ಫ್ಲಿಪ್‌ಕಾರ್ಟ್‌ನಲ್ಲಿ ದಾಖಲೆಯ ಫ್ಲ್ಯಾಶ್ ಸೇಲ್: ಲೀಕೊ ಫೋನ್ ಹೆಗ್ಗಳಿಕೆ

Written By:

ಇಂಟರ್ನೆಟ್ ಮತ್ತು ತಂತ್ರಜ್ಞಾನ ದೈತ್ಯ ಲೀಕೊದ ಸೆಕೆಂಡ್ ಜನರೇಶನ್ ಸೂಪರ್ ಫೋನ್ ಲೀ2 ಫ್ಲಿಪ್‌ಕಾರ್ಟ್ ಬಳಕೆದಾರ ರೇಟಿಂಗ್ 4.2 ಅನ್ನು ದಾಟಿದ್ದು, ಇದರ ಬೆಲೆಯ ಶ್ರೇಣಿಯಲ್ಲೇ ಹೆಚ್ಚಿನ ಅಂಕವನ್ನು ಗಳಿಸಿಕೊಂಡು, ಮೂರನೇ ಫ್ಲ್ಯಾಶ್ ಸೇಲ್ ಅನ್ನು ಅಂತ್ಯಗೊಳಿಸಿದೆ. ಈ ಯಶಸ್ಸಿನ ನಂತರ, ಲೀ 2 ಮುಕ್ತ ಮಾರಾಟಕ್ಕೆ ಜುಲೈ 14 ರಂದು ಲೀ ಮಾಲ್, ಲೀಕೊದ ಇ ಕಾಮರ್ಸ್ ಮಾರುಕಟ್ಟೆ ಸ್ಥಳ, ಫ್ಲಿಪ್‌ಕಾರ್ಟ್‌ಗಳಲ್ಲಿ ಲಭ್ಯವಿದೆ. ಫ್ಲ್ಯಾಗ್‌ಶಿಪ್ ಮಾಡೆಲ್ ಲೀ ಮ್ಯಾಕ್ಸ್ 2 ಕೂಡ ಇದೇ ಸಾಲಿಗೆ ಸೇರಲಿದೆ.

ಓದಿರಿ: ಲೀಕೊ ಫ್ಲ್ಯಾಶ್‌ಸೇಲ್ ವೋಡಾಫೋನ್ ವಿಶೇಷ ಆಫರ್

ಈ ಎರಡೂ ಸೆಕೆಂಡ್ ಜನರೇಶನ್ ಡಿವೈಸ್‌ಗಳು ಮಾರುಕಟ್ಟೆಯಲ್ಲಿ ಹೊಸ ಸಂಚಲವನ್ನೇ ನಿರ್ಮಿಸಿದ್ದು ಇದರ ವಿನ್ಯಾಸ, ಆಕರ್ಷಕ ಫೀಚರ್‌ಗಳು ಮತ್ತು ದರ ಬಳಕೆದಾರರನ್ನು ಆಕರ್ಷಿಸಿದೆ. ಮೂರು ಫ್ಲ್ಯಾಶ್‌ ಸೇಲ್‌ಗಳಲ್ಲಿ ನಾವು ಎಲ್ಲಾ ದಾಖಲೆಗಳನ್ನು ಮುರಿದದ್ದು, ಇದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದೆನಿಸಿದೆ ಎಂಬುದು, ಲೀಕೊ ಇಂಡಿಯಾದ ಸ್ಮಾರ್ಟ್ ಇಲೆಕ್ಟ್ರಾನಿಕ್ಸ್ ಬ್ಯುಸಿನೆಸ್ ಸಿಒಒ ಅತುಲ್ ಜೈನ್ ತಿಳಿಸಿದ್ದಾರೆ. ಈ ಕೆಳಗಿನ ಸ್ಲೈಡರ್‌ಗಳಲ್ಲಿ ಲೀ 2 ಮತ್ತು ಲೀ ಮ್ಯಾಕ್ಸ್ 2 ನ ವಿಶೇಷತೆಗಳನ್ನು ತಿಳಿಸಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅತ್ಯುತ್ತಮ ವಿಶೇಷತೆ

ಅತ್ಯುತ್ತಮ ವಿಶೇಷತೆ

ಲೀ 2 ಮತ್ತು ಲೀ ಮ್ಯಾಕ್ಸ್ 2 ಅತ್ಯುತ್ತಮ ವಿಶೇಷತೆಗಳನ್ನು ಪಡೆದುಕೊಂಡಿದ್ದು, ಸಿಡಿಎಲ್‌ಎ ಆಡಿಯೊ ಪ್ರಮಾಣವನ್ನು ಒಳಗೊಂಡು ಅತ್ಯುತ್ತಮ ಮ್ಯೂಸಿಕ್ ಅನ್ನು ಕೇಳುಗರಿಗೆ ಒದಗಿಸಲಿದೆ.

ಶ್ರೀಮಂತ ಇಕೋ ಸಿಸ್ಟಮ್

ಶ್ರೀಮಂತ ಇಕೋ ಸಿಸ್ಟಮ್

ಇದು ಶ್ರೀಮಂತ ಇಕೋ ಸಿಸ್ಟಮ್ ಅನ್ನು ಒಳಗೊಂಡಿದೆ ಮತ್ತು ಮೆಂಬರ್ ಶಿಪ್ ಪ್ರೊಗ್ರಾಮ್ ಅನ್ನು ಹೊಂದಿದೆ.

ಅತ್ಯಾಧುನಿಕ ತಂತ್ರಜ್ಞಾನ

ಅತ್ಯಾಧುನಿಕ ತಂತ್ರಜ್ಞಾನ

ಅದ್ಭುತ ವಿನ್ಯಾಸ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಈ ಡಿವೈಸ್‌ಗಳಲ್ಲಿದೆ

ಕೈಗೆಟಕುವ ಬೆಲೆ

ಕೈಗೆಟಕುವ ಬೆಲೆ

ಕೈಗೆಟಕುವ ಬೆಲೆ ಇದು ಈ ಫೋನ್‌ಗಳಲ್ಲಿರುವ ವಿಶೇಷತೆ ಎಂದೆನಿಸಿದೆ.

2000+ ಚಲನ ಚಿತ್ರ

2000+ ಚಲನ ಚಿತ್ರ

ಲೀಕೊ ಕೂಡ ಲೀ 2 ಮತ್ತು ಲೀ ಮ್ಯಾಕ್ಸ್2 ನೊಂದಿಗೆ ಉತ್ತಮ ಮನರಂಜನೆಯನ್ನು ಒದಗಿಸುತ್ತಿದ್ದು, 2000+ ಚಲನ ಚಿತ್ರಗಳನ್ನು ಇದರಲ್ಲಿ ವೀಕ್ಷಿಸಬಹುದಾಗಿದೆ. 1.9 ಮಿಲಿಯನ್ ಹಾಡುಗಳು, 3000 ಗಂಟೆಗಳ ಪ್ರದರ್ಶನಗಳು ಮತ್ತು ಬಳಕೆದಾರರ ಆಯ್ಕೆಗೆ ಅನುಗುಣವಾಗಿ 150 + ಲೈವ್ ಟಿವಿ ಚಾನಲ್‌ಗಳನ್ನು ಬಳಕೆದಾರರ ಆಯ್ಕೆಗೆ ಅನುಗುಣವಾಗಿ ಒದಗಿಸುತ್ತಿದೆ.

ಉತ್ತಮ ಕಾರ್ಯಕ್ಷಮತೆ

ಉತ್ತಮ ಕಾರ್ಯಕ್ಷಮತೆ

ಎರಡೂ ಫೋನ್‌ಗಳು ಉತ್ತಮ ಕಾರ್ಯಕ್ಷಮತೆಯನ್ನು ಪಡೆದುಕೊಂಡಿದ್ದು ಲೀ 2 ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ TM 652 ಅನ್ನು ಹೊಂದಿದ್ದರೆ ಲೀ ಮ್ಯಾಕ್ಸ್ 2 ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ TM 820 ಪ್ರೊಸೆಸರ್ ಅನ್ನು ಹೊಂದಿದೆ. ವಿಶ್ವದ ಹೆಚ್ಚು ಶಕ್ತಿಯುತ ಪ್ರೊಸೆಸರ್ ಅನ್ನು ಇವುಗಳು ಪಡೆದುಕೊಂಡಿದ್ದು, ಲೀ ಮ್ಯಾಕ್ಸ್ 2, 6ಜಿಬಿ RAM ಮತ್ತು 64 ಜಿಬಿ ROM ಅನ್ನು ಒಳಗೊಂಡಿದೆ.

ಸಿಡಿಎಲ್‌ಎ ಇಯರ್ ಫೋನ್ ಉಚಿತ

ಸಿಡಿಎಲ್‌ಎ ಇಯರ್ ಫೋನ್ ಉಚಿತ

ಲೀ 2, 3ಜಿಬಿ RAM, 32 ಜಿಬಿ ROM ಅನ್ನು ಒಳಗೊಂಡಿದ್ದು, ರೂ 11,999 ಕ್ಕೆ ಲಭ್ಯವಿದೆ. 4ಜಿಬಿ+32ಜಿಬಿ ಮಾಡೆಲ್‌ನ ಲೀ ಮ್ಯಾಕ್ಸ್2 ರೂ 22,999 ಕ್ಕೆ ದೊರೆಯುತ್ತಿದೆ. 6ಜಿಬಿ RAM ಮತ್ತು 64 ಜಿಬಿ ROM ಉಳ್ಳ ಡಿವೈಸ್ ಬೆಲೆ ರೂ 29,999 ಕ್ಕೆ ದೊರೆಯುತ್ತಿದೆ. ಇದರೊಂದಿಗೆ ರೂ 1990 ರ ಸಿಡಿಎಲ್‌ಎ ಇಯರ್ ಫೋನ್ ಉಚಿತವಾಗಿ ದೊರೆಯಲಿದೆ.

ಇಂಟರ್ನೆಟ್ ಮತ್ತು ತಂತ್ರಜ್ಞಾನ ಕಂಪೆನಿ

ಇಂಟರ್ನೆಟ್ ಮತ್ತು ತಂತ್ರಜ್ಞಾನ ಕಂಪೆನಿ

ಲೀಕೊ, ಲೀಟಿವಿ ಎಂದೇ ಕರೆಯಿಲ್ಪಟ್ಟಿದ್ದು, ಇಂಟರ್ನೆಟ್ ಮತ್ತು ತಂತ್ರಜ್ಞಾನ ಕಂಪೆನಿಯಾಗಿ ಈಗ ಮುಂದಿದೆ. 2004 ರಲ್ಲಿ ಈ ಕಂಪೆನಿ ಸ್ಥಾಪನೆಗೊಂಡಿದ್ದು ಇಲ್ಲಿ ಕೆಲಸ ಮಾಡುವ ಉದ್ಯೋಗಿಗಳು 10,000 ಕ್ಕಿಂತಲೂ ಅಧಿಕವಾಗಿದ್ದಾರೆ. ವಿಶ್ವದ ಪ್ರಥಮ ವೀಡಿಯೊ ಕಂಪೆನಿಯಾಗಿರುವ ಲೀಕೊ ಮಾರುಕಟ್ಟೆ ಕ್ಯಾಪಿಟಲೈಸೇಶನ್ ಸುಮಾರು $12 ಬಿಲಿಯನ್ ಯುಎಸ್‌ಡಿಗಿಂತಲೂ ಅಧಿಕವಾಗಿದೆ. ಇದರ ಮುಖ್ಯ ಕಚೇರಿ ಬೀಜಿಂಗ್ ಚೀನಾದಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Internet and technology giant LeEco's second generation Superphones Le 2 has surpassed a Flipkart user rating of 4.2, one of the highest scores among its price range, after it has concluded the third flash sale today.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot