ಮೊಳೆ ಹೊಡೆಯಲು HTC ವನ್ X ಉಪಯೋಗ !

Posted By: Varun
ಮೊಳೆ ಹೊಡೆಯಲು HTC ವನ್ X ಉಪಯೋಗ !

ಕಂಪ್ಯೂಟರ್ ಸಾಧನಗಳಾದ ಲ್ಯಾಪ್ಟಾಪ್, ಟ್ಯಾಬ್ಲೆಟ್ ಗಳನ್ನು ವಿವಿಧ ಪರೀಕ್ಷೆಗಳಿಗೆ ಒಳಪಡಿಸಿರುವ ವೀಡಿಯೋಗಳನ್ನು ನೀವು ನೋಡಿದ್ದೀರಿ. ಆಪಲ್ ಟ್ಯಾಬ್ಲೆಟ್ ಬಂದ ಮೇಲಂತೂ, ಅದನ್ನು ವಿವಿಧ ರೀತಿಯ ಪರೀಕ್ಷೆಗೆ ಒಳಪಡಿಸುವ ಹುಚ್ಚರ ಸಂಖ್ಯೆ ಹೆಚ್ಚಾಗಿದೆ. ಕಳೆದ ವಾರ ಬಿಡುಗಡೆಯಾದ ಸ್ಯಾಮ್ಸಂಗ್ ಗ್ಯಾಲಕ್ಸಿ S3 vs ಆಪಲ್ ಐ ಫೋನ್ 4S ಪರೀಕ್ಷೆಯ ವೀಡಿಯೋವನ್ನು ನೀವು ನೋಡಿರಬಹುದು. ಅದರಲ್ಲಿ ಹೇಗೆ ಎರಡೂ ಮೊಬೈಲುಗಳನ್ನು ನೆಲದ ಮೇಲೆ ಬೀಳಿಸಿ ಯಾವುದು ಗಟ್ಟಿ ಇದೆ, ಯಾವುದು ಶಾಕ್ ಟೆಸ್ಟ್ ನಲ್ಲಿ ಗೆಲ್ಲಲಿದೆ ಅಂತ ಹುಡುಗಿಯೊಬ್ಬಳು ಪರೀಕ್ಷಿದ್ದು ಯೂಟ್ಯೂಬ್ ನಲ್ಲಿ ಬಹಳ ಹಿಟ್ ಆಗಿತ್ತು.

ಈ ಬಾರಿ ಪರೀಕ್ಷೆಗೊಳಗಾದ ಫೋನ್, ಆಂಡ್ರಾಯ್ಡ್ 4.0 ತಂತ್ರಾಂಶದ HTC ವನ್ X ಸ್ಮಾರ್ಟ್ ಫೋನ್. HTC ಕಂಪನಿಯ ಈ ಸ್ಮಾರ್ಟ್ ಫೋನ್ ತನ್ನ ಫೀಚರುಗಳಿಂದ ಈಗಾಗಲೇ ಫೇಮಸ್ ಆಗಿದ್ದು, ಇದನ್ನು HTC ಇಂಜಿನೀಯರುಗಳು ಪರೀಕ್ಷೆಗೆ ಒಳಪಡಿಸಿರುವ ರೀತಿಯೇ ಮಜವಾಗಿದೆ. ಈ ವೀಡಿಯೋ ಫೇಮಸ್ ಆಗಲು ಕಾರಣ HTC ವನ್ X ಫೋನ್ ಅನ್ನು ಸುತ್ತಿಯಾಗಿ ಉಪಯೋಗಿಸಿ ಮೊಳೆ ಹೊಡೆದಿರುವುದು!

4.7 ಇಂಚ್ ಸ್ಕ್ರೀನ್ ಹೊಂದಿರುವ ಈ ಫೋನ್ ಅನ್ನು ಸುತ್ತಿಯ ರೀತಿ ಉಪಯೋಗಿಸಿದಾಗ, ಗೊರಿಲ್ಲಾ ಗ್ಲಾಸ್ ಇರುವ ಈ ಟಚ್ ಸ್ಕ್ರೀನ್ ನ ಪರದೆ ಏನಾಯಿತು ಗೊತ್ತಾ?... ಅದು ಏನೂ ಆಗಲಿಲ್ಲ. ಒಂದು ಚೂರೂ ಸೀಳು ಬಿಡದೆ ಯಾವುದೇ ತೊಂದೆರೆಯಿಲ್ಲದೆ ಕೆಲಸ ನಿರ್ವಹಿಸಿತು. ಇದಲ್ಲೆವೆ ಗಟ್ಟಿತನ ಎಂದರೆ.

ವಾವ್ ಎನ್ನಬಹುದಾದ HTC ಸ್ಮಾರ್ಟ್ ಫೋನಿನ ಹ್ಯಾಮರ್ ಟೆಸ್ಟ್ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot