ಅಧಿಕೃತವಾಗಿ ಜಿಯೋ ಫೋನ್ ಬುಕಿಂಗ್ ಶುರು: ಬುಕ್ ಮಾಡಲು ಬೇಕಾದ ದಾಖಲಾತಿಗಳ ಬಗ್ಗೆ ಫುಲ್ ಡಿಟೈಲ್..!

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ನೂತನವಾಗಿ ಲಾಂಚ್ ಮಾಡಲಿರುವ ಜಿಯೋ ಫೋನ್ ಹವಾ ಜೋರಾಗಿದ್ದು, ಆಗಸ್ಟ್ 16 ರಂದು ಈ ಫೋನ್ ಅಧಿಕೃತವಾಗಿ ಲಾಂಚ್ ಆಗಲಿದೆ. ಆದರೆ ಈಗಾಗಲೇ ದೇಶದ ಹಲವು ಆಫ್‌ಲೈನ್ ಮಾರುಕಟ್ಟೆಯಲ್ಲಿ ಈ ಫೋನ್‌ಗೆ ಮುಂಗಡ ಬುಕಿಂಗ್ ಶುರುವಾಗಿದ್ದು, ನೀವು ಈ ಫೋನ್ ಕೊಳ್ಳಬೇಕು ಎಂದು ಕೊಂಡಿದ್ದರೇ ಈ ಸ್ಟೋರಿ ನೋಡಿ.

 ಬುಕ್ ಮಾಡಲು ಬೇಕಾದ ದಾಖಲಾತಿಗಳ ಬಗ್ಗೆ ಫುಲ್ ಡಿಟೈಲ್..!

ಓದಿರಿ: ಏರ್‌ಟೆಲ್, ವೊಡಾ, ಐಡಿಯಾ ಆಫರ್‌ಗಳಿಗೆ ಕುತ್ತು: ಟ್ರಾಯ್‌ನಿಂದ ಹೊಸ ನೀತಿ.!!

ಈಗಾಗಲೇ ಲಕ್ಷಾಂತರ ಮಂದಿ ಈ ಫೋನ್ ಕೊಂಡುಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದು, ಈ ಹಿನ್ನಲೆಯಲ್ಲಿ ಜಿಯೋ ಫೋನ್ ಅನ್ನು ಸರದಿಯಲ್ಲಿ ಅದಷ್ಟು ಬೇಗನೆ ಕೊಂಡುಕೊಳ್ಳಬೇಕು ಎನ್ನುವ ಪ್ಲಾನ್ ನಿಮಗಿದ್ದಲ್ಲಿ, ಜಿಯೋ ಫೋನ್ ಬುಕ್ ಮಾಡಲು ಬೇಕಾದ ಅಧಿಕೃತ ದಾಖಲಾತಿಗಳ ಬಗ್ಗೆ ಪೂರ್ಣ ಮಾಹಿತಿಯೂ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒಂದಕ್ಕಿಂತ ಹೆಚ್ಚು ಜಿಯೋ ಉಚಿತ ಫೋನ್ ಬುಕ್ ಮಾಡುವುದು ಹೇಗೆ?
ಜಿಯೋ ಫೋನ್ ಸಂಪೂರ್ಣ ಉಚಿತ:

ಜಿಯೋ ಫೋನ್ ಸಂಪೂರ್ಣ ಉಚಿತ:

ಈಗಾಗಲೇ ಅಂಬಾನಿ ಹೇಳಿರುವಂತೆ ಜಿಯೋ ಫೋನ್ ಸಂಫೂರ್ಣ ಉಚಿತವಾಗಿದ್ದು, ಆದರೆ ಫೋನ್ ಕೊಂಡುಕೊಳ್ಳುವ ಸಂದರ್ಭದಲ್ಲಿ ರೂ.1500 ಠೇವಣಿ ಇಡಬೇಕಾಗಿದೆ. ಇದನ್ನು ಮೂರು ವರ್ಷದ ನಂತರದಲ್ಲಿ ಹಿಂಪಡೆಯಬಹುದಾಗಿದೆ. ಇದರಿಂದಾಗಿ ಈ ಫೋನ್ ಕೊಳ್ಳುವ ವೇಳೆಯಲ್ಲಿ ಜಿಯೋ ಹೆಚ್ಚಿನ ದಾಖಲೆಗಳನ್ನು ಕೇಳಲಿದೆ.

ಜಿಯೋ ಫೋನ್ ಬುಕಿಂಗ್‌ಗೆ ಆಧಾರ್ ಕಡ್ಡಾಯ:

ಜಿಯೋ ಫೋನ್ ಬುಕಿಂಗ್‌ಗೆ ಆಧಾರ್ ಕಡ್ಡಾಯ:

ಇದಲ್ಲದೇ ಜಿಯೋ ಫೋನ್ ಬುಕ್ ಮಾಡುವ ವೇಳೆಯಲ್ಲಿ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕಾಗಿದೆ. ಇದಕ್ಕಾಗಿ ನೀವು ನಿಮ್ಮ ಹತ್ತಿರ ಜಿಯೋ ಡೀಲರ್ ಬಳಿ ಹೋಗಿ ನಿಮ್ಮ ಆಧಾರ್ ಕಾರ್ಡ್ ಪ್ರತಿಯನ್ನು ನೀಡಿ ರಿಜಿಸ್ಟರ್ ಆಗಬೇಕಾಗಿದೆ.

ಒಂದು ಆಧಾರ್ ಕಾರ್ಡಿಗೆ ಒಂದು ಫೋನ್‌:

ಒಂದು ಆಧಾರ್ ಕಾರ್ಡಿಗೆ ಒಂದು ಫೋನ್‌:

ಈ ಬಾರಿ ಜಿಯೋ ಒಂದು ಆಧಾರ್ ಕಾರ್ಡಿಗೆ ಒಂದೇ ಒಂದು ಫೋನ್ ನೀಡಲಿದೆ. ನಿಮಗೆ ಹೆಚ್ಚಿನ ಫೋನ್ ಬೇಕಿದ್ದಲ್ಲಿ ಖರೀದಿಸಲು ಸಾಧ್ಯವಿಲ್ಲ. ಫೋನ್ ಬುಕ್ ಮಾಡುವ ಸಂದರ್ಭದಲ್ಲಿ ಆಧಾರ್ ಕಾರ್ಡ್ ಇರುವವರೇ ಸ್ಥಳಕ್ಕೆ ಬರಬೇಕಾಗಿದೆ. ಇಲ್ಲವಾದರೆ ಫೋನ್ ಬುಕ್ ಮಾಡಲು ಸಾಧ್ಯವಿಲ್ಲ.

ಜಿಯೋ ಫೋನ್ ಡೆಲಿವರಿ ಡೇಟ್:

ಜಿಯೋ ಫೋನ್ ಡೆಲಿವರಿ ಡೇಟ್:

ಇಲ್ಲದೇ ನೀವು ಇಂದೇ ಜಿಯೋ ಫೋನ್ ಬುಕ್ ಮಾಡಿದಲ್ಲಿ, ಸೆಪ್ಟೆಂಬರ್ 1 ಮತ್ತು ಸೆಪ್ಟೆಂಬರ್ 4ರಂದು ಡೆಲಿವರಿಯಾಗಲಿದೆ. ಬುಕಿಂಗ್ ಸಂಖ್ಯೆ ಹೆಚ್ಚಾಗುತ್ತಿದಂತೆ ಜಿಯೋ ಫೋನ್ ಡೆಲಿವರಿ ದಿನಾಂಕವು ವಿಸ್ತರಣೆಯಾಗುವ ಸಾಧ್ಯತೆಗಳು ಹೆಚ್ಚಾಗಿದೆ.

ಆನ್‌ಲೈನಿನಲ್ಲಿ ಆಗಸ್ಟ್ 24 ರಿಂದ :

ಆನ್‌ಲೈನಿನಲ್ಲಿ ಆಗಸ್ಟ್ 24 ರಿಂದ :

ಆನ್‌ಲೈನಿನಲ್ಲಿ ಈ ಫೋನಿನ ಬುಕಿಂಗ್ ಆಗಸ್ಟ್ 24 ರಿಂದ ಶುರುವಾಗಲಿದೆ. ಇದಲ್ಲದೇ ಜಿಯೋ ಆಪ್ ಮೂಲಕವೂ ನೀವು ಈ ಫೋನ್ ಬುಕ್ ಮಾಡಬಹುದಾಗಿದೆ. ಅಲ್ಲದೇ ಆನ್‌ಲೈನಿನಲ್ಲಿ ಒಂದಕ್ಕಿಂತ ಹೆಚ್ಚಿನ ಫೋನ್ ಅನ್ನು ಬುಕ್ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಒಟ್ಟು 50 ಮಿಲಿಯನ್ ಫೋನ್ ಮಾರಾಟ:

ಒಟ್ಟು 50 ಮಿಲಿಯನ್ ಫೋನ್ ಮಾರಾಟ:

ಜಿಯೋ ಫೋನ್ ಹೊಸ ದಾಖಲೆಯನ್ನು ನಿರ್ಮಿಸಲು ಮುಂದಾಗಿದೆ. ಈಗಾಗಲೇ 50 ಮಿಲಿಯನ್ ಫೋನ್ ಗಳನ್ನು ಭಾರತದಲ್ಲಿಯೇ ಮಾರಾಟ ಮಾಡುವ ಗುರಿಯನ್ನು ಹೊಂದಿದೆ. ಸೆಪ್ಟೆಂಬರ್ ನಿಂದ ಪ್ರತಿ ದಿನ 5 ಮಿಲಿಯನ್ ಫೋನ್‌ಗಳನ್ನು ಗ್ರಾಹಕರಿಗೆ ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
JioPhone bookings will officially open on August 24 (both offline and online), but certain offline retailers. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot