ಏರ್‌ಟೆಲ್‌ಗೆ ತಿರುಗು ಬಾಣ: ಒಂದಾದ ಜಿಯೋ-ಇಂಟೆಕ್ಸ್, ಮಾರುಕಟ್ಟೆಯಲ್ಲಿ ಹೊಸ ಸಂಚಲನ..!

|

ಭಾರತೀಯ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ ಇಂಟೆಕ್ಸ್ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದೆ. ತನ್ನ ಸ್ಮಾರ್ಟ್‌ಫೋನ್ ಮಾರಾಟವನ್ನು ಹೆಚ್ಚು ಮಾಡುವ ಸಲುವಾಗಿ ಟೆಲಿಕಾಂ ದೈತ್ಯ ರಿಲಯನ್ಸ್ ಮಾಲೀಕತ್ವದ ಜಿಯೋದೊಂದಿಗೆ ಕೈ ಜೋಡಿಸಿದ್ದು, ಈ ಮೂಲಕ ಮಾರುಕಟ್ಟೆಯಲ್ಲಿ ಹೊಸದೊಂದ ಅಲೆಯನ್ನು ಎಬ್ಬಿಸಲು ಮುಂದಾಗಿದೆ.

ಏರ್‌ಟೆಲ್‌ಗೆ ತಿರುಗು ಬಾಣ: ಒಂದಾದ ಜಿಯೋ-ಇಂಟೆಕ್ಸ್, ಮಾರುಕಟ್ಟೆಯಲ್ಲಿ ಹೊಸ ಸಂಚಲನ.

ಈಗಾಗಲೇ ಜಿಯೋ ಟೆಲಿಕಾಂ ಮಾರುಕಟ್ಟೆಯಲ್ಲಿ ಏರ್‌ಟೆಲ್ ಸೆಡ್ಡು ಹೊಡೆಯುವ ಸಲುವಾಗಿ ಬಜೆಟ್ ಸ್ಮಾರ್ಟ್‌ಫೋನ್‌ಗಳ ಮೇಲೆ ಕ್ಯಾಷ್ ಬ್ಯಾಕ್ ಆಫರ್ ಅನ್ನು ನೀಡಿದೆ. ಇದೇ ಮಾದರಿಯಲ್ಲಿ ಇಂಟೆಕ್ಸ್ ಸ್ಮಾರ್ಟ್‌ಫೋನ್‌ಗಳ ಮೇಲೆಯೂ ಕ್ಯಾಷ್ ಬ್ಯಾಕ್ ನೀಡಲು ಮುಂದಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಜಿಯೋ-ಇಂಟೆಕ್ಸ್ ಜುಗಲ್ ಬಂದಿ ಕ್ಲಿಕ್ ಆಗುವ ಸಾಧ್ಯತೆ ಇದೆ.

ರೂ.2200 ಕ್ಯಾಷ್ ಬ್ಯಾಕ್:

ರೂ.2200 ಕ್ಯಾಷ್ ಬ್ಯಾಕ್:

ಜಿಯೋ ಇಂಟೆಕ್ಸ್ ಸ್ಮಾರ್ಟ್‌ ಫೋನ್ ಖರೀದಿ ಮಾಡುವವರಿಗೆ ರೂ.2200 ಕ್ಯಾಷ್ ಬ್ಯಾಕ್ ದೊರೆಯಲಿದೆ ಎನ್ನಲಾಗಿದೆ. ಅದುವೇ ಬಜೆಟೆ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮೇಲೆ. ಮಾರುಕಟ್ಟೆಯಲ್ಲಿ ಇಂಟೆಕ್ಸ್ ಕಡಿಮೆ ಬೆಲೆಗೆ 4G ಸ್ಮಾರ್ಟ್‌ಫೋನ್ ಮಾರಾಟ ಮಾಡುತ್ತಿದ್ದು, ಇದೇ ಸಂದರ್ಭದಲ್ಲಿ ಕ್ಯಾಷ್ ಬ್ಯಾಕ್ ದೊರೆತಿರುವುದು ಮಾರಾಟಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆತಂತೆ ಆಗಿದೆ.

Jio Free Caller Tune ! ಜಿಯೋ ಉಚಿತ ಕಾಲರ್‌ಟೂನ್ ಬಳಕೆ ಹೇಗೆ..?
ಮಾರ್ಚ್ 31 ರ ವರೆಗೆ:

ಮಾರ್ಚ್ 31 ರ ವರೆಗೆ:

ಜಿಯೋ ಕ್ಯಾಷ್ ಬ್ಯಾಕ್ ಆಫರ್ ಇಂಟೆಕ್ ಬಳಕೆದಾರರಿಗೆ ದೊರೆಯುತ್ತಿದ್ದು, ಇದು ಮಾರ್ಚ್ 31ರ ವರೆಗೆ ಲಭ್ಯವಿರಲಿದೆ. ರೂ.2200 ಕ್ಯಾಷ್ ಬ್ಯಾಕ್ ಆಫರ್ ಪಡೆದುಕೊಳ್ಳಲು ಬಳಕೆದಾರರು ಜಿಯೋ ಸಿಮ್ ಬಳಕೆ ಮಾಡಿಕೊಳ್ಳಬೇಕಾಗಿದೆ.

ಕ್ಯಾಷ್ ಬ್ಯಾಕ್ ವೋಚರ್:

ಕ್ಯಾಷ್ ಬ್ಯಾಕ್ ವೋಚರ್:

ಜಿಯೋ ಇಂಟೆಕ್ಸ್ ಸ್ಮಾರ್ಟ್‌ಫೋನ್ ಕೊಳ್ಳುವವರಿಗೆ ನೀಡುವ ಆಫರ್ ಒಟ್ಟು 44 ಕ್ಯಾಷ್ ಬ್ಯಾಕ್ ವೋಚರ್ ನೀಡಲಿದೆ ಎನ್ನಲಾಗಿದೆ. ರೂ.50 ರ ಕ್ಯಾಷ್ ವೋಚರ್ ಗಳಾಗಲಿದ್ದು, ಇದನ್ನು ರಿಚಾರ್ಜ್ ಮಾಡಿಕೊಳ್ಳುವ ಮೂಲಕ ಬಳಕೆ ಮಾಡಿಕೊಳ್ಳಬಹುದಾಗಿದೆ.

ಮಾರುಕಟ್ಟೆಯಲ್ಲಿ ಹೊಸ ಅಲೆ:

ಮಾರುಕಟ್ಟೆಯಲ್ಲಿ ಹೊಸ ಅಲೆ:

ಈಗಾಗಲೇ ಮಾರುಕಟ್ಟೆಯಲ್ಲಿ ಏರ್‌ಟೆಲ್ ಅನೇಕ ಸ್ಮಾರ್ಟ್‌ಫೋನ್‌ಗಳ ಮೇಲೆ ಕ್ಯಾಷ್ ಬ್ಯಾಕ್ ನೀಡಲು ಮುಂದಾಗಿದೆ. ಇದೇ ಮಾದರಿಯಲ್ಲಿ ಜಿಯೋ ಇನ್ನು ಹೆಚ್ಚಿನ ಪ್ರಮಾಣದ ಕ್ಯಾಷ್ ಬ್ಯಾಕ್ ಅನ್ನು ನೀಡಲಿದೆ ಇದರಿಂದಾಗಿ ಮತ್ತೊಂದು ಮಾದರಿಯಲ್ಲಿ ದರ ಸಮರವನ್ನು ಮುಂದುವರೆಸಿದೆ.

Best Mobiles in India

English summary
Intex partners with Jio to give buyers Rs 2200 cashback. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X