ಸ್ಯಾಮ್ಸಂಗ್ ಗ್ಯಾಲಾಕ್ಸಿ ನೋಟ್ 7 ನಲ್ಲಿ ಬಿಟ್ಟು ಹೋದ 6 ಮುಖ್ಯ ಫೀಚರ್‍ಗಳು

By Prateeksha
|

ಗಾಳಿಮಾತಿನ ಮೇಲೆ ಪೂರ್ಣ ವಿರಾಮವನ್ನಿಟ್ಟಿತು ಸ್ಯಾಮ್ಸಂಗ್ ಅಗಸ್ಟ್ 2 ರಂದು ಗ್ಯಾಲಾಕ್ಸಿ ನೋಟ್ 7 ಪರಿಚಯಿಸುವ ಮೂಲಕ. ನೋಟ್ 7 ಮತ್ತು ಗ್ಯಾಲಾಕ್ಸಿ ಎಸ್ 7 ಎಡ್ಜ್ ನಡುವಿನ ಹೋಲಿಕೆ ಬಗ್ಗೆ ಎಲ್ಲರೂ ಮಾತಾಡಿದರು. ಈಗ ಭಾರತದಲ್ಲಿ ಬಿಡುಗಡೆಯಾಗಿದೆ ರೂ 59,900 ಗಳಿಗೆ ಗೇರ್ ಐಕೊನ್ ಎಕ್ಸ್ ಮತ್ತು ಗೇರ್ ವಿಆರ್ ಹೆಡ್‍ಸೆಟ್ ನೊಂದಿಗೆ.

ಸ್ಯಾಮ್ಸಂಗ್ ಗ್ಯಾಲಾಕ್ಸಿ ನೋಟ್ 7 ನಲ್ಲಿ ಬಿಟ್ಟು ಹೋದ 6 ಮುಖ್ಯ ಫೀಚರ್‍ಗಳು

ಹೇಳಿಕೊಳ್ಳುವಂತಹ ಹೊಸ ಫೀಚರ್ ಗಳೆಂದರೆ ಐರಿಸ್ ಸ್ಕ್ಯಾನರ್, ಐಪಿ68 ರೇಟಿಂಗ್, ಗೊರಿಲ್ಲಾ ಗ್ಲಾಸ್ 5 ಮತ್ತು ಸುಧಾರಿತ ಎಸ್ ಪೆನ್ ಜೋಡಿಸಲ್ಪಟ್ಟಿರುವುದು. ಆದರೂ ಈ ಗ್ಯಾಲಾಕ್ಸಿ ಎಸ್ 7 ಎಡ್ಜ್ ನಲ್ಲಿ ಕೆಲವೊಂದನ್ನು ಕಾಣಲಾರಿರಿ.

ಓದಿರಿ: ಹೊಸ ಮೊಬೈಲ್‌ ಕನೆಕ್ಷನ್‌ಗೆ ಆಧಾರ್ e-KYC: ಸರ್ಕಾರದಿಂದ ಅನುಮತಿ

ಗ್ಯಾಲಾಕ್ಸಿ ನೋಟ್ 7 ಗ್ಲಾಸ್ ಮೆಟಲ್ ಬಿಲ್ಡ್ , ಅತ್ತ್ಯುತ್ತಮ ಕ್ಯಾಮೆರಾ, ಆಲ್ವೇಸ್ ಆನ್ ಡಿಸ್ಪ್ಲೆ ಮತ್ತು ಡುಯಲ್-ಕರ್ವಡ್ ಸ್ಕ್ರೀನ್ ನನ್ನು ಹೊಂದಿದ್ದು ಇತ್ತೀಚಿನ ದಿನಗಳಲ್ಲಿ ರುವ ಶ್ರೇಷ್ಟವಾದ ಸ್ಮಾರ್ಟ್‍ಫೋನ್ ಗಳಲ್ಲಿ ಇದು ಒಂದು ಎನ್ನುವುದರಲ್ಲಿ ಎರಡು ಮಾತಿಲ್ಲಾ. ಆದರೆ, ಗಾಳಿಮಾತು ಬಹಳಷ್ಟನ್ನು ಹೇಳಿ ಕೊನೆಯಲ್ಲಿ ಫೋನ್ ಪರಿಚಯಿಸಲ್ಪಟ್ಟಾಗ ನಿರೀಕ್ಷೆ ಹುಸಿ ಮಾಡಿತು. ನೋಟ್ 7 ಪರಿಚಯಿಸಿದ ನಂತರವೂ ಕೂಡ ಇದು ಚೈನಿಸ್ ನೋಟ್ 7 ನ ತಿದ್ದುಪಡಿ ಎನ್ನುವ ಮಾತು ಕೂಡ ಕೇಳಲ್ಪಟ್ಟಿತು.

