ಹೇಗಿದೆ ದೇಶಿಯ ಲಾವಾ X50 Plus ಸ್ಮಾರ್ಟ್ ಪೋನ್? ಇದರ ವಿಶೇಷತೆಗಳೇನು..? ಇಲ್ಲಿದೇ ನೋಡಿ

ವಿದೇಶಿಯ ಕಂಪನಿಗಳಿಗೆ ಸೆಡ್ಡು ಹೊಡೆಯುವ ತವಕದಲ್ಲಿದೆ. ಲಾವಾ X50 Plus ಎಂಬ ಹೆಸರಿನ ಸ್ಮಾರ್ಟ್‌ಪೋನ್‌ ಅನ್ನು 9,199 ರೂ. ಗಳಿಗೆ ಮಾರಾಟ ಮಾಡಲು ಮುಂದಾಗಿದೆ. ಆದರೆ ಈ ಪೋನ್ ಬೇರೆ ಪೋನ್ ಗಳಿಗಿಂತ ಹೇಗೆ ಬೆಸ್ಟ್ ಅನ್ನುವುದೇ ಪ್ರಶ್ನೆ.

|

ದೇಶಿಯ ಮೊಬೈಲ್ ತಯಾರಕ ಕಂಪನಿ ಲಾವಾ ನೂತನ ಬಜೆಟ್ ಪೋನೊಂದನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದು, ಈ ಮೂಲಕ ವಿದೇಶಿಯ ಕಂಪನಿಗಳಿಗೆ ಸೆಡ್ಡು ಹೊಡೆಯುವ ತವಕದಲ್ಲಿದೆ. X50 Plus ಎಂಬ ಹೆಸರಿನ ಸ್ಮಾರ್ಟ್‌ಪೋನ್‌ ಅನ್ನು 9,199 ರೂ. ಗಳಿಗೆ ಮಾರಾಟ ಮಾಡಲು ಮುಂದಾಗಿದೆ. ಆದರೆ ಈ ಪೋನ್ ಬೇರೆ ಪೋನ್ ಗಳಿಗಿಂತ ಹೇಗೆ ಬೆಸ್ಟ್ ಅನ್ನುವುದೇ ಪ್ರಶ್ನೆ.

ಹೇಗಿದೆ ದೇಶಿಯ ಲಾವಾ X50 Plus ಸ್ಮಾರ್ಟ್ ಪೋನ್? ಇದರ ವಿಶೇಷತೆಗಳೇನು..?

ಹೊಸ ವರ್ಷಕ್ಕೆ ಎಲ್‌ಜಿಯಿಂದ ಕೆ-ಸರಣಿಯ ನಾಲ್ಕು ಸ್ಮಾರ್ಟ್‌ಪೋನ್‌ಗಳು ಲಾಂಚ್

ಇದೇ ವರ್ಗದಲ್ಲಿರುವ ಲಿನೋವೊ K6 Power, ಶ್ಯೋಮಿ ನೋಟ್ 3, ಶ್ಯೋಮಿ 3S ಪ್ರೈಮ್ , ಮೋಟೋ G4 Play ಪೋನ್ ಗಳಿಗೆ ಪ್ರತಿ ಸ್ಪರ್ಥಿಯಾಗಿ ಲಾವಾ ಈ ಪೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಲಾವಾ X50 Plus ಈ ಫೋನ್ ಗಳಿಗಿಂತ ಕೊಟ್ಟ ಕಾಸಿಗೆ ಲಾಭವೇ ಎಂಬುದನ್ನು ಮುಂದೆ ನೋಡೋಣ.

ಹೆಚ್‌ಡಿ ರೆಸೆಲ್ಯೂಷನ್ ಡಿಸ್‌ಪ್ಲೇ

ಹೆಚ್‌ಡಿ ರೆಸೆಲ್ಯೂಷನ್ ಡಿಸ್‌ಪ್ಲೇ

ಸ್ಮಾರ್ಟ್‌ಪೋನ್ ಗಳಲ್ಲಿ ಅತ್ಯಂತ ಪ್ರಮುಖವಾದ ಅಂಶ ಎಂದರೆ ಗುಣಮಟ್ಟದ ಡಿಸ್‌ಪ್ಲೇ, ಈ ಲಾವಾ X50 Plus ಪೋನ್ 5.5 ಇಂಚಿನ 720p ರೆಸೆಲ್ಯೂಷನ್ ಡಿಸ್‌ಪ್ಲೇ ಹೊಂದಿದ್ದು, ಆಟವಾಡಲು, ವಿಡಿಯೋ ನೋಡಲು ಈ ಗುಣಮಟ್ಟದ ಸ್ಕ್ರಿನ್ ಸಾಕು. ಆದರೆ ಲಿನೋವೊ K6 Power, ಶ್ಯೋಮಿ ನೋಟ್ 3, ಪೋನ್ ಗಳು 1080p ರೆಸೆಲ್ಯೂಷನ್ ಡಿಸ್‌ಪ್ಲೇ ಹೊಂದಿವೆ,

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಲ್ಟಿ ಟಾಸ್ಕಿಂಗ್

ಮಲ್ಟಿ ಟಾಸ್ಕಿಂಗ್

ಲಾವಾ X50 Plus ಪೋನಿನಲ್ಲಿ 2GB RAM ಇದ್ದು, ಇದು ಪೋನ್ ವೇಗವಾಗಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಿದೆ. ಇದೇ ವರ್ಗದ ಶ್ಯೋಮಿ ನೋಟ್ 3 ಪೋನ್ ನಲ್ಲಿ 3GB RAM ಇದೆ, ಅಲ್ಲದೇ 8,999 ರೂ ಗಳಿಗೆ ಲಭ್ಯವಿರುವ ಶ್ಯೋಮಿ 3S ಪ್ರೈಮ್ 3GB RAM ಇದೆ.

ವೇಗದ ಕಾರ್ಯಚರಣೆ

ವೇಗದ ಕಾರ್ಯಚರಣೆ

ಲಾವಾ X50 Plus ಪೋನ್ 1.3 GHz ಕ್ವಾಡ್ ಕೋರ್ ಪ್ರೋಸೆಸರ್ ಹೊಂದಿದೆ. ಆದರೆ ಇದರಲ್ಲಿರುವ ಹಾಕಿರುವ ಚಿಪ್ ಸೆಟ್ ಯಾವುದೆಂದು ಕಂಪನಿ ತಿಳಿಸಿಲ್ಲ, ಆದರೆ ಲಿನೋವೊ K6 Power, ಶ್ಯೋಮಿ ನೋಟ್ 3 ಪೋನ್ 1.3 GHz ಆಕ್ಟಾ ಕೋರ್ ಪ್ರೋಸೆಸರ್ ಹೊಂದಿವೆ.

ಕ್ಯಾಮೆರಾ ಗುಣಮಟ್ಟ

ಕ್ಯಾಮೆರಾ ಗುಣಮಟ್ಟ

ಲಾವಾ X50 Plus ಪೋನ್‌ನಲ್ಲಿ 8MP ಹಿಂಬದಿ ಕ್ಯಾಮೆರಾ ಜೊತೆಯಲ್ಲಿ ಫ್ಲಾಷ್ ಲೈಟ್ ಸಹ ಇದೆ. ಆಟೋಪೋಕಸ್, ಫೇಸ್ ಬ್ಯೂಟಿ, ಸ್ಲೋ ಮೋಷನ್ ವಿಡಿಯೋ ರೇಕಾರ್ಡಿಂಗ್ ಸೌಲಭ್ಯವಿದೆ. ಅಲ್ಲದೇ 5MP ಮುಂಬದಿ ಕ್ಯಾಮೆರಾ ಇದ್ದು, ಸೆಲ್ಫಿಗೆ ಹೇಳಿ ಮಾಡಿಸಿದಂತಿದೆ.
ಆದರೆ ಲಿನೋವೊ K6 Power 13 MP ಹಿಂಬದಿ ಕ್ಯಾಮೆರಾ ಇದೆ, ಶ್ಯೋಮಿ ನೋಟ್ 3 ಪೋನ್ ನಲ್ಲಿ 16 MP ಕ್ಯಾಮೆರಾ ಇದೆ.

ಸಾಫ್ಟ್‌ವೇರ್ ಮತ್ತು ಇನ್ನಿತರೆ

ಸಾಫ್ಟ್‌ವೇರ್ ಮತ್ತು ಇನ್ನಿತರೆ

ಲಾವಾ X50 Plus ಪೋನ್‌ ಆಂಡ್ರಾಯ್ಡ್ 6.0 ನಲ್ಲಿ ಕಾರ್ಯ ನಿರ್ವಹಣೆ ಮಾಡಲಿದ್ದು, ಲಿನೋವೊ K6 Power, ಶ್ಯೋಮಿ ನೋಟ್ 3 ಪೋನ್‌ಗಳು ಇದೇ ಕಾರ್ಯಚರಣೆ ವ್ಯವಸ್ಥೆಯನ್ನು ಹೊಂದಿವೆ.
ಲಾವಾ X50 Plus 4G VoLTE ಗೆ ಸಪೋರ್ಟ್ ಮಾಡುತ್ತದೆ, 2,800 mAh ಬ್ಯಾಟರಿ ಹೊಮದಿದೆ. ಆದರೆ ಉಳಿದ ಪೋನ್ ಗಳ ಬ್ಯಾಟರಿ ಇನ್ನು ಶಕ್ತಿ ಶಾಲಿಯಾಗಿದೆ. ಆದರೆ ಲಾವಾ X50 Plus ಕೊಟ್ಟ ಕಾಸಿಗೆ ಮೋಸವಂತು ಅಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Domestic handset maker Lava has announced the launch of the companys latest budget smartphone X50 Plus in the Indian market

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X