡಲು ಧೃಢವಾಗಿದೆ.

ಸ್ಕ್ರೀನ್- 3.7 ಇಂಚ್ ಡಿಸ್ಪ್ಲೇ ಇರುವ HTC ವನ್ V ಯ ಟಚ್ ಸಂವೇದನೆ ಅತ್ಯುತ್ತಮವಾಗಿದ್ದು, ಆಂಡ್ರಾಯ್ಡ್ ಫೋನುಗಳಲ್ಲೇ ಉತ್ತಮವಾದ ಇಂಟರ್ಫೇಸ್ ಹೊಂದಿದೆ.

ನಿರ್ವಹಣೆ- ಇನ್ನು ನಿರ್ವಹಣೆಯ ಲೆಕ್ಕಕ್ಕೆ ಬಂದರೆ ಇದು ದಿನ ಬಳಕೆಗೆ ಹೇಳಿ ಮಾಡಿಸಿದಂಥ ಫೋನ್ ಆಗಿದೆ. ಆದರೆ ಹಲವಾರು ಆಪ್ ಗಳನ್ನು ಒಮ್ಮೆಲೇ ಓಪನ್ ಮಾಡಿದಾಗ ಮಾತ್ರ ಸ್ವಲ್ಪ ನಿಧಾನವಾಗಿ ತೆರೆದುಕೊಳ್ಳುತ್ತೆ. ಆಂತರಿಕ ಮೆಮೊರಿ 4 GB ಇದ್ದರೂ ಬರಿ 1 GB ಯನ್ನು ಮಾತ್ರ ಉಪಯೋಗಿಸಬಹುದಾಗಿದೆ.ಮಲ್ಟಿಮೀಡಿಯಾ ಅಂತೂ ಸೂಪರ್ ಆಗಿ ಇದ್ದು, ಇದರ ಆಡಿಯೋ ಔಟ್ ಪುಟ್ ಅದ್ಭುತವಾಗಿದೆ ( ಬೀಟ್ಸ್ ತಂತ್ರಜ್ಞಾನ)

ಕ್ಯಾಮರಾ- 5 ಮೆಗಾ ಪಿಕ್ಸೆಲ್ ಕ್ಯಾಮರಾ ಹೊಂದಿರುವ HTC ವನ್ V ಯಿಂದ ಸುಂದರವಾದ ಫೋಟೋಗಳನ್ನು ತೆಗೆಯಬಹುದಾಗಿದ್ದು, ಹಗಲಿನಲ್ಲಿ ಹಾಗು ಕಡಿಮೆ ಬೆಳಕಿನಲ್ಲಿ ನಾವು ಫೋಟೋ ತೆಗೆದಾಗಲೂ ಚಿತ್ರದ ಗುಣಮಟ್ಟ ಕಡಿಮೆಯಾಗಿರಲಿಲ್ಲ. 720p HD ರೆಸಲ್ಯೂಶನ್ ನಲ್ಲಿಯೂ ವೀಡಿಯೋ ತೆಗೆಯುವ ಸೌಲಭ್ಯ ಇದರ ಮತ್ತೊಂದು ವಿಶೇಷ.

ಬ್ಯಾಟರಿ- 1500mAh ಸಾಮರ್ಥ್ಯದ ಬ್ಯಾಟರಿ ಇದ್ದರೂ ಬಹುತೇಕ ಆಂಡ್ರಾಯ್ಡ್ ಫೋನುಗಳಂತೆ ಒಂದೇ ದಿನಕ್ಕೆ ಫುಲ್ ಚಾರ್ಜ್ ಆದ ಬ್ಯಾಟರಿ ಖತಂ.

ಒಟ್ಟಾರೆಯಾಗಿ 20 ಸಾವಿರ ರೂಪಾಯಿಯ ಒಳಗಿರುವ ಆಂಡ್ರಾಯ್ಡ್ 4.0 ಸ್ಮಾರ್ಟ್ ಫೋನ್ ಏನಾದರೂ ಹುಡುಕುತ್ತಿದ್ದರೆ, HTC ವನ್ V ಒಂದು ಒಳ್ಳೆಯ ಚಾಯ್ಸ್.

HTC ವನ್ V ಸ್ಮಾರ್ಟ್ ಫೋನ್ ನ ಮತ್ತಷ್ಟು ಫೀಚರುಗಳು ಇಲ್ಲಿವೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot