ಐಫೋನ್ 8ರ ಬಗ್ಗೆ ನಿಮಗೆ ಗೊತ್ತಿರಬೇಕಾದ 5 ಸಂಗತಿಗಳು.

Written By:

ಆ್ಯಪಲ್ ಐಫೋನ್ 7 ಮತ್ತು 7 ಪ್ಲಸ್ ನ ಸುದ್ದಿಗಳೇ ಇನ್ನೂ ಇರುವಾಗ, ಮುಂದಿನ ವರುಷ ಬಿಡುಗಡೆಗೊಳ್ಳುವ ಐಫೋನ್ 8ರ ಬಗೆಗಿನ ಮಾಹಿತಿಗಳು ಹರಿದು ಬರುತ್ತಿವೆ.

ಐಫೋನ್ 8ರ ಬಗ್ಗೆ ನಿಮಗೆ ಗೊತ್ತಿರಬೇಕಾದ 5 ಸಂಗತಿಗಳು.

ಇತ್ತೀಚೆಗೆ ಬಿಡುಗಡೆಗೊಂಡ ಆ್ಯಪಲ್ಲಿನ ಹೊಸ ಸ್ಮಾರ್ಟ್ ಫೋನುಗಳಿಗೆ ಪ್ರಪಂಚದಾದ್ಯಂತ ಮಿಶ್ರ ಪ್ರತಿಕ್ರಿಯೆಗಳು ಸಿಕ್ಕಿವೆ. ಇದರಿಂದಾಗಿ ಮುಂದಿನ ವರುಷದ ಗೇಮ್ ಚೇಂಜರ್ ಎನ್ನಲಾಗುವ ಸ್ಮಾರ್ಟ್ ಫೋನನ್ನು ತಯಾರಿಸುವುಕ್ಕೆ ಬಹಳಷ್ಟು ಶ್ರಮ ಹಾಕಬೇಕಿದೆ ಕ್ಯುಪರ್ಟಿನೋ ದೈತ್ಯ ಆ್ಯಪಲ್.

ಓದಿರಿ: 1TB ಎಸ್‌ಡಿ ಕಾರ್ಡ್‌ ಖರೀದಿಯಿಂದ ಆಗುವ 5 ಬೆನಿಫಿಟ್‌ಗಳು ಏನು ಗೊತ್ತೇ?

ಆ್ಯಪಲ್ ಈಗಾಗಲೇ ತನ್ನ ಮುಂದಿನ ಐಫೋನಿನ ತಯಾರಿಗೆ ಸಿದ್ಧತೆ ನಡೆಸಿದೆ. ಅದರ ಬಗ್ಗೆ ನಿಮಗೆ ಗೊತ್ತಿರಬೇಕಾದ ಐದು ಸಂಗತಿಗಳನ್ನು ಇಲ್ಲಿ ಪಟ್ಟಿ ಮಾಡಿದ್ದೀವಿ. ಒಮ್ಮೆ ಓದಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇಸ್ರೇಲಿನಲ್ಲಿ ತಯಾರಾಗಲಿದೆ?

ಇಸ್ರೇಲಿನಲ್ಲಿ ತಯಾರಾಗಲಿದೆ?

ವರದಿಗಳ ಪ್ರಕಾರ, ಆ್ಯಪಲ್ ಮುಂದಿನ ವರುಷದ ಐಫೋನ್ 8 ರ ತಯಾರಿಕೆಯನ್ನು ಇಸ್ರೇಲಿನಲ್ಲಿ ನಡೆಸಲಿದೆ. ಇಸ್ರೇಲಿನಲ್ಲಿರುವ ಹರ್ಜಲಿಯಾದ ಆರ್ & ಡಿ ವಿಭಾಗದಲ್ಲಿ ಐಫೋನಿನ ಚಿಪ್, ಸಂಗ್ರಹ, ಕ್ಯಾಮೆರ ಮತ್ತು ನಿಸ್ತಂತು ತಂತ್ರಜ್ಞಾನಗಳ ತಯಾರಿ ನಡೆಯಲಿದೆ. ಹರ್ಜಲಿಯಾದಲ್ಲಿರುವ ಕಛೇರಿ ಆ್ಯಪಲ್ಲಿನ ಎರಡನೇ ಅತಿ ದೊಡ್ಡ ಆರ್ & ಡಿ ಕಛೇರಿ.

ಸಂಪೂರ್ಣ ಗಾಜಿನ ದೇಹ ಮತ್ತು ತುದಿಯಿಂದ ತುದಿಯವರೆಗಿನ ಪರದೆ.

ಸಂಪೂರ್ಣ ಗಾಜಿನ ದೇಹ ಮತ್ತು ತುದಿಯಿಂದ ತುದಿಯವರೆಗಿನ ಪರದೆ.

ಮಾಹಿತಿಗಳ ಪ್ರಕಾರ, ಐಫೋನ್ 8ರಲ್ಲಿ ಪೂರ್ಣ ಗಾಜಿನ ದೇಹ ಮತ್ತು ತುದಿಯಿಂದ ತುದಿಯವರೆಗಿನ ಪರದೆಯಿರಲಿದೆ. ಕ್ಯಾಮೆರ ಮತ್ತು ಟಚ್ ಐಡಿ ಅದರಲ್ಲೇ ಇರಲಿದೆ. ಇದು ಆ್ಯಪಲ್ ಕಂಪನಿಯಿಂದ ಹೊರಬರುವ ಮೊದಲ ಎಡ್ಜ್ ಟು ಎಡ್ಜ್ ಪರದೆಯಾಗಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉತ್ತಮ ಕ್ಯಾಮೆರ.

ಉತ್ತಮ ಕ್ಯಾಮೆರ.

ಆ್ಯಪಲ್ ಈಗಾಗಲೇ ತನ್ನ ಐಫೋನ್ 7 ಪ್ಲಸ್ ನಲ್ಲಿ ಉತ್ತಮ ಕ್ಯಾಮೆರಾ ಹಾರ್ಡ್ ವೇರ್ ಕೊಟ್ಟಿದೆ; ಐಫೋನ್ 8 ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿ ಹೊಸ ಕ್ಯಾಮೆರಾ ಹಾರ್ಡ್ ವೇರ್ ಅನ್ನು ಪಡೆಯಲಿದೆ. ಕ್ಯಾಮೆರಾ ಅಪ್ ಗ್ರೇಡ್ ಬಗ್ಗೆ ಆ್ಯಪಲ್ ಉದ್ಯೋಗಿಯೊಬ್ಬರು ಬ್ಯುಸಿನೆಸ್ ಇನ್ಸೈಡರ್ ಗೆ ಮಾಹಿತಿ ಕೊಟ್ಟಿದ್ದಾರಾದರೂ ನಿರ್ದಿಷ್ಟವಾಗಿ ಸೆನ್ಸಾರ್ ಅಥವಾ ಮೆಗಾಪಿಕ್ಸೆಲ್ಲಿನ ಬಗ್ಗೆ ಏನನ್ನೂ ಹೇಳಿಲ್ಲ. ನಮ್ಮ ನಂಬಿಕೆಯ ಪ್ರಕಾರ ಮುಂದಿನ ದಿನಗಳ ಆ್ಯಪಲ್ ಫೋನಿನಲ್ಲಿ ಡುಯಲ್ ಕ್ಯಾಮೆರಾ ಸಾಮಾನ್ಯವಾಗಲಿದೆ.

ಹೋಮ್ ಬಟನ್ ಇರುವುದಿಲ್ಲ.

ಹೋಮ್ ಬಟನ್ ಇರುವುದಿಲ್ಲ.

ಈಗ ಬಿಡುಗಡೆಯಾಗಿರುವ ಐಫೋನುಗಳಲ್ಲಿ ಹೋಮ್ ಬಟನ್ ಅನ್ನು ಅಪ್ ಡೇಟ್ ಮಾಡಲಾಗಿದೆ. ಕ್ಲಿಕ್ ಮಾಡುವ ಸೌಕರ್ಯ ಇದರಲ್ಲಿಲ್ಲ. ಇದು ಹೊಸ ಟ್ಯಾಪ್ಟಿಕ್ ಇಂಜಿನ್ನಿನ ಮೇಲೆ ಕಾರ್ಯನಿರ್ವಹಿಸುತ್ತದೆ. ಮುಂದಿನ ವರುಷವೂ ಈ ಬದಲಾವಣೆ ಮುಂದುವರೆಯಬಹುದು ಮತ್ತು ಆ್ಯಪಲ್ ತನ್ನ ಸಾಂಪ್ರದಾಯಿಕ ಹೋಮ್ ಬಟನ್ ಅನ್ನು ಬಿಟ್ಟು ಬಿಡಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಸ್ತಂತು ಚಾರ್ಜಿಂಗ್.

ನಿಸ್ತಂತು ಚಾರ್ಜಿಂಗ್.

ಐಫೋನ್ 8ರಲ್ಲಿ ನಿಸ್ತಂತು ಚಾರ್ಜಿಂಗ್ ಇರಲಿದೆ. ಈಗಾಗಲೇ ಬಹಳಷ್ಟು ಸ್ಮಾರ್ಟ್ ಫೋನುಗಳಲ್ಲಿ ಈ ಸೌಕರ್ಯವಿದೆ. ಆ್ಯಪಲ್ ಕೂಡ ಈ ಜನಪ್ರಿಯ ಲಕ್ಷಣವನ್ನು ತನ್ನ ಫೋನಿನಲ್ಲಿ ಅಳವಡಿಸಿಕೊಳ್ಳುವ ಸಮಯ ಬಂದಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Apple iPhone 8 has already made it to the rumor mill. Let's see what Apple has in store for the world with the next year iPhone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot