ಇಂಟೆಕ್ಸ್ ಆಕ್ವಾ ವರ್ಟರ್ಬೋ ಮತ್ತು ಇಕೋ 4ಜಿ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನುಗಳು ಮಾರುಕಟ್ಟೆಗೆ

|

5,000 ರುಪಾಯಿ ಒಳಗಿನ ಸ್ಮಾರ್ಟ್ ಫೋನುಗಳ ಗುಂಪಿಗೆ ಮತ್ತೆರಡು ಫೋನುಗಳು ಸೇರ್ಪಡೆಯಾಗಿವೆ, ಗ್ರಾಹಕರಿಗೆ ಮತ್ತಷ್ಟು ಆಯ್ಕೆಗಳು ಈಗ ಲಭ್ಯವಾಗಿದೆ. ದೇಸಿ ಟೆಕ್ ಕಂಪನಿ ಇಂಟೆಕ್ಸ್ ಎರಡು ಹೊಸ ಬಜೆಟ್ ಸ್ಮಾರ್ಟ್ ಫೋನುಗಳನ್ನು ತನ್ನ ಅಕ್ವಾ ಸೀರಿಸ್ ಕೆಳಗೆ ಬಿಡುಗಡೆಗೊಳಿಸಿದೆ. ಕಂಪನಿಯ ವೆಬ್ ಪುಟದ ಪ್ರಕಾರ ಇಂಟೆಕ್ಸ್ ಅಕ್ವಾ ವರ್ಟರ್ಬೋದ ಬೆಲೆ 3,330 ರುಪಾಯಿಯಷ್ಟಿದ್ದರೆ, ಇಂಟೆಕ್ಸ್ ಅಕ್ವಾ ಇಕೊ 4ಜಿಯ ಬೆಲೆ 3,949 ರುಪಾಯಿ.

ಇಂಟೆಕ್ಸ್ ಆಕ್ವಾ ವರ್ಟರ್ಬೋ ಮತ್ತು ಇಕೋ 4ಜಿ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನುಗಳು

ವೈಶಿಷ್ಟತೆಗಳ ಕಡೆಗೆ ಗಮನ ಹರಿಸಿದಾಗ, ಎರಡೂ ಸ್ಮಾರ್ಟ್ ಫೋನುಗಳಲ್ಲಿ ಸಾಮ್ಯತೆಯಿದೆ. ಎರಡರಲ್ಲೂ 4 ಇಂಚಿನ ಪರದೆಯಿದೆ, ಬೆರಳಚ್ಚು ತಂತ್ರಜ್ಞಾನವಿದೆ ಮತ್ತು 512 ರ್ಯಾಮಿನ ಕ್ವಾಡ್ ಕೋರ್ ಚಿಪ್ ಸೆಟ್ ಇದೆ. 4ಜಿಬಿ ಆಂತರಿಕ ಮೆಮೊರಿ ಸಾಮರ್ಥ್ಯವಿದೆ, ಮೆಮೊರಿ ಕಾರ್ಡಿನ ಸಹಾಯದಿಂದ ಇದನ್ನು 32 ಜಿಬಿಗೆ ವಿಸ್ತರಿಸಿಕೊಳ್ಳಬಹುದು. ಎರಡು ಫೋನುಗಳಲ್ಲಿರುವ ಪ್ರಮುಖ ವ್ಯತ್ಯಾಸವೆಂದರೆ ಒಂದರಲ್ಲಿ 4ಜಿ ಸೌಕರ್ಯವಿದೆ, ಮತ್ತೊಂದರಲ್ಲಿ ಇಲ್ಲ. ಈ ಸ್ಮಾರ್ಟ್ ಫೋನುಗಳ ಕೆಲವು ವಿಶಿಷ್ಟತೆಗಳ ಕಡೆಗೆ ಈಗ ಗಮನಹರಿಸೋಣ:

ಓದಿರಿ: ಇಂಟರ್ನೆಟ್‌ನಲ್ಲಿ ಸಂಪೂರ್ಣವಾಗಿ ಉಚಿತವಾಗಿ ಮಾಡಬಹುದಾದ ಕಾರ್ಯಗಳು

ಇಂಟೆಕ್ಸ್ ಆಕ್ವಾ ವರ್ಟರ್ಬೋ ಮತ್ತು ಇಕೋ 4ಜಿ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನುಗಳು

ಇಂಟೆಕ್ಸ್ ಆಕ್ವಾ ವರ್ಟರ್ಬೋ:

ಈ ಫೋನಿನಲ್ಲಿ 1.2GHzನ ಕ್ವಾಡ್ ಕೋರ್ ಪ್ರೊಸೆಸರ್ ಇದೆ. ಡುಯಲ್ ಎಲ್.ಇ.ಡಿ ಫ್ಲಾಷ್, ಎಫ್/2.8 ಅಪರ್ಚರ್ ಹೊಂದಿರುವ 5ಮೆಗಾಪಿಕ್ಸಲ್ಲಿನ ಹಿಂಬದಿಯ ಕ್ಯಾಮೆರಾ ಹಾಗೂ ಎಫ್/2.2 ಅಪರ್ಚರ್ ಹೊಂದಿರುವ ಮುಂಬದಿಯ ವಿಜಿಯ ಕ್ಯಾಮೆರಾ ಇದರಲ್ಲಿದೆ. 2,000 ಎಂ.ಎ.ಹೆಚ್ ಸಾಮರ್ಥ್ಯದ ಬ್ಯಾಟರಿ ಇದೆ. ಎರಡು ಸಿಮ್ ಕಾರ್ಡುಗಳನ್ನು ಹಾಕಬಹುದು; ವೈಫೈ, 3ಜಿ ಹಾಗೂ ಬ್ಲೂಟೂಥ್ ಸೌಕರ್ಯವಿದೆ.

ಇಂಟೆಕ್ಸ್ ಆಕ್ವಾ ವರ್ಟರ್ಬೋ ಮತ್ತು ಇಕೋ 4ಜಿ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನುಗಳು

ಇಂಟೆಕ್ಸ್ ಅಕ್ವಾ ಇಕೋ 4ಜಿ:

ಇಕೋ 4ಜಿ ಫೋನಿನಲ್ಲಿ 1.5GHzನ ಕ್ವಾಡ್ ಕೋರ್ ಪ್ರೊಸೆಸರ್ ಇದೆ. ಡುಯಲ್ ಎಲ್.ಇ.ಡಿ ಫ್ಲಾಷ್ ಹೊಂದಿರುವ 2 ಮೆಗಾಪಿಕ್ಸಲ್ಲಿನ ಹಿಂಬದಿಯ ಪ್ರಾಥಮಿಕ ಕ್ಯಾಮೆರಾ ಹಾಗೂ ಫ್ಲಾಷ್ ಸೌಕರ್ಯವಿರುವ ಮುಂಬದಿಯ ವಿ.ಜಿ.ಎ ಕ್ಯಾಮೆರಾ ಈ ಫೋನಿನಲ್ಲಿದೆ. 1,400 ಎಂ.ಎ.ಹೆಚ್ ಬ್ಯಾಟರಿ ಸಾಮರ್ಥ್ಯವಿರುವ ಈ ಫೋನಿನಲ್ಲಿರುವ ಇತರೆ ಸೌಲಭ್ಯಗಳೆಂದರೆ ಡುಯಲ್ ಸಿಮ್ ಕಾರ್ಡ್, 4ಜಿ ವೋಲ್ಟೆ, ವೈಫೈ, ಬ್ಲೂಟೂಥ್ ಹಾಗೂ ಜಿಪಿಎಸ್. ಆ್ಯಂಡ್ರಾಯ್ಡ್ 5.1 ಲಾಲಿಪಪ್ ಸಾಫ್ಟ್ ವೇರ್ ಇದರಲ್ಲಿದೆ.

ಇಂಟೆಕ್ಸ್ ಆಕ್ವಾ ವರ್ಟರ್ಬೋ ಮತ್ತು ಇಕೋ 4ಜಿ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನುಗಳು

ಕಂಪನಿಯ ವೆಬ್ ಪುಟದ ಪ್ರಕಾರ ಅಕ್ವಾ ವರ್ಟರ್ಬೋ ಬೂದು, ನೀಲಿ ಹಾಗೂ ಕಪ್ಪು ಬಣ್ಣದಲ್ಲಿ ಲಭ್ಯವಿದೆ, ಅಕ್ವಾ ಇಕೋ 4ಜಿ ಕಪ್ಪು ಹಾಗೂ ಗಾಢ ನೀಲಿ ಬಣ್ಣದಲ್ಲಿ ಲಭ್ಯವಿದೆ.

ಓದಿರಿ: ಗಿನ್ನಿಸ್ ವಿಶ್ವ ದಾಖಲೆ ಮಾಡಿದ ಸೂಪರ್ ಫೋನ್‌ಗಳು

ಈ ಹೊಸ ಇಂಟೆಕ್ಸ್ ಸ್ಮಾರ್ಟ್ ಫೋನುಗಳು ಈಚೆಗಷ್ಟೇ ಬಿಡುಗಡೆಯಾಗಿರುವ ರಿಲಯನ್ಸ್ ಲೈಫ್ ಫ್ಲೇಮ್ 7 ಹಾಗೂ ವಿಂಡ್ 7 ಸ್ಮಾರ್ಟ್ ಫೋನುಗಳಿಗೆ ಪೈಪೋಟಿ ಕೊಡುತ್ತವೆ.

Best Mobiles in India

English summary
Domestic tech company Intex took the lids off two new ultra-budget smartphones under its popular Aqua series. The Intex Aqua Virturbo and Intex Aqua Eco 4G smartphones are listed for Rs 3,330 and Rs 3,949 respectively on the company's website.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X