iQOO Z5 ವಿಮರ್ಶೆ: ಮೀಡ್‌ರೇಂಜ್‌ ಬೆಲೆಗೆ ಸ್ಟೈಲಿಶ್ ಸ್ಮಾರ್ಟ್‌ಫೋನ್‌!

|

ಐಕ್ಯೂ (iQOO) ಸಂಸ್ಥೆಯು ಭಾರತದಲ್ಲಿ ಹೊಸದಾಗಿ ಪರಿಚಯಿಸಿರುವ 'ಐಕ್ಯೂ Z5' (iQOO Z5)ಸ್ಮಾರ್ಟ್‌ಫೋನ್‌ ಈಗಾಗಲೇ ಹಲವು ಫೀಚರ್ಸ್‌ಗಳಿಂದ ಗಮನ ಸೆಳೆದಿದೆ. ಈ ಸ್ಮಾರ್ಟ್‌ಫೋನ್ ಇತ್ತೀಚಿಗಿನ ಅಗತ್ಯ ಫೀಚರ್ಸ್‌ಗಳನ್ನು ಹೊಂದಿದೆ. ಮುಖ್ಯವಾಗಿ 64 ಎಂಪಿ ಸೆನ್ಸಾರ್ ಕ್ಯಾಮೆರಾ ಮತ್ತು ಸ್ನಾಪ್‌ಡ್ರಾಗನ್‌ 778G SoC ಪ್ರೊಸೆಸರ್ ಫೀಚರ್ಸ್‌ಗಳಿಂದ ಮಾರುಕಟ್ಟೆಯಲ್ಲಿ ಇತರೆ ಬ್ರ್ಯಾಂಡ್‌ಗಳ ಫೋನ್‌ಗಳಿಗೆ ಭರ್ಜರಿ ಫೈಟ್‌ ನೀಡುವ ಲಕ್ಷಣಗಳನ್ನು ಹೊರಹಾಕಿದೆ.

ಸ್ಮಾರ್ಟ್‌ಫೋನ್‌

ಐಕ್ಯೂ Z5 ಸ್ಮಾರ್ಟ್‌ಫೋನ್‌ ಮೀಡ್‌ರೇಂಜ್ ಮಾದರಿಯಲ್ಲಿ ಗುರುತಿಸಿಕೊಂಡಿದ್ದು, ಆದರೆ ಕೆಲವು ಹೈ ಎಂಡ್ ಮಾದರಿಯ ಫೀಚರ್ಸ್‌ಗಳನ್ನು ಪಡೆದಿದೆ. 12GB RAM ಮತ್ತು 256GB ಸ್ಟೋರೇಜ್ ವೇರಿಯಂಟ್‌ ಹೊಂದಿದ್ದು, ಚುರುಕಾದ ಕಾರ್ಯವೈಖರಿ ಈ ಫೋನಿನಲ್ಲಿ ಕಾಣಬಹುದಾಗಿದೆ. ಜೊತೆಗೆ ಬ್ಯಾಟರಿ ಸಪೋರ್ಟ್‌ಗೆ 44W ಫ್ಲ್ಯಾಶ್ ಚಾರ್ಜ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದ ಸೌಲಭ್ಯ ಪಡೆದಿದೆ. ಇದರೊಂದಿಗೆ ಡಿವೈಸ್‌ನಿಂದಲೂ ಈ ಫೋನ್ ಕಣ್ಮನ ಸೆಳೆದಿದೆ. ಹಾಗಾದರೆ ಐಕ್ಯೂ Z5 ಸ್ಮಾರ್ಟ್‌ಫೋನಿನ ಫೀಚರ್ಸ್‌ಗಳ ಕಾರ್ಯವೈಖರಿ ಹೇಗಿವೆ ಎನ್ನುವ ಕುರಿತು ಫಸ್ಟ್‌ ಲುಕ್ ಮಾಹಿತಿ ಇಲ್ಲಿದೆ. ಮುಂದೆ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಐಕ್ಯೂ Z5 ಸ್ಮಾರ್ಟ್‌ಫೋನ್‌ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.67-ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ 20:9 ರಚನೆ ಅನುಪಾತ, ಡಿಸಿಐ-ಪಿ 3 ಕಲರ್ ಹರವು ಮತ್ತು ಹೆಚ್‌ಡಿಆರ್ 10 ಬೆಂಬಲವನ್ನು ಹೊಂದಿದೆ. ಇದು ಟಿಯುವಿ ರೀನ್ಲ್ಯಾಂಡ್ ನಿಂದ ಪ್ರಮಾಣೀಕರಿಸಲ್ಪಟ್ಟಿದೆ. ಕಂಪನಿಯು ಪ್ರಸ್ತುತ ಅಗತ್ಯತೆಗೆ ಅನುಗುಣವಾಗಿ ಡಿಸ್‌ಪ್ಲೇ ಸೌಲಭ್ಯ ನೀಡಿದೆ ಎನ್ನಬಹುದು.

ಪ್ರೊಸೆಸರ್‌ ಪವರ್ ಯಾವುದು

ಪ್ರೊಸೆಸರ್‌ ಪವರ್ ಯಾವುದು

ಐಕ್ಯೂ Z5 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 778G SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 11 ಆಧಾರಿತ ಒರಿಜಿನ್ ಓಎಸ್ 1.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ 8GB/128GB ಹಾಗೂ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. RAM ಸಾಮರ್ಥ್ಯ ಅಧಿಕವಾಗಿರುವುದರಿಂದ ಫೋನಿನ ಕಾರ್ಯವೈಖರಿ ವೇಗದಲ್ಲಿರಲಿದೆ. ಗೇಮಿಂಗ್‌ಗೂ ಸಹ ಅತ್ಯುತ್ತಮ ಸಪೋರ್ಟ್‌ ನೀಡಲಿದೆ.

ಟ್ರಿಪಲ್ ಕ್ಯಾಮೆರಾ ಸೆನ್ಸಾರ್

ಟ್ರಿಪಲ್ ಕ್ಯಾಮೆರಾ ಸೆನ್ಸಾರ್

ಐಕ್ಯೂ Z5 ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಸೆನ್ಸರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಡ್ಯುಯಲ್ ವ್ಯೂ ವೀಡಿಯೋ, ಸೂಪರ್ ನೈಟ್ ಮೋಡ್, ಪೋರ್ಟ್ರೇಟ್ ಮೋಡ್ ಅನ್ನು ಹೊಂದಿವೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಸದ್ಯ 64 ಮೆಗಾ ಪಿಕ್ಸಲ್ ಕ್ಯಾಮೆರಾ ಟ್ರೆಂಡಿ ಆಗಿದೆ. ಫೋಟೊ ಎಡಿಂಗ್ ಆಯ್ಕೆಗಳನ್ನು ಇದು ಒಳಗೊಂಡಿದೆ.

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟು?..ಇತರೆ ಸೌಲಭ್ಯಗಳು

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟು?..ಇತರೆ ಸೌಲಭ್ಯಗಳು

ಐಕ್ಯೂ Z5 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 44W ಫ್ಲ್ಯಾಶ್ ಚಾರ್ಜ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್, ಬ್ಲೂಟೂತ್ v5.2, ಯುಎಸ್‌ಬಿ ಒಟಿಜಿ, ಟ್ರೈ-ಬ್ಯಾಂಡ್ ವೈ-ಫೈ 2.4GHz, 5.1GHz, ಮತ್ತು 5.8GHz ಬ್ಯಾಂಡ್‌ಗಳು, GPS ಮತ್ತು 3.5mm ಆಡಿಯೋ ಜ್ಯಾಕ್ ಸೇರಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಐಕ್ಯೂ Z5 ಸ್ಮಾರ್ಟ್‌ಫೋನ್‌ ಭಾರತದಲ್ಲಿ 8GB RAM + 128GB ಸ್ಟೋರೇಜ್‌ಗಾಗಿ 23,990ರೂ ಮತ್ತು 12GB RAM + 256GB ಸ್ಟೋರೇಜ್ ಆಯ್ಕೆಗಳಿಗಾಗಿ 26,990ರೂ ಬೆಲೆಯನ್ನು ಹೊಂದಿದೆ. ಇದು ಆರ್ಕ್ಟಿಕ್ ಡಾನ್ ಮತ್ತು ಮಿಸ್ಟಿಕ್ ಸ್ಪೇಸ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಕೊನೆಯ ಮಾತು

ಕೊನೆಯ ಮಾತು

ಐಕ್ಯೂ Z5 ಸ್ಮಾರ್ಟ್‌ಫೋನ್‌ ಉತ್ತಮ ಮೀಡ್‌ರೇಂಜ್‌ ಫೋನ್‌ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಕೆಲವು ಸಣ್ಣ ಪುಟ್ಟ ನ್ಯೂನತೆ ಗಳು ಈ ಪೋನ್‌ ಅನ್ನು ಅತ್ಯುತ್ತಮ ಮೀಡ್ ರೇಂಜ್ ಫೋನ್ ಎನ್ನುವುದನ್ನು ತಡೆದಿವೆ ಎನ್ನಬಹುದು. ಡಿಸ್‌ಪ್ಲೇ ಇನ್ನಷ್ಟು ಉತ್ತಮಗೊಳಿಸಬಹುದಿತ್ತು ಎನಿಸುತ್ತದೆ.

Best Mobiles in India

English summary
iQOO Z5 Review: Stylish Smartphone At Mid Range Price Tag.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X