ಸ್ಯಾಮ್ಸಂಗ್ ಗ್ಯಾಲಾಕ್ಸಿ ನೋಟ್ 7 ನಲ್ಲಿ ಬಿಟ್ಟು ಹೋದ 6 ಮುಖ್ಯ ಫೀಚರ್‍ಗಳು

ಈ ಕೆಳಗಿನ ಸ್ಲೈಡ್ ಗಳನ್ನು ತಿರುವುತ್ತಾ ನೋಡಿ ನಿಮಗೆ ಗ್ಯಾಲಾಕ್ಸಿ ನೋಟ್ 7 ನಲ್ಲಿ ಬಿಟ್ಟು ಹೋದ ಫಾಬ್ಲೆಟ್ ನಲ್ಲಿ ನಿರೀಕ್ಷಿಸಲ್ಪಡುತ್ತಿರುವ ಫೀಚರ್ ಗಳು ಯಾವುವು ಎಂದು ಗೊತ್ತಾಗುತ್ತದೆ. ಒಮ್ಮೆ ನೋಡಿ.

ಓದಿರಿ: ಇಂಟೆಕ್ಸ್ ಆಕ್ವಾ ವರ್ಟರ್ಬೋ ಮತ್ತು ಇಕೋ 4ಜಿ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನುಗಳು ಮಾರುಕಟ್ಟೆಗೆ

ಹೆಚ್ಚಿನ ವಿಷಯಗಳಿಗಾಗಿ ಗಿಜ್‍ಬೊಟ್ ನೊಂದಿಗೆ ಸಂಪರ್ಕದಲ್ಲಿರಿ.

ಹೆಚ್ಚಿನ ರ್ಯಾಮ್ ಗಾಗಿ ಸ್ಪೇಸ್ ಇಲ್ಲಾ

ಹೆಚ್ಚಿನ ರ್ಯಾಮ್ ಗಾಗಿ ಸ್ಪೇಸ್ ಇಲ್ಲಾ

ಸಧ್ಯಕ್ಕೆ ಆನ್ಡ್ರೊಯಿಡ್ ಸ್ಮಾರ್ಟ್‍ಫೋನ್ ಗಳಲ್ಲಿ 4ಜಿಬಿ ರ್ಯಾಮ್ ಸಾಮಾನ್ಯ. ಆದರೆ ಕೆಲವೊಮ್ಮೆ ನಿಮ್ಮ ಫೋನ್ ನ ರ್ಯಾಮ್ ಲೋಡ್ ತಡಿಯುತ್ತಿದ್ದರೂ ಕೂಡ ಬ್ಯಾಟರಿ ಲೈಫ್ ಉಳಿಸಲು ಎಲ್ಲಾ ಆಪ್ಸ್ ಮುಚ್ಚಬೇಕಾಗುತ್ತದೆ. ಅದೇನಿದ್ದರು ಆನ್ಡ್ರೊಯಿಡ್ ಪ್ರೀಯರಿಗೆ ಖುಷಿಯಾಗಿತ್ತು 6ಜಿಬಿ ರ್ಯಾಮ್ ನ ಪರಿಕಲ್ಪನೆ ಕೇಳ್ಪಟ್ಟು, ಏಕೆಂದರೆ ಇಷ್ಟು ದೊಡ್ಡ ಪ್ರಮಾಣದ ರ್ಯಾಮ್ ನೊಂದಿಗೆ ಬಂದಿರುವ ಫೋನ್ ಗಳು ವಿರಳ. ಈ ಬಾರಿ, ಸ್ಯಾಮ್ಸಂಗ್ ಹಾರ್ಡ್‍ವೇರ್ ನಲ್ಲಿ ಕಲೆಗಾರಿಕೆಯೊಂದಿಗೆ ಬರದೆ ಬೇರೆಯ ಘಂಟೆನಾದ ಮತ್ತು ಸಿಳ್ಳೆಯೊಂದಿಗೆ ಬಂದಿದೆ.

ಇತ್ತೀಚಿನ ಸ್ನಾಪ್‍ಡ್ರಾಗನ್ 821 ಕೂಡ ಇಲ್ಲಾ

ಇತ್ತೀಚಿನ ಸ್ನಾಪ್‍ಡ್ರಾಗನ್ 821 ಕೂಡ ಇಲ್ಲಾ

ಗ್ಯಾಲಾಕ್ಸಿ ನೋಟ್ 7 ಎಕ್ಸಿನೊಸ್ 8893 ಎಸ್‍ಒಸಿ ಅಥವಾ ಸ್ನಾಪ್‍ಡ್ರಾಗನ್ 821 ಪ್ರೊಸೆಸರ್ ನೊಂದಿಗೆ ಬರುವ ಸುದ್ದಿ ಇತ್ತು. ಆದರೆ ನಿಜಾಂಶ ಬೇರೆಯದೆ ಆಗಿ ಎಕ್ಸಿನೊಸ್ 8890 ಒಕ್ಟಾ-ಕೋರ್ ಪ್ರೊಸೆಸರ್ ಅಥವಾ ಸ್ನಾಪ್‍ಡ್ರಾಗನ್ 820 ಕ್ವ್ಯಾಡ್ ಕೋರ್ ಪ್ರೊಸೆಸರ್ ನೊಂದಿಗೆ ಬಂದಿತು. ಸ್ನಾಪ್‍ಡ್ರಾಗನ್ 821 ಚಿಪ್ ಮೇಕರ್ ನಿಂದ ಬಿಡುಗಡೆ ಯಾದ ಹೊಸ ಉತ್ಪನ್ನ ಮತ್ತು ಇದು ನೋಟ್ 7 ನಲ್ಲಿ ಇರುವುದಕ್ಕಿಂತ ಸುಮಾರು ಶೇಕಡಾ 10 ರಷ್ಟು ವೇಗವಾಗಿದೆ.

ಸ್ಯಾಮ್ಸಂಗ್ ಯುಎಫ್‍ಎಸ್ ಕಾರ್ಡ್ ಫೀಚರ್ ಅನ್ನು ಸಪೊರ್ಟ್ ಮಾಡುವುದಿಲ್ಲಾ

ಸ್ಯಾಮ್ಸಂಗ್ ಯುಎಫ್‍ಎಸ್ ಕಾರ್ಡ್ ಫೀಚರ್ ಅನ್ನು ಸಪೊರ್ಟ್ ಮಾಡುವುದಿಲ್ಲಾ

ಕಳೆದ ತಿಂಗಳು ಸ್ಯಾಮ್ಸಂಗ್ ಯುಎಫ್‍ಎಸ್ ಮೆಮೊರಿ ಕಾರ್ಡ್ ಘೋಷಿಸಿತು, ಇದು ಮೈಕ್ರೊ ಎಸ್ ಡಿ ಕಾರ್ಡ್ ನ ಮುಂದಿವರಿದ ಭಾಗವೆಂದೆ ಹೇಳಬಹುದು. ಈ ಕಾರ್ಡ್ ರೀಡ್ ಸ್ಪೀಡ್ ನಲ್ಲಿ ಐದು ಪಟ್ಟು ವೇಗ ಮತ್ತು ರೈಟಿಂಗ್ ಸ್ಪೀಡ್ ನಲ್ಲಿ ಎರಡು ಪಟ್ಟು ವೇಗವನ್ನು ಹೊಂದಿದೆ. ಬೇಗನೆ ಸುದ್ದಿ ಹರಡಲಾರಂಭಿಸಿತು ನೋಟ್ 7 ಈ ಕಾರ್ಡನ್ನು ಸಪೊರ್ಟ್ ಮಾಡಬಹುದು ಏಕೆಂದರೆ ಇದೊಂದು ಕಂಪನಿಯ ಹೈ ಎಂಡ್ ಡಿವೈಸ್. ಆದರೆ ಇದು ತಪ್ಪೆಂದು ಸಾಬೀತಾಯಿತು ಜೊತೆಗೆ ಸ್ಯಾಮ್ಸಂಗ್ ರಾಯಭಾರಿಗಳು ಹೇಳಿರುವಂತೆ ಭವಿಷ್ಯದಲ್ಲಿ ಈ ಫೀಚರ್ ಹೊಂದಿದ ಫೋನ್ ತರುವ ಯಾವ ಯೋಜನೆಯು ಇಲ್ಲಾ.

ನೋಟ್ 7 ನಲ್ಲಿ ದೊಡ್ಟದಾದ ಬ್ಯಾಟರಿ ಇಲ್ಲಾ

ನೋಟ್ 7 ನಲ್ಲಿ ದೊಡ್ಟದಾದ ಬ್ಯಾಟರಿ ಇಲ್ಲಾ

ಗ್ಯಾಲಾಕ್ಸಿ ಎಸ್7 ಎಡ್ಜ್ ನೋಟ್ 7 ಗಿಂತಲು ಚಿಕ್ಕದಾದರೂ ಕೂಡ 3600 ಎಮ್‍ಎಎಚ್ ಹೆಚ್ಚಿನ ಕೆಪಾಸಿಟಿ ಹೊಂದಿದ ಬ್ಯಾಟರಿ ಹೊಂದಿದೆ ಮತ್ತು ನೋಟ್ 7 3500 ಎಮ್‍ಎಎಚ್ ನದಾಗಿದೆ. ನೋಟ್ 7 ನಲ್ಲಿ ಹೆಚ್ಚಿನ ಜಾಗವಿಲ್ಲದಿರುವುದು ಗೊತ್ತಿರುವ ಸಂಗತಿ ಏಕೆಂದರೆ ಇದು ಎಸ್ ಪೆನ್ ಕಂಪಾರ್ಟ್‍ಮೆಂಟ್‍ನೊಂದಿಗೆ ಮತ್ತು ಹೊಸ ಐರಿಸ್ ಸ್ಕ್ಯಾನರ್ ತಂತ್ರಾಶದೊಂದಿಗೆ ಬರುತ್ತದೆ. ಏನಿದ್ದರೂ ದೊಡ್ಡ ಬ್ಯಾಟರಿಯಿಲ್ಲದಿರುವುದು ಮಾತ್ರ ಬೇಸರ ತಂದಿದೆ ವಿಶೇಷವಾಗಿ 4000 ಎಮ್‍ಎಎಚ್ ಬ್ಯಾಟರಿಯೊಂದಿಗೆ ಬರುವುದೆಂಬ ಸುದ್ದಿ ಮೊದಲೇ ಕೇಳಿ.

