Subscribe to Gizbot

ಜಿಯೋ ಫೋನ್ ಬ್ಯಾಡ್ ನ್ಯೂಸ್: ವಾಟ್ಸ್ಆಪ್ ಸಫೋರ್ಟ್ ಮಾಡಲ್ಲ, ದಿನಕ್ಕೆ 4G ಡೇಟಾ ಕೇವಲ 500MB ಮಾತ್ರ..!!!

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ಬಿಡುಗಡೆ ಮಾಡಿರುವ ಜಿಯೋ ಫೋನ್ ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟುಹಾಕುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ಫೀಚರ್ ಮಾದರಿಯ ಸ್ಮಾರ್ಟ್‌ಫೋನ್ ಹಲವು ವಿಷೇಷತೆಗಳನ್ನು ಹೊಂದಿರುವ ಮಾದರಿಯಲ್ಲಿ ತನ್ನದೇ ಮಿತಿಗಳನ್ನು ಹೊಂದಿದೆ.

ಜಿಯೋ ಫೋನ್ ಬ್ಯಾಡ್ ನ್ಯೂಸ್: ವಾಟ್ಸ್ಆಪ್ ಸಫೋರ್ಟ್ ಮಾಡಲ್ಲ

ಓದಿರಿ: 'ಉಚಿತ ಜಿಯೋ ಫೋನ್' ಒಂದೇ ಕಲ್ಲಿಗೆ ಎರಡು ಹಕ್ಕಿ: ಟೆಲಿಕಾಂ-ಸ್ಮಾರ್ಟ್‌ಫೋನ್ ಕಂಪನಿಗಳಿಗೆ ಬಿತ್ತು ಬರೆ..!!

ಈಗಾಗಲೇ ಹಾಟ್ ಟಾಫಿಕ್ ಆಗಿರುವ ಜಿಯೋ ಫೋನ್ ಗ್ರಾಹಕರಿಗೆ ಕಡಿಮೆ ಬೆಲೆಗೆ ದೊರೆಯುತ್ತಿದೆ. ಅಲ್ಲದೇ ಇದನ್ನು ಭಾರತದ ಸ್ಮಾರ್ಟ್‌ಫೋನ್ ಎಂದು ಕರೆಯಲಾಗುತ್ತಿದೆ. ಜೊತೆಗೆ ಉಚಿತವಾಗಿ ದೊರೆಯುತ್ತಿದೆ. ಇದೆಲ್ಲದರ ನಡುವೆ ಇದರ ಮಿತಿಗಳನ್ನು ತಿಳಿಸುವ ಪ್ರಯತ್ನ ಇದಾಗಿದೆ.

ಓದಿರಿ: ಜಿಯೋ ಬಳಕೆದಾರರಿಗೆ 'ಜಿಯೋ 4G VoLTE ಫೋನ್ ಸಂಫೂರ್ಣ ಉಚಿತ'

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸ್ಆಪ್ ಸಫೋರ್ಟ್ ಮಾಡಲ್ಲ:

ವಾಟ್ಸ್ಆಪ್ ಸಫೋರ್ಟ್ ಮಾಡಲ್ಲ:

ಸದ್ಯದ ಸ್ಮಾರ್ಟ್‌ಫೋನ್ ಬಳಕೆದಾರಿಗೆ ಬೇಕೆ ಬೇಕು ಎನ್ನುವ ಅತ್ಯಂತ ಬೇಡಿಕೆಯ ಆಪ್ ವಾಟ್ಸ್ಆಪ್ ಈ ಫೋನಿನಲ್ಲಿ ಸಫೋರ್ಟ್ ಮಾಡುವುದಿಲ್ಲ. ಕೇವಲ ಪ್ರೀ ಲೋಡೆಡ್ ಆಪ್ ಗಳನ್ನು ಮಾತ್ರವೇ ಕಾರ್ಯನಿರ್ವಹಿಸಲಿದೆ ಎನ್ನುವ ಮಾತು ಕೇಳಿಬಂದಿದೆ.

Jio Free Phones !! ಜಿಯೋ ಫೋನ್ ಫುಲ್ ಪ್ರೀ: ಇಲ್ಲಿದೆ ಕಂಪ್ಲೀಟ್ ಮಾಹಿತಿ !!
ದಿನಕ್ಕೆ 500 MB 4G ಡೇಟಾ ಮಾತ್ರವೇ ಲಭ್ಯ:

ದಿನಕ್ಕೆ 500 MB 4G ಡೇಟಾ ಮಾತ್ರವೇ ಲಭ್ಯ:

ಇದಲ್ಲದೇ ಜಿಯೋ ಫೋನ್ ಬಳಕೆದಾರರಿಗೆ ಜಿಯೋ ಅನ್‌ಲಿಮಿಟೆಡ್ ಡೇಟಾವನ್ನು ನೀಡುವ ಘೋಷಣೆ ಮಾಡಿದೆ. ಆದರೆ ಇದರಲ್ಲಿ ಪ್ರತಿ ನಿತ್ಯ 500MB 4G ಡೇಟಾ ಮಾತ್ರವೇ ದೊರಯಲಿದೆ. ನಂತರದ ವೇಗವು ಕಡಿಮೆಯಾಗಲಿದೆ.

ಟಿವಿ ಕನೆಕ್ಟರ್ ಬೇಕು ಎಂದರೆ ಹೆಚ್ಚಿನ ರೀಚಾಜ್:

ಟಿವಿ ಕನೆಕ್ಟರ್ ಬೇಕು ಎಂದರೆ ಹೆಚ್ಚಿನ ರೀಚಾಜ್:

ಇದೇ ಮಾದರಿಯಲ್ಲಿ ಹೊಸದಾಗಿ ಪರಿಚಯಿಸಿರುವ ಟಿವಿ ಕನೆಕ್ಟರ್ ಅನ್ನು ಬಳಸಿಕೊಳ್ಳಲು ನೀವು ಸಾಮಾನ್ಯವಾಗಿ ರೂ.309ಕ್ಕೆ ರೀಚಾರ್ಜ್ ಮಾಡಿಸಿಕೊಳ್ಳಬೇಕು. ಹಾಗಯೇ ಇದರಲ್ಲಿ ಹೆಚ್ಚು ಹೊತ್ತು ವಿಡಿಯೋ ನೋಡಿದರೆ ಬೇಗನೇ ಡೇಟಾ ಖಾಲಿಯಾಗಲಿದೆ.

ಬಿಡುಗಡೆ ನಿಧಾನ:

ಬಿಡುಗಡೆ ನಿಧಾನ:

ಆಗಸ್ಟ್ ನಲ್ಲಿ ಈ ಫೋನ್ ಬುಕ್ ಮಾಡಿದರು ಸಹ ನಿಮ್ಮ ಕೈಗೆ ಫೋನ್ ಸೇರುವ ವೇಳೆಗೆ ತುಂಬ ದಿನಗಳೇ ಹಿಡಿಯಲಿದೆ. ಗ್ರಾಹಕರಿಗೆ ಎಂದು ಫೋನ್ ಸಿಗಲಿದೆ ಎನ್ನುವ ವಿಚಾರ ಇನ್ನು ಸಹ ಸ್ಪಷ್ಟವಾಗಿಲ್ಲ ಎನ್ನಲಾಗಿದೆ.

ಜಿಯೋ ಬಿಟ್ಟು ಬೇರೆ ಬಳಸಲು ಸಾಧ್ಯವಿಲ್ಲ:

ಜಿಯೋ ಬಿಟ್ಟು ಬೇರೆ ಬಳಸಲು ಸಾಧ್ಯವಿಲ್ಲ:

ಈ ಫೋನಿನಲ್ಲಿ ನೀವು ಜಿಯೋ ಬಿಟ್ಟು ಬೇರೆ ಸಿಮ್ ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎನ್ನಲಾಗಿದೆ. ಇದು ಜಿಯೋಗಾಗಿ ಮಾತ್ರವೇ ಬಿಡುಗಡೆ ಮಾಡಲಾಗಿದೆ. ಜಿಯೋ ಬಳಕೆದಾರರಿಗೆ ಮಾತ್ರವೇ ಸೇವೆ ಲಭ್ಯ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The Reliance Jio feature phone, which was unveiled on Friday as the JioPhone aims to bridge the digital divide between the haves with smartphones to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot