ಹುವಾವೆ ಪಿ9 ನ ಕ್ಯಾಮೆರಾ ವಿಶೇಷತೆಗೆ ಮನಸೋಲದವರೇ ಇಲ್ಲ!

By Shwetha
|

ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಹುವಾವೆ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಹೆಸರನ್ನು ಗಳಿಸಿಕೊಳ್ಳುತ್ತಿದೆ. ಹೆಚ್ಚು ಸುದ್ದಿಯ ಫ್ಲ್ಯಾಗ್‌ಶಿಪ್ ಫೋನ್ ಹುವಾವೆ ಪಿ9 ಅನ್ನು ಭಾರತದಲ್ಲಿ ಕಂಪೆನಿ ಬಿಡುಗಡೆ ಮಾಡಿದೆ. ಪ್ರೀಮಿಯಮ್ ವಿನ್ಯಾಸದೊಂದಿಗೆ ಪಿ9 ಕ್ಯಾಮೆರಾವು ಇತರ ಸ್ಮಾರ್ಟ್‌ಫೋನ್‌ಗಳಿಗೆ ಕಠಿಣ ಪೈಪೋಟಿಯನ್ನು ನೀಡುವುದು ಗ್ಯಾರಂಟಿಯಾಗಿದೆ.

ಓದಿರಿ: ಸ್ಮಾರ್ಟ್‌ಫೋನ್ ಪ್ರಿಯರೇ ಹುವಾವೆಯಲ್ಲಿದೆ ವಿಶಿಷ್ಟ ಕ್ಯಾಮೆರಾ ಲೆನ್ಸ್

ಹೆಚ್ಚು ಪ್ರಸಿದ್ಧ ಕ್ಯಾಮೆರಾ ಲೆನ್ಸ್ ತಯಾರಕ ಲಾಯಿಕಾದೊಂದಿಗೆ ಹುವಾವೆ ಪಿ9 ಸ್ಮಾರ್ಟ್‌ಫೋನ್ಒಪ್ಪಂದವನ್ನು ಮಾಡಿಕೊಂಡಿದ್ದು, ಬಳಕೆದಾರರಿಗೆ ಇದು ಅತ್ಯುತ್ತಮ ಫೋಟೋಗ್ರಫಿ ಅನುಭವವನ್ನು ನೀಡಲಿದೆ. ಏಪ್ರಿಲ್‌ನಲ್ಲಿ ಲಂಡನ್‌ನಲ್ಲಿ ನಡೆದ ಈವೆಂಟ್ ಒಂದಲ್ಲಿ ಹುವಾವೆಯು ಪಿ9 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿತ್ತು. ಈಗಾಗಲೇ ಕಂಪೆನಿಯು 1.4 ಮಿಲಿಯನ್ ಯೂನಿಟ್‌ಗಳನ್ನು ಮಾರಾಟ ಮಾಡಿದೆ. ಭಾರತದಲ್ಲಿ ಈ ಫೋನ್ ಅನ್ನು ಕಂಪೆನಿಯು ಆಗಸ್ಟ್ 17 ರಂದು ಲಾಂಚ್ ಮಾಡಿದೆ. ಫೋನ್ ಬೆಲೆ ರೂ 39,999 ಆಗಿದ್ದು, ಪಿ9 ಮೇಲ್ಮಟ್ಟದ ಉನ್ನತ ವರ್ಗವನ್ನು ಪಡೆದುಕೊಂಡಿದ್ದು ತನ್ನ ಚೈನಾ ಸ್ಪರ್ಧಿಗಳೊಂದಿಗೆ ಕಣಕ್ಕಿಳಿಯಲಿದೆ. ಇನ್ನಷ್ಟು ವಿಶೇಷತೆಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡೋಣ.

ಡ್ಯುಯಲ್ ಕ್ಯಾಮೆರಾ

ಡ್ಯುಯಲ್ ಕ್ಯಾಮೆರಾ

ಇದರ ಡ್ಯುಯಲ್ ಕ್ಯಾಮೆರಾದ ಬಗ್ಗೆ ಮಾತನಾಡುವಾಗ, ಹುವಾವೆ 12 ಎಮ್‌ಪಿ ಡ್ಯುಯಲ್ ಕ್ಯಾಮೆರಾವನ್ನು ಪಡೆದುಕೊಂಡಿದೆ. ಕಡಿಮೆ ಬೆಳಕಿನ ಸಮಯದಲ್ಲೂ ಇದು ಉತ್ತಮ ಫೋಟೋಗ್ರಫಿಗೆ ಅನುಕೂಲವನ್ನು ಉಂಟುಮಾಡುತ್ತದೆ.

ಸೆನ್ಸಾರ್ ಕ್ಯಾಪ್ಚರ್ಸ್

ಸೆನ್ಸಾರ್ ಕ್ಯಾಪ್ಚರ್ಸ್

ಸೆನ್ಸಾರ್ ಕ್ಯಾಪ್ಚರ್ಸ್ ಕಲರ್‌ಗಳನ್ನು ಇದರ ಕ್ಯಾಮೆರಾ ಪಡೆದುಕೊಂಡಿದ್ದು, ಯಾವುದೇ ಚಿತ್ರವನ್ನು ಕ್ಲಿಕ್ ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡಲಿದ್ದು ಯಾವುದೇ ಫೋಕಸ್ ಪಾಯಿಂಟ್‌ಗೆ ರೀಪೋಕಸ್ ಮಾಡಬಹುದಾಗಿದೆ.

12 ಎಮ್‌ಪಿ ಕ್ಯಾಮೆರಾ

12 ಎಮ್‌ಪಿ ಕ್ಯಾಮೆರಾ

12 ಎಮ್‌ಪಿ ಕ್ಯಾಮೆರಾವು F/2.2 ಅಪಾರ್ಚರ್ ಅನ್ನು ಪಡೆದುಕೊಂಡಿದ್ದು, ನೈಟ್ ಶೂಟ್ ಮತ್ತು ಕಡಿಮೆ ಬೆಳಕಿನ ಪ್ರಕಾರದಲ್ಲೂ ಉತ್ತಮ ಚಿತ್ರಗಳನ್ನು ತೆಗೆಯಲು ಅನುಕೂಲಕರವಾಗಿದೆ. ಉತ್ತಮ ವೀಡಿಯೊಗಳನ್ನು ಪಡೆದುಕೊಳ್ಳಲು ಎಚ್‌ಡಿಆರ್ ಆಯ್ಕೆಯನ್ನು ಫೋನ್ ಪಡೆದುಕೊಂಡಿದೆ.

ಶಾರ್ಪ್ ಡಿಸ್‌ಪ್ಲೇ

ಶಾರ್ಪ್ ಡಿಸ್‌ಪ್ಲೇ

ಫೋನ್ 5.2 ಇಂಚಿನ 1080x1920ಪಿ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು ಪರಿಪೂರ್ಣ ಗಾತ್ರದ ಪರದೆಯನ್ನು ಇದು ಪಡೆದುಕೊಂಡಿದೆ. ಇದನ್ನು ಸಿಂಗಲ್ ಹ್ಯಾಂಡಿಯಾಗಿ ಇದನ್ನು ಬಳಸಿಕೊಳ್ಳಬಹುದಾಗಿದೆ. ಇದರ ಡಿಸ್‌ಪ್ಲೇ ಶಾರ್ಪ್ ಆಗಿದ್ದು ಬ್ರೈಟ್‌ನೆಸ್ ಅನ್ನು ಪಡೆದುಕೊಂಡಿದೆ ಇದು ಉತ್ತಮ ಬಣ್ಣಗಳನ್ನು ಉತ್ಪಾದಿಸುತ್ತಿದ್ದು ಉತ್ತಮ ವೀಕ್ಷಣಾ ಆಂಗಲ್‌ಗಳನ್ನು ಒದಗಿಸಲಿದೆ.

ಕಲರ್ ಟೆಂಪರೇಚರ್

ಕಲರ್ ಟೆಂಪರೇಚರ್

ಹುವಾವೆಯು ತನ್ನ ಪಿ9 ಸ್ಮಾರ್ಟ್‌ಫೋನ್‌ನಲ್ಲಿ ಕಲರ್ ಟೆಂಪರೇಚರ್ ಅನ್ನು ಹೊಂದಿಸಬಹುದಾಗಿದ್ದು ತಮ್ಮ ಆದ್ಯತೆಗೆ ಅನುಗುಣವಾಗಿ ಬಳಕೆದಾರರು ಬಣ್ಣಗಳನ್ನು ಇದರಲ್ಲಿ ಹೊಂದಿಸಬಹುದಾಗಿದೆ.

ವೇಗವಾಗಿರುವ ಕಾರ್ಯಕ್ಷಮತೆ

ವೇಗವಾಗಿರುವ ಕಾರ್ಯಕ್ಷಮತೆ

ಇನ್ನು ಪ್ರೊಸೆಸರ್ ಬಗ್ಗೆ ಮಾತನಾಡುವಾಗ, ಹುವಾವೆ ಪಿ9 ಇನ್ ಹೌಸ್ ಹೈಸಿಲಿಕಾನ್ ಕಿರಿನ್ 955 ಓಕ್ಟಾ ಕೋರ್ ಚಿಪ್‌ಸೆಟ್ ಅನ್ನು ಪಡೆದುಕೊಂಡಿದ್ದು ನಾಲ್ಕು ಕೋರ್ಟೆಕ್ಸ್ A73 ಕ್ಲಾಕ್ಡ್ ಫೋರ್ ಕೋರ್ಟೆಕ್ಸ್ A53 ಕೋರ್ಸ್ ಕ್ಲಾಕ್ಡ್ 1.5GHZ ವರೆಗೆ ಪಡೆದುಕೊಂಡಿದೆ. ಚಿಪ್‌ಸೆಟ್ 3 ಜಿಬಿ RAM ಗೆ ಬೆಂಬಲವನ್ನು ನೀಡುತ್ತಿದ್ದು 32 ಜಿಬಿ ಸಂಗ್ರಹಣೆ ಫೋನ್‌ನ ಕಾರ್ಯಕ್ಷಮತೆಗೆ ಬೆಂಬಲವಾಗಿದೆ. ಮಲ್ಟಿಟಾಸ್ಕಿಂಗ್, ಹೆಚ್ಚುವರಿ ಅಪ್ಲಿಕೇಶನ್‌ ಕಾರ್ಯನಿರ್ವಹಣೆಗೆ ಫೋನ್ ಅನುಕೂಲಕರವಾಗಿದೆ.

ಆಪರೇಟ್ ಮಾಡಲು ಸುಲಭವಾಗಿದೆ

ಆಪರೇಟ್ ಮಾಡಲು ಸುಲಭವಾಗಿದೆ

ಹುವಾವೆ ಪಿ9 ಆಂಡ್ರಾಯ್ಡ್ ಮಾರ್ಶ್ ಮಲ್ಲೊನೊಂದಿಗೆ ಬಂದಿದ್ದು ಕಂಪೆನಿಯ ನೇಟೀವ್ ಇಮೋಶನ್ ಯುಐಯನ್ನು ಪಡೆದುಕೊಂಡಿದೆ. ಬಳಕೆದಾರ ಸ್ನೇಹಿ ಕಸ್ಟಮೈಸೇಶನ್ ಮತ್ತು ಫೀಚರ್ ಅಡೀಶನ್‌ಗಳನ್ನು ಫೋನ್ ಹೊಂದಿದೆ.

Best Mobiles in India

English summary
The company recent introduced its much talked about flagship smartphone, the Huawei P9 in India amid much fan fare.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X