ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಹುವಾವೆಯೇ ಅರಸ

By Shwetha
|

ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಹುವಾವೆ ತನ್ನದೇ ಹೆಸರನ್ನು ಮೂಡಿಸಿ ಇತಿಹಾಸ ಬರೆದಿದೆ. ಸ್ಯಾಮ್‌ಸಂಗ್‌ನಂತಹ ಭರ್ಜರಿ ಸ್ಪರ್ಧಿಯನ್ನೇ ಹುವಾವೆ ಎದುರಿಸಲು ಸನ್ನದ್ಧವಾಗಿದ್ದು ಈಗ ಶ್ಯೋಮಿ ಕೂಡ ಸ್ಪರ್ಧಿಯಾಗಿ ಮುಂಚೂಣಿಯಲ್ಲಿದೆ. ತನ್ನ ಅನ್ವೇಷಣೆಗಳ ಮೂಲಕ ಬಳಕೆದಾರರಿಗೆ ಇನ್ನಷ್ಟು ಉತ್ತಮವಾದುದನ್ನು ಒದಗಿಸುವ ಪ್ರಯತ್ನವನ್ನು ಕಂಪೆನಿ ಮಾಡುತ್ತಿದೆ. ಈ ಕೆಳಗಿನ ಸ್ಲೈಡರ್‌ಗಳಲ್ಲಿ ಹುವಾವೆಯ ಮುಖ್ಯ ನಿರ್ಧಾರಗಳು ಮತ್ತು ಮಾರ್ಪಾಡುಗಳನ್ನು ಅರಿತುಕೊಳ್ಳೋಣ.

ಓದಿರಿ: ಹೋನರ್ ಸ್ಮಾರ್ಟ್‌ಫೋನ್ ಚಿಪ್‌ಸೆಟ್ ಏಕೆ ಅತ್ಯದ್ಭುತ

ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆ

ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆ

ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯನ್ನು ಹುವಾವೆ ಕಂಡುಕೊಂಡಿದೆ. ತನ್ನ ಉತ್ಪನ್ನಗಳನ್ನು ಇನ್ನಷ್ಟು ವಿಶಿಷ್ಟಗೊಳಿಸಲು ಪೇಟೆಂಟ್‌ಗಳನ್ನು ಕಂಪೆನಿ ಮಾಡುತ್ತಿದೆ. ಪೇಟೆಂಟ್‌ಗಳನ್ನು ಭರ್ತಿ ಮಾಡುವುದರಲ್ಲಿ ಕಂಪೆನಿಯು ಮುಂಚೂಣಿಯಲ್ಲಿದೆ.

ಪೇಟೆಂಟ್‌

ಪೇಟೆಂಟ್‌

ಹೆಚ್ಚು ಸಂಖ್ಯೆಯ ಪೇಟೆಂಟ್‌ಗಳನ್ನು ಕಂಪೆನಿಯು ಪಡೆದುಕೊಂಡಿದ್ದು, ಚೀನಾದಲ್ಲಿ ಮಾತ್ರವಲ್ಲದೆ ಇತರ ಪ್ರದೇಶಗಳಲ್ಲಿ ಕೂಡ ತನ್ನ ಅಧಿಕಾರವನ್ನು ಪಡೆದುಕೊಂಡಿದೆ. ಅಂತೂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಇದು ನಾಯಕನಾಗುವುದು ಖಂಡಿತ.

ಸಾಧನೆಗಳ ಹರಿಕಾರ

ಸಾಧನೆಗಳ ಹರಿಕಾರ

ಕಳೆದ ಕೆಲವು ವರ್ಷಗಳಿಂದ, ಹುವಾವೆಯು ಪೇಟೆಂಟ್‌ಗಳ ವಿಚಾರದಲ್ಲಿ ಹೆಚ್ಚಿನ ಸಂಖ್ಯೆಯನ್ನು ಪಡೆದುಕೊಂಡಿದೆ. ಚೀನಾ, ಯುರೋಪ್, ಅಮೇರಿಕಾ ಪ್ರದೇಶಗಳಿಂದ 2,000 ಕ್ಕಿಂತಲೂ ಮಿಗಿಲಾದ ಪೇಟೆಂಟ್‌ಗಳನ್ನು ಇದು ಪಡೆದುಕೊಂಡಿದೆ.

ಆರ್‌ ಏಂಡ್ ಡಿ ಸಂಸ್ಥೆ

ಆರ್‌ ಏಂಡ್ ಡಿ ಸಂಸ್ಥೆ

ಕಂಪೆನಿಯು ಆರ್‌ ಏಂಡ್ ಡಿ ಸಂಸ್ಥೆಗಳಿಗೆ ಹೆಚ್ಚಿನ ಹೂಡಿಕೆಯನ್ನು ಮಾಡುತ್ತಿದ್ದು, ತನ್ನ ಆದಾಯದ 10 ಶೇಕಡಾವನ್ನು ಇದು ತಲುಪುತ್ತಿದ್ದು ತನ್ನ ಸ್ಪರ್ಧಿಗಳಿಗಿಂತಲೂ ಇದು ಮುಂಚೂಣಿಯಲ್ಲಿದೆ.

ಹೂಡಿಕೆ

ಹೂಡಿಕೆ

ಅಂಕಿ ಅಂಶಗಳ ಪ್ರಕಾರ ಹುವಾವೆ ಹೆಚ್ಚು ಕಡಿಮೆ $9.2 ಬಿಲಿಯನ್ ಅನ್ನು ಹೂಡಿಕೆ ಮಾಡಿದ್ದು, ತನ್ನ ಮಾರಾಟ ಆದಾಯದ 15% ವನ್ನು ಇದು ನೀಡಿದೆ, ತನ್ನ ಗ್ರಾಹಕರ ಮೇಲೆ ಹುವಾವೆಯ ಗಂಭೀರತೆಯನ್ನು ಇದು ತೋರಿಸುತ್ತಿದೆ. 2015 ರ ಕೊನೆಯಲ್ಲಿ ಹುವಾವೆಯು 50,377 ಪೇಟೆಂಟ್‌ಗಳನ್ನು ಸ್ವಾಧೀನಪಡಿಸಿಕೊಂಡಿದ್ದು, 2016 ರಲ್ಲಿ ಇದು ಇನ್ನಷ್ಟು ಮುಂದುವರಿಯಲಿದೆ.

ನೆಟ್‌ವರ್ಕ್ ಬಲ

ನೆಟ್‌ವರ್ಕ್ ಬಲ

2014 ರಲ್ಲೇ ಕಂಪೆನಿಯು 4 ಜಿ ಮಾರುಕಟ್ಟೆಯನ್ನು ಪಡೆದುಕೊಂಡಿತ್ತು. ಪ್ರಸ್ತುತ ಕಂಪೆನಿಯು 154 4ಜಿ ನೆಟ್‌ವರ್ಕ್ ಅನ್ನು ರಚಿಸಿಕೊಂಡಿದ್ದು, 46% ನೆಟ್‌ವರ್ಕ್ ಶೇರ್ ಅನ್ನು ಪ್ರತಿನಿಧಿಸುತ್ತಿದೆ.

ಯೋಜನೆಗಳು

ಯೋಜನೆಗಳು

ಅತಿ ದೀರ್ಘ ಸಮಯದಿಂದಲೂ ಹುವಾವೆಯು ಅನ್ವೇಷಣೆಯ ಹಾದಿಯನ್ನು ಇರಿಸಿಕೊಂಡಿದ್ದು ಪ್ರಸ್ತುತ 600 ಮಿಲಿಯನ್ ಡಾಲರ್‌ಗಳನ್ನು 2018 ರ ಹೊತ್ತಿಗೆ 5ಜಿ ತಂತ್ರಜ್ಞಾನದ ಮೇಲೆ ಹೂಡಿಕೆ ಮಾಡಲಿದೆ.

Best Mobiles in India

English summary
Huawei is a brand well known for its innovations and interesting technologies in the smartphone segment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X