ಎಲ್ಲರೂ ಕರ್ವಡ್ ಎಡ್ಜ್ ನ ಅಭಿಮಾನಿಗಳಾಗಲಿಕ್ಕಿಲ್ಲಾ

ಎಲ್ಲರೂ ಕರ್ವಡ್ ಎಡ್ಜ್ ನ ಅಭಿಮಾನಿಗಳಾಗಲಿಕ್ಕಿಲ್ಲಾ

ನೋಟ್ 7 ತನ್ನ ತಂತ್ರಜ್ಞಾನ ಮತ್ತು ಫೀಚರ್ ಗಳಿಂದಾಗಿ ಸ್ವಲ್ಪ ದುಬಾರಿ. ಅದರಲ್ಲೊಂದು ಫೀಚರ್ ಈ ಡುಯಲ್-ಕರ್ವಡ್ ಎಡ್ಜ್ ಸ್ಕ್ರೀನ್. ಇಲ್ಲಿಯ ತನಕ, ಸ್ಯಾಮ್ಸಂಗ್ ಫ್ಲಾಟ್ ಸ್ಕ್ರೀನ್ ವೇರಿಯಂಟ್ ಮತ್ತು ಎಡ್ಜ್ ವೇರಿಯಂಟ್ ತರುತ್ತಿತ್ತು ಹಾಗು ಮುಂಚಿನದ್ದೆಲ್ಲಾ ಕೇವಲ 6000 ರೂ ಅಥವಾ ಎಡ್ಜ್ ವೇರಿಯಂಟ್ ಕ್ಕಿಂತ ಕಡಿಮೆಯದ್ದಾಗಿತ್ತು. ನೋಟ್ 7 ವಿಷಯದಲ್ಲಿ ಬೇರೆಯದೆ ಕಾನೂನಿದೆ, ಕಂಪನಿ ಗ್ರಾಹಕರ ಆಯ್ಕೆಯನ್ನು ಲೆಕ್ಕಿಸದೆ ಅವರ ಮೇಲೆ ತನ್ನ ಕರ್ವಿ ಸ್ಕ್ರೀನ್ ನನ್ನು ಬಲವಂತವಾಗಿ ಹೇರುತ್ತಿದೆ. ಇದರಿಂದ ಕೊನೆಯಲ್ಲಿ ಗ್ರಾಹಕರು ತಮಗಿಷ್ಟವಿಲ್ಲದ ಫೀಚರ್‍ಗಾಗಿ ಹೆಚ್ಚಿನ ಹಣ ತೆರಬೇಕಾಗುತ್ತದೆ.

ಎಡ್ಜ್ ಪ್ಯಾನೆಲ್ಸ್ ಸ್ಕ್ರೀನನ್ನು ಮರೆಮಾಚುತ್ತದೆ

ಎಡ್ಜ್ ಪ್ಯಾನೆಲ್ಸ್ ಸ್ಕ್ರೀನನ್ನು ಮರೆಮಾಚುತ್ತದೆ

2014 ರಲ್ಲಿ ಬಿಡುಗಡೆಯಾದ ಮೊದಲ ನೋಟ್ ಎಡ್ಜ್ ನಲ್ಲಿ ಎಡ್ಜ್ ಪ್ಯಾನೆಲ್ ಉಪಯೋಗಿಸಿದ್ದು ಅದೀಗ ನಿಂತು ಹೋಗಿದೆ. ಆದರೆ ಅದುವೇ ಉತ್ತಮವಾಗಿತ್ತು , ಏಕೆಂದರೆ ಉಪಯೋಗಿಸುವಾಗ ಸಂಪೂರ್ಣ ಸ್ಕ್ರೀನ್ ನನ್ನು ಮಸಕು ಮಾಡದೆ ಅದು ವಿಷಯಗಳನ್ನು ಒಂದು ನೋಟದಲ್ಲಿ ತೋರಿಸುತ್ತಿತ್ತು . ಇನ್ನೊಂದು ಕಡೆಯಿಂದ ನೋಡಿದರೆ, ನೋಟ್ 7 ನಲ್ಲಿರುವ ಈಗಿನ ಎಡ್ಜ್ ಯುಎಕ್ಸ್ ಸ್ವಲ್ಪ ಜಾಸ್ತಿ ವಿಜೃಂಭಿಸಲಾಗಿದೆ ವಿಡ್ಜೆಟ್ ಮತ್ತು ಟಾಸ್ಕ್ ಸ್ವಿಚರ್ಸ್ ನಿಂದ. ಆದರೆ ಸ್ಕ್ರೀನ್ ಮೇಲೆ ತುಂಬಾ ಜಾಗ ತೆಗೆದುಕೊಳ್ಳುವುದರಿಂದ ನೀವು ಕೆಲಸ ಮಾಡುವುದಕ್ಕೆ ಅಡ್ಡಿಯಾಗುತ್ತದೆ ಹೀಗಾಗಿ ಇನ್ನೂ ಸುಧಾರಿಸುವ ಅವಶ್ಯಕತೆಯಿದೆ.

Best Mobiles in India

English summary
The Samsung Galaxy Note 7 is all set to be launched in India today. Here, we have collected a list of six features that are missing in the smartphone. The device comes with many bells and whistles, but it has missed out on a few. Take a look at the content here to know more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X