ಹುವಾವೇ ನೊವಾ 10 SE ಲಾಂಚ್‌ : ಫೀಚರ್ಸ್‌ ಏನಿದೆ!?

|

ಹುವಾವೇ ಕಂಪೆನಿ ಮಿಡ್‌ರೇಂಜ್‌ ನಿಂದ ಹಿಡಿದು ಹೈರೇಂಜ್‌ ವರೆಗಿನ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಈಗ ಹುವಾವೇ ನೊವಾ 10 SE (Huawei Nova 10 SE) ಎಂಬ ಹೊಸ ಸ್ಮಾರ್ಟ್‌ಫೋನ್‌ನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಹುವಾವೇ

ಹೌದು, ಹುವಾವೇ ನೋವಾ 10 SE ಎಂಬ ಸ್ಮಾರ್ಟ್‌ಫೋನ್‌ನ್ನು ಲಾಂಚ್‌ ಮಾಡಿದ್ದು, ಈ ಸ್ಮಾರ್ಟ್‌ಫೋನ್ ಟ್ರಿಪಲ್‌ ಕ್ಯಾಮೆರಾ ರಚನೆ ಪಡೆದಿದೆ. ಹಾಗೆಯೇ 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ಇದರಲ್ಲಿದೆ. 4,500mAh ಬ್ಯಾಟರಿ ಶಕ್ತಿಯ ಜೊತೆಗೆ ವೇಗದ ಚಾರ್ಜಿಂಗ್ ಬೆಂಬಲದ ಆಯ್ಕೆ ಪಡೆದಿದೆ.

ಸ್ಮಾರ್ಟ್‌ಫೋನ್‌

ಈ ಸ್ಮಾರ್ಟ್‌ಫೋನ್‌ 6.67 ಇಂಚಿನ ಫ್ಲಾಟ್ OLED ಡಿಸ್‌ಪ್ಲೇ ಜೊತೆಗೆ ಈ ಈಗಾಗಲೇ ಬಿಡುಗಡೆ ಆಗಿರುವ ನೊವಾ 10 ಸರಣಿಯಲ್ಲಿನ ಇತರ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಇರುವ ಹಾಗೆಯೇ ಕರ್ವ್ಡ್ ಡಿಸ್‌ಪ್ಲೇ ಆಯ್ಕೆ ಇದೆ. ಈ ಡಿಸ್‌ಪ್ಲೇ ಪಂಚ್‌ಹೋಲ್‌ ವಿನ್ಯಾಸವನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ನಲ್ಲಿ ಏನೆಲ್ಲಾ ಫೀಚರ್ಸ್‌ ಇದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.

ಡಿಸ್‌ಪ್ಲೇ ವಿಶೇಷತೆ

ಡಿಸ್‌ಪ್ಲೇ ವಿಶೇಷತೆ

ಈ ಹುವಾವೇ ನೊವಾ 10 SE ಸ್ಮಾರ್ಟ್‌ಫೋನ್‌ 6.67 ಇಂಚಿನ OLED ಡಿಸ್‌ಪ್ಲೇ ಹೊಂದಿದ್ದು, ಇದು ಫುಲ್‌ HD+ ರೆಸಲ್ಯೂಶನ್‌ ಬೆಂಬಲವನ್ನು ಪಡೆದಿದೆ. ಈ ಸ್ಮಾರ್ಟ್‌ಫೋನ್‌ ಫ್ಲಾಟ್ ಸ್ಕ್ರೀನ್ ಆಯ್ಕೆ ಪಡೆದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತ ಹೊಂದಿದ್ದು, 90Hz ರಿಫ್ರೆಶ್ ರೇಟ್‌ ಬೆಂಬಲಿಸಲಿದೆ.

ಪ್ರೊಸೆಸರ್‌ ಹಾಗೂ ಸ್ಟೋರೇಜ್‌ ಆಯ್ಕೆ

ಪ್ರೊಸೆಸರ್‌ ಹಾಗೂ ಸ್ಟೋರೇಜ್‌ ಆಯ್ಕೆ

ಹುವಾವೇ ನೊವಾ 10 SE ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ವಿವರ ಇನ್ನೂ ಬಹಿರಂಗವಾಗಿಲ್ಲ. ಕಂಪೆನಿಯೂ ಪ್ರೊಸೆಸರ್‌ ವಿಷಯದಲ್ಲಿ ಗೌಪ್ಯತೆ ಕಾಪಾಡಿಕೊಂಡಿದ್ದು, ಗ್ರಾಹಕರಲ್ಲಿ ಕುತೂಹಲ ಹುಟ್ಟಿಸಿದೆ. ಇದರಿಂದ ಈ ಸ್ಮಾರ್ಟ್‌ಫೋನ್‌ನಲ್ಲಿ 5G ಸಂಪರ್ಕ ಇರಲಿದೆಯೇ?, ಇಲ್ಲವೇ ಎಂಬ ಮಾಹಿತಿ ಖಚಿತವಾಗಿಲ್ಲ. ಈ ಸ್ಮಾರ್ಟ್‌ಫೋನ್ ಪ್ರಸ್ತುತ 8GB + 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ಸಿಂಗಲ್‌ ವೇರಿಯಂಟ್‌ ಆಯ್ಕೆಯನ್ನು ಪಡೆದಿದೆ.

ಕಾಮೆರಾ ವಿಶೇಷತೆ

ಕಾಮೆರಾ ವಿಶೇಷತೆ

ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ ಇದು ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹಾಗೂ 8 ಮೆಗಾಪಿಕ್ಸೆಲ್ ಮತ್ತು 2 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಹೊಂದಿದೆ. ಹಾಗೆಯೇ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ.

ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ

ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ

ಈ ಸ್ಮಾರ್ಟ್‌ಫೋನ್‌ 66W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4,500mAh ಬ್ಯಾಟರಿ ಒಳಗೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, ವೈ-ಫೈ, ಬ್ಲೂಟೂತ್, ಜಿಪಿಎಸ್‌ ಮತ್ತು ಯುಎಸ್‌ಬಿ-C ಬೆಂಬಲಿಸಲಿದೆ.

ಲಭ್ಯತೆ

ಲಭ್ಯತೆ

ಹುವಾವೇ ನೊವಾ 10 SE ಸ್ಮಾರ್ಟ್‌ಫೋನ್‌ ಪ್ರಸ್ತುತ ದಕ್ಷಿಣ ಆಫ್ರಿಕಾದಲ್ಲಿ ಅನಾವರಣಗೊಂಡಿದೆ. ಈ ಫೋನಿನ ಬೆಲೆ ಹಾಗೂ ಲಭ್ಯತೆ ವಿವರ ಇನ್ನೂ ಬಹಿರಂಗವಾಗಿಲ್ಲ.

ಹುವಾವೇ ನೊವಾ 10 ಪ್ರೊ

ಹುವಾವೇ ನೊವಾ 10 ಪ್ರೊ

ಇದರೊಂದಿಗೆ ಹುವಾವೇ ಕಂಪೆನಿ ತನ್ನ ನೊವಾ 10 ಸರಣಿಯಲ್ಲಿ ಹೊಸ ಹುವಾವೇ ನೊವಾ 10 ಪ್ರೊ ಫೋನ್‌ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ 6.7 ಇಂಚಿನ OLED ಕರ್ವ್ಡ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಪಡೆದಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಪಡೆದಿದ್ದು, ಇದರಲ್ಲಿ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಪ್ರಮುಖ ಕ್ಯಾಮೆರಾ ಹೊಂದಿದೆ ಹಾಗೆಯೇ 60 ಮೆಗಾಪಿಕ್ಸೆಲ್ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಇದರಲ್ಲಿದೆ.
5G ಬೆಂಬಲವಿಲ್ಲದ ಸ್ನಾಪ್‌ಡ್ರಾಗನ್ ಚಿಪ್‌ಸೆಟ್‌ನಿಂದ ಇದು ರನ್‌ ಆಗುತ್ತದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ 100W ಚಾರ್ಜಿಂಗ್‌ ಬೆಂಬಲ ಹೊಂದಿದೆ.

Best Mobiles in India

English summary
Huawei is popularly known as one of the top three smartphone manufacturers in the world.we describe the Huawei Nova 10 SE smartphone features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X