Subscribe to Gizbot

10 ಸಾವಿರದ ಮೊಬೈಲ್‌ನಲ್ಲಿ 6 GB ರ್ಯಾಮ್, 16 MP ಕ್ಯಾಮರಾ ಮತ್ತು 4000 Amh ಬ್ಯಾಟರಿ?

Written By: Bhaskar N J

ಕಡಿಮೆಬೆಲೆಯಲ್ಲಿ ಹೆಚ್ಚು ಫೀಚರ್ಸ್ ಹೊಂದಿರುವ ಮೊಬೈಲ್‌ಗಳನ್ನು ನೀಡುತ್ತಿರುವ ಲೀಕೊ ಮತ್ತು ಕೂಲ್‌ಪ್ಯಾಡ್ ಮೊಬೈಲ್‌ ಕಂಪೆನಿಗಳು ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುತ್ತಿವೆ.

ಸುದ್ದಿ ಏನೆಂದರೆ ಲೀಕೊ ಮತ್ತು ಕೂಲ್‌ಪ್ಯಾಡ್ ಮೊಬೈಲ್‌ ಕಂಪೆನಿಗಳು ಜೊತೆ ಸೇರಿ 6 GB ರ್ಯಾಮ್ ಹೊಂದಿರುವ ಕೂಲ್ ಒನ್ ಡ್ಯುಯಲ್ ( Cool1 Dual ) ಎಂಬ ನೂತನ ಮೊಬೈಲ್ ಒಂದನ್ನು ಬಿಡುಗಡೆಮಾಡುತ್ತಿವೆ!

10 ಸಾವಿರದ ಮೊಬೈಲ್‌ನಲ್ಲಿ 6 GB ರ್ಯಾಮ್, 16 MP ಕ್ಯಾಮರಾ?

2017'ರ ಮಾರ್ಚ್‌ವರೆಗೂ ಜಿಯೋ ವೆಲ್ಕಮ್‌ ಆಫರ್ ನೀಡಲು ರಹಸ್ಯ ಕಾರಣಗಳೇನು?

5.5 ಇಂಚ್ ಡಿಸ್ಪ್ಲೇ ಮತ್ತು 4 ರಿಂದ 6 GB ರ್ಯಾಮ್ ಹೊಂದಿರುವ ಈ ಮೊಬೈಲ್ 32GB, 64GB ಮತ್ತು 128GB ಸ್ಟೋರೇಜ್ ಕೆಪಾಸಿಟಿ ಹೊಂದಿದೆ. 6.0 arshmallow ಆಂಡ್ರಾಯ್ಡ್ ಸಿಸ್ಟಮ್ ಮೂಲಕ ಮೊಬೈಲ್ ರನ್ ಆಗಲಿದೆ.ಮತ್ತು ಕ್ರಮವಾಗಿ 16 ಮತ್ತು 8 ಮೆಗಾಫಿಕ್ಸೆಲ್ ಕ್ಯಾಮರಾಗಳನ್ನು ಒಳಗೊಂಡಿರುವ ಈ ಮೊಬೈಲ್ 4000 Amh ಬ್ಯಾಟರಿ ಸಾಮರ್ಥ್ಯ ಹೊಂದಿದೆ.

10 ಸಾವಿರದ ಮೊಬೈಲ್‌ನಲ್ಲಿ 6 GB ರ್ಯಾಮ್, 16 MP ಕ್ಯಾಮರಾ?

ಹೊಸ ವಿನ್ಯಾಸವನ್ನು ಹೊತ್ತು ಬರುತ್ತಿರುವ ಕೂಲ್ ಒನ್ ಡ್ಯುಯಲ್ ನೋಡಲು ಲೀಕೊ ಕಂಪೆನಿಯ ವಿನ್ಯಾಸ ಲೀ ಪ್ರೋ 3 ಮೊಬೈಲ್ ರೀತಿಯಲ್ಲಿ ಕಾಣುತ್ತದೆ. ಇನ್ನು ಈ ಮೊಬೈಲ್ 2017 ರ ಮಾರ್ಚ್‌ವೇಳೆಗೆ ಮಾರುಕಟ್ಟೆಗೆ ಬರುತ್ತಿದ್ದು, ಮೊಬೈಲ್ ಬೆಲೆ ಹತ್ತುಸಾವಿರ ರೂಪಾಯಿಗಳ ಆಸುಪಾಸಿನಲ್ಲಿದೆ ಎಂದು ಹೇಳಲಾಗಿದೆ.

10 ಸಾವಿರದ ಮೊಬೈಲ್‌ನಲ್ಲಿ 6 GB ರ್ಯಾಮ್, 16 MP ಕ್ಯಾಮರಾ?

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Cool smartphone will be seen with a single 16-megapixel rear camera and an 8-megapixel front shooter. A big 4000mAh battery will power the device.to know more kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot