1499 ರೂ. ಬೆಲೆಯ ಜಿಯೋ 4G ಫೋನ್ ಬಿಡುಗಡೆ ಶೀಘ್ರ..!!

|

ಸದ್ಯ ದೇಶಿಯ ಟಿಲಿಕಾಂ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ರಿಲಯನ್ಸ್ ಮಾಲೀಕತ್ವದ ಜಿಯೋ, ಮತ್ತೆ ತನ್ನ ಮಾತನ್ನು ಉಳಿಸಿಕೊಂಡಿದೆ ಎಂದು ಹೇಳಬಹುದಾಗಿದೆ. ಜಿಯೋ ದೇಶದಲ್ಲಿ 4G VoLTE ಸೇವೆಯನ್ನು ಆರಂಭಿಸಿದ ನಂತರದಲ್ಲಿ ಕೇವಲ 4G VoLTE ಸಫೋರ್ಟ್ ಮಾಡುವ ಫೋನ್‌ಗಳಲ್ಲಿ ಮಾತ್ರ ಈ ಸೇವೆಯನ್ನು ಪಡೆಯಬಹುದಾಗಿತ್ತು.

1499 ರೂ. ಬೆಲೆಯ ಜಿಯೋ 4G ಫೋನ್ ಬಿಡುಗಡೆ ಶೀಘ್ರ..!!

ಓದಿರಿ: ರೂ.999 ಬೆಲೆಯ ಜಿಯೋ 4G ಪೋನು ಬಿಡುಗಡೆ..!!

ಈ ಕಾರಣದಿಂದಾಗಿ 4G VoLTE ಸಫೋರ್ಟ್ ಮಾಡುವ ಫೋನ್‌ ಇಲ್ಲದೇ ಸಾಕಷ್ಟು ಮಂದಿ ಜಿಯೋ ಸೇವೆಯಿಂದ ವಂಚಿತರಾಗಿದ್ದರು. ಅಲ್ಲದೇ 4G VoLTE ಸಪೋರ್ಟ್ ಕೇವಲ ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿತ್ತು. ಬೆಲೆಯೂ ಹೆಚ್ಚಾಗಿತ್ತು. ಈ ಹಿನ್ನಲೆಯಲ್ಲಿ ಜಿಯೋ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯ ಫೀಚರ್ ಫೋನನ್ನು ಮಾರುಕಟ್ಟೆಗೆ ಬಿಡುವುದಾಗಿ ತಿಳಿಸಿತ್ತು. ಈಗ ಆ ಕಾಲವು ಹತ್ತಿರ ಬಂದಿದೆ. ಶೀಘ್ರವೇ ಈ ಫೋನ್‌ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ರೂ.1499 ಬೆಲೆಯ ಜಿಯೋ 4G ಫೋನು:

ರೂ.1499 ಬೆಲೆಯ ಜಿಯೋ 4G ಫೋನು:

ಸದ್ಯ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್‌ ದೊರೆಯುತ್ತಿದ್ದು, ಇದೇ ಸಂದರ್ಭದಲ್ಲಿ ಜಿಯೋ ತನ್ನ ಗ್ರಾಹಕರಿಗೆ ಇನ್ನು ಕಡಿಮೆ ಬೆಲೆಗ ಉತ್ತಮ ಗುಣಮಟ್ಟದ ರೂ.1499 ಬೆಲೆಯ ಜಿಯೋ 4G ಫೋನ್‌ಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದು, ಶೀಘ್ರವೇ ಗ್ರಾಹಕರ ಕೈ ಸೇರಲಿದೆ.

ಈಗಾಗಲೇ 5 ವರ್ಷಕ್ಕೆ ಒಪ್ಪಂದ:

ಈಗಾಗಲೇ 5 ವರ್ಷಕ್ಕೆ ಒಪ್ಪಂದ:

ರಿಲಯನ್ಸ್ ಜಿಯೋ ತನ್ನ ಟೆಲಿಕಾಂ ಸೇವೆಯನ್ನು ಆರಂಭಿಸಿದಂತೆ ಲೈಫ್ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಿತ್ತು. ಇದೇ ಸಂದರ್ಭದಲ್ಲಿ ಸ್ಪ್ರೆಡ್ರಮ್ ಕಮ್ಯೂನಿಕೆಷನ್ ನೊಂದಿಗೆ 5 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದು, 4G ಫೀಚರ್ ಫೋನುಗಳನ್ನು ಇದೇ ಕಂಪನಿ ತಯಾರಿಸಿಕೊಡಲಿದೆ ಎನ್ನಲಾಗಿದೆ.

ತಯಾರಿಕೆ ಮುಗಿದಿದೆ;

ತಯಾರಿಕೆ ಮುಗಿದಿದೆ;

ಜಿಯೋ 4G ಫೋನಿನ ತಯಾರಿಕೆಯೂ ಈಗಾಗಲೇ ಸಂಪೂರ್ಣವಾಗಿದ್ದು, ಮಾರುಕಟ್ಟೆ ಪ್ರವೇಶಕ್ಕೆ ಮೂಹುರ್ತ ಫೀಕ್ಸ್ ಆಗಬೇಕಾಗಿದೆ. ಈ ಕುರಿತು ಸ್ಪ್ರೆಡ್ರಮ್ ಕಮ್ಯೂನಿಕೆಷನ್ ಜೊತೆ ಜಿಯೋ ಒಪ್ಪಂದವನ್ನು ಮಾಡಿಕೊಂಡಿದೆ ಎನ್ನಲಾಗಿದೆ.

ಫೋನಿನ ಬೆಲೆ ಇನ್ನು ಕಡಿಮೆ ಆಗಬಹುದು:

ಫೋನಿನ ಬೆಲೆ ಇನ್ನು ಕಡಿಮೆ ಆಗಬಹುದು:

ಸದ್ಯ ಮಾರುಕಟ್ಟೆಯಲ್ಲಿ 4G ಫೀಚರ್ ಫೋನುಗಳನ್ನು ಪರಿಚಯ ಮಾಡಿರುವ ಮೈಕ್ರೋಮ್ಯಾಕ್ಸ್ ಮತ್ತು ಲಾವಾ ಕಂಪನಿಗಳು ಕೇಲವ ರೂ.3000ಕ್ಕೆ ಫೋನ್‌ಗಳನ್ನು ನೀಡುತ್ತಿರುವ ಹಿನ್ನಲೆಯಲ್ಲಿ ಜಿಯೋ ತನ್ನ ಫೋನಿನ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಲಿದೆ ಎನ್ನುವ ಸುದ್ಧಿ ಲಭ್ಯವಾಗಿದೆ.

4G ಫೋನಿಗೆ ಹೊಸ ಆಫರ್‌:

4G ಫೋನಿಗೆ ಹೊಸ ಆಫರ್‌:

ಜಿಯೋ ತನ್ನ 4G ಫೋನ್‌ ಕೊಳ್ಳುವವರಿಗೆ ಹೊಸದಾಗಿ ಯಾವುದಾರೂ ಪ್ಲಾನ್ ಘೋಷಣೆ ಮಾಡಲಿದೆ ಎನ್ನಲಾಗಿದೆ. ಈಗಾಗಲೇ ಫ್ಲಾನ್‌ ರೆಡಿಯಾಗಿದ್ದು, ಶೀಘ್ರವೇ ಈ ಕುರಿತು ಜಿಯೋ ಘೋಷನೆಯನ್ನು ಹೊರ ಹಾಕಲಿದೆ.

ಮೇ ಅಂತ್ಯಕ್ಕೆ ಮಾರುಕಟ್ಟೆಗೆ:

ಮೇ ಅಂತ್ಯಕ್ಕೆ ಮಾರುಕಟ್ಟೆಗೆ:

ಸದ್ಯ ದೊರೆತಿರುವ ಮೂಲಗಳ ಮಾಹಿತಿ ಪ್ರಕಾರ ಮೇ ಅಂತ್ಯದ ವೇಳೆಗೆ ಈ ಫೋನ್‌ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಆದರೆ ಈ ಕುರಿತು ಜಿಯೋ ಯಾವುದೇ ಮಾಹಿತಿಯನ್ನು ಸದ್ಯದ ವರೆಗೂ ಹೊರ ಹಾಕಿಲ್ಲ.

Most Read Articles
Best Mobiles in India

Read more about:
English summary
report tips that a 4G feature phone priced at Rs. 1,500 will soon be a reality. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X