4G ವೇಗ- ಕಡಿಮೆ ಬೆಲೆಗೆ ಸ್ಮಾರ್ಟ್‌ಪೋನ್‌: ದೇಶದಲ್ಲಿ ಆಗುತ್ತಿರುವ ಬದಲಾವಣೆ ಏನು..?

|

ದೇಶದಲ್ಲಿ ಜಿಯೋ ಸೇವೆಯನ್ನು ಆರಂಭಿಸಿದ ನಂತರದಲ್ಲಿ ಮೊಬೈಲ್ ಡೇಟಾ ಕ್ರಾಂತಿಯೂ ಜೋರಾಗಿ ನಡೆಯುತ್ತಿದೆ. ಈ ಹಿನ್ನಲೆ ಭಾರತ ಮೊಬೈಲ್ ಡೇಟಾ ಬಳಕೆಯಲ್ಲಿ ಭಾರತ ನಂಬರ್ ಒನ್ ಪಟ್ಟವನ್ನು ಅಲಂಕರಿಸಿದೆ. ಇಡೀ ಶತಮಾನದಲ್ಲಿ ಬಳಕೆಯಾದ ಡೇಟಾವನ್ನು ಒಂದೇ ವರ್ಷದಲ್ಲಿ ಭಾರತೀಯರು ಬಳಕೆ ಮಾಡಿದ್ದಾರೆ ಎನ್ನಲಾಗಿದೆ.

4G ವೇಗ- ಕಡಿಮೆ ಬೆಲೆಗೆ ಸ್ಮಾರ್ಟ್‌ಪೋನ್‌: ದೇಶದಲ್ಲಿ ಆಗುತ್ತಿರುವ ಬದಲಾವಣೆ ಏನು..

ಓದಿರಿ: BSNLನಿಂದ ನ್ಯೂಯಿರ್ ಕಾಂಬೋ ಪ್ಲಾನ್: ಜಿಯೋ-ಏರ್‌ಟೆಲ್‌ನಲ್ಲೂ ಇಲ್ಲ..!

ಇದಲ್ಲದೇ ಭಾರತೀಯರಿಗೆ ಅತೀ ವೇಗದ ಡೇಟಾವೂ ಅತೀ ಕಡಿಮೆ ಬೆಲೆಗೆ ದೊರೆಯಲು ಶುರುವಾದ ಕಾರಣದಿಂದಾಗಿ ಭಾರತದಲ್ಲಿ ಮೊಬೈಲ್ ಡೇಟಾ ಬಳಕೆ ಅತೀ ಹೆಚ್ಚಾಗುತ್ತಿದೆ. ಇದೇ ಹಿನ್ನಲೆಯಲ್ಲಿ ಬ್ರಾಡ್ ಬ್ಯಾಂಡ್ ಬಳಕೆದಾರರ ಸಂಖ್ಯೆ ಅತೀ ಕಡಿಮೆಯಾಗುತ್ತಿದ್ದು, ಇದಕ್ಕೆ ಮತ್ತೊಂದು ಕಾರಣ ಎಂದರೆ ಸ್ಮಾರ್ಟ್‌ಫೋನ್‌ಗಳು ಸಹ ಅತೀ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ದೊರೆಯುತ್ತಿರುವುದು ಎನ್ನಬಹುದು.

ಮೊಬೈಲ್‌ನಲ್ಲೇ ಎಲ್ಲಾ:

ಮೊಬೈಲ್‌ನಲ್ಲೇ ಎಲ್ಲಾ:

ಸ್ಮಾರ್ಟ್‌ಫೋನ್‌ಗಳು ಕಡಿಮೆ ಬೆಲೆಯಲ್ಲಿ ಸಿಗುವ ಈ ಕಾಲದಲ್ಲಿ, ಎಲ್ಲರೂ ಮೊಬೈಲ್ ಡೇಟಾ ಉಪಯೋಗಿಸುವವರೇ. ಎಲ್ಲಿ ನೋಡಿದರೂ, ಮೊಬೈಲ್‌ಗೆ ಕಣ್ಣುಗಳನ್ನು ಕೀಲಿಸಿಕೊಂಡು ಚಾಟ್ ಮಾಡುವವರೇ ಕಾಣಿಸುವ ಈ ಕಾಲದಲ್ಲಿ, ಬ್ರಾಡ್ ಬ್ಯಾಂಡ್ ಕೇಳುವರಿಲ್ಲ ಎನ್ನಲಾಗಿದೆ.

ದಿನೇ ದಿನೇ ಕುಸಿಯುತ್ತಿದೆ:

ದಿನೇ ದಿನೇ ಕುಸಿಯುತ್ತಿದೆ:

ಟ್ರಾಯ್ ಈಚೆಗೆ ಬಿಡುಗಡೆ ಮಾಡಿರುವ ಅಂಕಿ ಅಂಶ ಗಳ ಪ್ರಕಾಕ ಭಾರತದಲ್ಲಿ 2017ರಲ್ಲಿ 42.92 ಕೋಟಿಗೆ ಮಂದಿ ಇಂಟರ್‌ನೆಟ್ ಬಳಕೆ ಮಾಡಿಕೊಳ್ಳುತ್ತಿದ್ದು, ಇದರಲ್ಲಿ ಮೊಬೈಲ್ ಡೇಟಾ ಬಳಕೆದಾರರ ಸಂಖ್ಯೆಯೂ ಅತೀ ಹೆಚ್ಚಾಗಿದೆ. ಬ್ರಾಡ್ ಬ್ಯಾಂಡ್ ಬಳಕೆದಾರರ ಸಂಖ್ಯೆಯೂ ಇಳಿಕೆಯಾಗುತ್ತಿದೆ.

ಕಾರಣವೇನು..?

ಕಾರಣವೇನು..?

ಮೊಬೈಲ್ ಡೇಟಾ ಅತೀ ಕಡಿಮೆ ಬೆಲೆಗೆ ಅತೀ ವೇಗದ ಸೇವೆಯನ್ನು ನೀಡುತ್ತಿದೆ. ಇದರ ಬಳಕೆಯೂ ಸುಲಭವಾಗಿದೆ. ಆದರೆ ಬ್ರಾಡ್‌ ಬ್ಯಾಂಡ್ ಸೇವೆಯನ್ನು ಪಡೆಯವುದು ಕಷ್ಟ ಮತ್ತು ಸುಲಭ ಸಾಧ್ಯವಲ್ಲ ಈ ಹಿನ್ನಲೆಯಲ್ಲಿ ಮೊಬೈಲ್ ಡೇಟಾ ಬಳಕೆ ಹೆಚ್ಚಾಗುತ್ತಿದೆ.

ಮೊಬೈಲ್ ಡೇಟಾವನ್ನು ಕಂಪ್ಯೂಟರ್‌ನಲ್ಲಿ ಪಡೆಯುವುದು ಹೇಗೆ..?

ಮೊಬೈಲ್ ಡೇಟಾವನ್ನು ಕಂಪ್ಯೂಟರ್‌ನಲ್ಲಿ ಪಡೆಯುವುದು ಹೇಗೆ ಎಂಬುದನ್ನು ತಿಳಿಯಲು ಈ ವಿಡಿಯೋವನ್ನು ನೀವೆ ನೋಡಿ.

Best Mobiles in India

English summary
mobile broadband user going down. to know more visit kannada.gizot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X